ಶಾಲೆಆರಂಭ
ಶಾಲೆ ಪುನರ್ ಆರಂಭಗೊಂಡಿದೆ ಮಕ್ಕಳು ಪ್ರಸ್ತುತ ಮುಂಗಾರು ಮಳೆಯಂತೆ ನಿಧಾನವಾಗಿ ಶಾಲೆಯತ್ತ ಗಮನ ಹರಿಸುತ್ತಿದ್ದು ಆಶಾದಾಯಕ. ಗುಳೆ ಹೋಗುವಂಥ ನಮ್ಮ ಗ್ರಾಮೀಣ ಜನರು ಮಕ್ಕಳನ್ನು ಮರಳಿ ಶಾಲೆಯತ್ತ ಕಳುಹಿಸುವಲ್ಲಿ ಚಿತ್ತ ಹರಿಸುತ್ತಿದ್ದರೆ. ಹೊಸ ಪುಸ್ತಕ, ಬಟ್ಟೆ ಸೈಕಲ್ ಗಳೊಂದಿಗೆ ಮಕ್ಕಳ ಜೇಂಕಾರದ ಕಲರವ ಎಲ್ಲ ಶಾಲೆಗಳಲ್ಲಿ ಮಾರ್ದನಿಸಲಿವೆ. ಎಲ್ಲೋ ಕಳೆದು ಹೋಗಿದ್ದರೆನೋ ಎಂಬ ಭಾವನೆಗಳನ್ನು ದೂರ ತಳ್ಳಿ ನಾವಿಲ್ಲೇ ಎಂದು ಅಂಗಳದಲ್ಲೆಲ್ಲ ಜಿಗಿದಾಡುವ ಕ್ಷಣಗಳು ಕಣ್ಣ ತುಂಬಲಿವೆ.