ಭಾನುವಾರ, ನವೆಂಬರ್ 18, 2012

ರೇಶ್ಮೆ ಗೂಡುಗಳ ವೀಕ್ಷಣೆ





                              ಕೃಷಿಗೆ ಸಂಬಂಧ ಪಟ್ಟ ವಿಚಾರಗಳನ್ನು ನಮ್ಮ ಮುದ್ದು ವಿಧ್ಯಾರ್ಥಿಗಳಿಗೆ ತಿಳಿಯ ಪಡಿಸಬೇಕಾಗಿರುವುದು ಇಂದಿನ ಶಿಕ್ಷಣ ಕ್ರಮದಲ್ಲಿ ಅವಶ್ಯಕವಾಗಿ ಇರಬೇಕಾಗಿದೆ. ಗ್ರಾಮೀಣ ಮಕ್ಕಳಿಗೆ ಸಂಪೂರ್ಣ ಜ್ಞಾನ ನೀಡುವುದರ ಜೊತೆಗೆ ಕೃಷಿ ಇಂದು ಎಷ್ಟು ಅವಶ್ಯಕ ಎನ್ನುವುದನ್ನು ಮನದಟ್ಟ ಮಾಡಬೇಕಾಗಿದೆ. ನಗರ ಪ್ರದೇಶಗಳಲ್ಲಿ ಕೃಷಿಯ ವಿಚಾರಗಳು ವಿಧ್ಯಾರ್ಥಿಗಳಿಗೆ ಸಿಗುವುದು ಕಡಿಮೆ. ಪ್ರಾಯೋಗಿಕವಾಗಿ ವಿದ್ಯಾರ್ಥಿಗಳು ಸ್ಥಳಗಳನ್ನು ಬೇಟಿ ಮಾಡುವುದರೊಂದಿಗೆ ಹೆಚ್ಚಿನ ವಿಚಾರಗಳನ್ನು ತಿಳಿದುಕೊಳ್ಳುವುದು ಅತ್ಯಂತ ಅವಶ್ಯಕವಾದಂಥಹದ್ದು. ಶಿಕ್ಷಕರು-ವಿದ್ಯಾರ್ಥಿಗಳೊಂದಿಗೆ  ಪ್ರವಾಸದ ಜೊತೆಗೆ ಇಂಥಹ ಕೃಷಿಗೆ ಸಂಬಂಧ ಪಟ್ಟ ಮಾಹಿತಿಗಳನ್ನು ತಜ್ಞರಿಂದ ಮಕ್ಕಳಿಗೆ ತಿಳಿಸುವುದು ನಮ್ಮ ಕರ್ತವ್ಯವಾಗಿದೆ.





                         ರೇಷ್ಮೆ ಹುಳುಗಳ ಗೂಡುಗಳನ್ನು ಕಟ್ಟುವ ಕ್ರಮದ ಕುರಿತು, ಪ್ರತಿ ಹಂತಗಳಲ್ಲಿ ಹುಳುಗಳ ಬೆಳವಣಿಗೆ ಸಮಗ್ರವಾದ ವಿವರಗಳನ್ನು ಶರಣಪ್ಪ ರಾಜೂರ ಅವರ ಹೊಲದಲ್ಲಿ ಕಂಡು, ಕೇಳಿದ ವಿಧ್ಯಾರ್ಥಿಗಳು ತಮ್ಮ ಮನೆಯ ಪರಿಸರದಲ್ಲಿ , ತಮ್ಮ ಹೊಲದಲ್ಲಿ  ಪಾಲಕರು ಅನುಸರಿಸಿದ ಕ್ರಮಗಳ ಕುರಿತು ಹಂಚಿಕೊಂಡಾಗ ಮಕ್ಕಳ ಕಲಿಕೆಯಲ್ಲಿ ನಾವು ಕೆಳಮಟ್ಟದಲ್ಲಿ ನೋಡುವ ಜನರನ್ನು ಇತ್ತ ಗಮನಹರಿಸುವಂತೆ ಮಾಡಬೇಕಾಗಿದೆ.








ಮಂಗಳವಾರ, ಸೆಪ್ಟೆಂಬರ್ 18, 2012

ಶ್ರೀ ಸಿದ್ದಲಿಂಗ ಪಟ್ಟಣಶೆಟ್ಟಿ




ಧಾರವಾಡದಲ್ಲಿ  ನಡೆದ ಶಿಕ್ಷಕರ ಸಮಾವೇಶದಲ್ಲಿ 


ಶನಿವಾರ, ಸೆಪ್ಟೆಂಬರ್ 15, 2012





 ಶ್ರೀ ಗೋನಾಳ ರಾಜಶೇಖರ ಗೌಡ ಚಾರಿಟಬಲ್ ಟ್ರಸ್ಟ ವತಿಯಿಂದ ನಮ್ಮ ಶಾಲೆಯ ಪ್ರತಿಯೊಂದು ಮಗುವಿಗೆ  4 ಪುಸ್ತಕಗಳನ್ನು  ನೀಡಲಾಯಿತು. ಪುಸ್ತಕವನ್ನು ನೀಡುವ ಸಂಸ್ಕೃತಿ ನಮ್ಮ ಶಾಲೆಯಲ್ಲಿ ನಡೆದಿದ್ದು ಹೊಸ ವಿಧಾನಕ್ಕೆ ಹಾದಿ ಮಾಡಿಕೊಡಲಾಯಿತು.

