ಮಕ್ಕಳಲ್ಲಿ ನಾಟಕದ ಕುರಿತು ಕೊಂಚ ಹಿಂಜರಿಕೆ ಇರುವುದನ್ನು ನಾನು ಕಂಡಿದ್ದೇನೆ. ಕಾರಣ ಹಲವಾರು ಇವೆ. ಆದರೆ ನಿಜ ಅರ್ಥದಲ್ಲಿ ವಿವರಿಸುವಲ್ಲಿ ಮಕ್ಕಳಿಗೆ ಮುಟ್ಟಿಸುವ ಹಂತ ಎಲ್ಲೋ ಕಡಿಮೆಯಾಗುತ್ತಿದೆ ಎಂಬ ಭಾವ ಯಾಕೆಂದರೆ ಅಧುನಿಕ ರಂಗಭೂಮಿಯ ಕುರಿತು ಲವಲೇಶ ಕಾಣದ ಈ ಪ್ರದೇಶಗಳಲ್ಲಿ ನಾವು ವಿದ್ಯಾರ್ಥಿಗಳಿಗಾಗಲಿ ಅವರ ಪಾಲಕರಿಗೆ ಅರ್ಥೈಸುವ ಹೊತ್ತಿಗೆ ಸಮಯ ಮುಗಿದೇ ಹೋಗಿರುತ್ತದೆ. ವಿದ್ಯಾರ್ಥಿಯನ್ನು ಮೊದಲ ಹಂತದಲ್ಲಿಯೇ ರಂಗಭೂಮಿಯ ನಟನನ್ನಾಗಿಸಲು ನಾವಿಲ್ಲಿ ಪ್ರಯತ್ನ ಎಂದಿಗೂ ಮಾಡಿಲ್ಲ ಕಾರಣ, ವಿದ್ಯಾರ್ಥಿಗಳಿಗೆ ಪ್ರಾಥಮಿಕವಾಗಿ ಪ್ರಪಂಚವನ್ನು ತಮ್ಮ ಕಣ್ಣುಗಳಿಂದಲೇ ನೋಡುವಂಥ ವಾತಾವರಣವನ್ನು ಕಲ್ಪಿಸಿಕೊಡಬೇಕಾಗಿದೆ. ನಮ್ಮ ಗ್ರಾಮೀಣ ಪ್ರದೇಶದಲ್ಲಿ ಅದು ಗೂಳೆ ಹೋಗುವ ಇಂಥಹ ಸ್ಥಳಗಳ ಪೋಷಕರು ಮಕ್ಕಳ ಶೈಕ್ಷಣಿಕ ನೆಲೆಯಲ್ಲಿ ದೃಷ್ಟಿ ಹಾಯಿಸುವುದು ತುಂಬಾ ಕಷ್ಟ. ಆದರೆ ಕಾಲೇಜು ಹಂತದಲ್ಲಿ ವಿದ್ಯಾರ್ಥಿಗಳ ಭಾಗುವಹಿಸುವಿಕೆ ಆರೋಗ್ಯಕರವಾಗಿ ಸ್ಪರ್ಧಾ ಸ್ಪೂರ್ತಿಯಿಂದ ಎಷ್ಟರ ಮಟ್ಟಿಗೆ ಇದ್ದು ನಾವು ಕಂಡಿದ್ದೇವೆ. ಕಾಲೇಜುಗಳಲ್ಲಿ ನಡಿಯುವ ವಿಚಾರ ಸಂಕಿರಣಗಳಲ್ಲಿ, ಗೋಷ್ಠಿಗಳಲ್ಲಿ, ಚರ್ಚೆ - ಸಂವಾದಗಳಲ್ಲಿ ನಮ್ಮ ವಿದ್ಯಾರ್ಥಿಗಳ ಭಾಗುವಹಿಸುವಿಕೆಯನ್ನು ಕಾಣಲು ಆಗುತ್ತಲೇ ಇಲ್ಲ. ಪ್ರೌಢಶಿಕ್ಷಣದ ನಂತರ ಮಕ್ಕಳಲ್ಲಿ ಸಂಘಟನಾ ಸಾಮರ್ಥ್ಯವನ್ನು ಕಾಣಲು ಇಚ್ಚಿಸುತ್ತೇನೆ. ಪ್ರಶ್ನಿಸುವ ಇಲ್ಲವೇ ಹುಡುಕಾಟವನ್ನು ನಡೆಸುವ ಛಲ ಅವರಲ್ಲಿ ಸದಾ ಕಂಡರೆ ಒಳ್ಳೆಯದು. ಆದರೆ ಅದು ಸಾಧ್ಯಾವಾಗಿದೆಯೇ ಎನುವುದು. ಮಕ್ಕಳು ತಮ್ಮ ಪೋಷಕರಿಗೆ ತಿಳಿಸಬೇಕು ನಾನು ಸರಿಯಾದ ಮಾರ್ಗದಲ್ಲಿಯೇ ಇದ್ದೇನೆ ಎಂದು. ದುಡಿದು ಬದುಕುವ ಜನರಲ್ಲಿ ಮಗ/ಮಗಳ ಕುರಿತು ಶಿಕ್ಷಕರಲ್ಲಿ ವಿಚಾರಿಸುವ ಸಮಯವನ್ನು ಹೊಂದಿಸಿಕೊಳ್ಳದೇ ಇದ್ದರೆ ನಮ್ಮ ಮಕ್ಕಳನ್ನು ನಾವು ಎಂದಿಗೂ ದೊಡ್ಡ ಹುದ್ದೆಯಲ್ಲಿ ಕಾಣಲು ಖಂಡಿತ ಸಾಧ್ಯಾವಿಲ್ಲ. ಮಕ್ಕಳನ್ನು ಶಾಲೆಯಲ್ಲಿ ಭಾಗುವಹಿಸುವಿಕೆಯನ್ನು ಕಂಡು ಅವರಿಗೆ ಇನ್ನೂ ಹೆಚ್ಚಿನ ಮಟ್ಟದಲ್ಲಿ ಭಾಗವಹಿಸುವ ಮಾತುಗಳನ್ನು ಆಡಿದರೆ ಮಕ್ಕಳು ಎಂದಿಗೂ ಇಂದೆ ಉಳಿಯುವುದಿಲ್ಲ ಸದಾ ಮುಂದೆ ಬರುವ ಪ್ರಯತ್ನ ಮಾಡುತ್ತಾರೆ. ಸೋತರು ಹೆದರಬೇಡ ಪ್ರಯತ್ನ ಪಡು ಮತ್ತೇ ನೀ ಗೆಲ್ಲುತ್ತೀ ಎಂದಾಗ ಕಂಡಿತ ಮಗು ತನ್ನ ಆತ್ಮ ವಿಶ್ವಾಸವನ್ನು ಕಳೆದು ಕೊಳ್ಳದೇ ಉನ್ನತದತ್ತ ಮುಖ ಮಾಡುತ್ತಾನೆ.
