ಮಂಗಳವಾರ, ನವೆಂಬರ್ 23, 2010

ವಲಯ ಮಟ್ಟದ ಪ್ರತಿಭಾ ಕಾರಂಜಿ









೨೩.೧೧.೨೦೧೦ ರಂದು ಜಾಹಾಗಿರಗುಡದುರ ವಲಯ ಮಟ್ಟದ ಪ್ರತಿಭಾ ಕಾರಂಜಿ ಸ್ಪರ್ದೆಯನ್ನು ನಡೆಸಲಾಯಿತು. ಇದರಲ್ಲಿ ನಮ್ಮ ಶಾಲೆಯಾ ಮಕ್ಕಳು ನಾಟಕ,ಕ್ವಿಜ್ , ಭಾಷಣ ,ಚರ್ಚಾಸ್ಪರ್ದೆ ,ಪ್ರಭಂಧ , ಹೀಗೆ ಒಟ್ಟು ಆರು ಸ್ಪರ್ದೆಗಳಲ್ಲಿ ಮೊದಲ ಬಹುಮಾನಗಳನ್ನು ಪಡೆದು ತಂದಿದ್ದಾರೆ ಅವರಿಗೆ ಶಾಲೆಯಾ ಶಿಕ್ಷಕ ವೃಂದ ಹಾಗೂ ನಮ್ಮ ಪತ್ರಿಕೆಯು ಆ ವಿಧ್ಯಾರ್ಥಿಗಳಿಗೆ ಅಭಿನಂದನೆಗಳನ್ನು ತಿಳಿಸುತ್ತದೆ.



ಸಂಪಾದಕ
ಗುರುರಾಜ

ಭಾನುವಾರ, ನವೆಂಬರ್ 21, 2010

ಉಡುಪಿ ಮಕ್ಕಳ ಹಬ್ಬದಲ್ಲಿ






ಭಾಗವಹಿಸಿದ ರಂಗ ಗೆಳೆಯರು ( ದಿನಾಂಕ ೨೦.೧೦.೨೦೧೦)
********************************************************************

"ಆನೆ ಮತ್ತು ಕೋತಿಯಸ್ನೇಹದ ಕಥೆ "







ಒಂದನೊಂದು ಕಾಡಿನಲ್ಲಿ ಒಂದು ಮಾವಿನ ಮರವಿತ್ತು . ಆ ಮರದ ಪಕ್ಕದಲ್ಲಿ ಒಂದು ಬಾವಿಯಿತ್ತು. ಮಾವಿನ ಮರದ ಮೇಲೆ ಒಂದು ಕೋತಿ ವಾಸವಾಗಿತ್ತು. ಅದಕ್ಕೆ ಆನೆ ಆಪ್ತ ಗೆಳಯನಾಗಿತ್ತು . ನರಿ ಮತ್ತು ಮೊಸಳೆ ಅವುಗಳ ಶತ್ರುಗಳಾಗಿದ್ದವು. ಮತ್ತು ಅವುಗಳಿಂದ ಯಾವಾಗಲು ತೊಂದರೆಯನ್ನು ಅನುಭವಿಸುತ್ತಿದ್ದವು. ಆದರು ಸ್ನೇಹಿತರಿಬ್ಬರು ಸಂತೋಷ ದಿಂದ ಇದ್ದವು. ಆನೆ ಕೋತಿಯ ಮನೆಗೆ ಆಟವಾಡಲೆಂದು ಬಂದಾಗ ಆನೆ ಕೋತಿಯ ಬಳಿ ಹೀಗೆ ಮಾವಿನ ಹಣ್ಣನ್ನು ಕೇಳಿತು.
ಜಾಣ ನೀನು ಮಂಗಣ್ಣ
ಬೇಗ ಮರ ಹತ್ತಣ್ಣ
ಎರಡು ಹಣ್ಣು ಕೀಳಣ್ಣ
ನೀನು ಒಂದು ತಿನ್ನಣ್ಣ
ನನಗೂ ಒಂದು ಕೊಡಣ್ಣ
ಆಗ ಕೋತಿ ಆನೆಗೆ ಮಾವಿಅನ ಹಣ್ಣನ್ನು ನೀಡಿತು. ನಂತರ ಅವರು ಕಣ್ಣ ಮುಚ್ಚಾಲೆ ಆಟವಾಡುತ್ತಾಲಿದ್ದಾಗ ಕೋತಿ ಮರವೆರುವ ರಭಸದಲ್ಲಿ ಕಾಲು ಜಾರಿ ಬಾವಿಗೆ ಬಿದ್ದು ಕೋತಿ ಸತ್ತು ಹೋಯಿತು. ತನ್ನ ಗೆಳೆಯನನ್ನು ಕಳೆದು ಕೊಂಡ ಆನೆಗೆ ದುಃಖವಾಯಿತು ಜೋರಾಗಿ ಅತ್ತಿತು. ಆದರೆ ಶತ್ರುಗಳಗಿದ್ದ ನರಿ ಹಾಗೂ ಮೊಸಳೆಗೆ ಖುಷಿಯಾಗಿ ಸಂತೋಷದಿಂದ ನಕ್ಕವು.