ಬುಧವಾರ, ಆಗಸ್ಟ್ 15, 2012

ಹತ್ತನೇ ತರಗತಿ ಮಕ್ಕಳಿಗೆ Scene work ನ್ನು ಮಾಡುವ ಕಾರ್ಯವನ್ನು ಕೈಗೊಂಡಗ ನನಗೆ ಹೆದರಿಕೆ ಇತ್ತು. ಮಕ್ಕಳು ಯಾವ ರೀತಿಯಲ್ಲಿ ತೆಗೆದುಕೊಳ್ಳುತ್ತಾರೆ ಎಂದು ನಿಜವಾಗಲು ಒಂದೊಂದು ಹಂತದಲ್ಲಿ ಸೂಕ್ಷ್ಮ ಗಮನಗಳನ್ನು ಹರಿಸಲು ಇಲ್ಲಿ ಸಾಧ್ಯವಾಯಿತು. ಪ್ರತಿಯೊಂದು ಹಂತದಲ್ಲಿಯೂ ಮಕ್ಕಳು ಜಾಗೃತದಿಂದ ದೃಶ್ಯಗಳಲ್ಲಿ  ತೊಡಗಿಕೊಳ್ಳುತ್ತಾ ತಮ್ಮ ತಮ್ಮ  ನಡುವೆ ಇದ್ದ ಮುಜುಗರಗಳನ್ನು ತೆಗೆದು ಹಾಕಿ ತಾವುಗಳೇ ಪರಿಕರಗಳ ಸಂಗ್ರಹಣೆ ಮಾಡಿಕೊಂಡು ದೃಶ್ಯಗಳಲ್ಲಿ ತಲ್ಲಿನರಾಗಿದ್ದನ್ನು ಮತ್ತು ಗುಂಪಿನಿಂದ ಗುಂಪಿಗೆ ಕ್ರಿಯಾಶೀಲರಾಗುತ್ತ  ಸಾಗಿದ್ದು ಕಂಡು ಬಂದಿತು.

   







ಭಾನುವಾರ, ಆಗಸ್ಟ್ 5, 2012








ಈ  ಬಾರಿಯ ಕ್ರೀಡಾ ಕೂಟಕ್ಕೆ ತೆರಳುತ್ತಿರುವ ಮಕ್ಕಳ ಜೊತೆ ಶಿಕ್ಷಕರು 

ಶನಿವಾರ, ಜುಲೈ 7, 2012

ಸೋಬಾನೆ ಪದ


 

ಅಣಕು ಸಂಸತ್ತಿನ ಮಂತ್ರಿಗಳಿಗೆ ಪ್ರಮಾಣವಚನ

ಪ್ರಮಾಣ  ವಚನ  

ಆಯ್ಕೆಯಾದ ಮಂತ್ರಿಗಳು 

                          ಶಾಲೆಯಲ್ಲಿ ವಿದ್ಯಾರ್ಥಿಗಳಿಗೆ ಚುನಾವಣೆ ಹೇಗೆ ನಡೆಯುತ್ತದೆ, ಚುನಾವಣಾ ಕಾರ್ಯಗಳು ಯಾವಾ ತರದಲ್ಲಿ ನಡೆಯುತ್ತದೆ ಮತ್ತು ಆಯ್ಕೆಯಾದ ಅಭ್ಯರ್ಥಿಗಳು ರಾಷ್ಟ್ರಪತಿಗಳಿಂದ  ಪ್ರಮಾಣವಚನ ತೆಗೆದುಕೊಂಡು ಪ್ರಧಾನಿ ಮತ್ತು ಉಪಪ್ರಧಾನಿಗಳ ಜೊತೆ ಇತರರಿಗೆ  ಬೇರೆ ಬೇರೆ ಖಾತೆಗಳನ್ನು ಹಂಚಿಕೆಯಾಗಿ ಶಾಲಾ ಎಲ್ಲಾ ಚಟುವಟಿಕೆಗಳಲ್ಲಿ ತಮ್ಮ ಸೇವೆಗಳನ್ನು ಮಂತ್ರಿಯಾದವರು ಯಾವ ರೀತಿಯಲ್ಲಿ ನಿಭಾಯಿಸ ಬೇಕೆಂದು ಮಾರ್ಗದರ್ಶಕ ಶಿಕ್ಷಕರಿಂದ ಸಲಹೆ, ಮಾರ್ಗದರ್ಶನ ನಿರಂತರವಾಗಿ ವರ್ಷದುದ್ದಕ್ಕೂ ಇರುತ್ತದೆ.

