ಸೋಮವಾರ, ಏಪ್ರಿಲ್ 2, 2012

ಮುಖವರ್ಣಿಕೆ

ಶಾಲೆಯ ಮುಖವರ್ಣಿಕೆ ತರಗತಿಯಲ್ಲಿ ಮಕ್ಕಳ ಪಾಲ್ಗೊಳ್ಳುವಿಕೆಯನ್ನು ಇಲ್ಲಿ ಛಾಯಾಚಿತ್ರಗಳನ್ನು ದಾಖಲಿಸಿದೆ.

ಕುಂಕುಮ , ಪೌಡರ ಮತ್ತು ಕಾಡಿಗೆ ಇಲ್ಲಿ ಮಕ್ಕಳು ಬಳಸಿದ್ದಾರೆ.

  

 




 




























   


ಬುಧವಾರ, ಮಾರ್ಚ್ 7, 2012

ಶಿಕ್ಷಣ ಮತ್ತು ಮಕ್ಕಳ ರಂಗಭೂಮಿ


                                         
                                            ‘ಶಿಕ್ಷಣದಲ್ಲಿ ರಂಗಭೂಮಿ’ ಶೀರ್ಷಿಕೆಯಲ್ಲಿ ಇಂದು ಕನ್ನಡದ ಮಕ್ಕಳ ರಂಗಭೂಮಿಯು ಸೃಜನಾತ್ಮಕವಾಗಿದೆ. ನಾಟಕದಲ್ಲಿ ಮಕ್ಕಳು ತೊಡಗಿಳ್ಳುವುದು ಇಂಗ್ಲಿಷ ಮಾದರಿ ಶಿಕ್ಷಣ ಬಂದಂದಿನಿಂದಲೂ ( ಮಿಷನರಿಗಳು ಕರಾವಳಿ ಸೀಮೆಯಲ್ಲಿ ಮೊದಲು ಶಾಲೆಯಲ್ಲಿ  ನಾಟಕ ಆಡಿಸಿರುವ ದಾಖಲೆ ಸಿಗುತ್ತವೆ) ನಿರಂತರವಾಗಿ  ನಡೆಯುತ್ತ ಬಂದಿದೆ. ಅಷ್ಟೆ ಅಲ್ಲ ಕತೆ ಹೇಳುವ, ನಟಿಸುವ, ಹಾಡುವ,ಕುಣಿಯುವ ಪ್ರದರ್ಶನ ಮಾದರಿಗಳೆಲ್ಲವೂ ಮುಗ್ಧ ಮಕ್ಕಳ ಮನಸ್ಸಿನ ಪ್ರೇಕ್ಷಕರನ್ನು ಗಮನದಲ್ಲಿಟ್ಟುಕೊಂಡೆ ಬೆಳೆದಂತವು. ಹೀಗೆ ಮುಗ್ಧ ಸ್ವಭಾವವನ್ನು ಮಕ್ಕಳ ಗುಣಲಕ್ಷಣದಲ್ಲಿ ಹೋಲಿಸುವುದನ್ನು ಗಮನಿಸಿದಾಗ ಅನುಕರಣೀಯವಾದ   ಕಲೆಗಳೆಲ್ಲವೂ ನೋಡುಗರನ್ನು, ಕೇಳುಗರನ್ನು,ಒಟ್ಟು ಸಹೃದಯರನ್ನ ವಯಸ್ಸಿನ ಅಡಚನೆಯಿಲ್ಲದೆ ಮಂತ್ರಮುಗ್ಧರನ್ನಾಗಿಸಿ ಬೇರೆ ಲೋಕಕ್ಕೆ ಕರೆದೊಯ್ಯುತ್ತದೆ. ಆದ್ದರಿಂದ ಎಲ್ಲ ಪ್ರೇಕ್ಷಕರೂ ಮಕ್ಕಳ ರೀತಿಯಲ್ಲಿ ಪ್ರದರ್ಶನಗಳನ್ನು ಎದುರುಗೊಳ್ಳುವುದರಿಂದಾಗಿ ಮಕ್ಕಳ, ಹೆಂಗಸರ, ಯುವಕರ, ದೊಡ್ಡವರ ರಂಗಭೂಮಿಯಂದು ವರ್ಗೀಕರಿಸುವುದು ಅಷ್ಟು ಸರಿಯಾದ ಕ್ರಮ ಆಗಲಿಕ್ಕಿಲ್ಲ  ಎನಿಸುತ್ತದೆ. ಆದರೆ,,, ನಾತಗರೀಕತೆಯ ವಿಕಾರಗಳು ಮಕ್ಕಳನ್ನು ಮಕ್ಕಳನ್ನಾಗಿರಿಸಿ, ಅವರಷ್ಟಕ್ಕೆ ಅವರನ್ನು ಆಡಿಕೊಳ್ಳಲು ಬಿಡದೆ ಸ್ಪರ್ಧಾತ್ಮಕ ಜಗತ್ತಿಗೆ ಅಣಿಗೊಳಿಸುತ್ತಿರುವ ಈ ಸಂದರ್ಭದಲ್ಲಿ ಮಕ್ಕಳಿಗಾಗಿ ಪ್ರತ್ಯೇಕ ಚಟುವಟಿಕೆಗಳನ್ನು ನಡೆಸಬೇಕಾದ ಅನಿವಾರ್ಯತೆ ಬಂದೊದಗಿದೆ.