( ಉಡುಪಿ ಮಕ್ಕಳ ಹಬ್ಬದಲ್ಲಿ ಮಕ್ಕಳಿಂದಲೇ ರಚಿತವಾಗಿರುವ ಕಥೆ. ಇದು ಎರಡನೇ ಗುಂಪಿನ ಕಥೆ - ದಿನಾಂಕ ೨೦.೧೦.೨೦೧೦)



ವಿಧ್ಯಾರ್ಥಿ ಜೀವನ

ನಾವು ನಮ್ಮ ಜೀವನವನ್ನು ಯಶಸ್ವಿಯಾಗಿ ಸಾಧಿಸಲು ನಮ್ಮಲ್ಲಿ ಸತತ ಪ್ರಯತ್ನವಿರಬೇಕು. ಒಳ್ಳೆಯ ವಿಧ್ಯಾರ್ಥಿ ಎಂದು ಗುರುತಿಸಿಕೊಳ್ಳಲು ನಾವು ಎಲ್ಲಾ ರಂಗಗಗಳಲ್ಲಿ ಯು ಪ್ರವಿಣರಾಗಿರಬೇಕುಮತ್ತು ಎಲ್ಲರಿಗು ಆದರ್ಶನಾಗಿರಬೇಕು. ಆಗ ಮಾತ್ರ ಅವನು ಒಳ್ಳೆಯ ವಿಧ್ಯಾರ್ಥಿಯೆಂದು ಗುರುತಿಸಿಕೊಳ್ಳುವನುಯಾರೇ ಆಗಲಿ ಯಾವುದೇ ಕೆಲಸವನ್ನು ಬೇಜಾವಾಬ್ದಾರಿಯಿಂದ ನೋಡಿಕೊಳ್ಳಬಾರದು. ಕಾರ್ಯಾವನ್ನು ನಿರ್ವಹಿಸುತ್ತೇನೆ ಎಂಬ ಆಸಕ್ತಿ ,ಹಂಬಲವಿರಬೇಕು. ಕಾರ್ಯಾ ಅಸಪಲವಾದಾಗ ಅದನ್ನು ಮರಳಿ ಯತ್ನಿಸಿ ಸಫಲವಾಗಿ ಮಾಡಿಕೊಳ್ಳಬೇಕು ನಾವು ಒಳ್ಳೆಯನಿಯಮ ಮತ್ತು ಆದರ್ಶ ಗಳನ್ನು ನಮ್ಮಲ್ಲಿ ರುಡಿಸಿಕೊಳ್ಳಬೇಕು. ಮತ್ತು ಸಮಯ ಪ್ರಜ್ಞೆ ಯನ್ನು ಪಾಲಿಸಬೇಕು.

ವಿಧ್ಯಾರ್ಥಿ ಜೀವನ ಬಂಗಾರದ ಜೀವನ


"Student Life is Golden Life."