ಗುರುವಾರ, ಜೂನ್ 28, 2012

2012-13 ನೇ ಸಾಲಿನ ಶಾಲಾ ಸಂಸತ್ತು



ಚುನಾವಣೆ ಬೂತ್ 
ಮತದಾರರು ಸರದಿಯಲ್ಲಿ 
ಮತದಾರರು ಸರದಿಯಲ್ಲಿ 

 ಬೆರಳಿಗೆ ಶಾಹಿ 

ಕೌಂಟರ್ 
ಮತದಾನದ ಪೆಟ್ಟಿಗೆ 

 ಎಣಿಕೆಗೆ ಪೆಟ್ಟಿಗೆಯಿಂದ ಮತಗಳನ್ನು ತೆಗೆಯುತ್ತಿರುವುದು 

ಸುರಕ್ಷತೆಯಲ್ಲಿ  ಪೊಲೀಸರು 
ಬ್ಯಾಲೆಟ್ ವಿತರಣೆ


ಚುನಾವಣೆಯಲ್ಲಿ ಗಲಾಟೆ ಮಾಡಿದವ ಪೋಲೀಸರ ಸೆರೆ

ಶುಕ್ರವಾರ, ಜೂನ್ 22, 2012

ಹಸಿರು ಹಾಡು (ಮಕ್ಕಳಕವನ ಸಂಕಲನ) : ಬಲೂನುವಾಲಾ

ಹಸಿರು ಹಾಡು (ಮಕ್ಕಳಕವನ ಸಂಕಲನ) : ಬಲೂನುವಾಲಾ


ಬಲೂನು ವಾಲಾ
ಬಂದನು ಬಾಲಾ
ಬೇಗನೆ ಬಾ ಬಾ ಹೊರಗೋಡಿ
ಬಗೆ ಬಗೆ ಬಣ್ಣ
ಸೆಳೆವುದು ಕಣ್ಣ
ಖುಷಿ ಪಡು ಬಾ ಬಾ ನೀ ನೋಡಿ
ಕೋಲಿಗೆ ತಾನು
ಸಾಲು ಬಲೂನು
ಸಿಕ್ಕಿಸಿ ಕೈಯಲಿ ಹಿಡಿದಹನು
“ಕೊಡುವೆನು ನಾನು
ಬೇಕೆ ಬಲೂನು?”
ಎನ್ನುತ ಕೂಗುತ ನಡೆದಿಹನು
ಕಾಸನು ತಂದು
ನೀಡುತ ನಿಂದು
“ಕೊಡು ನನಗೊಂದು” ಎಂದು ಬಿಡು,
ಕೊಂಡು ಬಲೂನು
ಹಾರಿಸಿ ನೀನು
ಕುಣಿ ಕುಣಿದಾಡಲು ಬಂದು ಬಿಡು


( ಕಣಜದಿಂದ  : ಪಡೆದಿದ್ದು  ) 

ಗುರುವಾರ, ಜೂನ್ 21, 2012

ಸಾಮೂಹಿಕ ಕ್ರೀಡೆಗಳು



ಸಾಮೂಹಿಕ  ಕ್ರೀಡೆಗಳಲ್ಲಿ  -ಕಬ್ಬಡಿ  ಆಟದ ಕೆಲವು ಛಾಯಾಚಿತ್ರಗಳು.












ಬುಧವಾರ, ಜೂನ್ 6, 2012

ಶಾಲೆಆರಂಭ



ಶಾಲೆ ಪುನರ್ ಆರಂಭಗೊಂಡಿದೆ ಮಕ್ಕಳು ಪ್ರಸ್ತುತ ಮುಂಗಾರು ಮಳೆಯಂತೆ  ನಿಧಾನವಾಗಿ ಶಾಲೆಯತ್ತ ಗಮನ ಹರಿಸುತ್ತಿದ್ದು  ಆಶಾದಾಯಕ. ಗುಳೆ ಹೋಗುವಂಥ ನಮ್ಮ ಗ್ರಾಮೀಣ ಜನರು ಮಕ್ಕಳನ್ನು  ಮರಳಿ ಶಾಲೆಯತ್ತ ಕಳುಹಿಸುವಲ್ಲಿ ಚಿತ್ತ ಹರಿಸುತ್ತಿದ್ದರೆ. ಹೊಸ ಪುಸ್ತಕ, ಬಟ್ಟೆ ಸೈಕಲ್ ಗಳೊಂದಿಗೆ ಮಕ್ಕಳ ಜೇಂಕಾರದ  ಕಲರವ ಎಲ್ಲ ಶಾಲೆಗಳಲ್ಲಿ ಮಾರ್ದನಿಸಲಿವೆ. ಎಲ್ಲೋ ಕಳೆದು ಹೋಗಿದ್ದರೆನೋ ಎಂಬ ಭಾವನೆಗಳನ್ನು ದೂರ ತಳ್ಳಿ ನಾವಿಲ್ಲೇ  ಎಂದು ಅಂಗಳದಲ್ಲೆಲ್ಲ ಜಿಗಿದಾಡುವ ಕ್ಷಣಗಳು ಕಣ್ಣ ತುಂಬಲಿವೆ.