ಮಂಗಳವಾರ, ಫೆಬ್ರವರಿ 6, 2018
ಮಂಗಳವಾರ, ಜನವರಿ 30, 2018
ಭಾನುವಾರ, ಜನವರಿ 28, 2018
ಶನಿವಾರ, ಜನವರಿ 27, 2018
ಕಳ್ಳ ಬೆಕ್ಕು ಕಾಡು ಬೆಕ್ಕು
ಬೆಕ್ಕು ಬಂತು ಬೆಕ್ಕು
ಕಾಡು ಬೆಕ್ಕು ಬಂತು
ಒಂದು ಮನೆಯ ನುಗ್ಗಿತು
ರೊಟ್ಟಿ ತಿಂದು ಬಂದಿತು
ಸಂಜೆ ಮರಳಿ ಬಂದಿತು
ಬೆಣ್ಣೆ ಕದ್ದು ತಿಂದಿತು
ಮಜ್ಜಿಗೆ ಕುಡಿಯಲು ಹೋಯಿತು
ನಾಯಿ ನೋಡಿ ಓಡಿತು
ಮರುದಿನ ಬೆಕ್ಕು ಬಂದಿತು
ಆಕಳು ಹಾಲು ಕುಡಿಯಿತು
ಪಕ್ಕದಲ್ಲಿದ್ದ ಇಲಿಯ ಕಂಡು
ತಿನ್ನಲು ಓಡಿ ಹೋಯಿತು
ಇಲಿ ಬಿಲದೊಳಗೆ ಓಡಿತು
ಬೆಕ್ಕಿಗೆ ನಿರಾಸೆ ಆಯಿತು
ಬುಧವಾರ, ಜನವರಿ 24, 2018
ನನ್ನ ಕತೆ
ಪುನೀತ್ ಲಕ್ಷ್ಮಣರಾವ್, 9 ನೇ ತರಗತಿ
ಸ.ಪ್ರೌ.ಶಾಲೆ ಕುಕನೂರು
ಒಂದು ಬೆಕ್ಕು
ಒಂದು ಬೆಕ್ಕು ಬಂದಿತ್ತು
ಮನೆಯ ಒಳಗೆ ಹೋಗಿತ್ತು
ಅತ್ತ ಇತ್ತ ನೋಡಿತ್ತು
ಯಾರು ಕಾಣಲಾಗಿತ್ತು
ಮೆಲ್ಲ ಮೆಲ್ಲ ಹೆಜ್ಜೆನಿಡುತ
ಅಡುಗೆ ಮನೆಗೆ ನುಗ್ಗಿತು
ಹಾಲನ್ನು ನೋಡಿತು
ಗಟಗಟ ಕುಡಿದಿತು
ಯಾರೋ ಬಂದಗಾಯಿತು
ಲಗುಬಗು ಓಡಿ ಹೋಯಿತು
ಮರುದಿನ ಬಂದಿತು
ಅಡುಗೆ ಮನೆಯ ನುಗ್ಗಿತು
ಮೊಸರು ರೊಟ್ಟಿ ಕಂಡಿತು
ಕಟಕಟ
ಕಚಕಚ
ಕಟಕಟ
ಕಚಕಚ
ತಿಂದು ಮತ್ತೆ ತೇಗಿತು
ಜಾಗ ಖಾಲಿ ಮಾಡಿತು
ಮತ್ತೊಂದು ಬರಲು ದಿನ
ಜಂತಿ ಮೇಲೆ ಕುಳಿತಿತು
