ಗುರುವಾರ, ಆಗಸ್ಟ್ 6, 2015
ಬುಧವಾರ, ಜುಲೈ 29, 2015
ಸಲಾಮ್ ಅಬ್ದುಲ್ ಕಲಾಂ
ನಮ್ಮೂರಿಗೇನು ಕಲಾಂ ಅವರು ಬರಲಿಲ್ಲ. ಆದರೆ ನಮ್ಮವರೇ ಆಗಿದ್ದರು ಕಲಾಂ ಅವರು. ವಿದ್ಯಾರ್ಥಿಗಳ ಮನದಲ್ಲಿ ಬೇರೂರಿದ್ದಾರೆ. ಹೊಸತನಕ್ಕೆ ಹಾತೋರೆಯುವ ಈ ಹೊಸ ಕುಡಿಗಳು ಕಂಡಾಗ ಏನೆಲ್ಲ ಅವಕಾಶಗಳನ್ನು ಕಲ್ಪಿಸಿಕೊಡ ಬೇಕೆಂದು ನನ್ನ ಮನ ತುಡಿಯುತ್ತದೆ. ಕಲಾಂ ಅವರಿಗೊಂದು ಸಲಾಮ್ ಮಾಡುತ್ತಾ, ಮಕ್ಕಳಿಗಾಗಿಯೇ ಮತ್ತಷ್ಟು ಕೊಟ್ಟುಕೊಳ್ಳೋಣ. ಕಲಾಂ ಅವರಂತೆ. ಹೊಸ ಭವಿಷ್ಯಕ್ಕೆ ಹೊಸ ಹಾದಿಯನ್ನು ಸರಿಯಾಗಿಡೋಣ.
ಮಂಗಳವಾರ, ಜುಲೈ 21, 2015
ಬುಧವಾರ, ಜುಲೈ 15, 2015
ಒಂದು ಹಣತೆ : ಒಂದು ಸಣ್ಣ ಕಥೆ!
![]() |
Girish T P |
ಒಂದು ದಿನ ಒಂದು ಮನೆಯ ಹಣತೆಯಲ್ಲಿ ಒಂದು ಚಿಕ್ಕ ಭಿನ್ನಾಭಿಪ್ರಾಯ ಶುರುವಾಯಿತು.
ಹಣತೆ ” ನನ್ನಿಂದ ದೀಪ ಉರಿಯುತ್ತಿದೆ ಆ ಬೆಳಕು ನನ್ನದು ” ಎಂದು ಹೇಳಿತು.
ಇದನ್ನು ಕೇಳಿದ ಹಣತೆಯಲ್ಲಿದ್ದ ಎಣ್ಣೆ ” ನಾನು ಆ ದೀಪಕ್ಕೆ ಜೀವಾಳ.ನಾನೇ ಇರದಿದ್ದರೆ ದೀಪವೂ ಇಲ್ಲ, ಬೆಳಕೂ ಇಲ್ಲ ಅದಕ್ಕಾಗಿ ಆ ಬೆಳಕು ನನಗೆ ಸೇರಿದ್ದು” ಎಂದಿತು.
ಇದನ್ನು ಕೇಳಿದ ಬತ್ತಿ ” Hello! ನಾನು ಉರಿಯುತ್ತಿರುವದಿಂದಲೇ ದೀಪ ಉರಿಯುತ್ತಿದೆ logically ಬೆಳಕು ನನ್ನದು “ಎಂದಿತು.
ಈ ಕಚ್ಚಾಟವನ್ನು ಸೂಕ್ಷ್ಮದಿಂದಲೇ ನೋಡುತಿದ್ದ ಗಾಳಿ ” ನಾನು ಇಲ್ಲದೇ ದೀಪವು ಉರಿಯಲ್ಲ , ನಾನು ಹೆಚ್ಚಾದರೆ ದೀಪ ಆರಿಹೋಗುತ್ತದೆ ಆದ್ದರಿಂದ ಬೆಳಕು ನನ್ನದು” ಎಂದು ವಾದಿಸಿತು.
ನಾನು ನನ್ನಿಂದ ಎಂಬ ಕಚ್ಚಾಟದಲ್ಲಿ ಹಣತೆ ಹೊಡೆದು ಹೋಯಿತು. ಎಣ್ಣೆ ಹರಿದು ಹೋಯಿತು. ಬತ್ತಿಗೆ ಎಣ್ಣೆಯಿಲ್ಲದೆ ಕುಗ್ಗಿ ಹೋಯಿತು. ಗಾಳಿ ಜೋರಾಗಿ ಬೀಸಿ ಉರಿಯುತ್ತಿದ್ದ ದೀಪ ಆರಿಹೋಯಿತು !
-------------------------
ಎಲ್ಲವೂ ಒಟ್ಟಾಗಿ ಇರುತ್ತಿದ್ದರೆ ಆ ದೀಪದ ಭರವಸೆಯ ಬೆಳಕು ಎಲ್ಲರ ಪಾಲಾಗಿತ್ತು. ” ಅಹಂ ಭಾವನೆಯಿಂದ ಅಂಧಕಾರವೇ ಹೊರತು ಬೆಳಕಿನ ಸಾನಿಧ್ಯವಿಲ್ಲ ”
ಆ ಭರವಸೆಯ ಬೆಳಕು ನಿಮ್ಮದಾಗಲಿ
ಭಾನುವಾರ, ಮೇ 17, 2015
ಬುಧವಾರ, ಏಪ್ರಿಲ್ 29, 2015
ಗುರುವಾರ, ಮಾರ್ಚ್ 26, 2015
ಮಂಗಳವಾರ, ಮಾರ್ಚ್ 24, 2015
ಸೋಮವಾರ, ಮಾರ್ಚ್ 23, 2015
ಭಾನುವಾರ, ಮಾರ್ಚ್ 22, 2015
'ಯಾನುಲ್ ಡೇ ಮಾಡೇವಿ.......
'ಯಾನುಲ್ ಡೇ ಮಾಡೇವಿ. . . . ನೋಡಾಕ ಬರೋರೇನ?' - ಶಾಲಾ ವಾರ್ಷಿಕೋತ್ಸವಗಳ ಬಗ್ಗೆ ಬರೆದಿರುವುದು, ಒಮ್ಮೆ ತಪ್ಪದೇ ಓದಿ ಆಮೇಲೆ ಹೇಳಿ ಹೇಗಿದೆ ಎಂದು...
'ಸರಾ ಏನೇನ್ ತಗೋಬೇಕ್ರಿ' ಅಂದೆ ರಂಗನಾಥಸರಿಗೆ.
'ಏ ಏನಿಲ್ರಿ ಎರಡು ಶಾಲ್ ತಾಟ್,ಹಣ್ಣು ಮತ್ತ್ ಒಂದೆರಡು ಗಿಫ್ಟ್ ತಗೋಳ್ಳೋಣು' ಅಂದ್ರು.' ಅಲ್ರೀ ಮಾಡೂದು ಯಾನುವಲ್ ಡೇ, ಸನ್ಮಾನ ಯಾರಿಗೆ' ಅಂದೆ. 'ಸ್ಟೇಜು ಸೌಂಡಿಗೆ ರೊಕ್ಕಾ ಕೊಟ್ಟಾರಲಾ ಅವರಿಗೆ' ಅಂದ್ರು. ಒಂದು ಕೈಲಿ ಸಾಯ ಮಾಡಿದ್ರ ಇನ್ನೊಂದ್ ಕೈಗ್ ಗೊತ್ತಾಗಬಾರದು ಅಂತಾರಲ್ರೀ ಸರಾ. ಮತ್ತಿದೇನು ಅವರು ಕೊಟ್ಟ ಯಾಲ್ಡೆಲ್ಡ್ ಸಾವ್ರದಾಗ ಐದೈದನೂರ್ ಸನ್ಮಾನಕ್ಕ ಖರ್ಚ ಆಗ್ತದಲ್ರೀ ಅಂದೆ. ಇಲ್ರೀ ಸರಾ ಸನ್ಮಾನಕ್ಕ ಬ್ಯಾರೇನ ರೊಕ್ಕ ಕೊಟ್ಟಾರ ಅಂದ್ರು. ಛಲೋ ಆತ್ ನಡೀರಿ ಅಂದೆ. ಸರಾ ಇವ್ರಿನ್ನಾ ಪಾಡ. ಇನ್ನೊಂದಿಬ್ರು ಬಂದಿದ್ರು. ಸನ್ಮಾನಕ್ಕೆಷ್ಟ ಆಗ್ತದ್ರಿ ಕೊಡ್ತೀವಿ ನಮಗೂ ಮಾಡ್ರಿ ಅನ್ನಾಕತ್ತಿದ್ರು ಅಂದ್ರು. ಅದಕ್ಕಂತಾನೇ ಬಾಳ ಮಂದಿ ಅದಾರಲ್ಲ ಅಲ್ಹೋಗಿ ರೊಕ್ಕ ಕೊಟ್ ಸನ್ಮಾನಮಾಡಿಸ್ಕೊಂಬರ್ರಿ ಅಂದ್ರಿಲ್ಲೋ ಅಂದೆ. ಅದ್ನೇನ ಮಾಡೋರು ಬಿಡ್ರಿ ಸರಾ ಲಗೂ ಲಗೂ ಸಂತಿ ಮಾಡ್ಕೊಂಡ ಹೋಗೂಣು ನಡೀರಿ ಅಂತ ಅವಸರಮಾಡಿದ್ರು.ನೂರಿನ್ನೂರು ಕೊಟ್ಟೋರಿಗ್ ಗುಲಾಬಿಹೂ, ಐನೂರು ಕೊಟ್ಟೋರಿಗೆ ಮಾಲಿ, ಸಾವ್ರದ ಮ್ಯಾಲ ಕೊಟ್ಟೋರಿಗೆ ಶಾಲಾಕಿ ಸನ್ಮಾನ ಮಾಡಾಕ ಎಲ್ಲಾ ತೊಗೊಂಡು ಮನಿಕಡೆ ಹೊಂಟ್ವಿ.

*************
ಲೇ ವಿನ್ಯಾ ಮೈಕಲ್ ಜಾಕ್ಸನ್ ಸತ್ತೋಗಿ ಬಾಳ ದಿನಾ ಆತಲಾ ಇಲ್ಯಾಂಗ ಬಂದ್ರು ಅಂದೆ. ಸರಾ ಅವಾ ಸಿದ್ಯಾ ರೀ. ಡಾನ್ಸಿಗ್ ರಡಿ ಆಗಿ ಊರಾಗ ಅಂವಂದ್ ಅರವಿ ತೋರ್ಸಕೋಂತ ಹರಗ್ಯಾಡಾಕ ಹೊಂಟಾನ ಅಂದ ವಿನ್ಯಾ. ಅಲಲೇ ಪ್ರೋಗ್ರಾಂ ಇರೂದು ಸಂಜೀಮುಂದಲ ಇಟ್ ಲಗೂ ರಡಿ ಆಗ್ಯಾನಾ ಅಂದೆ. ಸರಾ ಕಾವೇರಿ ನಿನ್ನಿ ರಾತ್ರಿನೇ ಭಾರತಾಂಬೆ ಡ್ರೆಸ್ ಹಾಕ್ಕೊಂಡ್ ರಡಿಯಾಗಿ ಮಕ್ಕೊಂಡಿದ್ಲಂತ್ರಿ. ಈಗ ನೋಡಿದ್ರ ಸಿಟ್ಟಿಗ್ ಬಂದಿರೋ ಚಾಮುಂಡಿಗತೆ ಕಾಣಾಕತ್ತಾಳ್ರಿ ಅಂದ. ಇನ್ನ ಸಂಜೀಮಟ ಹಿಂಗ ಇದ್ರ ಯಾರ್ಯಾರ್ ಹೆಂಗೆಂಗ್ ಕಾಣ್ತಾರೋ. . . ದೇವರೇ ನೀ ಇದ್ರ ನಮ್ನೂ ಕಾಪಾಡಪಾ.. ಅಂತ ಮನಸಿನೊಳಗಾ ಬೇಡ್ಕೊಂಡೆ.
