ಹಸಿರು ಹಾಡು (ಮಕ್ಕಳಕವನ ಸಂಕಲನ) : ಬಲೂನುವಾಲಾ
ಬಲೂನು ವಾಲಾ
ಬಂದನು ಬಾಲಾ
ಬೇಗನೆ ಬಾ ಬಾ ಹೊರಗೋಡಿ
ಬಗೆ ಬಗೆ ಬಣ್ಣ
ಸೆಳೆವುದು ಕಣ್ಣ
ಖುಷಿ ಪಡು ಬಾ ಬಾ ನೀ ನೋಡಿ
ಬಂದನು ಬಾಲಾ
ಬೇಗನೆ ಬಾ ಬಾ ಹೊರಗೋಡಿ
ಬಗೆ ಬಗೆ ಬಣ್ಣ
ಸೆಳೆವುದು ಕಣ್ಣ
ಖುಷಿ ಪಡು ಬಾ ಬಾ ನೀ ನೋಡಿ
ಕೋಲಿಗೆ ತಾನು
ಸಾಲು ಬಲೂನು
ಸಿಕ್ಕಿಸಿ ಕೈಯಲಿ ಹಿಡಿದಹನು
“ಕೊಡುವೆನು ನಾನು
ಬೇಕೆ ಬಲೂನು?”
ಎನ್ನುತ ಕೂಗುತ ನಡೆದಿಹನು
ಸಾಲು ಬಲೂನು
ಸಿಕ್ಕಿಸಿ ಕೈಯಲಿ ಹಿಡಿದಹನು
“ಕೊಡುವೆನು ನಾನು
ಬೇಕೆ ಬಲೂನು?”
ಎನ್ನುತ ಕೂಗುತ ನಡೆದಿಹನು
ಕಾಸನು ತಂದು
ನೀಡುತ ನಿಂದು
“ಕೊಡು ನನಗೊಂದು” ಎಂದು ಬಿಡು,
ಕೊಂಡು ಬಲೂನು
ಹಾರಿಸಿ ನೀನು
ಕುಣಿ ಕುಣಿದಾಡಲು ಬಂದು ಬಿಡು
ನೀಡುತ ನಿಂದು
“ಕೊಡು ನನಗೊಂದು” ಎಂದು ಬಿಡು,
ಕೊಂಡು ಬಲೂನು
ಹಾರಿಸಿ ನೀನು
ಕುಣಿ ಕುಣಿದಾಡಲು ಬಂದು ಬಿಡು
( ಕಣಜದಿಂದ : ಪಡೆದಿದ್ದು )