ಇಲಿಯನೊಂದು ಕಂಡಿತು
ನುಂಗಲದನು ಜಿಗಿಯಿತು
ಇಲಿ ಹಾರಿ ಬಿಲವ ಸೇರಿ
ಸೊಂಟವದರ ಮುರಿಯಿತು
ಸಪ್ಪೆ ಮುಖವ ಮಾಡಿಕೊಂಡ
ಮನೆಯ ದಾರಿ ಹಿಡಿಯಿತು
ಭೀಮಪ್ಪ ಮುಶಿಗೇರಿ
೮ ನೆ ತರಗತಿ
ಸ.ಪ್ರೌ.ಶಾ
ಜಹಗೀರ ಗುಡದೂರ
ಮಂಗಳವಾರ, ಜನವರಿ 23, 2018
ಬೆಕ್ಕು ಬಂತು ಬೆಕ್ಕು
ಬೆಕ್ಕು ಬಂತು ಬೆಕ್ಕು
ಮ್ಯಾಂವ್ ಮ್ಯಾಂವ್ ಎನ್ನುತ
ಬೆಣ್ಣೆಯನ್ನು ತಿನ್ನುವ ಬೆಕ್ಕು
ಹಾಲನು ಕುಡಿಯುವ ಬೆಕ್ಕು
ನಾಯಿ ಕಂಡರೆ ಓಡುವ ಬೆಕ್ಕು
ಇಲಿ ಕಂಡರೆ ಹಿಡಿಯುವ ಬೆಕ್ಕು
ರೊಟ್ಟಿ ಕಂಡರೆ ತಿನ್ನುವ ಬೆಕ್ಕು
ಹಾಲು ಕಂಡರೆ ನೆಕ್ಕುವ ಬೆಕ್ಕು
ಆಹಾರ ಕಂಡರೆ ಕಳ್ಳನಾಗುವ ಬೆಕ್ಕು
ಉಂಡ ನಂತರ ರಾಜನಾಗುವ ಬೆಕ್ಕು
ಕಣ್ಣು ಮುಚ್ಚಿ ಹಾಲು ಕುಡಿದರೆ
ಜಗತ್ತಿಗೆ ಕಾಣುವುದಿಲ್ಲ ಎನ್ನುವ ಬೆಕ್ಕು
ರಂಗಪ್ಪ ರಾಮಪ್ಪ ಹಿರೇಡೋಣಿ
೮ ನೆ ತರಗತಿ
ಸೋಮವಾರ, ಜನವರಿ 22, 2018
ಬೆಕ್ಕು ಮತ್ತು ನಾಯಿ
ಸಾಕೋ ಬೆಕ್ಕು ಬಂತು
ಮ್ಯಾಂವ್ ಮ್ಯಾಂವ್ ಅಂತೂ
ಬೆಣ್ಣೆ ಕದ್ದು ತಿಂತು
ಮರಳಿ ಸಂಜೆ ಬಂದಿತು
ಹಾಲು ಕದ್ದು ಕುಡಿಯಿತು
ಹೊರಗೆ ಬಂದು ನಿಂತಿತು
ನಾಯಿ ಕಂಡು ಓಡಿತು
ಬೆಕ್ಕು ಇಲಿಯ ಕಂಡಿತು
ಅದರ ಹಿಂದೆ ಓಡಿತು
ಬಿಲಕ್ಕೆ ಇಲಿಯು ನುಗ್ಗಿತು
ನಾಯಿ ಎದುರಿಗೆ ಕಂಡಿತು
ಬೆಕ್ಕು ಕದ್ದು ಓಡಿತು.
