ಮಂಗಳವಾರ, ಆಗಸ್ಟ್ 20, 2013

ತಾಲಿಂ

                               ಮಕ್ಕಳಲ್ಲಿ ನಾಟಕದ ಕುರಿತು ಕೊಂಚ ಹಿಂಜರಿಕೆ ಇರುವುದನ್ನು ನಾನು ಕಂಡಿದ್ದೇನೆ. ಕಾರಣ ಹಲವಾರು ಇವೆ. ಆದರೆ ನಿಜ ಅರ್ಥದಲ್ಲಿ ವಿವರಿಸುವಲ್ಲಿ ಮಕ್ಕಳಿಗೆ ಮುಟ್ಟಿಸುವ ಹಂತ ಎಲ್ಲೋ ಕಡಿಮೆಯಾಗುತ್ತಿದೆ ಎಂಬ ಭಾವ  ಯಾಕೆಂದರೆ ಅಧುನಿಕ  ರಂಗಭೂಮಿಯ  ಕುರಿತು ಲವಲೇಶ ಕಾಣದ ಈ ಪ್ರದೇಶಗಳಲ್ಲಿ ನಾವು ವಿದ್ಯಾರ್ಥಿಗಳಿಗಾಗಲಿ  ಅವರ ಪಾಲಕರಿಗೆ ಅರ್ಥೈಸುವ ಹೊತ್ತಿಗೆ ಸಮಯ ಮುಗಿದೇ ಹೋಗಿರುತ್ತದೆ. ವಿದ್ಯಾರ್ಥಿಯನ್ನು ಮೊದಲ ಹಂತದಲ್ಲಿಯೇ ರಂಗಭೂಮಿಯ ನಟನನ್ನಾಗಿಸಲು ನಾವಿಲ್ಲಿ  ಪ್ರಯತ್ನ ಎಂದಿಗೂ ಮಾಡಿಲ್ಲ ಕಾರಣ, ವಿದ್ಯಾರ್ಥಿಗಳಿಗೆ ಪ್ರಾಥಮಿಕವಾಗಿ ಪ್ರಪಂಚವನ್ನು ತಮ್ಮ ಕಣ್ಣುಗಳಿಂದಲೇ ನೋಡುವಂಥ ವಾತಾವರಣವನ್ನು ಕಲ್ಪಿಸಿಕೊಡಬೇಕಾಗಿದೆ. ನಮ್ಮ ಗ್ರಾಮೀಣ ಪ್ರದೇಶದಲ್ಲಿ ಅದು ಗೂಳೆ ಹೋಗುವ ಇಂಥಹ ಸ್ಥಳಗಳ ಪೋಷಕರು ಮಕ್ಕಳ  ಶೈಕ್ಷಣಿಕ ನೆಲೆಯಲ್ಲಿ ದೃಷ್ಟಿ ಹಾಯಿಸುವುದು ತುಂಬಾ ಕಷ್ಟ. ಆದರೆ ಕಾಲೇಜು ಹಂತದಲ್ಲಿ ವಿದ್ಯಾರ್ಥಿಗಳ ಭಾಗುವಹಿಸುವಿಕೆ ಆರೋಗ್ಯಕರವಾಗಿ ಸ್ಪರ್ಧಾ ಸ್ಪೂರ್ತಿಯಿಂದ ಎಷ್ಟರ ಮಟ್ಟಿಗೆ ಇದ್ದು ನಾವು ಕಂಡಿದ್ದೇವೆ. ಕಾಲೇಜುಗಳಲ್ಲಿ ನಡಿಯುವ ವಿಚಾರ ಸಂಕಿರಣಗಳಲ್ಲಿ, ಗೋಷ್ಠಿಗಳಲ್ಲಿ, ಚರ್ಚೆ - ಸಂವಾದಗಳಲ್ಲಿ ನಮ್ಮ ವಿದ್ಯಾರ್ಥಿಗಳ ಭಾಗುವಹಿಸುವಿಕೆಯನ್ನು ಕಾಣಲು ಆಗುತ್ತಲೇ ಇಲ್ಲ. ಪ್ರೌಢಶಿಕ್ಷಣದ ನಂತರ ಮಕ್ಕಳಲ್ಲಿ ಸಂಘಟನಾ ಸಾಮರ್ಥ್ಯವನ್ನು ಕಾಣಲು ಇಚ್ಚಿಸುತ್ತೇನೆ. ಪ್ರಶ್ನಿಸುವ ಇಲ್ಲವೇ ಹುಡುಕಾಟವನ್ನು ನಡೆಸುವ ಛಲ ಅವರಲ್ಲಿ ಸದಾ ಕಂಡರೆ ಒಳ್ಳೆಯದು. ಆದರೆ ಅದು ಸಾಧ್ಯಾವಾಗಿದೆಯೇ ಎನುವುದು. ಮಕ್ಕಳು ತಮ್ಮ ಪೋಷಕರಿಗೆ ತಿಳಿಸಬೇಕು  ನಾನು ಸರಿಯಾದ ಮಾರ್ಗದಲ್ಲಿಯೇ ಇದ್ದೇನೆ ಎಂದು. ದುಡಿದು ಬದುಕುವ ಜನರಲ್ಲಿ ಮಗ/ಮಗಳ ಕುರಿತು ಶಿಕ್ಷಕರಲ್ಲಿ ವಿಚಾರಿಸುವ ಸಮಯವನ್ನು ಹೊಂದಿಸಿಕೊಳ್ಳದೇ ಇದ್ದರೆ ನಮ್ಮ ಮಕ್ಕಳನ್ನು ನಾವು ಎಂದಿಗೂ ದೊಡ್ಡ ಹುದ್ದೆಯಲ್ಲಿ ಕಾಣಲು ಖಂಡಿತ ಸಾಧ್ಯಾವಿಲ್ಲ. ಮಕ್ಕಳನ್ನು ಶಾಲೆಯಲ್ಲಿ ಭಾಗುವಹಿಸುವಿಕೆಯನ್ನು ಕಂಡು ಅವರಿಗೆ ಇನ್ನೂ ಹೆಚ್ಚಿನ ಮಟ್ಟದಲ್ಲಿ ಭಾಗವಹಿಸುವ ಮಾತುಗಳನ್ನು ಆಡಿದರೆ ಮಕ್ಕಳು ಎಂದಿಗೂ ಇಂದೆ ಉಳಿಯುವುದಿಲ್ಲ ಸದಾ ಮುಂದೆ ಬರುವ ಪ್ರಯತ್ನ ಮಾಡುತ್ತಾರೆ. ಸೋತರು ಹೆದರಬೇಡ ಪ್ರಯತ್ನ ಪಡು ಮತ್ತೇ ನೀ ಗೆಲ್ಲುತ್ತೀ ಎಂದಾಗ ಕಂಡಿತ ಮಗು ತನ್ನ ಆತ್ಮ ವಿಶ್ವಾಸವನ್ನು ಕಳೆದು ಕೊಳ್ಳದೇ ಉನ್ನತದತ್ತ ಮುಖ ಮಾಡುತ್ತಾನೆ.