ಎಲ್ರೂ ನಿಮ್ ನಿಮ್ ಮನಿಗುಳಾಗ ಸಂಜೀಕ ಕಾರ್ಯಕ್ರಮ ನೋಡಾಕ ಬರ್ರಿ ಅಂತ ಹೇಳಬರ್ಯಪಾ. ಮಾಡೂದ ಫಸ್ಟ್ ಟೈಮ್ ಮತ್ ನಂಗ್ಹೇಳಲಿಲ್ಲ ನಿಂಗ್ಹೇಳಲಿಲ್ಲ ಅಂತ ಜಗಳ ತಗದ್ ಇದಾ ಲಾಸ್ಟ್ ಟೈಮ್ ಮಾಡಿಗಿಡ್ಯಾರು ಅಂದೆ ಹುಡ್ರಿಗೆ. ಮನಿಗ್ಹೋಗಾಕ ಸಿಕ್ಕಿದ್ದ ಛಾನ್ಸು ಅಂತ ಪೇರಿ ಕಿತ್ರು.
ಹಂಗೂ ಹಿಂಗೂ ಹೆಂಗೆಂಗೋ ನಮಗ್ ಹರದಷ್ಟ್ ತಯಾರಿಮಾಡ್ಕೊಂಡ್ವಿ. ಆಜುಬಾಜೂ ಸಾಲಿಗೋಳ ಮಾಸ್ತಾರಗೋಳಿಗೂ ಬರಾಕ ಹೇಳಿದ್ವಿ. ಯಾವುದಕ್ಕೂ ಮಾಸ್ತಾರ್ ಮಂದಿ ಸ್ವಲ್ಪ ಹೆಚ್ಚಿರ್ಲಿ ಕಷ್ಟದಾಗ ಸಹಾಯಕ್ಕಾದ್ರೂ ಆಕ್ಕಾರ. ಮದ್ಲಾ ಈ ಊರಾಗಿರೋ ಗಂಡಸ್ರ ಸಂಕಿ ಸಂಜಿ ಆಗ್ತಿದ್ದಂಗ ಡಬಲ್ ಆಗಿರ್ತದ. ಒಬ್ಬೊಬ್ಬರೇ ಇದ್ದೋರು ಔಷದ ತಗೊಂಡ್ ಕೂಡ್ಲೆ ಇಬ್ಬಿಬ್ರ ಆಗಿರ್ತಾರ. ಇರ್ಲಿ ಅದೂ ಒಳ್ಳೇದ ಬಿಡ್ರಿ. ನಾಕ್ ಮಂದಿ ಇರೋ ನಾವು ಅವರಿಗೆ ಡಬಲ್ ಕಾಣ್ತೀವಲಾ ಜರಾ ದೂರ ಇರ್ಬೋದು ಅನ್ಕೊಂಡು ಸಮಾಧಾನ ಮಾಂಡ್ಕೊಂಡ್ನಿ.

ಸಂಜಿಯಾಗ್ತಿದ್ದಂಗ ಊರಾಗಿರೋ ಹುಡುಗ್ರು ಹುಪ್ಪಡಿ ಸಾಲಿ ಅಂಗಳದಾಗ ಸೇರಿದ್ರು. ಗಂಡಸರೆಲ್ಲ ರಸ್ತಾ ಅಳತಿ ಮಾಡೋರಗತೆ ಆ ತುದಿಯಿಂದ ಈ ತುದಿಗಂಟ ಹೆಜ್ಜಿ ಹಾಕ್ಕೊಂಡ್ ಬರ್ತಿರೋದ ನೋಡಿ ಯಾಕೋ ಎದಿ ರವರವ ಅನ್ನಾಕತ್ತಿ. ಅವರ್ ಬಂದ್ ವರವರ ಅನ್ನೋದಕ್ಕ ಮೊದ್ಲ ಪ್ರೋಗ್ರಾಂ ಚಾಲೂ ಮಾಡೋದ ಛಲೋ ಅಂತ ಬಡಬಡ ವೇದಿಕಿಗೆ ಹತ್ತಿ, ದುಡ್ ಕೊಟ್ಟೋರನ್ನ, ಸ್ಟೇಜಿನ ಮ್ಯಾಲೆ ಮಾಲಿ ಹಾಕಿದಾಗ ಕೊಡೋರನ್ನ ಸೇರ್ಸಿ ಕರದ್ ಕುರ್ಚಿಗಳನ್ನ ತುಂಬಿಸಾಕತ್ವಿ. ತಮ್ಮ ಕುರ್ಚಿಗೆ ಯಾರೋ ಮಂತ್ರಿಸಿ ನಿಂಬಿಕಾಯಿ ಕಟ್ಯಾರಂತ ಕುರ್ಚಿನ ಪಂಚಾಯಿತಿಂದ ಹೊರಾಗ್ ಒಗದ್ ನೆಲದ ಮ್ಯಾಲಾ ಕುಂಡ್ರೋ ಪಂಚಾಯಿತಿ ಮೆಂಬರನ್ನ, ನಮ್ ಕೈಯಾಗ ಕಲೀತಿದ್ದಾಗ ಸಿಕ್ಕಂಗ್ ಬಡಸ್ಕೋಂಡ್ ಸಾಲಿ ಬಿಟ್ ಕಾವಿ ಹಾಕ್ಕೊಂಡ್ಈಗ ಎಲ್ರನ್ನೂ ತನ್ನ ಕಾಲಿಗ್ ಬೀಳಂಗ್ ಮಾಡ್ಕೊಂಡಿರೋ ನಮ್ ಹಳೇ ವಿದ್ಯಾರ್ಥಿ ಈಗಿನ ದೊಡ್ ಸ್ವಾಮೀಜಿಯನ್ನ ದಿವ್ಯ ಸಾನಿಧ್ಯವಹಿಸಾಕ ಬೇಡ್ಕೊಂಡೂ ಆತು. ಎಲ್ರೂ ಹ್ಯಾವೀಲೆ ನಾಮುಂದು ತಾಮುಂದು ಅಂತ ಸ್ಟೇಜಿನ ಮೊದಲನೇ ಸಾಲಿನ ಕುರ್ಚಿಗಳಲಿ ಕುಂಡ್ರಾಕತ್ರು.
ಹೆಂಗೋ ಉದ್ಘಾಟನೆ ಮುಗೀತು ಇನ್ನೇನ್ ಡಾನ್ಸ್ ಚಾಲೂ ಮಾಡ್ಬೇಕು. ಬಾಜು ಸಾಲಿ ಮಾಸ್ತರ ಮೆಳವಂಕಿ ಸರ್ ಮತ್ ನಾ ಹಾಡಾ ಹಚ್ಚಾಕ ಸೌಂಡಿನೋರ ಹತ್ರ ಕುಂತ್ವಿ. ಎರಡ್ಮೂರು ಡಾನಸ್ ಆಗಿರ್ಬೇಕು, ಮಾಂತ್ಯಗೋಳ ಅಪ್ಪ ಸ್ಟೇಜ್ ಹತ್ತಾಕಂತ ಬರ್ತಿದ್ದ. ಪತ್ತಾರ ಸರಾ ಓಡ್ರಿ ಅವನ್ ಸೈಡಿಗ್ ನಿಲ್ಸ್ ಹೋಗ್ರಿ ಅಂತ ಪುಸಲಾಯಿಸಿದೆ. ಅವರು ಹೋಗಿ ಯಾಕಪಾ ಸ್ಟೇಜಿಗೆ ಹೊಂಟೀರಿ ಅಂತ ಕೇಳಿದ್ರು. ನಾ ಒಂದ ಡಾನ್ಸ್ ಮಾಡಾಂವ್ರಿ ಅಂದ ಮಾಂತ್ಯಗೋಳ ಅಪ್ಪ. ಒಂದ್ಸೊಲ್ಪೊತ್ ತಡೀರಿ ಮಾಡೋಂಕ್ರಿ ಅಂತ ಸಮಾಧಾನ ಮಾಡಿದ್ರು. ಇನ್ನ ‘ನೇಗಿಲು ಹಿಡಿದು ಹೊಲದೊಳು ದುಡಿವ ಯೋಗಿಯ ನೋಡಲ್ಲಿ’ ಅನ್ನೋ ಹಾಡು ಹಚ್ಚಬೇಕಾಗಿತ್ತು. ಮೈಕಲ್ ಜಾಕ್ಸನ್ಗತೆ ಡ್ರೆಸ್ ಮಾಡ್ಕೊಂಡ್ ಕರಿ ಚಸ್ಮಾ ಹಾಕ್ಕೊಂಡಿದ್ ಸಿದ್ಯಾ ಬಂದ್ ನಿಂತ. ಲೇ ಮಗನ ಯಾವ ಹಾಡಿಗೈತಲೇ ನಿನ್ ಡಾನ್ಸ್ ಅಂತ ಕೇಳೀನಿ ಗಾಬರಿಯಾಗಿ. ಸರಾ ನೇಗಿಲಯೋಗಿ ಹಾಡ್ರಿ ಅಂದ. ರೈತನಗತೆ ಅರವಿ ಹಾಕ್ಕೊಂಡ್ ಬರೋದ್ ಬಿಟ್ ಇದೇನ್ಲೇ ನಿನ್ನ ಅವತಾರ ಅಂತ ದಿಗಿಲಾಗಿ ಸಿಟ್ಟೀಲೇ ದಬಾಸಿದ್ನಿ. ಸರಾ ನಾ ಮುಂಜಾನಿಂದ ರಡಿ ಆಗೀನ್ರಿ ಹಾಡಾ ಹಚ್ರಿ ಲಗೂ ಅಂತ ಚಸ್ಮಾ ಸರಿಮಾಡ್ಕೊಂಡ. ಇನ್ನ ಕಲ್ಲು ಬೀಳೋದು ಗ್ಯಾಂರಂಟಿಯಾತು. ಆದ್ರೂ ಅನಿವಾರ್ಯ ಇತ್ತು. ‘ಲೇ ಹಾಡಾ ಹಚ್ರೋ’ ಅಂತ ಮಂದಿ ಒದ್ರಾಡಾಕತ್ರು. ಮಾಸ್ತಾರಗೋಳು ಹಾಡಾ ಹಚ್ಚಾತ್ತಾರ ಅಂಬೋದು ಅವರಿಗಾರ ಏನ್ ಗೊತ್ತು.