ಸೋಮವಾರ, ಆಗಸ್ಟ್ 12, 2013
ಸರ್ಕಾರಿ ಶಾಲೆಯ ರಂಗ ಚಟುವಟಿಕೆಗಳು
ರಂಗ ಚಟುವಟಿಕೆಯ ಆಧಾರದಿಂದ ಮಕ್ಕಳಿಗೆ ಹೊಸತನದ ಪಾಠವನ್ನು ಹೇಳಿಕೊಡಲು ಸಾಧ್ಯವೆಂದು ಪ್ರಸ್ತುತ ನನ್ನ ಸಹೋಧ್ಯೋಗಿಗಳು ಮಾತಾನಾಡುತ್ತಿರುವುದನ್ನು ಕಂಡು ನನ್ನನ್ನು ನಾನೇ ನಂಬಲಾಗಲಿಲ್ಲ. ಈ ವಾತವರಣ ಬರಲು ನಾನು ಐದು ವರ್ಷ (ಡಿಸೆಂಬರ್ ಗೆ) ಕಾಯಬೇಕಾಯಿತು. ಆದರೆ ಇದು ಸಂಪೂರ್ಣ ಸತ್ಯವು ಅಲ್ಲ. ಆ ದಿನಗಳು ದೂರಿಲ್ಲ ಎಂಬ ಭಾವನೆಯು ನನ್ನ ಗೆಳೆಯರು, ಹಿತೈಷಿಗಳು ನನ್ನೊಂದಿಗೆ ಹಂಚಿ ಕೊಂಡಿದ್ದು ಇದೆ. ನಾಟಕ ಎಂದರೆ ಕೇವಲವಾಗಿ ಮಾತಾನಾಡುತ್ತಿದ್ದ ನಮ್ಮ ಉತ್ತರದ ಭಾಗದಲ್ಲಿ ಹೊಸತನದ ಅಧುನಿಕ ನಾಟಕಗಳ ಕುರಿತು ಪಾಠವನ್ನು ಮಾಡುವ ನಾವು ನಿಲ್ಲಲು ಸಾಧ್ಯಾವೇ ಎಂಬ ಪ್ರಶ್ನೆಗಳು ಹುಟ್ಟಿದ್ದು ಇದೆ. ಪ್ರೌಢಶಾಲೆಗಳಲ್ಲಿ ನಾಟಕ ಶಿಕ್ಷಕರನ್ನು ೧೯೮೨ ರಲ್ಲಿಯೇ ಆಯ್ಕೆ ಪ್ರಾರಂಭಿಸಿದ್ದರೂ ಇಲ್ಲಿಯವರೆಗೂ ೬೦ ರಿಂದ ೭೦ ರ ಸಂಖ್ಯೆಯು ದಾಟಿಲ್ಲ ಆದರೆ ಇದು ಹೆಚ್ಚಿನ ಶಿಕ್ಷಕರನ್ನು ಮೈಸೂರು ವಿಭಾಗದಲ್ಲಿ ಸರ್ಕಾರ ನಾಟಕ ಶಿಕ್ಷಕರನ್ನು ತೆಗೆದು ಕೊಂಡಿದೆ. ಗುಲ್ಬಾರ್ಗ ಹಾಗೂ ಬೆಳಗಾವಿ ವಿಭಾಗದಲ್ಲಿ ತುಂಬಾ ಕಡಿಮೆ.