                                                      ಆಡಿ-ನೋಡಿ-ಮಾಡಿ ಅನುಭವಿಸುತ್ತ ಒಂದಾಗಿ ಬೆರೆತು-ಚಟುವಟಿಕೆಯಿಂದ ಇದ್ದಾಗ ಮಕ್ಕಳ ಆಸಕ್ತಿ ಇಮ್ಮಡಿಸುತ್ತದೆ, ಕಣ್ಣು ಕುತೂಹಲಗೊಂಡು ಹೊಸ ಆಟಿಗೆಯ ಒಂದೊಂದು ಭಾಗಗಳನ್ನು ಬಿಚ್ಚಿ ನೋಡುವ ಕೌತುಕದಂತೆ ಎಳೆಯರ ಗ್ರಹಣ ಶಕ್ತಿ ಸಶಕ್ತವಾಗಿ ಸಮೃದ್ಧಗೊಳ್ಳುತ್ತದೆ. ಹಾಗಾಗಿ ಲಲಿತಕಲೆಗಳ ಒಡನಾಟದಲ್ಲಿ ಮಕ್ಕಳು ಆಡುತ್ತ-ಹಾಡುತ್ತ, ಕುಣಿದು ಕುಪ್ಪಳಿಸಿ ಕೇಕೇ ಹಾಕಿ ನಲಿದಾಡುತ್ತ ಕಲಿಯುತ್ತಾರೆ. ಅದಲ್ಲದೆ ಕನ್ನಡದ ಮಟ್ಟಿಗೆ ಮಕ್ಕಳ ರಂಗಭೂಮಿ ಅಷ್ಟಾಗಿ ಬೆಳೆಯಲಿಲ್ಲ, ಆ ಕುರತಾಗಿ ಹೆಚ್ಚು ಕೆಲಸಗಳಾಗಿಲ್ಲ, ಹೆಚ್ಚು ನಾಟಗಳು ಬಂದಿಲ್ಲ, ಬರೆದ ನಾಟಕಗಳ ಕರ್ತೃಗಳೂ ಆ ಕೃತಿಗಳನ್ನು ತಮ್ಮ ಪ್ರಮುಖ ಕೃತಿಗಳ ಸಾಲಿನಲ್ಲಿ ಸೇರಿಸಿಲ್ಲ ಎಂಬೊಂದು ಮಾತು ಹಾಗೇ ಉಳಿದಿದೆ. ಹೌದು, ಮಕ್ಕಳ ನಾಟಕವೆಂದರೆ ಶಾಲೆಯ ವಾರ್ಷಿಕೋತ್ಸವ, ಗಣೇಶೋತ್ಸವ, ಪ್ರತಿಭಾಕಾರಂಜಿ, ಮುಂತಾದ ವಿಶೇಷ ಸಂದರ್ಭದಲ್ಲಿ ಮಾತ್ರ ಮಾಡುವಂಥದ್ದು ಅನ್ನೋದು ಈಗಲೂ ಉಳದು ಬಂದಿರುವ ವಾಡಿಕೆ ಆಗಿದೆ. ಇಲ್ಲವೇ ಬೇಸಿಗೆಯ ರಜೆಕಳೆಯಲು ಮೋಜಿನ ಸಂಗತಿಯಾಗಿ ಕೆಲವು ಪೋಷಕರಿಗೆ ನಾಟಕ ಬೇಕು. ಆಗ ರಂಗಶಿಬಿರಕ್ಕೆ ಎಲ್ಲಿಲ್ಲದ ಬೇಡಿಕೆ ತಾನಾಗಿಯೇ ಬಂದುಬಿಡುತ್ತದೆ. ಎಷ್ಟು ದುಡ್ಡು ಕಟ್ಟಿಯಾದರೂ ಸರಿ ಮಕ್ಕಳನ್ನು ಶಿಬಿರಕ್ಕೆ ಸೇರಿಸಿಬಿಡುತ್ತಾರೆ. ಒಂದು ಮಾತು- ಇಂಥ ಶಿಬಿರಗಳು ಯಾವೊಂದು ಸೃಜನಾತ್ಮಕ ಕಲಿಕೆಯನ್ನೂ ರೂಢಿಸುವುದಿಲ್ಲ ಮತ್ತು ಈ ತೆರನಾದ ಕಾರ್ಯಾಗಾರಗಳು ಮಕ್ಕಳ ಮನಸ್ಸಿನ ಮೇಲೆ ಏನೂ ಪರಿಣಾಮ ಮಾಡುವುದಿಲ್ಲ. ಯಾಕೆಂದರೆ ಆಸಕ್ತ ಪೋಷಕರೂ ಮತ್ತು ಶಾಲಾ ಮಾಸ್ತರರೂ ನಾಟಕ ಬಯಸುವುದು ರಜೆಯ ಸಂದರ್ಭಕ್ಕೆ, ಶಾಲಾ ವಾರ್ಷಿಕೋತ್ಸವಕ್ಕೆ,ಪ್ರತಿಭಾಕಾರಂಜಿ ಸಂದರ್ಭಕ್ಕೆ ಮಾತ್ರ ಆಗಿರುತ್ತದೆ. ಹಾಗಾಗಿ ಶಿಕ್ಷಣ ಕ್ಷೇತ್ರದಲ್ಲಿ ಮಕ್ಕಳು ಸ್ವಯಂಪ್ರೇರಿತರಾಗಿ ಕಲಿಯಲಿ ಎಂದು ಚಟುವಟಿಕೆಗಳನ್ನು ಪಠ್ಯೇತರವಾಗಿ ಅಭ್ಯಾಸಕ್ಕಿಟ್ಟರೆ ಅದು ಕೂಡಾ ಕಲಿಸುವ ಮಾದರಿಯಾಗಿಬಿಟ್ಟಿರುವುದು ವಿಚಿತ್ರ ಸಂಗತಿ.