ಚಿಕನಿ ಚಮೇಲಿ ಹಾಡಿಗೆ ಚನ್ಯಾ ಹೋಗಿನಿಂತ. ಲೇಡಿ ಡಾನ್ಸಿಗೆ ಹುಡುಗ! ಮೆಳವಂಕಿ ಸರಾ ನಾ ಒಂದಕ್ಹೋಗಿ ಬರ್ತೀನ್ರಿ ಅಂತ ಹೇಳಿ ಹತ್ತು ನಿಮಿಷ ಸ್ಟೇಜಿನ ಹಿಂದ್ ಹೋಗಿ ನಿಂತ್ ಬಿಟ್ನಿ.ಆ ಹಾಡ್ ಮುಗದ್ ಐದು ನಿಮಿಷ ಆದಮ್ಯಾಕ ಸವಕಾಶ ಬಂದ್ ಕುಂತ್ನಿ. ಮುಂದಿಂದು ಜೈ ಹೋ ಹಾಡಿತ್ತು. ವಿಟ್ಯಾ, ಮಂಜಾ, ನಾಗ್ಯಾ ಮತ್ತ್ ಮೈಬು ಸ್ಟೇಜಿಗ್ ಬಂದ್ ಸ್ಟೈಲಾಗಿ ಮಂದಿಕಡೆ ಬೆನ್ನುಮಾಡಿ ನಿಂತ್ರು. ಹಾಡಾ ಚಾಲೂ ಆತು. ಮೆಳವಂಕಿ ಮಾಸ್ತಾರ ಸರಾ ಇವರದು ಹಾಡು ಬ್ಯಾರೇ ಇರ್ಬೇಕ್ ನೋಡ್ರಿ ಅಂದ್ರು. ಯಾಕ್ರೀ ಸರ್ ಅಂತ ಕೇಳ್ದೆ. ಜೈಹೋ ಹಾಡಿಗೆ ಜಡ್ಡಿನಾಕ ಪಂಪನಾಕ ಅಂತ ಹಲಗಿ ಬಡ್ದಾಗ ಕುಣದಂಗ ಕುಣ್ಯಾತ್ತಾರಲಾ ಅಂದ್ರು. ಈ ಮಕ್ಳಿಗೆ ‘ಸಾಲ್ಯಾಗ ಟೀಚರ್ ಯಾರೂ ಇಲ್ರಪಾ, ಎಲ್ಲಾ ಸರ್ಗಳೇ ಅದೀವಿ. ಡಾನ್ಸ್ ಕಲಸಾಕ ನಮಗೂ ಪಕ್ಕಾ ಬರೂದಿಲ್ಲ. ನೀವೇ ಕಲ್ಕೊಳ್ರಿ’ ಅಂದಿದ್ನಿ. ಏಕಲವ್ಯನ ಮೀರಿಸೋರಂಗ ಹಿಂಗ್ ಕಲ್ತಾರ ನೋಡ್ರಿ ಸರ್ ಅಂದೆ. ಬಗೆಹರೀತು ಬಿಡ್ರಿ ಅಂತ ಅನ್ನಾಕತ್ರು ಮೆಳವಂಕಿ ಸರ್.

ಜನಾ ನೋಡಿದ್ರ ಕ್ಯಾಕಿ ಹೊಡ್ದು ಎಂಜಾಯ್ ಮಾಡಾಕತ್ತಾರ. ರಾತ್ರಿ ಹನ್ನೆಲ್ಡಾದ್ರೂ ಒಬ್ರೂ ಹೋಗಾಕವಲ್ರು. ನಾವೇನ್ ಕಡಮಿ ಅಂತ ಒಂದಾದ ಮ್ಯಾಲೊಂದ ಹಾಡಾ ಹಚ್ಚೇಹಚ್ಚೀವಿ. ಮಕ್ಕಳು ಕುಣದೇ ಕುಣದ್ವು. ಲಾಸ್ಟಿಗ್ ನಮಗಾ ಸಾಕಾಗಿ ‘ಸರಾ ಇನ್ನ ಕೊನೇ ತಯಾರಿ’ ಅಂತ ಒದರ್ರಿ ಅಂದ್ರು ನಮ್ ಸರ್. ಏ ತಯಾರಿ ಎಲ್ಲೈತ್ರಿ, ಏನಿದ್ರೂ ಡೈರೆಕ್ಟ್ ಶೋ ಮಾಡೋ ನಟರಾಜರು ನಮ್ ಮಕ್ಳು ಅಂದೆ. ನಿದ್ದಿ ಬರಾತೈತಿ ಸಾಕ್ ನಿಲ್ಲಸ್ರಿ ಹೋಗೂಣು ಅಂತ ಕಾಡಾಕತ್ರು. ಸರಿ ಇದೇ ಲಾಸ್ಟ್ ಪ್ರೋಗ್ರಾಂ ಅಂತ ಮೈಕಿನ್ಯಾಗ ಒದರಿ ಕೊನೆಗೂ ಕಾರ್ಯಕ್ರಮ ಮುಗಿಸಿದ್ವಿ. ಹಂ ಅಂದಂಗ ಆಯೇರಿ(ಕಾರ್ಯಕ್ರಮ ಮೆಚ್ಚಿ ದುಡ್ ಕೊಡೋದು) ಮಾಡೋರದೇ ಒಂದ್ ಕತಿ ಆಗ್ತದ ಅದನ್ ಆಮ್ಯಾಕ ಹೇಳ್ತೀನಂತ. ಸರೀನಾ... . .
ಸೂರ್ಯಕಾಂತ ಬಳ್ಳಾರಿ
ಮೊ:9902865762
ಸೂರ್ಯಕಾಂತ ಬಳ್ಳಾರಿ
ಮೊ:9902865762
ಮಂಗಳವಾರ, ಮಾರ್ಚ್ 10, 2015
ಸೋಮವಾರ, ಮಾರ್ಚ್ 9, 2015
ಗುರುವಾರ, ಮಾರ್ಚ್ 5, 2015
ಶನಿವಾರ, ಫೆಬ್ರವರಿ 28, 2015
ಬುಧವಾರ, ಫೆಬ್ರವರಿ 25, 2015
ಮಂಗಳವಾರ, ಫೆಬ್ರವರಿ 24, 2015
ಪ್ರಾಣ ಉಳಿಸಿ ಅಭಿನಂದಕ್ಕೆ ಅರ್ಹರಾದ ಆನಂದಪ್ಪ ಕುರಿ
ಮೊನ್ನೆಯ ದಿನ ಶಾಲೆಯ ಕಳವು ಪ್ರಕರಣದಿಂದ ಇಡೀ ಶಾಲಾ ಸಿಬ್ಬಂದಿ ವರ್ಗದಲ್ಲಿ ಅತ್ಯಂತ ಆತಂಕ ಹಾಗೂ ದುಃಖ ಮಡುಗಟ್ಟಿತ್ತು. kscst ರಾಜ್ಯ ಕಛೇರಿಯಿಂದ ನೀಡಲ್ಪಟ್ಟ ಮಕ್ಕಳ ಕಲಿಕೆಗಾಗಿ ೮,೯ ಹಾಗೂ ೧೦ ನೆ ತರಗತಿಯ ದೃಶ್ಯ ಪಾಠಗಳನ್ನು ಚಿಕ್ಕ ಲ್ಯಾಪ್ ಟಾಪ್ ನಲ್ಲಿ ತುಂಬಿ ನೀಡಲಾಗಿತ್ತು. ಅದು ವಿದ್ಯಾರ್ಥಿಗಳಿಗೆ ಬಿಟ್ಟರೆ ಮತ್ತಾರಿಗೂ ಉಪಯೋಗವಿಲ್ಲ. ಅಲ್ಲದೇ ಅದು ನಮ್ಮ virtual lab ಲ್ಲಿ ಮಾತ್ರ ಬಳಕೆಗೆ ಬರುವಂತೆ ಮಾಡಿದ್ದು, ಅದು ಎಲ್ಲಿಯು ಉಪಯೋಗಕ್ಕೆ ಬರುವುದೇ ಇಲ್ಲ. ಅಷ್ಟೇ ಅಲ್ಲದೇ LED ಟಿ.ವಿ, ಬ್ಯಾಟರಿ, ಇನ್ ವೇಟರ್ ಹಾಗೂ ಚರ್ಜಾರ್ ಗಳನ್ನು ಶಾಲೆಯ ಬೀಗಗಳನ್ನು ಮುರಿದು ಕದ್ದು ಒಯ್ದಿದ್ದಾರೆ. ಮಕ್ಕಳ ಅಭ್ಯಾಸಕ್ಕೆ ಪೂರಕವಾದವುಗಳನ್ನೇ ತೆಗೆದುಕೊಂಡು ಹೋದಾಗ ಅದರಿಂದ ತಮಗೇನು ಲಾಭ...? ಮಕ್ಕಳ ಅಭ್ಯಾಸಕ್ಕೂ ಹಾನಿ ಮಾಡುವ ಇಂಥಹ ನಮ್ಮ ನಡುವಿನವರಿಗೆ ಏನೆಂದು ಹೇಳಬೇಕು.
ಆ ನೋವಿನಿಂದ ಹೊರ ಬರಲು ಆಗದೇ ನಮ್ಮ ಎಲ್ಲ ಶಿಕ್ಷಕ ವೃಂದ ಸಂಕಟಪಡುತ್ತಿದೆ. ಅದೇ ನಿನ್ನೆಯ ದಿನ ನಮ್ಮ ಶಾಲೆಯ ಆನಂದಪ್ಪ ಕುರಿಯವರು ಒಂದು ಚಿಕ್ಕ ಮಗುವಿನ ಪ್ರಾಣ ಉಳಿಸಿ ಅಭಿನಂದಕ್ಕೆ ಅರ್ಹರಾಗಿದ್ದರೆ. ಟಾಟಾ ಎ.ಸಿ ಯಲ್ಲಿ ಗಜೇಂದ್ರಗಡದಿಂದ ಶಾಲೆಗೆ ಬರುವಾಗ ಹಿರೇಗೊಣ್ಣಗರದ ಪ್ರಾಥಮಿಕ ಶಾಲೆಯ ಬಳಿ ಇರುವ ಹೊಲದಲ್ಲಿ ನಡೆದ ಘಟನೆ. ರಸ್ತೆಯ ಪಕ್ಕದಲ್ಲಿಯೇ ಹೊಲಕ್ಕಾಗಿ ನೀರು ನಿಲ್ಲಲು ನಿರ್ಮಿಸಿದ ತೊಟ್ಟಿ (ದೋಣಿ) ಯಲ್ಲಿ ಇರುವ ಬೋರ್ ಅದು. ೨ ರಿಂದ ೩ ಅಡಿ ಆಳವಿರುವ ತೊಟ್ಟಿಯಲ್ಲಿ ಕರೆಂಟ್ ಇದ್ದಾಗ ಹೊಲದವರು ಬೋರ್ ನ್ನು ಚಾಲೂ ಮಾಡೋರು. ಅಲ್ಲಿಯೇ ಪಕ್ಕದಲ್ಲಿರುವ ಪ್ರಾಥಮಿಕ ಶಾಲ ಮಕ್ಕಳು ಇತ್ತ ಹಾಯುವುದು ಕಡಿಮೆ. ಶಾಲೆಯ ಮಕ್ಕಳಿಗೆ ಈ ನೀರು ಅಂಥಹ ಅಪಾಯದ ಸ್ಥಿತಿಯನ್ನೇನು ತಂದು ಒಡ್ಡುವಂಥದ್ದಲ್ಲ. ಆದರೆ ನಮ್ಮ ಪಾಲಕರ ಬೇಜಾವಬ್ದಾರಿಯಿಂದಾಗಿ ಕೆಲವು ಅನಾಹುತಗಳು ಜರುಗಿದ್ದವನ್ನು ಕಂಡಿದ್ದೇವೆ. ಅಂಥಹ ಕ್ಷಣ ಇದಾಗದಿದ್ದದೇ ಒಳ್ಳೆಯದು.