ಕರ್ನಾಟಕ ಸಾಹಿತ್ಯಕವಾಗಿ, ಸಾಂಸ್ಕೃತಿಕವಾಗಿ ಎಷ್ಟೇ ಹಿಂದಿನಿಂದಲೂ ಬಂದರೂ ಸಮೃದ್ಧಿಯಾಗಿ ಇಂದಿನ ವಿದ್ಯಾರ್ಥಿಗಳಲ್ಲಿ ಕಾಣಲು ಸಾಧ್ಯಾವಾಗಿಲ್ಲ. ನೀನಾಸಂ,ರಂಗಾಯಣ, ಶಿವಸಂಚಾರ ರಂಗ ತಂಡಗಳು ನಿರ್ಮಾಣವು ಉತ್ತರ ಕರ್ನಾಟಕದ ಭಾಗಗಳಲ್ಲಿ ಕಾಣಲು ಸಾಧ್ಯಾವಾಗಿಲ್ಲ. ಗುಲ್ಬಾರ್ಗದಲ್ಲಿ ರಂಗಾಯಣ ನಿರ್ಮಾಣಕ್ಕೆ ಬಡ್ಜ್ ಟ್ ನಲ್ಲಿ ಘೋಷಣೆಯನ್ನು ಮಾಡಿದ್ದಾರೆ ಆದರೆ ನಮ್ಮ ಗ್ರಾಮೀಣ ಜನರಿಗೆ ಹಾಗೂ ಮಕ್ಕಳಿಗೆ ಇನ್ನೂ ಎಷ್ಟು ವರ್ಷಗಳ ಕಾಲ ಕತ್ತಲೆಯಲ್ಲಿ ಇಡುತ್ತೇವೆ ಎಂದು ತಿಳಿಯುತ್ತಿಲ್ಲ. ಈಗ ಇರುವ ನಾಟಕ ಶಿಕ್ಷಕರನ್ನು ಅವರ ಕಾರ್ಯಗಳನ್ನು ಅವರ ಶಾಲೆ-ಹಳ್ಳಿಗಳಿಗೆ ಬೇಟಿ ನೀಡಿ ಇಲಾಖೆಯ ತಜ್ಞರು ಸೂಕ್ಷ್ಮವಾಗಿ ಗಮನಿಸಬೇಕಾಗಿದೆ. ರಂಗ ಚಟುವಟಿಕೆಗಳ ಕಾರ್ಯಗಳಿಂದ ಆದ ಬದಲಾವಣೆಗಳನ್ನು ಮಕ್ಕಳಿಂದಲೇ ಕಾಣಬಹುದು. ಸಣ್ಣ ಸಣ್ಣ ಕಾರ್ಯ ಚಟುವಟಿಕೆಗಳಿಂದ ಮಕ್ಕಳಲ್ಲಿ ಇರುವ ಉತ್ಸಾಹ ಅವರು ಒಂದು ಸಂಪೂರ್ಣ ನಾಟಕವನ್ನು ಎಲ್ಲ ಪರಿಕರ, ರಂಗ ಸಜ್ಜಿಕೆ, ರಂಗ ವಿನ್ಯಾಸ, ಬೆಳಕಿನ ಹಾಗೂ ವೇಷ ಭೂಷಣಗಳೊಂದಿಗೆ ಮಕ್ಕಳು ವೇದಿಕೆಯ ಮೇಲೆ ಕಂಡರೆ ಅವರಲ್ಲಿ ಹುಟ್ಟುವ ಅಭಿನಯವನ್ನು ಕಾಣುವ ಅವರ ತಂದೆ ತಾಯಿಗಳ ಕಣ್ಣುಗಳಲ್ಲಿ ಉಕ್ಕುವ ಪ್ರೀತಿಯನ್ನು ಕಾಣುವುದೇ ಬಹಳ ಮುಖ್ಯ.
ಮಂಗಳವಾರ, ಆಗಸ್ಟ್ 6, 2013
ಹಾಲು ವಿತರಣೆಯ ಮೊದಲ ದಿನ
ಗೆಳೆಯರೊಬ್ಬರು ಈ ಛಾಯ ಚಿತ್ರಗಳನ್ನು ನೋಡಿ ಪ್ಲಾಸ್ಟಿಕ್ ಬಳಕೆ ಮಾಡಬಾರದಿತ್ತು ಎಂದು ಸಲಹೆ ನೀಡಿದರು. ಹೌದು ಅನಿವಾರ್ಯ ಕಾರಣಗಳಿಂದ ನಮ್ಮ ಶಾಲೆಯಲ್ಲಿ ಮೊದಲದಿನ ಪ್ಲಾಸ್ಟಿಕ್ ಬಳಕೆ ಮಾಡಲೇ ಬೇಕಾಯಿತು. ಮಕ್ಕಳಲ್ಲಿ ಸರ್ಕಾರದ ಹೊಸತನಗಳು ಸಂತೋಷವನ್ನು ಉಂಟು ಮಾಡ ಬೇಕಾಗಿರುವುದು. ಹಾಲು ಹಾಲಿನಂಥಹ ಮನಸ್ಸುಗಳಿಗೆ ಉನ್ನತ ಶಿಕ್ಷಣದ ಹಾದಿಯತ್ತ ಮಕ್ಕಳು ಸಾಗಲು ಒಂದು ಒಳ್ಳೆಯ ವೇದಿಕೆಯಾಗಬೇಕಿದೆ. ಶಿಕ್ಷಕರೆಲ್ಲ ಈ ಕಾರ್ಯಕ್ರಮದಲ್ಲಿ ಮಕ್ಕಳೊಂದಿಗೆ ಭಾಗವಹಿಸಿದ್ದು ಅದು ಯಾವಗಲೂ ನಿರಂತರವಾಗಿ ಮಕ್ಕಳ ಶೈಕ್ಷಣಿಕ ಸಮಸ್ಯಗಳನ್ನು ಉಚಿತ ಸಮಯದಲ್ಲಿ ಬಗೆಹರಿಸುವುದು ಮಕ್ಕಳ ಜ್ಞಾನ ವೃದ್ಧಿಯಾಗಲು ಸಾಧ್ಯತೆ ಇದೆ.
