ಹತ್ತನೇ ತರಗತಿ ಮಕ್ಕಳಿಗೆ Scene work ನ್ನು ಮಾಡುವ ಕಾರ್ಯವನ್ನು ಕೈಗೊಂಡಗ ನನಗೆ ಹೆದರಿಕೆ ಇತ್ತು. ಮಕ್ಕಳು ಯಾವ ರೀತಿಯಲ್ಲಿ ತೆಗೆದುಕೊಳ್ಳುತ್ತಾರೆ ಎಂದು ನಿಜವಾಗಲು ಒಂದೊಂದು ಹಂತದಲ್ಲಿ ಸೂಕ್ಷ್ಮ ಗಮನಗಳನ್ನು ಹರಿಸಲು ಇಲ್ಲಿ ಸಾಧ್ಯವಾಯಿತು. ಪ್ರತಿಯೊಂದು ಹಂತದಲ್ಲಿಯೂ ಮಕ್ಕಳು ಜಾಗೃತದಿಂದ ದೃಶ್ಯಗಳಲ್ಲಿ ತೊಡಗಿಕೊಳ್ಳುತ್ತಾ ತಮ್ಮ ತಮ್ಮ ನಡುವೆ ಇದ್ದ ಮುಜುಗರಗಳನ್ನು ತೆಗೆದು ಹಾಕಿ ತಾವುಗಳೇ ಪರಿಕರಗಳ ಸಂಗ್ರಹಣೆ ಮಾಡಿಕೊಂಡು ದೃಶ್ಯಗಳಲ್ಲಿ ತಲ್ಲಿನರಾಗಿದ್ದನ್ನು ಮತ್ತು ಗುಂಪಿನಿಂದ ಗುಂಪಿಗೆ ಕ್ರಿಯಾಶೀಲರಾಗುತ್ತ ಸಾಗಿದ್ದು ಕಂಡು ಬಂದಿತು.