                                                ಬೇಸಿಗೆ ರಂಗಶಿಬಿರಗಳು ಸ್ಪರ್ಧಾ ಕಣಕ್ಕೆ ಮಕ್ಕಳನ್ನು ತಯಾರ ಮಾಡುವ ವಿಕಸನ ಶಿಬಿರಗಳಾಗಿರುವುದು, ವ್ಯಕ್ತಿತ್ವ ನಿರ್ಮಾಣ ಮಾಡುವ ಕಾರ್ಯಾಗಾರಗಳಾಗಿರುವುದು ಕೊಂಚ ಬೇಸರದ ಸಂಗತಿ. ಆದರೆ ನಿಜವಾಗಿಯೂ ನಾಟಕವೆಂದರೆ ಮಕ್ಕಳ ಬದುಕನ್ನ ಅರಳಿಸುವ ಕ್ರಿಯೆ, ಮಗು ಪ್ರಪಂಚವನ್ನು ಅರಿಯುವ, ತಿಳಿದುಕೊಳ್ಳುವ, ಈ ಜಗತ್ತಿನೊಂದಿಗೆ ವ್ಯವಹರಿಸುವ, ತನ್ನನ್ನು ಇತರರೊಂದಿಗೆ ಮುಕ್ತವಾಗಿರಿಸಿಕೊಳ್ಳುವ, ಇಲ್ಲದ ಧಿಮಾಕನ್ನು ತೊರೆಯುವ ಸರಳತೆಯನ್ನ ರೂಢಿಸುವ ಮತ್ತು ಸಮುದಾಯ ಪ್ರಜ್ಞೆಯನ್ನ ಬೆಳೆಸುವ, ನೈತಿಕತೆಯನ್ನ ಅವನಿಗರಿವಿಲ್ಲದೆ  ಕಲಿಸುವ ದೊಡ್ಡ ಪ್ರಕ್ರಿಯೆ ನಾಟಕ. ಹೀಗೆ ಶಿಕ್ಷಣದಲ್ಲಿ ರಂಗಭೂಮಿ ತನ್ನ ಕಾರ್ಯ ವ್ಯಾಪ್ತಿಯನ್ನು ಹಿಗ್ಗಿಸಿಕೊಂಡದ್ದೆ ಆದರೆ ನಿಜಕ್ಕೂ ಮಕ್ಕಳ ರಂಗಭೂಮಿ ಕೆಲಸ ಕನ್ನಡದಲ್ಲಿ ನಡೆಯುತ್ತದೆ ಎಂದು ಹೇಳಬಹುದು.