ಸೋಮವಾರ, ಜುಲೈ 29, 2013
ಎಚ್.ಎ. ಅನಿಲ್ ಕುಮಾರ ಬೇಟಿ
| H.A.Anil Kumar |
ಎಚ್.ಎ. ಅನಿಲ್ ಕುಮಾರ ಚಿತ್ರಾಕಲಾ ಪರಿಷತ್ ನ ಪ್ರಾಧ್ಯಾಪಕರು ನಮ್ಮ ಮಕ್ಕಳ ಕಾರ್ಯ ಚಟುವಟಿಕೆಗಳನ್ನು ಗಮನಿಸಲು ಆಗಮಿಸಿದ್ದರು. ಅನುಪಮಾ ಪ್ರಕಾಶ ನಮ್ಮ ಯೋಜನೆಯ ಯೋಜನಾಧಿಕಾರಿಗಳು ತಿಳಿಸಿದಂತೆ ಅನಿಲ್ ಬರ್ತಾರೆ, ನೀನು ಮಾಡಿದ ಕಾರ್ಯಗಳ ಕುರಿತು ತಿಳಿಸು ಜೊತೆಗೆ ಏನೇನು ತೋರಿಸಲಿಕ್ಕೆ ಆಗುತ್ತದೆ ಅವುಗಳೆಲ್ಲವನ್ನು ಅವರಿಗೆ ತೋರಿಸು. ಎಂದಾಗ ನಾನು ಅನಿಲ್ ಕುಮಾರ ಅವರ ಕುರಿತು ತಿಳಿಯಲು ಪ್ರಯತ್ನಿಸಿದೆ. ಪ್ರಜ್ಞಾ ಹೇಳಿದ್ದು "ಅಲ್ಲಾ ಕಣೋ ಅವರಿಗೆ ಕೇಂದ್ರ ಅಕಾಡೆಮಿ ಪ್ರಶಸ್ತಿ ಬಂದಿದೆಯೋ" ಎಂದಾಗ ನನ್ನ ಎದೆ ಧಸಕ್ಕೆಂದಂತಾಯಿತು. ಯಾಕೆಂದರೆ ಇಷ್ಟೆಲ್ಲ ಖ್ಯಾತ ವ್ಯಕ್ತಿಗಳು ನಮ್ಮ ಸಣ್ಣ ಹಳ್ಳಿಯ ಶಾಲೆಗೆ ಬೆಂಗಳೂರಿನಿಂದ ಬರುವಂಥಹ ವ್ಯಕ್ತಿಗೆ ಯಾವ ತರಹದಲ್ಲಿ ಉಪಚರಿಸಬೇಕು ಎಂದು ಸಂಕಷ್ಟದಲ್ಲಿ ಬಿದ್ದೆ. ಅವರ ಬರುವ ದಿನಗಳ ಲೆಕ್ಕ ಸಾಗುತ್ತಲೇ ಇತ್ತು. ಈ ಕಡೇ ನಮ್ಮ ಮಕ್ಕಳ ತಾಲೀಮು ನಡೆದಿದ್ದೆ. ಮಳೆ-ಗಾಳಿಗೆ ತಲೆ ಕೊಡದೇ ದಿನಾಲೂ ಮಧ್ಯಾಹ್ನದ ಒಂದು ಅವಧಿಯನ್ನು ಮುಗಿಸಿಕೊಂಡು ನಾಟಕದ ಅಭ್ಯಾಸ ನಡದೇ ಇತ್ತು. ಕುತೂಹಲವು ಇಲ್ಲಿ ಇದ್ದದ್ದು ಕಾಣುತ್ತಿತ್ತು ಕಾರಣ ನಾಟಕ ಅಂತ್ಯ ಹೇಗೆ ಎನ್ನುವುದು. ಶಿಕ್ಷಕರು ಕೊನೆ ಹೇಗೆ ಮಾಡುತ್ತೀರಿ ಮತ್ತು
ಯಾವಾಗ ಎಂಬ ಪ್ರಶ್ನೆಗಳು ಸದಾ ನನ್ನ ಕಿವಿಯಲ್ಲಿ ಕೇಳುತ್ತಿದ್ದನ್ನು ಅಷ್ಟೇ ಆನಂದದಿಂದ ಆಲಿಸುವ ಕಾರ್ಯವನ್ನು ಮಾಡುತ್ತಿದ್ದೆ. ನನಗೆ ಅನಿಲ್ ಅವರು ಬಂದಾಗ ಈ ಮಕ್ಕಳ ತಾಲೀಮು ಇಷ್ಟ ಆಗಬಹುದೇ ಎಂಬುವ ಮತ್ತು ಅವರು ಬಂದ ಸಮಯದಲ್ಲಿ ಮಳೆ ಬರದೇ ಇರಲಿ ಎನ್ನುವುದು. ತಾಲೀಮನ್ನು ಕೋಣೆಯಲ್ಲಿ ತೋರಿಸಲಿಕ್ಕೆ ಆಗೋದೇ ಇಲ್ಲ. ಇರೋ ವೇದಿಕೆಯ ಕಟ್ಟೆಯ ಮೇಲೆ ನಮ್ಮ ಮಕ್ಕಳ ತಾಲೀಮಿನ ಆಯ್ದ ಭಾಗವನ್ನು ಇಡೋದು. ಸದಾ ಧಾರವಾಡದಿಂದ ಯಾರೇ ಅತಿಥಿಗಳನ್ನು ಕರೆದುಕೊಂಡು ಬರುವ ಸಾರಥಿ ರಾಮುವಿಗೆ ಬೆಳಿಗ್ಗೆನೆ ಪೋನಾಯಿಸಿದೆ. ರಾಮು ನಾನು ಇಲ್ಲಿಂದ ಬಿಡುವಾಗ ಮಿಸ್ ಕಾಲ್ ಕೊಡ್ತೀನಿ ಸಾರ್ ಅಂದ. ಇದು ನಮ್ಮ ಸಂಕೇತ ಸಿದ್ಧತೆಯಲ್ಲಿ ಇರಲು. ಗಡ ದಿಂದ ಹಿಡಿದು ಶಾಲೆಗೆ ಹೋಗುವ ವರೆವಿಗೂ ಮಳೆಯ ಹನಿ ಸುರಿಯುತ್ತಲೇ ಇತ್ತು.