ರಚನೆ : ಮುತ್ತಪ್ಪ ಚ ಕಂಬಳಿ
೮ ನೇ ತರಗತಿ
ಶನಿವಾರ, ಜನವರಿ 20, 2018
ಶುಕ್ರವಾರ, ಜನವರಿ 19, 2018
ಗುರುವಾರ, ಜನವರಿ 11, 2018
ಬುಧವಾರ, ಜನವರಿ 3, 2018
ಸಾವಿತ್ರಿಬಾಯಿ ಪುಲೆ ಮೊದಲ ಶಿಕ್ಷಕಿ
ಭಾರತದಲ್ಲಿ ಸಾವಿತ್ರಿಬಾಯಿ ಪುಲೆ ಅವರು ಮೊದಲ ಶಿಕ್ಷಕಿಯಾಗಿ ಕಾರ್ಯ ನಿರ್ವಹಿಸಿ ನಾವು ಅವರ ಜನ್ಮ ದಿನಾಚರಣೆ ಆಚರಿಸುವ ಕಾಲವಷ್ಟೇ ಆದರೆ ಅವರ ಆದರ್ಶಗಳು ಅವರ ಚಿಂತನೆಗಳು ಪುರುಷ ಸಮಾಜದಲ್ಲಿ ಕಣ್ಣಿಗೆ ಕಾಣದಷ್ಟು ಕೆಳಗೆಳಿಯುತ್ತಿದೆ. ತಾಯಿಯೇ ಮೊದಲ ಗುರು ಎಂದು ಹೇಗೆ ಕರೆಯುವೆವೋ ಹಾಗೆ ಹೆಣ್ಣಿಗೆ ತಾಳ್ಮೆ ಇರುವುದನ್ನು ಅದನ್ನು ಎಲ್ಲರಲ್ಲಿ ಬಿತ್ತುವ ಮನೋಭಾವ ಭವಿಷ್ಯದ ನಾಗರೀಕ ಸಮಾಜಕ್ಕೆ ಕೆಳ ಹಂತದಿಂದಲೇ ಗಟ್ಟಿಗೊಳಿಸುವ ದಿಕ್ಕಿನಲ್ಲಿ ಮುಂದುವರೆಯೋಣ.
ಶನಿವಾರ, ಡಿಸೆಂಬರ್ 30, 2017
ಬುಧವಾರ, ಅಕ್ಟೋಬರ್ 18, 2017
ನಮ್ಮ ಕೂಗು
ನಮಗೆ ನಮ್ಮದೇ ಕೂಗು ಬೇಕು. ನಮ್ಮ ಕೂಗು ಕೇಳಿಸಿಕೊಳ್ಳದ ಹಲವು ಕಿವಿಗಳು ನಮ್ಮ ಮಧ್ಯ ಇವೆ. ಮನೆಯಲ್ಲಿ ಪಾಲಕರಿಗೇ ನಮ್ಮ ಕೂಗು ಮುಟ್ಟೋಲ್ಲ. ಶಾಲೆಯಲ್ಲಿ ಶಿಕ್ಷಕರಿಗೆ ನಮ್ಮ ಕೂಗು ಮುಟ್ಟೋಲ್ಲ. ಓಟ್ ಹಾರಿಸಿಕೊಂಡ ರಾಜಕಾರಣಿಗಳ ಕಿವಿಗೆ ನಮ್ಮ ಕೂಗು ಮುಟ್ಟೋಲ್ಲ ಹೀಗೆ ನಮ್ಮದೇ ಕಂಠದ ಧ್ವನಿ ಯಾರಿಗೂ ಮುಟ್ಟದ ಪರಿಸ್ಥಿತಿ ಬಂದೊದಗಿದೆ. ಕೇಳುವ ಕಿವಿಗಳೇ ಇಲ್ಲದಿರುವ ಈ ಸ್ಥಿತಿಯಲ್ಲಿ ನಾವು ನಮಗಾಗಿ ಕಿವಿಗಳ ಕೊಡುವವರ ಹುಡುಕಾಟ ನಡೆಸಿದ್ದೇವೆ. ಅಥಾವ ಆಲಿಸುವ ವರ್ಗವನ್ನು ಕಂಡುಕೊಳ್ಳುವ ಪ್ರಯತ್ನ ನಡೆಸಿದ್ದೇವೆ. ಅಂತಹ ಒಂದು ಪ್ರಯತ್ನ ನಮ್ಮ ಕೂಗು ನಾಟಕ.