ನಮ್ಮ ಶಾಲೆಯ ಧ್ವಿತೀಯ ದರ್ಜೆ ಸಹಾಯಕರಾದ ಆನಂದಪ್ಪ ಕುರಿಯವರು ಎಂದಿನಂತೆ ಶಾಲೆಗೆ ಹತ್ತಿರದ ಗಜೇಂದ್ರಗಡದಿಂದ ಬಿಸಿಯೂಟಕ್ಕಾಗಿ ತರಕಾರಿಯನ್ನು ತರುವುದು ದಿನನಿತ್ಯದ ಪದ್ಧತಿ. ಹಾಗೇ ಮೊನ್ನೆ ಟಾಟಾ ಎಸಿ ಯಲ್ಲಿ ಬರುವಾಗ ಒಂದು ೭-೮ ವರ್ಷದ ಮಗು ಈ ತೊಟ್ಟಿಯ ಕಡೇ ಚಿಕ್ಕ ಬಿಂದಿಗೆಯನ್ನು ಹಿಡಿದು ನೀರು ತರಲು ಬಂದಿದೆ. ಆ ಮಗುವಿನ ಹಿಂದೆ ೨-೩ ವರ್ಷದ ಮಗು ಆಡುತ್ತಾ ಹಾಗೇ ಬಂದಿದೆ. ಬಿಂದಿಗೆಯನ್ನು ನೀರು ಬರುತ್ತಿರುವ ಕೊಳವೆ ಬಳಿ ಈ ಮಗು ತೆಗೆದುಕೊಂಡು ಹೋಗಿ ಬಿಂದಿಗೆ ತುಂಬಿಸುವ ಪ್ರಯತ್ನದಲ್ಲಿದ್ದಾಗ ಚಿಕ್ಕ ಮಗು ನೀರಿನೊಳಗೆ ಹಾಗೇ ಸಾಗುತ್ತಾ ಬಂದು ಬಿದ್ದು ಬಿಟ್ಟಿದೆ. ಇದನ್ನು ಕಂಡಾ ಮಗು ಬಿಂದಿಗೆ ಬಿಟ್ಟು ಏನು ಮಾಡಬೇಕು ಎಂದು ತಿಳಿಯದೇ ಜೋರಾಗಿ ಕಿರುಚಲು ಪ್ರಾರಂಭಿಸಿದೆ. ಸುತ್ತಾ ಮುತ್ತಾ ಯಾರು ಸ್ಥಳೀಯರು ಇಲ್ಲ. ಶಾಲೆ ತರಗತಿಗಳು ಪ್ರಾರಂಭವಾಗಿದ್ದರಿಂದ ಶಿಕ್ಷಕರು ಹಾಗೂ ವಿದ್ಯಾರ್ಹಿಗಳು ಕೋಣೆಯೊಳಗೆ ಸೇರಿದ್ದಾರೆ. ಅದೇ ಸಮಯಕ್ಕೆ ಗೊಣ್ಣಗರದ ಕಡೇಯಿಂದ ಬಾದಿಮನಾಳ ಕ್ರಾಸ್ ಕಡೇ ಸಾಗುತ್ತಿದ್ದ, ಗಾಡಿಯಲ್ಲಿ ನಮ್ಮ ಆನಂದಪ್ಪ ಕುರಿಯವರ ಗಮನ ಈ ಮಕ್ಕಳ ಮೇಲೆ ಬಿದ್ದಿದ್ದು. ತಕ್ಷಣವೇ ಗಾಡಿ ನಿಲ್ಲಿಸಿ ಓಡಿದ್ದಾರೆ. ಮಗುವಿ ಕೇವಲ ಕೈ ಮಾತ್ರ ಕಾಣತ್ತಿದ್ದು ತಕ್ಷಣವೇ ಆ ಮ್ಗುವನ್ನು ನೀರಿನಿಂದ ಎತ್ತಿ ರಕ್ಷಣೆ ಮಾಡಿದ್ದಾರೆ. ಇನ್ನೋಂದು ಗಳಿಗೆ ತಡವಾಗಿದ್ದರೆ ಇಡೀ ಕುಟುಂಬ ಊರು ದುಃಖದ ಮಡುವಿನಲ್ಲಿರಬೇಕಾಗಿತ್ತು. ಆದರೆ ಸಮಯ ಒಳ್ಳೆಯದಾಗಿದ್ದರಿಂದ ಆ ಮಗು ಉಳಿಯಿತು.
ಇಂಥಹ ಒಳ್ಳೆಯ ಕಾರ್ಯ ಮಾಡಿದ ನಮ್ಮ ಆನಂದಪ್ಪ ಕುರಿಯವರಿಗೆ ನಾವು ನಮ್ಮ ಶಾಲೆ ಹಾಗೂ ಎಲ್ಲ ಶಿಕ್ಷಕ, ವಿದ್ಯಾರ್ಥಿಗಳಿಂದ ಅನಂತ ಕೃತಜ್ಞತೆಗಳನ್ನು ಸಲ್ಲಿಸುತ್ತೇವೆ.

ಆನಂದಪ್ಪ ಕುರಿ |
ಶನಿವಾರ, ಫೆಬ್ರವರಿ 21, 2015
ಬಣ್ಣದ ತಗಡಿನ ತುತ್ತೂರಿ...
( ಶ್ರೀವತ್ಸ ಜೋಷಿ ಯವರು ತಮ್ಮ Facebook ನಲ್ಲಿ ಮೂಡಿಸಿದ್ದನ್ನು ಇಲ್ಲಿ ಹಂಚಿಕೊಂಡಿದ್ದೇವೆ. )
ಜಿ.ಪಿ.ರಾಜರತ್ನಂ ಅವರ ಅತಿಪ್ರಖ್ಯಾತ ಪದ್ಯ "ಬಣ್ಣದ ತಗಡಿನ ತುತ್ತೂರಿ"!
ಇದು ಕೂಡ ನನಗೆ ’ಕಂದನ ಕಾವ್ಯ ಮಾಲೆ’ ಪುಸ್ತಕದಲ್ಲಿ ಸಿಕ್ಕಿತು. 1933ರಲ್ಲಿ ಮುದ್ರಿತವಾದ ಆ ದಿವ್ಯ ಅಕ್ಷರಗಳ ಡಿಜಿಟಲ್ ಪ್ರತಿಯನ್ನೇ ಇಲ್ಲಿ ಬಳಸಿದ್ದೇನೆ. ಆಮೇಲೆ ಬಹಳಷ್ಟು ಪಠ್ಯಪುಸ್ತಕಗಳಲ್ಲಿ, ಮತ್ತು ಬೊಳುವಾರರ ’ತಟ್ಟು ಚಪ್ಪಾಳೆ ಪುಟ್ಟ ಮಗು’ ಸಂಕಲನದಲ್ಲೂ ಈ ಪದ್ಯ ಸೇರಿಕೊಂಡಿದೆಯಾದರೂ, ಜಿ.ಪಿ.ರಾಜರತ್ನಂ ಅವರೇ ಸಂಪಾದಕರಾಗಿ ಪ್ರಕಟಿಸಿದ ಪುಸ್ತಕದಿಂದ ಆಯ್ದುಕೊಂಡಿದ್ದೇನೆ ಎಂಬ ಹೆಮ್ಮೆ
smile emoticon
ಅಲ್ಲದೇ, ಇದು ಜಿ.ಪಿ.ರಾಜರತ್ನಂ ಬರೆದ ಮೊತ್ತಮೊದಲ ಶಿಶುಗೀತೆಯೂ ಹೌದು.
’ಹಾಡು ಹುಟ್ಟಿದ ಸಮಯ’ ಅಂಕಣದಲ್ಲಿ ಕನ್ನಡ ಚಿತ್ರಗೀತೆಗಳ ಉಗಮದ ಬಗ್ಗೆ ಮಣಿಕಾಂತ್ ಅವರು ಸ್ವಾರಸ್ಯಕರವಾಗಿ ವಿವರಿಸುತ್ತಿದ್ದಂತೆ ಈ ಪದ್ಯದ ಉಗಮದ ಕುರಿತು ವಿವರಿಸುವುದಾದರೆ ಹೀಗಿದೆ:
ರಾಜರತ್ನಂ ಅವರು 1932ರಲ್ಲಿ ಎಂ.ಎ ಪದವೀಧರರಾದರು. ಅವರ ವಿದ್ಯಾರ್ಹತೆಗೆ ತಕ್ಕ ಉದ್ಯೋಗ ತತ್‌ಕ್ಷಣ ಸಿಗಲಿಲ್ಲ. ಏತನ್ಮಧ್ಯೆ ಅವರ ತಂದೆಯವರ ಆರೋಗ್ಯ ಕೆಟ್ಟಿತು. ಮಾಧ್ಯಮಿಕ ಶಾಲೆಯಲ್ಲಿ ಶಿಕ್ಷಕರಾಗಿದ್ದ ಅವರು ತರಗತಿಗಳಿಗೆ ಹೋಗದಿರಲಾಗಿ ರಾಜರತ್ನಂ ಅವರೇ ಬದಲಿಶಿಕ್ಷಕರಾಗಿ ಹೋದರು. ಆದರೆ ಅಲ್ಲಿ ಪಠ್ಯವಿಷಯವಾಗಿ ಮಕ್ಕಳಿಗೆ ಅರ್ಥವಾಗದಂಥ, ಕಬ್ಬಿಣದ ಕಡಲೆಯಂಥ ಪದ್ಯಗಳಿದ್ದುದನ್ನು ಕಂಡು ಮರುಗಿದರು. ‘ಎಂಟು ಗೇಣಿನ ದೇಹ, ರೋಮಗಳೆಂಟು ಕೋಟಿಯು, ಮೂಳೆ ಅರವತ್ತೆಂಟು...’ ಎನ್ನುವ ಹರಿಭಕ್ತಿಸಾರದ ಪದ್ಯ, Winning of the golden fleece ಗ್ರೀಕ್ ಪುರಾಣವನ್ನು ’ಕನಕೋರ್ಣಾರ್ಜುನ’ ಎಂದು ಅನುವಾದ ಮಾಡಿದ್ದು- ಇದನ್ನೆಲ್ಲ ಈ ಪುಟ್ಟ ಮಕ್ಕಳು ಹೇಗೆ ತಾನೆ ಸವಿಯಬಲ್ಲವು ಎಂದು ಅವರಿಗೆ ಬೇಸರವಾಯಿತು. ಅವತ್ತು ಸಂಜೆ ಮೈಸೂರಿನ ಚಾಮುಂಡಿಬೆಟ್ಟದ ತಪ್ಪಲಿನ ಸ್ನಾನಘಟ್ಟದಲ್ಲಿ ಕಾಲು ಚಾಚಿ ಕುಳಿತುಕೊಂಡಾಗಲೂ ರಾಜರತ್ನಂ ಅವರಿಗೆ ಒಂದೇ ಯೋಚನೆ- ಮಕ್ಕಳಿಗೆ ಇಷ್ಟವಾಗುವ ಹಾಗೆ ಏನಾದರು ಬರಿಯಬೇಕು ಎಂದು. ಅದೇ ಕ್ಷಣದಲ್ಲಿ ಅವರ ತಲೆಯಲ್ಲಿ ತುತ್ತೂರಿ ಧ್ವನಿಸಿತು! ಪದ್ಯ ಬರೆದೇಬಿಟ್ಟರು. ರಾಗ ಹಾಕಿದರು, ಇದನ್ನು ಕೇಳಿದರೆ ಮಕ್ಕಳು ಎಷ್ಟು ಸಂತೋಷ ಪಡಬಹುದೆಂಬ ಹುಮ್ಮಸ್ಸಿನಲ್ಲೇ ರಾತ್ರಿಯೆಲ್ಲ ಕಳೆದರು. ಮಾರನೇದಿನ ಶಾಲೆಯಲ್ಲಿ ಪಾಠ ಮುಗಿದ ಮೇಲೆ, ’ತುತ್ತೂರಿ’ಯನ್ನು ಕರಿಹಲಗೆಯ ಮೇಲೆ ಬರೆದರು. ಮಕ್ಕಳಿಂದ ಹಾಡಿಸಿದರು. ಮಕ್ಕಳ ಹಿಗ್ಗಿಗೆ ಪಾರವಿಲ್ಲ. ಆ ಕಂದಮ್ಮಗಳ ಮೊಗದಲ್ಲಿ ನಗು ಕಂಡ ರಾಜರತ್ನಂ ಅವರ ಖುಷಿಗೂ ಪಾರವಿಲ್ಲ!