ಬಿಸಿಲೇ ಸದಾ ಇರುವ ನಮ್ಮ ಪ್ರದೇಶಗಳಲ್ಲಿ ಯಾರೋ ಬರುವ ಸಮಯಗಳಲ್ಲಿ ಮಳೆ ಅನಿರೀಕ್ಷಿತ ಎಂಬಂತೆ ಬರುವುದು ಶಿಕ್ಷಕರೆಲ್ಲರಲ್ಲೂ ಚಿಂತೆಗೆ ಕಾರಣವಾಗಿತ್ತು. ಅನಿಲ್ ಸಾರ್ ಬಂದಾಕ್ಷಣ ನಮ್ಮ ಮಕ್ಕಳ ನೋಟವೆಲ್ಲ ಅವರತ್ತಲೇ ನೆಟ್ಟಿರುತ್ತದೆ. ಶಿಕ್ಷಕರೆಲ್ಲ ಪರಿಚಯ ಚಹಾ ಆದ ತಕ್ಷಣ ನಾವು ಕಂಪ್ಯೋಟರ್ ಕೋಣೆಗೆ ತೆರೆಳಿ ಅಲ್ಲಿ ಈಗಾಗಲೇ ಸಿದ್ಧ ಪಡಿಸಿದ್ದ ನಮ್ಮ ಇಲ್ಲಿನವರೆಗಿನ ಚಟುವಟಿಕೆಗಳ ಕುರಿತು ಅಪೂರ್ಣವಾದ ಸಾಕ್ಷ್ಯಚಿತ್ರವನ್ನು ವಿಕ್ಷಿಸಲು ಮತ್ತು ಅದು ನಮ್ಮ ವಿಕ್ಷಕರ ಇಂದಿನ ಒಂದು ಕಾರ್ಯವೆಂದೇ ತೆರಳಿದೆವು. ಹತ್ತು ನಿಮಿಷದ ಚಿತ್ರವನ್ನು ವಿಕ್ಷೀಸಿದ ನಂತರ ಆದ ಚಟುವಟಿಕೆಗಳನ್ನು ವಿವರವಾಗಿ ಕೇಳುತ್ತಾ ನಮ್ಮ ಕೋಣೆಯ ಹಿಂಬಾಗದಿಂದ ಸಾಗಿದೆವು. ಇಲ್ಲಿ ನಮ್ಮ ಮಾತುಗಳನ್ನು ಕ್ಯಾಮರದಲ್ಲಿ ಸೆರೆ ಹಿಡಿಯುತ್ತಿದಿದ್ದು ಹತ್ತನೆಯ ತರಗತಿಯ ವಿದ್ಯಾರ್ಥಿ ಮಲ್ಲಿಕಾರ್ಜುನ ತೆಂಗಿನಕಾಯಿ. ತರಗತಿ ಕೋಣೆಯ ಹಿಂಬಾಗದಿಂದ ಸಾಗೋಣವೆಂದು ಅನಿಲ್ ಅವರು ಮಾತಾನಾಡುತ್ತಾ ತೆರಳಿದಾಗ ವಿದ್ಯಾರ್ಥಿ ಮಲ್ಲಿಕಾರ್ಜುನ ಹಾಗೂ ರುದ್ರಯ್ಯ ನಿಗೆ ಹಿಡಿಸಲಾರದಾಗಿತ್ತು. ಕಾರಣ ಅವರೇ ಹೇಳುವಂತೆ 'ಸಾರ್ ಕಸ,ಪೇಪರ್,ಎಲ್ಲವನ್ನಾ ನಾವು ಕಿಟಕಿಯಿಂದ ಹೊರ ಹಾಕ್ತೀವಿ. ಈ ಸಾರ್ ಅದೇ
ಗುರುವಾರ, ಜುಲೈ 25, 2013
ಸೋಮವಾರ, ಜುಲೈ 1, 2013
ಚಿಲ್ ಜರಿ ಗ್ರಾಮದ ಹಾಡುಗಳ
ಜಾನಪದದ ಹುಡುಕಾಟದಲ್ಲಿ ನಾವು ಸ್ಥಳೀಯ ಗ್ರಾಮಕ್ಕೆ ಬೇಟಿ ನೀಡಿ ಅವರಲ್ಲಿ ಜಾನಪದ ಕುರಿತು ನಾವು ಮಾಡುವ ದಾಖಲೀಕರಣ ಕುರಿತು ಹೇಳಿದ ಮಾತುಗಳು ಅಂಥಹ ಆಸಕ್ತಿಯನ್ನನೇನು ಮೂಡಿಸುತ್ತಿರಲಿಲ್ಲ ಇದು ಕೇವಲ ತಮ್ಮ ಮನೆಯ ಶಾಸ್ತ್ರದ ಕಾರ್ಯಕ್ರಮಗಳಲ್ಲಿ ಹಾಡುವಂಥ ಹಾಡುಗಳನ್ನು ಇವರು ಚಿತ್ರೀಕರಣ ಮಾಡಿಕೊಂಡು ಏನನ್ನು ಮಾಡುತ್ತಾರೆ ಎಂಬ ಪ್ರಶ್ನೆಗಳು