ಮಂಜುನಾಥ ಎಸ್.ಮುರಡಿ


೯ ನೇ ತರಗತಿ


ಶನಿವಾರ, ಆಗಸ್ಟ್ 28, 2010













ಆಗಸ್ಟ್ ೨೧ ನೇ ಶನಿವಾರದಂದು ನಮ್ಮ ಶಾಲೆಗೆ ಇಂತಹದೊಂದುಸಂಗತಿ ನಡೆಯುವುದು ಈ ತರಹದ ಸುದ್ದಿ ಬರುವುದೆಂದು ಯಾರುಊಹಿಸಿರಲಿಲ್ಲ ನಮ್ಮ ಶಾಲೆಯಾ ಅತ್ತ್ಮಿಯಾ ಶಿಕ್ಷಕರಾದ ಶ್ರೀಬಸವರಾಜ್ ಗುಣಕಿ ಯವರು ಬೆಳಗಾವಿ ಆಸ್ಪತ್ರೆಯಲ್ಲಿ ನಿಧನಹೊಂದಿದರೆಂದು. ನಂಬಲಿಕ್ಕೆ ಆಗದ ರೀತಿಯ ಕರೆಯೊಂದುಬಂದಾಗಾ ನಮ್ಮ ಶಾಲೆ, ಶಿಕ್ಷಕರು, ಮಕ್ಕಳು ಹಾಗೂ ಊರಿನಮನಗಳನ್ನೇ ಅಲುಗಾಡಿಸಿ ಬಿಟ್ಟಿತು. ನಿಜಕ್ಕೂ ಇದೊಂದು ಕಲ್ಪನೆಗೂಸಿಗದಂತಹ ದುರಂತ. ಸಾವು....... ಅನ್ನೋದು ಅವರನ್ನುನಮ್ಮೆಲ್ಲರೆಂದಲೂ ದೂರ ಮಾಡಿ ಬಿಟ್ಟಿತು. ಗುಂಕಿ ಗುರುಗಳ ಅಗಲಿಕೆನನಗೆ ಗದುಗಿನ ನಾರಣಪ್ಪನ ಸಾಲುಗಳ ನೆನಪು ತರಿಸುತ್ತದೆ.

" ಚರಮಗೀತೆಯ ನಿನಗೆ ಬರೆಯುತಚರಮಗಿತೆಯು ದೊರೆತುದುದೆನೆಗೆ,ಎಲೆ ,ಪರಮ ಪಂಚಮ ವೇದದಶ್ವತ್ತಮಚಿರವೀರ ......"
ನಿಜದಲ್ಲಿ ನಮ್ಮ ಹಾಗೂ ಮಕ್ಕಳ ಮನಸ್ಸಿನಲ್ಲಿ ಗುಣಕಿ ಗುರುಗಳು ಚಿರಂಜಿವಿಯಾಗಿದ್ದಾರೆ.

ಗುರುರಾಜ


  



ನಾ ಕಂಡಂತೆ ಶ್ರೀ ಬಸವರಾಜ ಗುಣಕಿ ಗುರುಗಳು...
   
                           ಇವರೊಬ್ಬ ಮುಕ್ತ ಮನಸಿನ, ಆತ್ಮೀಯ ಸ್ವಭಾವದ  ಸೃಜನಶೀಲ  ಸಂಪನ್ನ ಗುರು. ಇತರರಿಗೆ ಯಾವುದೇ ನೋವಾಗದಂತೆ ವರ್ತಿಸಿದ ಸಂಘಜಿವಿ. ಇಂತಹ ನನ್ನ ಪ್ರೀತಿಯ ಹಾಗು ನಮ್ಮ ಜೊತೆ ನಕ್ಕು ನಲಿಯುವ ನೆಚ್ಚಿನ ಮಿತ್ರರಾಗಿದ್ದರು. ಇವರ ಅಕಾಲಿಕ ಸಾವಿನ ವಿಷಯ ಕೇಳುತ್ತಿದ್ದಂತೆ ನನಗೆ ದಿಕ್ಕೇ ತೋಚದಾಗಿ ಮನವೆಲ್ಲ ರೋಮಾ೦ಚನಗೊಂಡು ನಡುಕ ಹುಟ್ಟಿ ಮನವೆಲ್ಲ ಕಂಬನಿ ಮಿಡಿಯಿತು.
                         ಇವರ ಕುಟುಂಬದ ಸದಸ್ಯರೆಲ್ಲರ ಅತೀವ ದುಃಖದಲ್ಲಿ ನಾನು ಪಾಲಾಗೊಂಡೆ . ಮೃತರ ಆತ್ಮಕ್ಕೆ ಚಿರಶಾಂತಿ ಸಿಗಲೆಂದು ಆ ದೇವರಲ್ಲಿ  ನಾನು ಬೇಡಿಕೊಳ್ಳುತ್ತೇನೆ. 