ಹಾಗಂತ, "ಅರ್ಜೆಂಟಿಗೆ ಹಡೆದ ಕೂಸು" ಎಂಬಂಥ ರಚನೆಯೇನಲ್ಲ ಇದು. ಮಕ್ಕಳ ಪದ್ಯಕ್ಕೆ ಅತ್ಯಗತ್ಯವಾದ ಲಯಬದ್ಧತೆ ಇದರಲ್ಲಿದೆ. ಬಣ್ಣದ/ ತಗಡಿನ/ ತುತ್ತೂರಿ/... ಕಾಸಿಗೆ/ ಕೊಂಡನು/ ಕಸ್ತೂರಿ... - ಹೀಗೆ ಪ್ರತಿ ಪಂಕ್ತಿಯಲ್ಲಿ ಮೂರು ನಿಲುಗಡೆಗಳು, ಅನುಕ್ರಮವಾಗಿ ನಾಲ್ಕು, ನಾಲ್ಕು ಮತ್ತು ಐದು ಮಾತ್ರೆಗಳ ಮೂರು ಗಣಗಳು. ಲಾಲಲ/ಲಲಲಲ/ಲಾಲಾಲ... ಲಾಲಲ/ಲಾಲಲ/ ಲಾಲಾಲ... ಎಂದು ಗುಣುಗುಣಿಸಿಕೊಳ್ಳುತ್ತಿರುವಾಗಲೇ ಕಂಠಪಾಠವಾಗುತ್ತದೆ. ಲಯವನ್ನು ಅದು ಎಲ್ಲಿಯೂ ಬಿಡುವುದಿಲ್ಲ. ಉದಾಹರಣೆಗೆ: ತುತ್ತೂರಿ ಮತ್ತು ಕಸ್ತೂರಿ - ಇವು ಐದು ಮಾತ್ರೆಗಳ ಪದಗಳು. ಆದರೆ ನಾಲ್ಕು ಮಾತ್ರೆಯ ಪದವಾಗಿ ಬಳಸಬೇಕಾದಲ್ಲೆಲ್ಲ ರಾಜರತ್ನಂ ಅವುಗಳನ್ನು ಮೊಟಕುಗೊಳಿಸುತ್ತಾರೆ. 'ತನಗೇ ತುತ್ತುರಿ ಇದೆಯೆಂದ' (ಗಮನಿಸಿ: ತುತ್ತೂರಿಯ ಬದಲು ತುತ್ತುರಿ); 'ಕಸ್ತುರಿ ನಡೆದನು ಬೀದಿಯಲಿ' (ಗಮನಿಸಿ: ಕಸ್ತೂರಿಯ ಬದಲು ಕಸ್ತುರಿ). ಪದ್ಯದ ಕೊನೆಯಲ್ಲಿ ನೀತಿಬೋಧೆಯಂತೂ ಇದ್ದೇಇದೆ. ಇನ್ನೇನು ಬೇಕು ಅತ್ಯಂತ ಜನಪ್ರಿಯ ಶಿಶುಗೀತೆಯಾಗಿ ಪ್ರಸಿದ್ಧಿ ಹೊಂದಲಿಕ್ಕೆ?
ರಾಜರತ್ನಂರವರ ಸಮಕಾಲೀನರಾಗಿದ್ದ ನಾ.ಕಸ್ತೂರಿ (’ಅನರ್ಥಕೋಶ’ದಿಂದ ಪ್ರಖ್ಯಾತ) ಅವರು ಒಮ್ಮೆ ರಾಜರತ್ನಂರನ್ನು ಕರೆದು, "ಲೋ, ರಾಜರತ್ನ, ಪದ್ಯ ಬರೆದು ನನಗೆ ಅವಮಾನ ಮಾಡಿದ್ದೀಯಲ್ಲೋ" ಎಂದು ತಮಾಷೆಗೆಂದೇ ತರಾಟೆಗೆ ತೆಗೆದುಕೊಂಡಿದ್ದರಂತೆ. ರಾಜರತ್ನಂ ಕಕ್ಕಾಬಿಕ್ಕಿಯಾಗಿ "ಇಲ್ಲವಲ್ಲ ಸಾರ್" ಎಂದರಂತೆ. ಅದಕ್ಕೆ ನಾ.ಕಸ್ತೂರಿಯವರು "ಯಾಕೋ ಇಲ್ಲ, ಬರೆದಿದ್ದೀಯ: ಬಣ್ಣದ ತಗಡಿನ ತುತ್ತೂರಿ. ಕಾಸಿಗೆ ಕೊಂಡನು ಕಸ್ತೂರಿ ಅಂತ ಬರೆದಿಲ್ವೇನಯ್ಯ? ಅಲ್ಲದೆ ಕೊನೇಲಿ 'ಜಂಬದ ಕೋಳಿಗೆ ಗೋಳಾಯ್ತು' ಅಂತ ಬೇರೆ ಹೇಳಿದೀಯ! ಹೇಳು, ನಾನು ಜಂಬದ ಕೋಳಿಯೇನೋ?" ಎಂದು ಕಿಚಾಯಿಸಿದರಂತೆ. ಅಂದರೆ, ಫೇಸ್‌ಬುಕ್‌ನಲ್ಲಿ tag ಮಾಡಿದ ಹಾಗೆ ರಾಜರತ್ನಂ ಪದ್ಯದಲ್ಲಿ ಟ್ಯಾಗ್ ಮಾಡಿದ್ದಾರೆ ಎಂದು ನಾ.ಕಸ್ತೂರಿಯವರ ತಕರಾರು
smile emoticon
ಆದರೆ ಅಂಥ ಸರಸ ಘಟನೆಗಳು ಆಗಿನ ಸಜ್ಜನರ ನಿರ್ಮಲತೆಯನ್ನೂ, ಸರಳತೆಯನ್ನೂ, ತಮ್ಮ ಸಮಕಾಲೀನರ ಪ್ರತಿಭೆ ಮತ್ತು ಯಶಸ್ಸನ್ನು ಸಂಭ್ರಮಿಸುವುದನ್ನೂ ತೋರಿಸುತ್ತವೆ.
ಕನ್ನಡ ಶಿಶುಸಾಹಿತ್ಯವನ್ನು ರಾಜರತ್ನಂ ಶ್ರೀಮಂತಗೊಳಿಸಿದರು. ಪ್ರಗತಿಶೀಲ ಮತ್ತು ನವ್ಯಸಾಹಿತ್ಯ ಸಂದರ್ಭದಲ್ಲಿ ಬಾಲಸಾಹಿತ್ಯ ಅಲಕ್ಷ್ಯಕ್ಕೆ ಒಳಗಾಗಿತ್ತು. ಮೊದಲನೆಯದಾಗಿ ಬಾಲಕ-ಬಾಲಕಿಯರು ಸಮಾಜದ ಭವಿಷ್ಯವನ್ನು ನಿರ್ಮಿಸುವವರು, ಅವರಲ್ಲಿ ಸಾಹಿತ್ಯಪ್ರೇಮ ಬೆಳೆಯದಿದ್ದರೆ ಅವರು ದೊಡ್ಡವರಾದ ಮೇಲೆ ಸಾಹಿತ್ಯದಲ್ಲಿ ಆಸಕ್ತಿ ಹುಟ್ಟುವುದು ಕಷ್ಟ. ಎರಡನೆಯದಾಗಿ, ಸಾಹಿತ್ಯವು ಮಗುವಿನ ಬಾಲ್ಯಕ್ಕೆ ಬಾಹ್ಯಜಗತ್ತನ್ನೂ ಭಾಷೆಯ ಬಳಕೆಯನ್ನೂ ಏಕಕಾಲಕ್ಕೆ ಪರಿಚಯ ಮಾಡಿಕೊಡುವ ಒಂದು ವಿಶಿಷ್ಟ ಸಾಧನ. ಇದನ್ನು ಮನಗಂಡ ರಾಜರತ್ನಂರಂಥ ಸಾಹಿತಿಗಳು ಬಾಲಸಾಹಿತ್ಯದಲ್ಲಿ ಗಂಭೀರವಾಗಿ ತೊಡಗಿಸಿಕೊಂಡರು. ರಾಜರತ್ನಂ ಅವರ ಮ್ಯಾಜಿಕ್ ಎಂದರೆ ಪರಿಚಿತ ಜಗತ್ತನ್ನೇ ಹೊಚ್ಚಹೊಸ ಜಗತ್ತನ್ನಾಗಿ- ಅಂದರೆ ಮಗು ಯಾರನ್ನಾದರೂ ಪ್ರಶ್ನಿಸಬಹುದಾದ ಅಥವಾ ಮಾತನಾಡಿಸಬಹುದಾದ ಜಗತ್ತನ್ನಾಗಿ- ಮಾರ್ಪಡಿಸುವುದು. ಮಗುವಿನ ಪದಸಂಪತ್ತಿಗೆ ಹೊಸ ಶಬ್ದಗಳನ್ನು ಸೇರಿಸುವುದು. ನಿತ್ಯಜೀವನದ ಮಾತುಕತೆಗೆ ಸಹಜವಾದ ಎಲ್ಲ ಬಗೆಯ ವಾಕ್ಯರಚನೆಗಳು ಪ್ರತ್ಯಕ್ಷವಾಗಿ ಮಗುವಿಗೆ ತನ್ನಿಂತಾನೇ ವಾಕ್ಯಗಳನ್ನು ಕಟ್ಟುವ ಶಕ್ತಿಯನ್ನು ಬೆಳೆಸುವುದು. ಕನ್ನಡ ಮಕ್ಕಳಿಗೆ ಕನ್ನಡ ಭಾಷೆಯ ಪದಸಂಪತ್ತು, ವಾಕ್ಯರಚನಾ ವಿಧಾನ, ಪ್ರಾಸಸಂಪತ್ತು, ನಾದಸಂಪತ್ತು ಇವೆಲ್ಲವನ್ನು ಖುಷಿಯಾಗಿ ಆಡುತ್ತಾ ಹಾಡುತ್ತಾ ಕಲಿಸುವ ಮಾರ್ಗವೆಂದರೆ ಅವರಿಗೆ ರಾಜರತ್ನಂರ ಶಿಶುಗೀತೆಗಳನ್ನು ಹೇಳಿಕೊಡುವುದು. ಮಕ್ಕಳು ಕನ್ನಡ ಭಾಷೆಯ ಸಂಪತ್ತನ್ನೂ ಸೊಗಸನ್ನೂ ಹೀರಿಕೊಳ್ಳುವಂತೆ ಮಾಡುವುದು.
