ಬೆಕ್ಕು ಬಂತು ಬೆಕ್ಕು
ಕಾಡು ಬೆಕ್ಕು ಬಂತು
ಒಂದು ಮನೆಯ ನುಗ್ಗಿತು
ರೊಟ್ಟಿ ತಿಂದು ಬಂದಿತು
ಸಂಜೆ ಮರಳಿ ಬಂದಿತು
ಬೆಣ್ಣೆ ಕದ್ದು ತಿಂದಿತು
ಮಜ್ಜಿಗೆ ಕುಡಿಯಲು ಹೋಯಿತು
ನಾಯಿ ನೋಡಿ ಓಡಿತು
ಮರುದಿನ ಬೆಕ್ಕು ಬಂದಿತು
ಆಕಳು ಹಾಲು ಕುಡಿಯಿತು
ಪಕ್ಕದಲ್ಲಿದ್ದ ಇಲಿಯ ಕಂಡು
ತಿನ್ನಲು ಓಡಿ ಹೋಯಿತು
ಇಲಿ ಬಿಲದೊಳಗೆ ಓಡಿತು
ಬೆಕ್ಕಿಗೆ ನಿರಾಸೆ ಆಯಿತು
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ
Thank you.
.................
Gururaj.L
Drama Teacher