ಭಾನುವಾರ, ನವೆಂಬರ್ 18, 2012

ರೇಶ್ಮೆ ಗೂಡುಗಳ ವೀಕ್ಷಣೆ





                              ಕೃಷಿಗೆ ಸಂಬಂಧ ಪಟ್ಟ ವಿಚಾರಗಳನ್ನು ನಮ್ಮ ಮುದ್ದು ವಿಧ್ಯಾರ್ಥಿಗಳಿಗೆ ತಿಳಿಯ ಪಡಿಸಬೇಕಾಗಿರುವುದು ಇಂದಿನ ಶಿಕ್ಷಣ ಕ್ರಮದಲ್ಲಿ ಅವಶ್ಯಕವಾಗಿ ಇರಬೇಕಾಗಿದೆ. ಗ್ರಾಮೀಣ ಮಕ್ಕಳಿಗೆ ಸಂಪೂರ್ಣ ಜ್ಞಾನ ನೀಡುವುದರ ಜೊತೆಗೆ ಕೃಷಿ ಇಂದು ಎಷ್ಟು ಅವಶ್ಯಕ ಎನ್ನುವುದನ್ನು ಮನದಟ್ಟ ಮಾಡಬೇಕಾಗಿದೆ. ನಗರ ಪ್ರದೇಶಗಳಲ್ಲಿ ಕೃಷಿಯ ವಿಚಾರಗಳು ವಿಧ್ಯಾರ್ಥಿಗಳಿಗೆ ಸಿಗುವುದು ಕಡಿಮೆ. ಪ್ರಾಯೋಗಿಕವಾಗಿ ವಿದ್ಯಾರ್ಥಿಗಳು ಸ್ಥಳಗಳನ್ನು ಬೇಟಿ ಮಾಡುವುದರೊಂದಿಗೆ ಹೆಚ್ಚಿನ ವಿಚಾರಗಳನ್ನು ತಿಳಿದುಕೊಳ್ಳುವುದು ಅತ್ಯಂತ ಅವಶ್ಯಕವಾದಂಥಹದ್ದು. ಶಿಕ್ಷಕರು-ವಿದ್ಯಾರ್ಥಿಗಳೊಂದಿಗೆ  ಪ್ರವಾಸದ ಜೊತೆಗೆ ಇಂಥಹ ಕೃಷಿಗೆ ಸಂಬಂಧ ಪಟ್ಟ ಮಾಹಿತಿಗಳನ್ನು ತಜ್ಞರಿಂದ ಮಕ್ಕಳಿಗೆ ತಿಳಿಸುವುದು ನಮ್ಮ ಕರ್ತವ್ಯವಾಗಿದೆ.





                         ರೇಷ್ಮೆ ಹುಳುಗಳ ಗೂಡುಗಳನ್ನು ಕಟ್ಟುವ ಕ್ರಮದ ಕುರಿತು, ಪ್ರತಿ ಹಂತಗಳಲ್ಲಿ ಹುಳುಗಳ ಬೆಳವಣಿಗೆ ಸಮಗ್ರವಾದ ವಿವರಗಳನ್ನು ಶರಣಪ್ಪ ರಾಜೂರ ಅವರ ಹೊಲದಲ್ಲಿ ಕಂಡು, ಕೇಳಿದ ವಿಧ್ಯಾರ್ಥಿಗಳು ತಮ್ಮ ಮನೆಯ ಪರಿಸರದಲ್ಲಿ , ತಮ್ಮ ಹೊಲದಲ್ಲಿ  ಪಾಲಕರು ಅನುಸರಿಸಿದ ಕ್ರಮಗಳ ಕುರಿತು ಹಂಚಿಕೊಂಡಾಗ ಮಕ್ಕಳ ಕಲಿಕೆಯಲ್ಲಿ ನಾವು ಕೆಳಮಟ್ಟದಲ್ಲಿ ನೋಡುವ ಜನರನ್ನು ಇತ್ತ ಗಮನಹರಿಸುವಂತೆ ಮಾಡಬೇಕಾಗಿದೆ.