ಶುಕ್ರವಾರ, ಫೆಬ್ರವರಿ 20, 2015
ಗುರುವಾರ, ಫೆಬ್ರವರಿ 19, 2015
ಒಳ್ಳೆಯ ದಿನಗಳು ಬರಲಿ
ಇಂದು ತುಂಭಾನೇ ಹಿಂಸೆಯಾಗಿದೆ. ಶಾಲೆಯ ಆರು ಕೋಣೆಯ ಬೀಗಗಳನ್ನು ಮುರಿದು ಕಳ್ಳತನ ನಡೆದು ಹೋಗಿದೆ. ಪೋಲೀಸ್ ಜೀಪುಗಳು ಮಕ್ಕಳು ಓಡಾಡುವ ಮೈದಾನದಲ್ಲಿ ಬಂದು ನಿಲ್ಲುವಂತಾಗಿದೆ. ದಿನ ಪೂರ್ತಿ ಮಕ್ಕಳು ಶಿಕ್ಷಕರು ಹೊರಗಡೆ ಇರಬೇಕಾದ ಸ್ಥಿತಿ. ಮಕ್ಕಳಿಗಾಗಿ ನೀಡಿದ್ದ ಲ್ಯಾಪ್ ಟಾಪ್, ಎಲ್.ಇ.ಡಿ,ಬ್ಯಾಟರಿ, ಇನ್ ವೇಟರ್ ಗಳನ್ನು ಕದ್ದು ಒಯ್ಯಲಾಗಿದೆ.. ಶಾಲೆಯ ತುಂಬಾ ಪೋಲಿಸ್ ಜೀಪು, ಊರ ಜನ, ನಾಯಿ ಶೋಧನೆಯ ಕಾರ್ಯ ಬಿರುಸಿನಿಂದ ನಡೆದಿದೆ. ಮಕ್ಕಳಿಗೆ - ಶಿಕ್ಷಕರಿಗೆ ಆದ ಸಂಕಟ, ಹಿಂಸೆ ಅಷ್ಟಿಷ್ಟಲ್ಲ. ಸರಣಿ ಪರೀಕ್ಷೆ ನಡೆಯುತಲಿದ್ದು ಮಕ್ಕಳಿಗೆ ಹಾಗೂ ಶಿಕ್ಷಕರಿಗೆ ಆದ ದಿನದ ನಷ್ಟ, ಈ ಕಳುವಾದ ಸಾಮಾನುಗಳ ಬಳಕೆ ಮಕ್ಕಳಿಗಾಗಿಯೇ ಇರಬೇಕಾದದ್ದು, ಅದು ಯಾರ ಹೊಟ್ಟೆಗಾಗಿ ಅಲ್ಲ. ಸಮಸ್ಯ ಬಗೆ ಹರಿದು ಒಳ್ಳೆಯ ದಿನಗಳು ಬರಲಿ. ಮಕ್ಕಳ ಭವಿಷ್ಯದ ಜೊತೆ ಆಡುವ ಸ್ವಾತಂತ್ರ್ಯ ಯಾರಿಗೂ ಇಲ್ಲ.
ಬುಧವಾರ, ಫೆಬ್ರವರಿ 18, 2015
ಶುಕ್ರವಾರ, ಫೆಬ್ರವರಿ 13, 2015
ಹೈ.ಕ.ಪ್ರದೇಶದ ನಿವಾಸಿಗಳು ಅನುಚ್ಛೇದ 371 ಜೆ ಮೀಸಲಾತಿ ಪಡೆಯುವ ಬಗೆ
* ಹೈದ್ರಾಬಾದ್ ಕರ್ನಾಟಕದ ಪ್ರದೇಶಕ್ಕೆ ಸಂಬಂಧಿಸಿದ ಆರೂ ಜಿಲ್ಲೆಗಳ, ಆಯಾ ಜಿಲ್ಲೆಯ ಕಂದಾಯ ಉಪ
ವಿಭಾಗಾಧಿಕಾರಿಗಳು (ಎ.ಸಿ) ಯವರು " ಅರ್ಹತಾ ಪ್ರಮಾಣ ಪತ್ರ " ವನ್ನು ನೀಡುವ ಸಕ್ಷಮ ಪ್ರಾಧೀಕಾರವಾಗಿದ್ದಾರೆ.
* ಆರು ಜಿಲ್ಲೆಯನ್ನು ಹೊರತುಪಡಿಸಿ ಅನ್ಯರಿಗೆ ಈ ಪ್ರಮಾಣ ಪತ್ರ ಪಡೆಯುವ ಹಕ್ಕು ಇರುವುದಿಲ್ಲ.
* ಸಕ್ಷಮ ಪ್ರಾಧಿಕಾರ ನಿಗದಿಪಡಿಸಿದ ನಿಯಮಾನುಸಾರ ಅಗತ್ಯವಾದ ದಾಖಲೆಗಳನ್ನು ಸಲ್ಲಿಸಿ ಸ್ಥಳೀಯರು ಈ "ಅರ್ಹತಾ ಪ್ರಮಾಣ ಪತ್ರ " ಪಡೆದುಕೊಂಡು ವಿಶೇಷ ಸೌಲಭ್ಯ ಪಡೆಯಲು ಹಕ್ಕನ್ನು ಹೊಂದಿದ್ದಾರೆ.
ನಮ್ಮ ಕೊಪ್ಪಳ ಜಿಲ್ಲೆಯಲ್ಲಿ ತುಂಬಾ ಪಾರದರ್ಶಕವಾಗಿ ಕಾರ್ಯ ನಡೆಯುತ್ತಾ ಇದೆ. ಶ್ರೀ ಮಂಜುನಾಥ ಕೊಪ್ಪಳದ ಸಕ್ಷಮ ಪ್ರಾಧಿತಾರಿ /AC ಸಾಹೇಬರು. ಚನಾಗಿ ಮತ್ತು ಕಟ್ಟು ನಿಟ್ಟಿನಿಂದ ಕೆಲಸ ನಿರ್ವಹಿಸುತ್ತಾ ಅರ್ಹರಿಗೆ ಮಾತ್ರ ಸಿಗುವಂತಾಗುತ್ತಿದೆ.
೧. ಅನುಬಂಧ - A ಅರ್ಹತಾ ಪ್ರಮಾಣಪತ್ರ ಪಡೆಯುವುದು AC ಯಿಂದ.
೨. ಅನುಬಂಧ - B ವಾಸಸ್ಥಳ ಪ್ರಮಾಣಪತ್ರ ಪಡೆಯುವುದು ತಹಶೀಲ್ದಾರರಿಂದ.
೩. ಅನುಬಂಧ - C ವ್ಯಾಸಂಗಪ್ರಮಾಣ ಪತ್ರ ಪಡೆಯುವುದು ಕ್ಷೇತ್ರ ಶಿಕ್ಷಣಾಧಿಕಾರಿಗಳಿಂದ.
೪. ಅನುಬಂಧ - D ಸ್ವಗ್ರಾಮ ಪ್ರಮಾಣಪತ್ರ - ಸರ್ಕಾರಿ ನೌಕರಿರಗೆ ಅವರ ನೇಮಕಾತಿ ಪ್ರಾಧಿಕಾರದಿಂದ (SR ನಂತೆ)
೫. ಅನುಬಂಧ - E ಸಿಂಧುತ್ವ ಪ್ರಮಾಣಪತ್ರ ಜಿಲ್ಲಾ ತ್ರಿಸದಸ್ಯ ಕಮಿಟಿಯಿಂದ ( DC, CEO, SP )
[ ಸಿಂಧುತ್ವ - ಅರ್ಹತಾ ಪ್ರಮಾಣ ಪತ್ರದ ಸರಿತನದ ಪರಿಶೀಲನೆಯೇ ಸಿಂಧುತ್ವ ]
* ಸರಕಾರಿ ನೌಕರರು 01.01.2013 ಕ್ಕಿಂತ ಮೊದಲು ಅಥಾವ 10 ವರ್ಷ ಆರೂ ಜಿಲ್ಲೆಯ ವ್ಯಾಪ್ತಿಯಲ್ಲಿ ವಾಸವಾಗಿದ್ದರೆ ಅವರು ಅರ್ಹರು ಎಂದು ಈ ಮೊದಲು ತಪ್ಪಾಗಿ ನಮೂದಾಗಿತ್ತು. ಆದರೆ ಅವರಿಗೆ ಈ ಅವಕಾಶ ಇಲ್ಲ ಮತ್ತು ಅವರು ಅರ್ಹರೂ ಅಲ್ಲ. ( ದಿ: 16.01.2015 & 18.01.2015 ರ ವಿಜಯ ಕರ್ನಾಟಕ ಪತ್ರಕೆ ನೋಡಬಹುದು.)
ವ್ಯಾಪ್ತಿಗೆ ಒಳಪಡದವರು ಈಗಾಗಲೇ ಪ್ರಮಾಅಣಪತ್ರ ಪಡೆದುಕೊಂಡಿದ್ದರೆ ಮರಳಿ ಸಕ್ಷಮ ಪ್ರಾಧಿಕಾರಕ್ಕೆ ಹಿಂದುರುಗಿಸಬೇಕು. ಇಲ್ಲದಿದ್ದರೆ ಶಿಕ್ಷಾರ್ಹರು ಎಂದು ಆದೇಶ ಮಾಡಿದ್ದಾರೆ.