ಊರಿನವರಲ್ಲಿ ಎಲ್ಲರಿಗೂ ಮೂಡುತ್ತಲೇ ಇದ್ದವು. ಆದರೆ ಆ ಹಳ್ಳಿಯ ಮುಗ್ಧ ಜನರಿಗೆ ತಿಳಿದಿಲ್ಲ ಜನಪದ ಹಿಂದಿನಿಂದಲೂ ಜನರ ಬದುಕನ್ನು ಕಟ್ಟುತ್ತಾ ಬಂದಿದ್ದು ಅವುಗಳ ಜ್ಞಾನ ಹೊಂದಿದ್ದ ತಲೆಮಾರು ಮುಂದಿನ ಹಂತಕ್ಕೆ ಸಾಗದೇ ಕೊನೆಗೊಳ್ಳುವ ಸ್ಥಿತಿಯು ನಿರ್ಮಾಣವಾಗಿರುವ ಈ ಸಂರ್ಧಭದಲ್ಲಿ ಹಿರಿಯರಿಂದ ಹಾಡುಗಳ ಜೊತೆಗೆ ಅನುಭವಗಳನ್ನು ಕೇಳಿ ತಿಳಿದುಕೊಂಡು ಅವನ್ನು ದಾಖಲೀಕರಣ ಮಾಡುವುದರೊಂದಿಗೆ ಇಂದಿನ ಮಕ್ಕಳಿಗೆ ಶಿಕ್ಷಣದ ಜೊತೆಗೆ ಜಾನಪದದ ಹಲವು ಪ್ರಕಾರಗಳನ್ನು ವಿದ್ಯಾರ್ಥಿಗಳೊಂದಿಗೆ ಅವರ ಮನೆಗಳಿಗೆ ತೆರೆಳಿ ಕಲೆತುಕೊಳ್ಳಬೇಕಾಗಿದೆ. ವೇದಿಕೆ, ಸಮಾರಂಭ ಎಂದರೆ ಆ ಜೀವಗಳು ಮುಜುಗರ ಪಟ್ಟು ಹಾಡಲು ಹಿಂಜರಿಯುತ್ತಾರೆ. ಮಕ್ಕಳೊಂದಿಗೆ ಅವರನ್ನು ಮಾತಿಗೆ ಹಚ್ಚಿದರೆ ಆ ಪಾಲಕರು ತುಂಬಾ ಸಹಜವಾದ ಮಾತುಗಳನ್ನು ಹೊರ ಹಾಕಲು ಸಾಧ್ಯತೆಗಳು ಹೆಚ್ಚು. ಮನೆಯ ಕಾರ್ಯಕ್ರಮದ ಜೊತೆಗೆ ಸ್ತಳೀಯ ಊರಿನ ಆಚರಣೆಗಳಲ್ಲಿ, ಹಬ್ಬದ ಸಂಭ್ರಮದಲ್ಲಿ ಹಾಡುವ ಇವರು ಮಕ್ಕಳಿಗೆ ಕಲಿಯುವ - ಕಲಿಸುವ ವಾತಾವರಣವನ್ನು ಪಾಲಕರೊಂದಿಗೆ, ಶಿಕ್ಷಕರು ಒದಗಿಸಿ ಕೊಡಬೇಕಾಗಿದೆ. ಜೊತೆಗೆ ಮಕ್ಕಳು ಜಾನಪದದ ಕುರಿತು ಹಿರಿಯರಿಂದ ಅನುಭವಗಳನ್ನು ಪಡೆದು ಭವಿಷ್ಯತ್ ಗಾಗಿ ಕಟ್ಟಬೇಕಾಗಿದೆ. ನಮ್ಮ ಹತ್ತಿರದ ಚಿಲ್ ಜರಿ ಗ್ರಾಮ ದಲ್ಲಿ ಶ್ರೀಮತಿ ಪಾರ್ವತಿ , ಶ್ರೀಮತಿ ಶಾಂತಮ್ಮ , ಶ್ರೀಮತಿ ಪಾರವ್ವ , ಶ್ರೀಮತಿ ಪದ್ಮವ್ವ ಹಾಗೂ ನಿರ್ಮಲ ಅವರು ನಮ್ಮ ವಿದ್ಯಾರ್ಥಿನಿಯ ಪ್ರಶ್ನೆಗಳಿಗೆ ಉತ್ತರಿಸುತ್ತಾ ತಮ್ಮ ಕಾಯಕದಲ್ಲಿ ಪ್ರತಿ ನಿತ್ಯ ಹಾಡುಗಳನ್ನು ಹಾಡುವುದು. ತಮ್ಮ ಕಾಯಕ ನಿರಾತಂಕವಾಗಿ ಸಾಗಲು ಯಾವುದೇ ಒತ್ತಡ ಇರುವುದಿಲ್ಲ. ಎಂಬ ಮಾತುಗಳು ನಮ್ಮ ಮಕ್ಕಳಿಗೆ ಹಾಡುಗಳನ್ನು ಕೇಳಿಸುತ್ತಾ ಅನುಭವಗಳನ್ನು ಅಂಚಿಕೊಂಡರು.
