ಗುರುವಾರ, ಸೆಪ್ಟೆಂಬರ್ 18, 2014

ಹೈದ್ರಾಬಾದ್ ಕರ್ನಾಟಕ - ಸೆಪ್ಟಂಬರ್ ೧೭



ಸಂಶೋಧನೆ ಇತಿಹಾಸವನ್ನು ಕೆದಕಿ ನಮಗೆ ಗತಿಸಿಹೋದ ಘಟನೆಗಳನ್ನು ವಿವರವಾಗಿ ಹರವಿ ಇಡುತ್ತದೆ. ಅದಕ್ಕೆ ಸಂಶೋಧಕನ ಪಾತ್ರ ಮಹತ್ವದ್ದು. ತನಗೆ ಆಧಾರ ಹಾಗೂ ಸಾಕ್ಷ್ಯಾಧಾರಗಳ ಮೂಲಕ ಗತಿಸಿದ ಘಟನೆಗಳನ್ನು ಯಾವುದೇ ಪೂರ್ವಗ್ರಹ ಪೀಡಿತರಾಗದೆ ವಿವರಿಸಬೇಕು. ಇಲ್ಲದೇ ಹೋದರೆ ಅದೊಂದು ಕಟ್ಟು ಕಥೆಯಾಗಿ ಬಿಡುತ್ತದೆ. ಹೈದ್ರಾಬಾದ್ ಕರ್ನಾಟಕದ ಪ್ರದೇಶ ಇಂದು ಅಂಥ ಕಟ್ಟು ಕಥೆಗಳಲ್ಲಿ ರಚಿತವಾಗದೇ ವಸ್ತು ಸ್ಥಿತಿಯ ದೊರಕಿದ ಆಧಾರದಿಂದಲೇ ಹೇಳಿ ಮುಂದಿನ ಜಗತ್ತಿಗೆ ಸ್ಪಷ್ಟ ಮಾಹಿತಿ ನೀದಬೇಕಾಗಿದೆ.

ಜಹಗೀರ ಗುಡದೂರ ಒಂದು ಸಣ್ಣ ಗ್ರಾಮ. ಹೈದ್ರಾಬಾದ್ ಕರ್ನಾಟಕದ ಪ್ರದೇಶಕ್ಕೆ ಒಳಪಟ್ಟಿದ್ದು. ಕಳೆದ ಎರಡು ಮೂರು ವರ್ಷಗಳ ಹಿಂದೆ ಪ್ರೌಢಶಾಲೆಯ ಬಳಿ ಒಂದು ಸ್ಮಾರಕವನ್ನು ಕಟ್ಟಿಸಿದರು. ಹುತಾತ್ಮರಾದ ಅಲೀಸಾಬ್ ಹಾಗೂ ವಾಲೀಕರರನ್ನು ಸಾಂಕೇತಿಕವಾಗಿ ನೆನೆಯುವಂಥ ಕಾರ್ಯವನ್ನು ಇಲ್ಲಿ ಮಾಡುವ ಪ್ರಯತ್ನ. ರಜಕಾರಾರ ಸೇನೆಯು ಇಲ್ಲಿಂದ ಸಾಗುತ್ತಿರುವಾಗ ಅವರ ಮೇಲೆ ಈ ಊರಿನ ಗುಂಪೊಂದು ದಾಳಿ ಎಸಗಿತು. ಆದ್ರೆ ಗುಂಪಿನಲ್ಲಿ ಯಾರ ಹತ್ತಿರವು ಶಸ್ತ್ರಗಳಿಲ್ಲದೇ ಕಲ್ಲು, ಕೋಲುಗಳಿಂದ ದಾಳಿ ಮಾಡಿದರು. ರಜಾಕಾರರ ಬಂದೂಕಿನ ಗುಂಡಿಗೆ ಹೆದರಿದ ಗುಂಪು ಅದರಲ್ಲಿ ಅಲೀಸಾಬ್ ಹಾಗೂ ವಾಲೀಕರ್ ಬಲಿಯಾದವರು ಎಂದು ಹೇಳುತ್ತಾರೆ. ಆದ್ರೆ ಹಳ್ಲಿಯ ಹಿರೀಕರು ತಮ್ಮದೇ ಆದ ಮಾತುಗಳನ್ನು ಆಡುತ್ತಾ ಲಡಾಯಿಯ ಕುರಿತು ಭಿನ್ನತೆಯನ್ನು ಬಿಚ್ಚಿಡುತ್ತಿದ್ದಾರೆ.

ಸ್ವತಂತ್ರದ ದಿನಗಳಲ್ಲಿ ಇಡೀ ರಾಷ್ಟ್ರವೇ ಒಂದಾದರೆ ನಿಜಾಮನ ಸಂಸ್ಥಾನ ವಿಲೀನಕ್ಕೆ ಮಣಿಯದೇ ಹೋಯಿತು. ಹಳ್ಳಿ ಹಳ್ಳಿಯಗಳಲ್ಲಿ ಈ ಕುರಿತು ಚರ್ಚೆಗಳಾಗತೊಡಗಿದವು. ಪ್ರತ್ಯೇಕತೆಯೇ ಬೇಡವೆಂದು ಹಲವಾರು ದನಿಗಳನ್ನು ಹತ್ತಿಕ್ಕಲು ನಿಜಾಮನ ಸೇನೆ ಮುಂದಾಯಿತು. ಆದರೆ ಸರ್ದಾರ್ ವಲ್ಲಭಾಬಾಯಿ ಪಟೇಲ್ರ ಆಗಮನದಿಂದ ಆದ ಬದಲಾವಣೆ, ಸಂಪೂರ್ಣ ರಾಷ್ಟ್ರದ ಒಗ್ಗಡೂವಿಕೆಯಾಯಿತು. 

 ಆದರೆ ಇಂದು ಮುಕ್ಯವಾಗಿ ಮಕ್ಕಳಿಗೆ ಇತಿಹಾಸದ ಆ ದಿನಗಳ ಕುರಿತು ಹೇಳುವಾಗ ವಹಿಸುವ ಎಚ್ಚರಿಕೆ, ವಸ್ತು ಸ್ಥಿತಿಯ ಆಧಾರಗಳೇ ಅತ್ಯಂತ ಮುಖ್ಯವಾದದ್ದು. ನಾವು, ನಮ್ಮ ಸ್ಥಳೀಯ ದಿಂದ ರಾಷ್ಟ್ರ ಮಟ್ಟದ ರಾಜಕಾರಣೀಗಳ ಹೇಳಿಕೆಗಳು ಅದು ಭಾಷಣದ ಉಮೇದಿನಲ್ಲಿ ಏನೆಲ್ಲ ಮಾತನಾಡದೇ ಮಕ್ಕಳಿಗೆ ಅರ್ಥವಾಗುವಂತೆ ಬಿಡಿಸಿ ಹೇಳಬೇಕಾಗಿದೆ. ಹೈದ್ರಾಬಾದ್ ಕರ್ನಾಟಕ ದಿನಾಚರಣೆಯನ್ನು ೧೯೯೮ ರಿಂದ ಆಚರಿಸುತ್ತಾ ಬರಲಾಗುತ್ತಿದೆ. ರಾಜಕಾರಣಿ, ಶಿಕ್ಷಕ, ಸಂಶೋಧಕನ ಹೇಳಿಕೆಗಳು ಕಟ್ತು ಕಥೆಯಾಗದೇ ಆಧಾರಗಳಿಂದಲೇ ಮಾತನಾದುವಂತಾಗಲಿ.