ಶುಕ್ರವಾರ, ಮಾರ್ಚ್ 2, 2012

"ಶಿಕ್ಷಕರ ರಂಗ ತರಬೇತಿ ಶಿಬಿರ "







ಶುಕ್ರವಾರ, ಫೆಬ್ರವರಿ 24, 2012

ಹೊಸಪೇಟೆಯಲ್ಲಿ ರಂಗ ತರಬೇತಿ ಶಿಬಿರ


Hejjegalu

Hejjegalu

Hejjegalu

Hejjegalu

Hejjegalu

Hejjegalu

Hejjegalu

Hejjegalu

ಗುರುವಾರ, ಫೆಬ್ರವರಿ 23, 2012

ಪ್ರದರ್ಶನ



ಪಾಲಕರ ಸಭೆ





ಎಸ. ಎಸ. ಎಲ್. ಸಿ ಫಲಿತಾಂಶ ಸುಧಾರಣೆಗಾಗಿ ವಿಧ್ಯಾರ್ಥಿಗಳ ಪಾಲಕರ ಸಭೆ ನಡೆಸಲಾಯಿತು. 

ಮಂಗಳವಾರ, ಫೆಬ್ರವರಿ 21, 2012

ಅರಳು ಮೊಗ್ಗು

ಕವಿತೆ  ಬರೆಯುವುದು ಪಾಂಡಿತ್ಯ ತೋರಿಸಲಿಕ್ಕಲ್ಲ 

ಭಾವನೆಗಳನ್ನು ವ್ಯಕ್ತ ಪಡಿಸಲಿಕ್ಕೆ 

                                
                                                  ---ಜಿ.ಕೆ.ಹೆಗಡೆ.
( ಕಾರ್ನಾಡರ  "ಆಡಾಡತ ಆಯುಷ್ಯ" ದಿಂದ )