'ಎಷ್ಟು ಮಕ್ಕಳು ಇಂದು ಹಾಡುಗಳನ್ನು ಕಲಿಯಲು ನಮ್ಮ ಹತ್ತಿರ ಬರುತ್ತಿದ್ದಾರೆ.... ' ಎಂಬ ನಮ್ಮ ಹಿರಿಯರ ಪ್ರಶ್ನೆಗಳು ಮಕ್ಕಳಿಗೆ ಮೈಮೇಲೆ ಬಂದು ಎರಗಿದಂತಿತ್ತು.
ಶನಿವಾರ, ಜೂನ್ 29, 2013
ಬುಧವಾರ, ಜೂನ್ 26, 2013
ಸೋಬಾನೆ ಹಾಡುಗಳು
ಮಾಸವ್ವ ಕಳಕಪ್ಪ ಕೃಷ್ಟಪ್ಪನವರು, ಗಂಗಮ್ಮ ಪುಂಡನ ಗೌಡ ಮಾಲೀಪಾಟೀಲ್, ಭೀಮವ್ವ ಹನಮಪ್ಪ ಮಂತ್ರಿ ಮತ್ತು ಶಾಂತವ್ವ ಸಿದ್ದಪ್ಪ ಮೇಟಿ ಇವರೆಲ್ಲರನ್ನು ನಮ್ಮ ವಿದ್ಯಾರ್ಥಿನಿಗಳಾದ ಈರಮ್ಮ ಕೃಷ್ಟಪ್ಪನವರ ಹಾಗೂ ಮೇಘ ಬಡಿಗೇರ ಅವರು ತಮ್ಮ ಮನೆಯ ಹತ್ತಿರ ವ್ಯವಸ್ಥೆ ಮಾಡಿ ಅವರೊಂದಿಗೆ ಹಾಡಿದರು. ಮಕ್ಕಳು ದಿನಾಲೂ ಬಂದು 'ಹಾಡ ಬೇ ' ಅಂತ ಕಾಡ್ತನೇ ಇದ್ದರೂ. ನಮಗೆ ಸಮಯನೇ ಹೊಂದಾಣಿಕೆ ಆಗ್ತಾ ಇರಲಿಲ್ಲ. ಈಗ ಮಕ್ಕಳು ಹಾಡು ಬರಕೊಂಡು ಹಾಡ್ತಾ ಇದ್ರೆ ಖುಷಿ ಆಗ್ತಾದೆ. ಈಗ ಕಾರ್ಯ (ಸೀಮಂತ, ಹಿರೀಮಗಳು ) ಗಳಲ್ಲಿ ಹಾಡೋದಕ್ಕಷ್ಟೇ ಸೀಮಿತ ಆಗಿದೆ. ಕೆಲಸ ಸಮಯದಲ್ಲಿ ಯಾವಾಗಲೋ ಹಾಡೋದು ಆಗಿದೆ. ಮಕ್ಕಳು ಕಲಿತರೆಂದರೇ ನಮಗೂ ಸಂತೋಷ. ಇನ್ನೂ ಹೆಚ್ಚು ಹೆಚ್ಚು ಮಕ್ಕಳಿಗೆ ಹೇಳೋದರ ಜೊತೆಗೆ ಹಾಡುಗಳನ್ನು ಕಟ್ಟಬಹುದು.
ಶುಕ್ರವಾರ, ಮೇ 31, 2013
ಮಕ್ಕಳ ಹೆಜ್ಜೆ ಕುಣಿತ
ಶಾಲಾ ಸರಸ್ವತಿ ಪೂಜೆ ಹಾಗೂ ಎಸ್.ಎಸ್.ಎಲ್.ಸಿ ಮಕ್ಕಳ ಬೀಳ್ಕೋಡುಗೆ
ಸಮಾರಂಭದಲ್ಲಿ ಮಕ್ಕಳೊಂದಿಗೆ ಹಿರಿಯ ಶಿಕ್ಷಕರಾದ ಶ್ರೀ ಸಂಗನಗೌಡ ಪಾಟೀಲ್ ಗುರುಗಳು
ಹಾಗೂ ದೈಹಿಕ ಶಿಕ್ಷಕರಾದ ಜಗದೀಶ್ ರವರು ಹೆಜ್ಜೆ ಕುಣಿತದ ಹಾಡಿಗೆ ಹೆಜ್ಜೆಯನ್ನು ಮಕ್ಕಳೊಂದಿಗೆ
ಸೇರಿ ಹಾಕಿದರು. ಇಲ್ಲಿ ಮಕ್ಕಳೊಂದಿಗೆ ಯಾವುದೇ ಮುಜುಗರ ಪಡದೇ ಶಿಕ್ಷಕರು ಕುಣಿದು
ವಿದ್ಯಾರ್ಥಿಗಳಿಗೆ ಹೆಚ್ಚಿನ ಉತ್ಸಾಹ ತುಂಬುವಲ್ಲಿ ವಹಿಸಿದ ಪಾತ್ರವನ್ನು ಕೊಂಡಾಡಲೇ ಬೇಕಾದದ್ದು.
ನಮ್ಮ ಶಾಲೆಯಲ್ಲಿ ಐ.ಎಫ್ ಎ ವತಿಯಿಂದ "ಮಕ್ಕಳ ಹೆಜ್ಜೆಗಳು ಜಾನಪದದತ್ತ..."
