ನನ್ನ ಪ್ರೀತಿಯ ರಂಗಕಲಾ ಶಿಕ್ಷಕರಾದ ಗುರುರಾಜ L
ಹಜ್ಜೆಗಳಲ್ಲಿ ಸಂಗ್ರಹಿಸಿದ ಚಿತ್ರ . 9ನೇ ತರಗತಿ ಇದ್ದಾಗ ಪಾತ್ರಗಳನ್ನು ಹಂಚುತಿರುವಾಗ ಯಾವ ಯಾವ ಪಾತ್ರಗಳು ಎಂದು ಚರ್ಚೆ ಮಾಡುತ್ತಿರುವಾಗ ಕೋನೆಯದಾಗಿ ಆಯ್ಕೆ ಯಾದವನು ನಾನು.
ಅಂದು ನಾನು ಗುರುಗಳ ಮಾತಿನಂತೆ ರಂಗಕಲೆಗೆ ಸೇರದಿದ್ದರೆ ಇನ್ನೆಂದು ನಿರ್ಭಯವಾಗಿ ವೇದಿಕೆಯ ಮೇಲೆ ಮಾತನಾಡುತ್ತಿರಲಿಲ್ಲವೇನೋ ಎಂದನಿಸುತ್ತಿದೆ.
ಆ ದಿನಗಳಲ್ಲಿ ನಾವು ನಾಟಕದ ರಿಹರ್ಷಲ್ಗಳಲ್ಲಿಯೇ ಕಾಲ ಕಳೆದೆವು. ಕನಸಿನೂರು, ವಿಜ್ಞಾನದ ಬಗ್ಗೆ ನಾಟಕಗಳ ರಿಹರ್ಷಲ್ ನಲ್ಲಿ ತೊಡಗಿರುತಿದ್ದೆವು.ಇಂತಹ ನಾಟಕಗಳ ಪಾತ್ರಗಳನ್ನು ಹೋತ್ತು ಊರೂರಿಗೆ ಆ ದಿನಗಳಲ್ಲಿ ಬಂಡೆಗಳನ್ನು ಏರಿ ಹೋಗುತಿದ್ದ ಕ್ಷಣಗಳು,ನಟನೆಯಲ್ಲಿ ಪಾತ್ರಕ್ಕೆ ತಕ್ಕ ಬಟ್ಟೆಗಳನ್ನು ಹೊತ್ತು ಹೋಗಿ ನಾಟಕ ಮಾಡಿ ಬರುತ್ತಿದ್ದೇವು.ಹಾಬಲಕಟ್ಟ, ಬಾದಿಮನಾಳ, ತುಮರಿಕೊಪ್ಪ , ಜ.ಗುಡದೂರ, ಮತ್ತು ತಾಲೂಕು ಹಂತದಲ್ಲಿ ನಿಡಶೇಸಿಗೆ ಮೊದಲ ಬಾರಿಗೆ ಹೋಗಿ ಬಂದ ಶಾಲೆಯ ಮಕ್ಕಳಾಗಿದ್ದೇವು. ಮತ್ತು ನಮ್ಮ ಮೊದಲ ಹೆಜ್ಜೆಗಳೆ ಸರಿ.
ಮತ್ತೋಮ್ಮ ಶಾಲಾದಿನಗಳನ್ನು ಹೆಜ್ಜೆಗಳಲ್ಲಿ ಸಂಗ್ರಹಿಸಿ ನೆನಪಿಸಿದ ಗುರುರಾಜ ಗುರುಗಳಿಗೆ ಧನ್ಯವಾದಗಳು.
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ
Thank you.
.................
Gururaj.L
Drama Teacher