ಪ್ರಮಾಣ ಪತ್ರ ಪಡೆಯಲು ಅಗತ್ಯ ದಾಖಲೆಗಳು
1. ವರ್ಗಾವಣೆ ಪ್ರಮಾಣಪತ್ರ
2. ಚುನಾವಣಾ ಗುರುತಿನ ಪತ್ರ
3. ಆಧಾರ
4. ವಂಶಾವಳಿ
5. ಪಹಣಿ/ಸ್ಥಿರಾಸ್ಥಿ/ಮನೆ ಉತಾರ
6. ವಾಸಸ್ಥಳ
7. ವ್ಯಾಸಂಗ ಪ್ರಮಾಣಪತ್ರ
ಶಿವಪ್ಪ ಆರ್.ಇಲಾಳ
ಶಿಕ್ಷಕರು
ಸರಕಾರಿ ಪ್ರೌಡಶಾಲೆ
ಜಹಗೀರಗುಡದೂರ
ಕರೆಗಾಗಿ : 9731981167
ಗುರುವಾರ, ಫೆಬ್ರವರಿ 12, 2015
ಹದಿಹರೆಯದವರಿಗಾಗಿ ಆರೋಗ್ಯ ಶಿಕ್ಷಣ ಕಾರ್ಯಕ್ರಮ
ಇಂದು ಶಾಲಾ ಮಧ್ಯಾಹ್ನದ ಅವಧಿಯಲ್ಲಿ ಮಕ್ಕಳಿಗಾಗಿ " ಹದಿಹರೆಯ ಭವಿಷ್ಯದ ಅಡಿಪಾಯ " ರಾಜ್ಯ ಸರ್ಕಾರದ ಕಾರ್ಯಕ್ರಮದಡಿಯಲ್ಲಿ ವಿದ್ಯಾರ್ಥಿಗಳಿಗಾಗಿ ಆರೋಗ್ಯದ ಕುರಿತು ಕಾರ್ಯಕ್ರಮವನ್ನು ನಡೆಸಿಕೊಟ್ಟರು.
ಬುಧವಾರ, ಫೆಬ್ರವರಿ 11, 2015
ಹೈ.ಕ.ಪ್ರದೇಶಕ್ಕೆ ಅನುಚ್ಛೇದ 371 ಜೆ ಮೀಸಲಾತಿ ಸೌಲಭ್ಯದ ವಿವರ
ಏನಿದು 371 ನೇ ಕಲಂ ? :
ಬುಡಕಟ್ಟು ಜನಾಂಗದ ಮತ್ತು ಶೋಷಿತ ವರ್ಗದ ಪ್ರದೇಶಕ್ಕೆ ವಿಶೇಷವಾದ ಮೀಸಲಾತಿ ಸೌಲಭ್ಯ ನೀಡುವುದು. ಜನ ಜೀವನವನ್ನು ಅಭಿವೃದ್ಧಿಪಥದತ್ತ ಸಾಗಿಸುವುದು.
371 ನೇ (ಜೆ) ಎಂದರೇನು ? :
ಸಂವಿಧಾನದ 371 ನೇ ನಿಯಮಕ್ಕೆ ತಿದ್ದುಪಡಿ ಮಾಡಿಸಿದ ಉಪನಿಯಮ "ಜೆ" ಎಂಬುದನ್ನು ಜಾರಿಗೊಳಿಸಲಾಯಿತು.
ಈಗಾಗಲೇ 371 ನೇ ಕಲಂ ನ್ನು ತಿದ್ದು ಪಡೆ ಮಾಡಿಸಿ ಇಂಥಹ ಸೌಲಭ್ಯ ಪಡೆದ ರಾಜ್ಯಗಳೆಂದರೆ
371 - ಎ ನಿಯಮದಡಿ "ನಾಗಾಲ್ಯಾಂಡ್ " ರಾಜ್ಯ ಸೌಲಭ್ಯವನ್ನು ಪಡೆದುಕೊಂಡಿದೆ.
371 - ಬಿ ನಿಯಮದಡಿ "ಅಸ್ಸಾಂ" ರಾಜ್ಯ ಸೌಲಭ್ಯವನ್ನು ಪಡೆದುಕೊಂಡಿದೆ.
371 - ಸಿ ನಿಯಮದಡಿ " ಮಣಿಪುರ " ರಾಜ್ಯ ಸೌಲಭ್ಯವನ್ನು ಪಡೆದುಕೊಂಡಿದೆ.
371 - ಡಿ ನಿಯಮದಡಿ " ಆಂದ್ರಪ್ರದೇಶ" ರಾಜ್ಯ ಸೌಲಭ್ಯವನ್ನು ಪಡೆದುಕೊಂಡಿದೆ.
371 - ಈ ನಿಯಮದಡಿ " ಮಹಾರಾಷ್ಟ್ರ" ರಾಜ್ಯ ಸೌಲಭ್ಯವನ್ನು ಪಡೆದುಕೊಂಡಿದೆ.
371 - ಎಫ್ ನಿಯಮದಡಿ "ಸಿಕ್ಕೀಂ" ರಾಜ್ಯ ಸೌಲಭ್ಯವನ್ನು ಪಡೆದುಕೊಂಡಿದೆ.
371 - ಜಿ ನಿಯಮದಡಿ "ಮಿಜೋರಾಮ್" ರಾಜ್ಯ ಸೌಲಭ್ಯವನ್ನು ಪಡೆದುಕೊಂಡಿದೆ.
371 - ಎಚ್ ನಿಯಮದಡಿ "ಅರುಣಾಚಲ ಪ್ರದೇಶ" ರಾಜ್ಯ ಸೌಲಭ್ಯವನ್ನು ಪಡೆದುಕೊಂಡಿದೆ.
371 - ಐ ನಿಯಮದಡಿ "ಗೋವಾ" ರಾಜ್ಯ ಸೌಲಭ್ಯವನ್ನು ಪಡೆದುಕೊಂಡಿದೆ.
371 - ಜೆ ನಿಯಮದಡಿ ನಮ್ಮ "ಕರ್ನಾಟಕ" ರಾಜ್ಯಕ್ಕೆ ಮೀಸಲಾತಿ ಸೌಲಭ್ಯ ದೊರಕಿದೆ.
ಈ 371 ಜೆ ಕಲಂ ನ್ನು ಲೋಕಸಭೆ ಮತ್ತು ರಾಜ್ಯಸಭೆಯಲ್ಲಿ ಎಲ್ಲರೂ ಪಕ್ಷಬೇದ ಮರೆತು ಸರ್ವಾನುಮತದಿಂದ ಅಂಗೀಕಾರ ಮಾಡಿದರು. ದಿನಾಂಕ 01.01.2013 ರಂದು ಸನ್ಮಾನ್ಯ ರಾಷ್ಟ್ರಪತಿಗಳಿಂದ ಅನುಮೋದನೆಯಾಯಿತು. ಇದರಿಂದ ನಮ್ಮ ಸಂವಿಧಾನದ 98 ನೇ ತಿದ್ದುಪಡಿಯಾಯಿತು.
ಕರ್ನಾಟಕ ಸರ್ಕಾರದಿಂದ ಈ ಪ್ರದೇಶ ಭಾಗಕ್ಕೆ ಸಾರ್ವಜನಿಕ ಉಧ್ಯೋಗದಲ್ಲಿ ಮೀಸಲಾತಿ ಹಾಗೂ ಶೈಕ್ಷಣಿಕವಾಗಿ ವೃತ್ತಿಪರ ಕೋರ್ಸ ಗಳ ಪ್ರವೇಶಾತಿಯಲ್ಲಿ ಈ 371 ನೇ ಜೆ ಕಲಂ ಅನ್ವಯವಾಗುತ್ತದೆ. ಸಾರ್ವಜನಿಕ ಉದ್ಯೋಗದಲ್ಲಿ ಖಾಲಿ ಇರುವಂತೆ
* ಹುದ್ದೆಗಳಲ್ಲಿ ಶೇ 85 % ರಷ್ಟು ಮೀಸಲಾತಿಯನ್ನು ಗ್ರೂಪ್ " ಡಿ " ದರ್ಜೆಗೆ ನೀಡಲಾಗಿದೆ.
* ಹುದ್ದೆಗಳಲ್ಲಿ ಶೇಕಡಾ 80% ರಷ್ಟು ಮೀಸಲಾತಿಯನ್ನು ಗ್ರೂಪ್ " ಸಿ " ದರ್ಜೆಯ ನೌಕರರಿಗೆ ನೀಡಲಾಗಿದೆ.
* ಹುದ್ದೆಗಳಲ್ಲಿ ಶೇಕಡಾ 75 % ರಷ್ಟು ಮೀಸಲಾತಿಯನ್ನು ಗ್ರೂಪ್ " ಬಿ " ಹಾಗೂ " ಎ " ದರ್ಜೆಗೆ ನೀಡಲಾಗಿದೆ.
ಸರ್ಕಾರಿ ನೌಕರರಿಗೆ ರಾಜ್ಯ ಸರ್ಕಾರ ನಿಗದಿ ಪಡಿಸಿದ ನಿಯಮವು ಈ ಬಡ್ತಿಗೆ ಅನ್ವಯವಾಗುತ್ತದೆ.
( ಮುಂದುವರಿಯುವುದು )
ಶಿವಪ್ಪ ಆರ್.ಇಲಾಳ
ಶಿಕ್ಷಕರು
ಸರಕಾರಿ ಪ್ರೌಢಶಾಲೆ
ಜಹಗೀರಗುಡದೂರ
ಕರೆಗಾಗಿ : 9731981167
ಮಂಗಳವಾರ, ಫೆಬ್ರವರಿ 10, 2015
ಹೈ.ಕ.ಪ್ರದೇಶಕ್ಕೆ ಅನುಚ್ಛೇದ ೩೭೧ ಜೆ ಮೀಸಲಾತಿ ಸೌಲಭ್ಯ
೧೯೪೭ ಆಗಷ್ಟ ೧೫ ರಂದು ನಮ್ಮ ಭಾರತ ದೇಶಕ್ಕೆ ಸ್ವತಂತ್ರ ಸಿಕ್ಕಿತು ನಿಜ, ಆದರೆ ಹೈದ್ರಾಬಾದ್ ನಿಜಾಮನ ಅರಸೊತ್ತಿಗೆ ವ್ಯಾಪ್ತಿಗೆ ಒಳಪಟ್ಟಂತ ೧೬ ಜಿಲ್ಲೆಗಳಿಗೆ ಸ್ವತಂತ್ರದ ಅನುಭವ, ಹರ್ಷೋದ್ಘಾರ ಕೇವಲ ಕನಸಿನ ಮಾತಾಗಿ ಹೋಯಿತು. ನಿಜಾಮನ ಹೆಸರಿನಲ್ಲಿ ಅರಾಜಕತೆಯು ತಾಂಡವಾಡುತ್ತಿತ್ತು. ಹಿಂಸಾತ್ಮಕವಾದ ಆಡಳಿತದ ಕಪಿಮುಷ್ಠಿಯಲ್ಲಿ ಜನಸಾಮಾನ್ಯರೆಲ್ಲರೂ ತತ್ತರಿಸಿ ಹೋದರು. ಆಗಬಾರದ ಅನಾಹುತಗಳಾದವು. ಮತಾಂಧರ ದೌರ್ಜನ್ಯದಿಂದ ಮುಗ್ಧರ ಉಸಿರುಗಟ್ಟಿ ಹೋಗಿತ್ತು. ನಾಗರೀಕ ಸೌಲಭ್ಯಗಳಿಂದ ವಂಚಿತರಾಗಿ ದಾರಿಕಾಣದ ಅನಾಥ ಬದುಕಿನಂತೆ ಅನಿವಾರ್ಯದ ಜೀವನ ನಡೆಸಬೇಕಾಯಿತು.