ಶನಿವಾರ, ಅಕ್ಟೋಬರ್ 7, 2017
ಶುಕ್ರವಾರ, ಅಕ್ಟೋಬರ್ 6, 2017
ಭಾನುವಾರ, ಆಗಸ್ಟ್ 6, 2017
ಗುರುವಾರ, ಆಗಸ್ಟ್ 3, 2017
ಮುತ್ತಣ್ಣನ ಬರಹ
ನನ್ನ ಪ್ರೀತಿಯ ರಂಗಕಲಾ ಶಿಕ್ಷಕರಾದ ಗುರುರಾಜ L
ಹಜ್ಜೆಗಳಲ್ಲಿ ಸಂಗ್ರಹಿಸಿದ ಚಿತ್ರ . 9ನೇ ತರಗತಿ ಇದ್ದಾಗ ಪಾತ್ರಗಳನ್ನು ಹಂಚುತಿರುವಾಗ ಯಾವ ಯಾವ ಪಾತ್ರಗಳು ಎಂದು ಚರ್ಚೆ ಮಾಡುತ್ತಿರುವಾಗ ಕೋನೆಯದಾಗಿ ಆಯ್ಕೆ ಯಾದವನು ನಾನು.
ಅಂದು ನಾನು ಗುರುಗಳ ಮಾತಿನಂತೆ ರಂಗಕಲೆಗೆ ಸೇರದಿದ್ದರೆ ಇನ್ನೆಂದು ನಿರ್ಭಯವಾಗಿ ವೇದಿಕೆಯ ಮೇಲೆ ಮಾತನಾಡುತ್ತಿರಲಿಲ್ಲವೇನೋ ಎಂದನಿಸುತ್ತಿದೆ.
ಆ ದಿನಗಳಲ್ಲಿ ನಾವು ನಾಟಕದ ರಿಹರ್ಷಲ್ಗಳಲ್ಲಿಯೇ ಕಾಲ ಕಳೆದೆವು. ಕನಸಿನೂರು, ವಿಜ್ಞಾನದ ಬಗ್ಗೆ ನಾಟಕಗಳ ರಿಹರ್ಷಲ್ ನಲ್ಲಿ ತೊಡಗಿರುತಿದ್ದೆವು.ಇಂತಹ ನಾಟಕಗಳ ಪಾತ್ರಗಳನ್ನು ಹೋತ್ತು ಊರೂರಿಗೆ ಆ ದಿನಗಳಲ್ಲಿ ಬಂಡೆಗಳನ್ನು ಏರಿ ಹೋಗುತಿದ್ದ ಕ್ಷಣಗಳು,ನಟನೆಯಲ್ಲಿ ಪಾತ್ರಕ್ಕೆ ತಕ್ಕ ಬಟ್ಟೆಗಳನ್ನು ಹೊತ್ತು ಹೋಗಿ ನಾಟಕ ಮಾಡಿ ಬರುತ್ತಿದ್ದೇವು.ಹಾಬಲಕಟ್ಟ, ಬಾದಿಮನಾಳ, ತುಮರಿಕೊಪ್ಪ , ಜ.ಗುಡದೂರ, ಮತ್ತು ತಾಲೂಕು ಹಂತದಲ್ಲಿ ನಿಡಶೇಸಿಗೆ ಮೊದಲ ಬಾರಿಗೆ ಹೋಗಿ ಬಂದ ಶಾಲೆಯ ಮಕ್ಕಳಾಗಿದ್ದೇವು. ಮತ್ತು ನಮ್ಮ ಮೊದಲ ಹೆಜ್ಜೆಗಳೆ ಸರಿ.
ಮತ್ತೋಮ್ಮ ಶಾಲಾದಿನಗಳನ್ನು ಹೆಜ್ಜೆಗಳಲ್ಲಿ ಸಂಗ್ರಹಿಸಿ ನೆನಪಿಸಿದ ಗುರುರಾಜ ಗುರುಗಳಿಗೆ ಧನ್ಯವಾದಗಳು.












