ಕಾವ್ಯ ಬಿ.ಬಿಂಗಿಕೊಪ್ಪದ

                   ನಮಗೆ ನಾಟಕ ಕಲಿಸಲು ಆಗಮಿಸಿದ ಶ್ರೀ ಗುರುರಾಜ ನಿರ್ದೇಶಕರಿಗೆ ಅಭಿನಂದನ ಸಲ್ಲಿಸ ಬಯಸುವೆ. ಇಡೀ ಜಿಲ್ಲೆಯಲ್ಲಿ ನಮ್ಮ ಶಾಲೆಯನ್ನು ಆರಿಸಿಕೊಂಡಿದ್ದು ಹೆಮ್ಮೆಯ ವಿಷಯವಾಗಿದೆ. ೧೫ ದಿನಗಳ ತರಬೇತಿ ಪಡೆದು ಆರು ವಿವಿಧ ಶಾಲೆಗಳಲ್ಲಿ ಪ್ರದರ್ಶಿಸಿದ ನಾಟಕ " ಕತ್ಲೆ ನಗರೀ ತಲೆಕೆಟ್ ರಾಜ " ನಮಗೊಂದು ಅದ್ಭುತ ಅನುಭವ ನೀಡಿತು. 

ತರಬೇತಿ ಸಮಯದಲ್ಲಿ ಮುಖವಾಡ ತಯಾರಿಕೆ, ರಂಗಾಟ, ಬಣ್ಣದ ಆಟ, ಆಡಿಸುತ್ತಾ ನಾಟಕ ಕಟ್ಟಿ ಕೊಟ್ಟಿದ್ದು ತಿಳಿದೇ ನಾವು ನಾಟಕದ ಒಳಗೆ ಪ್ರವೇಶ ಮಾಡಿದ್ದೆವು. ನಾಟಕಗಳ ಪ್ರದರ್ಶನ ನಂತರ ನಾವು
ನಮ್ಮ ಯೋಚನೆ, ನಡವಳಿಕೆ, ಇತರರೊಂದಿಗೆ ಸಂಬಂಧದಲ್ಲಿ ಆದ ಬದಲಾವಣೆ ಊಹಿಸದಂತೆ ಪರಿವರ್ತನೆ ಆದದ್ದು. ಇಂಥಹ ಒಂದು ವಿಷಯ ನಮ್ಮ ಪ್ರತಿಯೊಂದು ಶಾಲೆಯಲ್ಲಿ ದೊರಕಿದರೆ ನಾವು ನಾಡಿನ ಆದರ್ಶ ಸತ್ ಪ್ರಜೆ ಆಗಬಹುದು.

MASK



                              



       




ನಾಟಕದ ಮನೆಗೆ ಸ್ವಾಗತ


ನಾಟಕದ ಮನೆ ಎಂದು ನಾನು ಇಲ್ಲಿ ಬಳಸಿದ್ದೇನೆ. 
 ಶಾಲೆ ಎನ್ನುವುದಕ್ಕೆ ಮಕ್ಕಳು ದೂರ ಸರಿಯುವುದಕ್ಕಿಂತ  
ತಮ್ಮ ಮನೆಗೆ ಸಂತೋಷದಿಂದ ಮರಳಿ ಬರುವಂಥ 
ವಾತಾವರಣವನ್ನು ಸೃಷ್ಟಿಸ ಬೇಕಾಗಿದೆ. 


ಅಂಗ್ಲ ಭಾಷೆಯ ಕಾರ್ಯಗಾರ










ಉಧ್ಘಾಟನೆ  : ಶ್ರೀ ಭೀಮಪ್ಪ ಗೋನಾಳ, ಕ್ಷೇತ್ರಶಿಕ್ಷಾಣಾಧಿಕಾರಿಗಳು,ಕುಷ್ಟಗಿ 
ಅಧ್ಯಕ್ಷತೆ  :  ಶ್ರೀ ಈಶಪ್ಪ ತಳವಾರ, ಮು.ಗು, ಜಹಗೀರಗುಡದೂರ
ಮುಖ್ಯ ಅತಿಥಿ : ಶ್ರೀ ಭೀಮರಾವ ಸಾಳುಂಕಿ  ಅಧ್ಯಕ್ಷರು,ಎಸ್.ಡಿ.ಎಮ್.ಸಿ
ಸಂಪನ್ಮೂಲ ವ್ಯಕ್ತಿ  : ಶ್ರೀ ಬಸವರಾಜ ಹಂದ್ರಾಳ    
                        ಇಂಗ್ಲೀಷ ಉಪನ್ಯಾಸಕರು, ಸ.ಪ.ಪೂ.ಕಾಲೇಜು, ಭಾಗ್ಯನಗರ,ಕೊಪ್ಪಳ
ದಿನಾಂಕ :  ೦೯.೦೮.೨೦೧೧    ಸ್ಥಳ  : ಜಾಗೀರಗುಡದೂರ

