ಬುಧವಾರ, ಜನವರಿ 24, 2018

ನನ್ನ ಕತೆ

ಅಜ್ಜಿ ನನ್ನ ಅಜ್ಜಿಯೆಂದರೆ ನನಗೆ ತುಂಬಾ ಇಷ್ಟ. ಅವರು ನನ್ನನ್ನು ತುಂಬಾ ಪ್ರೀತಿಯಿಂದ ನೋಡಿಕೊಳ್ಳುತ್ತಾರೆ. ಏಕೆಂದರೇ ನಾನು ಮಲುಗುವಾಗ ಊಟ ಮಾಡಿದೆಯಾ ? ಎಂದು ಕೇಳುತ್ತಾರೆ. ಹಾಗೂ ನನಗೆ ತಿನ್ನಲು ತಿಂಡಿ ತಿನಿಸುಗಳನ್ನು ಮುಚ್ಚಿಟ್ಟು ನನಗೆ ಕೊಡುತ್ತಾರೆ. ನನಗೆ ಏನಾದರೂ ಗಾಯವಾದರೇ ಔಷಧಿಯನ್ನು ಹಚ್ಚಿ, ನನ್ನನ್ನು ತುಂಬಾ ಖಾಳಜಿಯಿಂದ ನೋಡಿಕೊಳ್ಳುತ್ತಾರೆ. ನನಗೆ ಸಂಜೆಯ ಹೊತ್ತು ಒಂದು ಒಳ್ಳೆಯ ಕಥೆಯನ್ನು ಹೇಳಿ, ನನಗೆ ಬುದ್ದಿವಾದ ಹೇಳುತ್ತಾರೆ. ನೀತಿಕಥೆಯನ್ನು ಹೇಳಿ ನೀತಿಯಿಂದ ಬಾಳು ಎಂದು ಬುದ್ಧಿವಾದ ಹೇಳುತ್ತಾರೆ. ಕೆಲವು ಸಲ ನನಗೆ ಅಜ್ಜಿ ತನ್ನ ಕಷ್ಟದ ದಿನಗಳನ್ನು ಹೇಳಿದಾಗ ನನಗೆ ತುಂಬಾ ಬೇಸರವಾಗುತ್ತದೆ. ಕೆಲವು ದಿನ  ನಲಿಯುವ ಸಮಯವನ್ನು ಹೇಳಿ ಖುಷಿಯಿಂದ ನಗಲು ನನಗೆ ಹೇಳುತ್ತಾರೆ. ಆಗ ನನಗೆ ಅವರ ಕಷ್ಟದ ದಿನಗಳು ಮರೆತು, ಬದುಕುವ ಉತ್ಸಾಹವನ್ನು ತುಂಬುತ್ತಾರೆ. ಹಾಗಾಗಿ ಅಜ್ಜಿಯೆಂದರೇ ನನಗೆ ಇಷ್ಟ.                                                                    


ಪುನೀತ್ ಲಕ್ಷ್ಮಣರಾವ್, 9 ನೇ ತರಗತಿ
ಸ.ಪ್ರೌ.ಶಾಲೆ ಕುಕನೂರು 

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ

Thank you.

.................
Gururaj.L
Drama Teacher