ದುಷ್ಟರ ದೌರ್ಜನ್ಯವನ್ನು ಮಟ್ಟಹಾಕಲು ಹಲವಾರು ಹೋರಾಟ ಸಮೀತಿಗಳ, ಸಂಘಟನೆಗಳು ಮತ್ತು ಸ್ವಯಂ ಸೇವಕ ಸಂಸ್ಥೆಗಳು ಹೈದ್ರಾಬಾದ್ ಸಂಸ್ಥಾನದ ವಿರುದ್ಧ ಅನೇಕ ಚಳುವಳಿಗಳು, ಹೋರಾಟಗಳು ಮತ್ತು ಉಗ್ರ ಪ್ರತಿಭಟನೆಗಳು ಪ್ರಾರಂಭಗೊಂಡವು. ಹೋರಾಟಗಳೆಲ್ಲವು ಹಿಂಸಾತ್ಮಕ ರೂಪ ತಾಳಿ ಅನೇಕ ತ್ಯಾಗ ಬಲಿದಾನಗಳಾದವು. ಇದನೆಲ್ಲ ಸೂಕ್ಷ್ಮ ರೀತಿಯಲ್ಲಿ ತಿಳಿದುಕೊಂಡ ಆಗಿನ ಕೇಂದ್ರ ಸರ್ಕಾರದ ಉಪ ಪ್ರಧಾನಮಂತ್ರಿ ಹಾಗೂ ಗೃಹ ಮಂತ್ರಿಗಳಾಗಿದ್ದ ಉಕ್ಕಿನ ಮನುಷ್ಯರೆಂದೇ ಪ್ರಖ್ಯಾತರಾದ ಸನ್ಮಾನ್ಯಸರ್ದಾರ ವಲ್ಲಭಬಾಯಿ ಪಾಟೇಲರು ೧೩ ನೇ ಸೆಪ್ಟಂಬರ್ ೧೯೪೮ ರಿಂದ ೧೭ ಸೆಪ್ತೆಂಬರ್ ೧೯೪೮ ರವರೆಗೆ ಮಿಲಿಟರಿ ಕಾರ್ಯಚಾರಣೆ ಮಾಡಿಸಿದರು. ಈ ಕಾರ್ಯಚರಣೆಯಿಂದ ಮತಾಂಧರ ಅಟ್ಟಹಾಸದ ಆಡಳಿತಕ್ಕೆ ಅಂತ್ಯ ಹಾಡಿತು.
ನಮ್ಮ ಕರ್ನಾಟಕದ ಆಗಿನ ಅವಿಭಜಿತ ಜಿಲ್ಲೆಗಳಾದ ಬೀದರ, ಗುಲ್ಬರ್ಗಾ ಮತ್ತು ರಾಯಚೂರು ನಿಜಾಮನ ಆಡಳಿತಕ್ಕೋಳಾಪಟ್ಟಿದ್ದವು. ಇವೇ ಈಗಿನ ಬೀದರ್, ಗುಲ್ಬರ್ಗಾ,ಯಾದಗಿರಿ, ರಾಯಚೂರ, ಕೊಪ್ಪಳ ಮತ್ತು ಬಳ್ಳಾರಿ ಈ ಆರೂ ಜಿಲ್ಲೆಗಳು ಅರಸೊತ್ತಿಗೆಯ ಆಡಳಿತಕ್ಕೆ ಸಿಕ್ಕು ವಿಲ-ವಿಲನೇ ಒದ್ದಾಡಿಡ ನತದೃಷ್ಟ ತೀರಾ ಹಿಂದುಳಿದ ಜಿಲ್ಲೆಗಳು. ಈ ಜಿಲ್ಲೆಗಳಿಗೆ ವಿಶೇಷ ಮೀಸಲಾತಿ ಸೌಲಭ್ಯ ಕಲ್ಪಿಸಿ ನಾಗರೀಕ ಪ್ರಗತಿಗಾಗಿ ಪ್ರಯತ್ನಿಸಿ ಸಂವಿಧಾನದ ೩೭೧ ನೇ ಕಲಂ ನ್ನು ಜಾರಿಗೊಳಿಸಿದ ಸರ್ಕಾರಕ್ಕೆ ಕನ್ನಡಿಗರ ಅನಂತ ವಂದನೆಗಳು.
(ಮುಂದುವರಿಯುವುದು)
ಶಿವಪ್ಪ ಆರ್. ಇಲಾಳ
ಶಿಕ್ಷಕರು
ಸರಕಾರಿ ಪ್ರೌಢಶಾಲೆ,
ಜಹಗೀರಗುಡದೂರ
ಕರೆಗಾಗಿ : 9731981167
ಶಿವಪ್ಪ ಆರ್. ಇಲಾಳ
ಶಿಕ್ಷಕರು
ಸರಕಾರಿ ಪ್ರೌಢಶಾಲೆ,
ಜಹಗೀರಗುಡದೂರ
ಕರೆಗಾಗಿ : 9731981167
ಸೋಮವಾರ, ಫೆಬ್ರವರಿ 9, 2015
ಸಾಂಸ್ಕೃತಿಕ ಅಧ್ಯಾಪಕರು
ಕಲಿಕೆ ನಮ್ಮ ಭವಿಷ್ಯವನ್ನು ರೂಪಿಸುತ್ತದೆ. ಚಿಕ್ಕವನಿಂದ ಹಿಡಿಸು ನಮ್ಮ ಅರಿವಿಗೆ ಬಂದು ನಮ್ಮ ಬದುಕನ್ನು ನಾವೇ ಕಟ್ಟಿಕೊಳ್ಳಲು ಹೆಣಗುವ ಸ್ಥಿತಿ ಇದೆಯಲ್ಲ ಅದು ಪ್ರತಿಯೊಬ್ಬನು ತನ್ನನ್ನು ತಾನು ಕಂಡುಕೊಳ್ಳುವ ಹಾದಿ. ನಾನು ನೀನಾಸಂನಲ್ಲಿ ಇದ್ದಾಗ ನಾಟಕದ ಒಂದು ಮಾತು. "ಪಾಡು ಪಟ್ಟು ಅರಿವು ಮೂಢಬೇಕು" ಸದಾ ಕಟುಕುತ್ತಿರುತ್ತದೆ. ಆದರೆ ಎಂಥ ಪಾಡು? ಹೇಗೆ ಎಂಬ ಸಾವಿರ ಪ್ರಶ್ನೇಗಳು ಸುಳಿದು ಹೋಗುತ್ತಿರುತ್ತವೆ. ಅದು ಇರಲಿ ನಾನು ಕಲಿಕೆಯ ವಿಚಾರಕ್ಕೆ ಮತ್ತೇ ಬರುತ್ತೇನೆ. ಇಂದಿನ ಶಿಕ್ಷಣ ತಜ್ಞರು ಮಕ್ಕಳಿಗೆ ಸುಲುಭ ರೀತಿಯಲ್ಲಿ ಬೋಧಿಸಲು ಹಲವಾರು ಮಾರ್ಗಗಳನ್ನು ಹುಡುಕಿ ನೀಡಿದ್ದಾರೆ. ಆದ್ರೆ ಅದು ಎಷ್ಟರ ಮಟ್ಟಿಗೆ ಮುಟ್ಟುತ್ತಿವೆ ? ಭಯವಾಗುತ್ತೆ. ಮಕ್ಕಳ ಕಲಿಕೆಯಲ್ಲಿ ನಾವು ಸೃಜನಶೀಲತೆಯನ್ನು ನೀಡದೇ ಕೇವಲ ನೋಟ್ಸ್, ಹೋಂ ವರ್ಕ್, ಎಕ್ಸ್ಂ ಅಂತನೇ ಇದ್ರೆ, ಮಕ್ಕಳನ್ನು ನಾವೇ ಹಿಂದಕ್ಕೆ ತಳ್ಳುತ್ತಿದ್ದೇವೆ ಎಂದೆನಿಸುತ್ತದೆ. ಶಿಕ್ಷಣ ತಜ್ಞರ ಯೋಜನೆಗಳನ್ನು ನಾವು ಸರಿಯಾದ ರೀತಿಯಲ್ಲಿ ಪ್ರಯೋಗಿಸಿದರೆ ಅದು ಸಂಪೂರ್ಣವಾಗಿ ಅಭಿವೃದ್ಧಿಯತ್ತ ಸಾಗಬಹುದು. ಸಣ್ಣ ಪುಟ್ಟ ಸಮಸ್ಯಗಳನ್ನು ಅಲ್ಲಿಯೇ ಬಗೆಹರಿಸಿಕೊಂಡು ಸೃಜನಶೀಲವಾದ ಕಾರ್ಯ ಚಟುವಟಿಕೆಗಳನ್ನು ಹಮ್ಮಿಕೊಂಡು, ಮಕ್ಕಳ ಮನೋಭಿವೃದ್ಧಿಯತ್ತ ಚಿತ್ತ ಹರಿಸಬೇಕು.
ನಾನೊಬ್ಬ ನಾಟಕ ಶಿಕ್ಷಕನಾಗಿ ಕೇವಲ ನಾಟಕವನ್ನೇ ಬೋಧಿಸದೇ ಇತರೆ ವಿಚಾರ, ವಿಷಯಗಳತ್ತನು ಗಮನ ನೀಡಬೇಕಾದ ಅನಿವಾರ್ಯತೆ ಇದೆ ಹಾಗೂ ಅದನ್ನು ನಾವು ಗಮನಿಸಲೇ ಬೇಕಾಗಿದೆ. ನಾಟಕ ಕಲಿಕೆಯಿಂದ ವಿದ್ಯಾರ್ಥಿ ತನ್ನ ಗುಣ ಅವಗುಣಗಳನ್ನು ಕಂಡುಕೊಂಡು ತಿದ್ದಿಕೊಳ್ಳುವ ಅವಕಾಶವನ್ನು ರಂಗಮಂಚದಲ್ಲಿ ಕಲ್ಪಿಸಿಕೊಡಲಾಗುತ್ತದೆ. ಅದು ಪ್ರತಿ ಹೈಸ್ಕೂಲ್ ಮಕ್ಕಳಿಗೆ ಇಂದು ಬೇಕಾಗಿದೆ.
ಭಾನುವಾರ, ಫೆಬ್ರವರಿ 8, 2015
ಇದಕ್ಕೆ ಸಬ್ಸ್ಕ್ರೈಬ್ ಆಗಿ:
ಪೋಸ್ಟ್ಗಳು (Atom)