ರಂಗ ಚಟುವಟಿಕೆಯ ಆಧಾರದಿಂದ ಮಕ್ಕಳಿಗೆ ಹೊಸತನದ ಪಾಠವನ್ನು ಹೇಳಿಕೊಡಲು ಸಾಧ್ಯವೆಂದು ಪ್ರಸ್ತುತ ನನ್ನ ಸಹೋಧ್ಯೋಗಿಗಳು ಮಾತಾನಾಡುತ್ತಿರುವುದನ್ನು ಕಂಡು ನನ್ನನ್ನು ನಾನೇ ನಂಬಲಾಗಲಿಲ್ಲ. ಈ ವಾತವರಣ ಬರಲು ನಾನು ಐದು ವರ್ಷ (ಡಿಸೆಂಬರ್ ಗೆ) ಕಾಯಬೇಕಾಯಿತು. ಆದರೆ ಇದು ಸಂಪೂರ್ಣ ಸತ್ಯವು ಅಲ್ಲ. ಆ ದಿನಗಳು ದೂರಿಲ್ಲ ಎಂಬ ಭಾವನೆಯು ನನ್ನ ಗೆಳೆಯರು, ಹಿತೈಷಿಗಳು ನನ್ನೊಂದಿಗೆ ಹಂಚಿ ಕೊಂಡಿದ್ದು ಇದೆ. ನಾಟಕ ಎಂದರೆ ಕೇವಲವಾಗಿ ಮಾತಾನಾಡುತ್ತಿದ್ದ ನಮ್ಮ ಉತ್ತರದ ಭಾಗದಲ್ಲಿ ಹೊಸತನದ ಅಧುನಿಕ ನಾಟಕಗಳ ಕುರಿತು ಪಾಠವನ್ನು ಮಾಡುವ ನಾವು ನಿಲ್ಲಲು ಸಾಧ್ಯಾವೇ ಎಂಬ ಪ್ರಶ್ನೆಗಳು ಹುಟ್ಟಿದ್ದು ಇದೆ. ಪ್ರೌಢಶಾಲೆಗಳಲ್ಲಿ ನಾಟಕ ಶಿಕ್ಷಕರನ್ನು ೧೯೮೨ ರಲ್ಲಿಯೇ ಆಯ್ಕೆ ಪ್ರಾರಂಭಿಸಿದ್ದರೂ ಇಲ್ಲಿಯವರೆಗೂ ೬೦ ರಿಂದ ೭೦ ರ ಸಂಖ್ಯೆಯು ದಾಟಿಲ್ಲ ಆದರೆ ಇದು ಹೆಚ್ಚಿನ ಶಿಕ್ಷಕರನ್ನು ಮೈಸೂರು ವಿಭಾಗದಲ್ಲಿ ಸರ್ಕಾರ ನಾಟಕ ಶಿಕ್ಷಕರನ್ನು ತೆಗೆದು ಕೊಂಡಿದೆ. ಗುಲ್ಬಾರ್ಗ ಹಾಗೂ ಬೆಳಗಾವಿ ವಿಭಾಗದಲ್ಲಿ ತುಂಬಾ ಕಡಿಮೆ.
ಕರ್ನಾಟಕ ಸಾಹಿತ್ಯಕವಾಗಿ, ಸಾಂಸ್ಕೃತಿಕವಾಗಿ ಎಷ್ಟೇ ಹಿಂದಿನಿಂದಲೂ ಬಂದರೂ ಸಮೃದ್ಧಿಯಾಗಿ ಇಂದಿನ ವಿದ್ಯಾರ್ಥಿಗಳಲ್ಲಿ ಕಾಣಲು ಸಾಧ್ಯಾವಾಗಿಲ್ಲ. ನೀನಾಸಂ,ರಂಗಾಯಣ, ಶಿವಸಂಚಾರ ರಂಗ ತಂಡಗಳು ನಿರ್ಮಾಣವು ಉತ್ತರ ಕರ್ನಾಟಕದ ಭಾಗಗಳಲ್ಲಿ ಕಾಣಲು ಸಾಧ್ಯಾವಾಗಿಲ್ಲ. ಗುಲ್ಬಾರ್ಗದಲ್ಲಿ ರಂಗಾಯಣ ನಿರ್ಮಾಣಕ್ಕೆ ಬಡ್ಜ್ ಟ್ ನಲ್ಲಿ ಘೋಷಣೆಯನ್ನು ಮಾಡಿದ್ದಾರೆ ಆದರೆ ನಮ್ಮ ಗ್ರಾಮೀಣ ಜನರಿಗೆ ಹಾಗೂ ಮಕ್ಕಳಿಗೆ ಇನ್ನೂ ಎಷ್ಟು ವರ್ಷಗಳ ಕಾಲ ಕತ್ತಲೆಯಲ್ಲಿ ಇಡುತ್ತೇವೆ ಎಂದು ತಿಳಿಯುತ್ತಿಲ್ಲ. ಈಗ ಇರುವ ನಾಟಕ ಶಿಕ್ಷಕರನ್ನು ಅವರ ಕಾರ್ಯಗಳನ್ನು ಅವರ ಶಾಲೆ-ಹಳ್ಳಿಗಳಿಗೆ ಬೇಟಿ ನೀಡಿ ಇಲಾಖೆಯ ತಜ್ಞರು ಸೂಕ್ಷ್ಮವಾಗಿ ಗಮನಿಸಬೇಕಾಗಿದೆ. ರಂಗ ಚಟುವಟಿಕೆಗಳ ಕಾರ್ಯಗಳಿಂದ ಆದ ಬದಲಾವಣೆಗಳನ್ನು ಮಕ್ಕಳಿಂದಲೇ ಕಾಣಬಹುದು. ಸಣ್ಣ ಸಣ್ಣ ಕಾರ್ಯ ಚಟುವಟಿಕೆಗಳಿಂದ ಮಕ್ಕಳಲ್ಲಿ ಇರುವ ಉತ್ಸಾಹ ಅವರು ಒಂದು ಸಂಪೂರ್ಣ ನಾಟಕವನ್ನು ಎಲ್ಲ ಪರಿಕರ, ರಂಗ ಸಜ್ಜಿಕೆ, ರಂಗ ವಿನ್ಯಾಸ, ಬೆಳಕಿನ ಹಾಗೂ ವೇಷ ಭೂಷಣಗಳೊಂದಿಗೆ ಮಕ್ಕಳು ವೇದಿಕೆಯ ಮೇಲೆ ಕಂಡರೆ ಅವರಲ್ಲಿ ಹುಟ್ಟುವ ಅಭಿನಯವನ್ನು ಕಾಣುವ ಅವರ ತಂದೆ ತಾಯಿಗಳ ಕಣ್ಣುಗಳಲ್ಲಿ ಉಕ್ಕುವ ಪ್ರೀತಿಯನ್ನು ಕಾಣುವುದೇ ಬಹಳ ಮುಖ್ಯ.