ಶನಿವಾರ, ಫೆಬ್ರವರಿ 18, 2012

ಕಾರ್ನಾಡರಿಗೆ ಒಂದು ಪತ್ರ

                                 ಗಿರೀಶ್ ಕಾರ್ನಾಡ ರವರ ಆತ್ಮ ಕಥೆಯನ್ನು ಓದಿ ಕೊಂದು ಅವರಿಗೆ ಪ್ರತಿಕ್ರಿಯಿಸ ಬೇಕೆಂಬ ಉತ್ಸುಕತೆಯಲ್ಲಿ  ಕಾರ್ನಾಡ ರಿಗೆ  ಹೀಗೆ ಕೆಳಗಿನಂತೆ  ಬರೆದಾಗ 
                   
  ಮಿ|| ಜಂಟಲ್ ಮ್ಯಾನ್                                                                                                                            
                                        "ಆಡಾ ಆಯುಷ್ಯ " ದಲ್ಲಿ ನಿಮ್ಮ ಪಯಣವನ್ನು ಓದಿ ಹೇಗೆ ಪ್ರತಿಕ್ರಿಯಿಸ ಬೇಕೆಂದು ತಿಳಿಯದೆ ನನ್ನಿಂದ ಶಬ್ದಗಳೇ ಹೊರಡುತ್ತಿಲ್ಲ. ನಿಮ್ಮ ಬರವಣಿಗೆಯಲ್ಲಿ ನನ್ನನ್ನು ನಾನು ಕಂಡುಕೊಳ್ಳುತ್ತಿದ್ದೇನೆ. ಕಾರಂತರ ಪಲಾಯನ , ನಿಮ್ಮ oup ನಲ್ಲಿ , ಚಿತ್ರಪಟ , ಬರವಣಿಗೆ ಹೀಗೆ ಎಲ್ಲವೂ ನನ್ನನ್ನು ಕಾಡುತ್ತವೆ. ಮೊದಲು ಕಾರಂತರನ್ನು ಓದಿ ಕೊಂಡು ನಾನು ಓಡಿದ್ದೆ. ಆದರೆ ಒಳ್ಳೆ ಸ್ನೇಹಿತನ ಮನೆಯಲ್ಲಿ ಆಶ್ರಯ ಪಡೆದು ಅಂದು ಕೊಂಡ ಕ್ಷೇತ್ರದಲ್ಲಿ ಸಣ್ಣದಾಗಿ ಪಯಣವಂತು ನಡದೇ ಇದೆ.
ಕ್ಷಮಿಸಿ ನಾನು ನಿಮ್ಮ ಮಗಳ ವಯಸ್ಸಿನವನು. ಭರವಸೆಯನ್ನು ಗಟ್ಟಿಯಾಗಿಯೇ ಇಟ್ಟುಕೊಂಡಿದ್ದೇನೆ. ನಿಮ್ಮ ಪುಸ್ತಕದ ಓದು ನನ್ನನ್ನು ಇನ್ನು ಹುರಿಗೊಳಿಸಲು ಸಹಾಯಕವಾಗಿದೆ ಎಂದು ತಿಳಿಸುತ್ತಾ ತಮ್ಮ ಮುಂದಿನ "ನೋಡುನೋಡುತ ದಿನಮಾನ" ಕಾಯುತ್ತೇನೆ. "
       
                                                                                         ಗುರುರಾಜ್

                ಅದಕ್ಕೆ ಕಾರ್ನಾಡರು  ಪ್ರತಿಕ್ರಿಯಿಸಿದ್ದು  


ಪ್ರಿಯ ಗುರುರಾಜ್,
          ನಿಮ್ಮ ಪತ್ರಕ್ಕಾಗಿ ಆಭಾರಿ.  "ಆಡಾ  ಆಯುಷ್ಯ " ಓದಿ ನಿಮಗೆ ಖುಷಿ ಯಾಯಿತೆಂದು ತಿಳಿದು ಸಂತೋಷವಾಯಿತು.

