ಸೋಮವಾರ, ಜುಲೈ 1, 2013

ಚಿಲ್ ಜರಿ ಗ್ರಾಮದ ಹಾಡುಗಳ

ಜಾನಪದದ ಹುಡುಕಾಟದಲ್ಲಿ ನಾವು ಸ್ಥಳೀಯ ಗ್ರಾಮಕ್ಕೆ  ಬೇಟಿ ನೀಡಿ ಅವರಲ್ಲಿ ಜಾನಪದ ಕುರಿತು ನಾವು ಮಾಡುವ ದಾಖಲೀಕರಣ ಕುರಿತು ಹೇಳಿದ  ಮಾತುಗಳು ಅಂಥಹ ಆಸಕ್ತಿಯನ್ನನೇನು  ಮೂಡಿಸುತ್ತಿರಲಿಲ್ಲ ಇದು ಕೇವಲ ತಮ್ಮ ಮನೆಯ ಶಾಸ್ತ್ರದ ಕಾರ್ಯಕ್ರಮಗಳಲ್ಲಿ ಹಾಡುವಂಥ ಹಾಡುಗಳನ್ನು ಇವರು ಚಿತ್ರೀಕರಣ ಮಾಡಿಕೊಂಡು ಏನನ್ನು ಮಾಡುತ್ತಾರೆ ಎಂಬ ಪ್ರಶ್ನೆಗಳು  ಊರಿನವರಲ್ಲಿ ಎಲ್ಲರಿಗೂ ಮೂಡುತ್ತಲೇ ಇದ್ದವು. ಆದರೆ ಆ ಹಳ್ಳಿಯ ಮುಗ್ಧ ಜನರಿಗೆ ತಿಳಿದಿಲ್ಲ ಜನಪದ ಹಿಂದಿನಿಂದಲೂ ಜನರ ಬದುಕನ್ನು ಕಟ್ಟುತ್ತಾ ಬಂದಿದ್ದು ಅವುಗಳ ಜ್ಞಾನ ಹೊಂದಿದ್ದ ತಲೆಮಾರು ಮುಂದಿನ ಹಂತಕ್ಕೆ ಸಾಗದೇ ಕೊನೆಗೊಳ್ಳುವ ಸ್ಥಿತಿಯು ನಿರ್ಮಾಣವಾಗಿರುವ ಈ ಸಂರ್ಧಭದಲ್ಲಿ ಹಿರಿಯರಿಂದ ಹಾಡುಗಳ ಜೊತೆಗೆ ಅನುಭವಗಳನ್ನು ಕೇಳಿ ತಿಳಿದುಕೊಂಡು ಅವನ್ನು ದಾಖಲೀಕರಣ ಮಾಡುವುದರೊಂದಿಗೆ ಇಂದಿನ  ಮಕ್ಕಳಿಗೆ ಶಿಕ್ಷಣದ ಜೊತೆಗೆ ಜಾನಪದದ ಹಲವು ಪ್ರಕಾರಗಳನ್ನು ವಿದ್ಯಾರ್ಥಿಗಳೊಂದಿಗೆ ಅವರ ಮನೆಗಳಿಗೆ ತೆರೆಳಿ ಕಲೆತುಕೊಳ್ಳಬೇಕಾಗಿದೆ. ವೇದಿಕೆ, ಸಮಾರಂಭ ಎಂದರೆ ಆ ಜೀವಗಳು ಮುಜುಗರ ಪಟ್ಟು ಹಾಡಲು ಹಿಂಜರಿಯುತ್ತಾರೆ. ಮಕ್ಕಳೊಂದಿಗೆ ಅವರನ್ನು ಮಾತಿಗೆ ಹಚ್ಚಿದರೆ ಆ ಪಾಲಕರು ತುಂಬಾ ಸಹಜವಾದ ಮಾತುಗಳನ್ನು ಹೊರ ಹಾಕಲು ಸಾಧ್ಯತೆಗಳು ಹೆಚ್ಚು. ಮನೆಯ ಕಾರ್ಯಕ್ರಮದ ಜೊತೆಗೆ ಸ್ತಳೀಯ ಊರಿನ ಆಚರಣೆಗಳಲ್ಲಿ, ಹಬ್ಬದ ಸಂಭ್ರಮದಲ್ಲಿ ಹಾಡುವ ಇವರು ಮಕ್ಕಳಿಗೆ ಕಲಿಯುವ - ಕಲಿಸುವ ವಾತಾವರಣವನ್ನು ಪಾಲಕರೊಂದಿಗೆ, ಶಿಕ್ಷಕರು ಒದಗಿಸಿ ಕೊಡಬೇಕಾಗಿದೆ. ಜೊತೆಗೆ ಮಕ್ಕಳು ಜಾನಪದದ ಕುರಿತು ಹಿರಿಯರಿಂದ ಅನುಭವಗಳನ್ನು ಪಡೆದು ಭವಿಷ್ಯತ್ ಗಾಗಿ ಕಟ್ಟಬೇಕಾಗಿದೆ. ನಮ್ಮ ಹತ್ತಿರದ   ಚಿಲ್ ಜರಿ   ಗ್ರಾಮ ದಲ್ಲಿ ಶ್ರೀಮತಿ ಪಾರ್ವತಿ , ಶ್ರೀಮತಿ ಶಾಂತಮ್ಮ , ಶ್ರೀಮತಿ  ಪಾರವ್ವ , ಶ್ರೀಮತಿ ಪದ್ಮವ್ವ ಹಾಗೂ ನಿರ್ಮಲ ಅವರು ನಮ್ಮ ವಿದ್ಯಾರ್ಥಿನಿಯ ಪ್ರಶ್ನೆಗಳಿಗೆ ಉತ್ತರಿಸುತ್ತಾ ತಮ್ಮ ಕಾಯಕದಲ್ಲಿ ಪ್ರತಿ ನಿತ್ಯ ಹಾಡುಗಳನ್ನು ಹಾಡುವುದು.  ತಮ್ಮ ಕಾಯಕ ನಿರಾತಂಕವಾಗಿ ಸಾಗಲು ಯಾವುದೇ ಒತ್ತಡ ಇರುವುದಿಲ್ಲ. ಎಂಬ ಮಾತುಗಳು ನಮ್ಮ ಮಕ್ಕಳಿಗೆ ಹಾಡುಗಳನ್ನು ಕೇಳಿಸುತ್ತಾ ಅನುಭವಗಳನ್ನು ಅಂಚಿಕೊಂಡರು. 
                          'ಎಷ್ಟು ಮಕ್ಕಳು ಇಂದು ಹಾಡುಗಳನ್ನು ಕಲಿಯಲು ನಮ್ಮ ಹತ್ತಿರ ಬರುತ್ತಿದ್ದಾರೆ.... ' ಎಂಬ ನಮ್ಮ ಹಿರಿಯರ ಪ್ರಶ್ನೆಗಳು ಮಕ್ಕಳಿಗೆ ಮೈಮೇಲೆ ಬಂದು ಎರಗಿದಂತಿತ್ತು.