ಕಾರ್ಯಕ್ರಮದಲ್ಲಿ ಊರಿನ ಹಿರಿಯರಿಂದ ಮಕ್ಕಳು ದಿನಾಲೂ ಇಳೆ ಹೊತ್ತಿನಲ್ಲಿ
ಕಾಡಿ-ಬೇಡಿ ಹೆಜ್ಜೆಯ ಕುಣಿತವನ್ನು ಕಲಿತು ಬಂದು ಇಂದು
ಎಲ್ಲ ಶಾಲಾ ಮಕ್ಕಳು-ಶಿಕ್ಷಕರ ಮುಂದೆ ಪ್ರದರ್ಶನ ನೀಡುತ್ತಾ
ಸಂಭ್ರಮದಿಂದ ಹಿರಿಯ ವಿಧ್ಯಾರ್ಥಿಗಳ ಬೀಳ್ಕೋಡುಗೆಗೆ ಸುಂದರತೆಯನ್ನು ನೀಡಿದರು.
ಬುಧವಾರ, ಮೇ 1, 2013
ಜರ್ಮನಿಯ ಕ್ರಿಸ್ಟೋಫ್ ಬೇಟಿ
ಮಕ್ಕಳ ಹೆಜ್ಜೆಗಳು ಯೋಜನೆಯನ್ನು ವೀಕ್ಷಿಸಲು IFA ಬೆಂಗಳೂರಿನ ಯೋಜನಾಧಿಕಾರಿಗಳಾದ ಶ್ರೀಮತಿ ಅನುಪಮಾ ಪ್ರಕಾಶ ರವರೊಂದಿಗೆ ಜರ್ಮನಿಯ ಗೋಥೆ ಇನ್ ಸ್ಟಟ್ಯೂಟ್ ಮ್ಯಾಕ್ಸ್ ಮುಲ್ಲರ ಭವನದ ಶ್ರೀ ಕ್ರಿಸ್ಟೋಫ್ ಅವರು ನಮ್ಮ ಹಳ್ಳಿ ಜಹಗೀರ ಗುಡದೂರ ಶಾಲೆಗೆ ದಿನಾಂಕ 13.03.2013 ಬೇಟಿ ನೀಡಿ ಇಡೀ ದಿನ ನಮ್ಮೊಂದಿಗೆ ಕಳೆದರು. ಮಕ್ಕಳೊಂದಿಗೆ ಶಿಕ್ಷಕರು ಭಾಗವಹಿಸಿ ಸಂವಹನ ಮಾಡಲು ಅನುಕೂಲವಾಯಿತು. ವಿವಿಧ ದೇಶಗಳಲ್ಲಿ ಕಾರ್ಯ ನಿರ್ವಹಿಸಿದ ಕ್ರಿಸ್ಟೋಫ್ ಅವರಿಗೆ ಮಕ್ಕಳ ನೂರಾರು ಪ್ರಶ್ನೆಗಳಿಗೆ ಸರಳವಾಗಿ ಉತ್ತರವನ್ನು ನೀಡಿದರು.
ಗುರುವಾರ, ಫೆಬ್ರವರಿ 14, 2013
ಮೊಹರಂ ಒಂದು ನೋಟ..
![]() |
| ಶ್ರೀ ಆನಂದಪ್ಪ ಕುರಿ |
ಮಕ್ಕಳ ಹೆಜ್ಜೆಗಳು ಯೋಜನೆಯಡಿಯಲ್ಲಿ ನಮ್ಮ ವಿದ್ಯಾರ್ಥಿಗಳಿಗೆ ಇಂದು ಶ್ರೀ ಆನಂದಪ್ಪ ನವರು "ಮೊಹರಂ" ಆಚರಣೆಯ ಹಿನ್ನಲೆ ಹುಟ್ಟು, ಬೆಳೆದು ಬಂದ ದಾರಿ ಸದ್ಯ ಪ್ರಸ್ತುತ ನಮ್ಮ ಊರು ಬೇರೆ ಬೇರೆ ಭಾಗಗಳಲ್ಲಿ ಆಚರಿಸುವ ರೀತಿಗಳನ್ನು ತಮ್ಮ ಉಪನ್ಯಾಸದಲ್ಲಿ ತಿಳಿ ಹೇಳಿದರು ಮಕ್ಕಳಿಗೆ. ನಮ್ಮೊಂದಿಗೆ ಮುಖ್ಯ ಗುರುಗಳು ಹಾಗೂ ಇತರೆ ಶಿಕ್ಷಕರು ಹಾಜರಿದ್ದರು. ಮಕ್ಕಳು ತಾವು ಆಡಿ ಬೆಳೆದ ಈ ಹಬ್ಬ ಆಚರಣೆಗಳ ಹಿನ್ನಲೆಯನ್ನು ಕೇಳಿ ಹುಟ್ಟಿದ ಹಲವಾರು ಪ್ರಶ್ನೆಗಳಿಗೆ ಅತಿಥಿಗಳು ಉತ್ತರ ನೀಡಿದರು. ಇದು ಮಕ್ಕಳ ಜಾನಪದದ ಹುಡಕಾಟದಲ್ಲಿ ಹಿನ್ನಲೆಯ ಜ್ಞಾನ ಪಡೆದಾಗ ಹೆಚ್ಚಿನ ಹೊಳಹುಗಳು ದೊರಕುವ ಆಶಾ ಭಾವದ ಜೊತೆಗೆ ಮಕ್ಕಳಿಗೆ ಹೆಚ್ಚಿನ ಸಹಕಾರ ದೊರಕುವ ದೃಷ್ಟಿ ಇಲ್ಲಿ ಹೊಂದಲಾಗಿತ್ತು.
ಭಾನುವಾರ, ಫೆಬ್ರವರಿ 10, 2013
ಇದಕ್ಕೆ ಸಬ್ಸ್ಕ್ರೈಬ್ ಆಗಿ:
ಪೋಸ್ಟ್ಗಳು (Atom)