                        ಶುಭಾಶಯಗಳೊಂದಿಗೆ

                                                                    ಗಿರೀಶ್ ಕಾರ್ನಾಡ್




                                         

ಹೊಸ ವರುಷ


ಬರುತಿದೆ ನವ ವರುಷ

ಪ್ರತಿ ದಿನಗಳಂತೆ

ನಾವುಗಳೋ

ಹುಚ್ಚೆದ್ದು 

ಕಿರುಚಾಡಿ

ಮದ್ದುಗಳನ್ನು ಸುಟ್ಟು

ಮಧ್ಯಾರಾತ್ರಿಯಲ್ಲಿ 

ಹಚ್ಸೆದ್ದ ಗಲಾಟೆಗೆ

ಪಕ್ಷಿಗಳೆಲ್ಲ ಎದ್ದು 

ಗಾಬರಿ ಗೊಂಡು  

ರೋಧಿಸುತ್ತಿವೆ

" ನವ ವರುಷಕ್ಕೆ  "


             ಸಮಯ : ೦೦.೦೦  ದಿನಾಂಕ : ೦೧.೦೧.೨೦೧೨

ಸ್ಥಳ : ರೈಲ್ವೆ  ನಿಲ್ದಾಣ, ಹೊಸಪೇಟೆ. 


ಶುಕ್ರವಾರ, ಫೆಬ್ರವರಿ 17, 2012



ಶಾಲಾ ಆವರಣದಲ್ಲಿ ಸ್ತಬ್ದ ಚಿತ್ರ ತಯಾರಿಯಲ್ಲಿ ...
 ಮಕ್ಕಳು ಮುರಿದ ಕಟ್ಟಿಗೆಯನ್ನು ಬಳಸಿ ಸುಂದರ
 ಕಲಾಕೃತಿಯಾಗಿ ಮಾಡುವತ್ತಾ
ಮಕ್ಕಳು ನಿರತರಾಗಿರುವುದು. 

ಸೋಮವಾರ, ಫೆಬ್ರವರಿ 13, 2012

ವಿದ್ಯೆ ಎಂಬುವುದು ಸಂಪತ್ತು 

ಅದು ಕದಿಯಲಾಗದ,

ಮತ್ತು 

ಅದು ದೇವರು 

ನೀಡಿದ ಗಮ್ಮತ್ತು. 

*******************

ಕಣ್ಣು ನಿನ್ನದಾದರೆ 

ಕಣ್ಣಿರು ನನ್ನದು

ಹೃದಯ ನಿನ್ನದಾದರೆ 

ಹೃದಯ ಬಡಿತ ನನ್ನದು

ದೇಹ ನಿನ್ನದಾದರೆ 

ಪ್ರಾಣ  ನನ್ನದು. 

*** ಲಿಂಗರಾಜ ಎಸ. ರೋಣದ
೮ ನೆ ತರಗತಿ.

ಶುಕ್ರವಾರ, ಜನವರಿ 6, 2012

"ಚಿಣ್ಣರ ಜಿಲ್ಲಾ ದರ್ಶನ " ನಮ್ಮ ಶಾಲೆಯಿಂದ ನಾಳೆ ಅಂದರೆ ದಿನಾಂಕ ೦೭.೦೧.೨೦೧೨ ರಂದು ಮಕ್ಕಳೊಂದಿಗೆ


ಇಟಗಿ 
ಕೊಪ್ಪಳ (ಗವಿಮಠ )
ಹುಲುಗಿ
ಹಂಪಿ 
ಟಿಬಿ ಡ್ಯಾಮ್
ಮುನಿರಬಾದ (ಪಂಪಾವನ)