ಶಿವಪ್ಪ ಇಲಾಳ 

ಭಾನುವಾರ, ಜುಲೈ 4, 2010


ಹೆಜ್ಜೆಗಳು ನಮ್ಮ ಶಾಲಾ ಪತ್ರಿಕೆ ಪ್ರಾರಂಭವಾಗಿ ಕೆಲವಾರು ತಿಂಗಳುಗಳು ಈಗಾಗಲೇ ಕಳೆದು ಹೋಗಿವೆ. ನಮ್ಮ ಸಾಲೆಯ ಸೂಚನಾಪತ್ರಿಕೆಯಲ್ಲಿ ಮಕ್ಕಳು ಬರೆದ ಎಲ್ಲ ಬರಹಗಳನ್ನು ಪ್ರಸ್ತುತ ಪಡಿಸಿ, ನಂತರದಲ್ಲಿ ನಾವು ಬ್ಲಾಗಿಗೆ ಸೇರಿಸುತ್ತಾ ಬಂದಿದ್ದೇವೆ. ಈಗ ನಮ್ಮ ಬ್ಲಾಗಿನಲ್ಲಿ ಬೇರೆ ಶಾಲೆಯ ಮಕ್ಕಳು ಹಾಗು ಶಿಕ್ಷಕರ ಬರಹಗಳನ್ನು ಸೇರಿಸುತ್ತಲಿದ್ದೇವೆ. ತಮ್ಮ ಅಭಿಪ್ರಾಯಗಳನ್ನು ಮುಕ್ತವಾಗಿತಿಳಿಸಬೇಕೆಂದು ನಾನು ಕೇಳಿಕೊಳ್ಳುತ್ತೇನೆ.

ಗುರುರಾಜ

ಭಾನುವಾರ, ಜೂನ್ 27, 2010

ಧರ್ಮಾ ನದಿಯ ತಟದಲ್ಲಿ ಅರೆಮಲೆನಾಡಿನ ಒಂದೂವರೆ ಎರಡು ಸಾವಿರ ಜನಸಂಖ್ಯೆ ಇರುವ ಶಾಲೆ ಮತಂಗಿ. ಊರಿನ ಜನರ ಮಹಾತ್ವಾಕಾಂಕ್ಷೆಯಿಂದ ಪ್ರೌಡಶಾಲೆ ಪ್ರಾರಂಭವಾಯಿತು. ಮೂಲಭೂತ ಸೌಕರ್ಯಗಳಿಗು ಕಷ್ಟವಿರುವ ಊರಿನಲ್ಲಿ ಶಾಲೆ ಪ್ರಾರಂಭವಾಗಿರುವುದರಿಂದ ತಾಲುಕಾ ಸ್ಥಳಕ್ಕೆ ಶಾಲೆಗೆ ಹೋಗುವ ಇಲ್ಲದಿದ್ದರೆ , ಶಾಲೆಗೇ ಟಾ ಟಾ ಹೇಳುವ ಪ್ರಕ್ರಿಯೆಗೆ ಮೋಕ್ಷ ಸಿಕ್ಕಿದೆ.
ಹೊಸದಾಗಿ ಕಟ್ಟಡ ನಿರ್ಮಾಣ ವಾಗುತ್ತಿರುವ ಸಂದರ್ಭದಲ್ಲಿ ನವಿನ ಕನಸುಗಳೊಂದಿಗೆ ಶಿಕ್ಷಕರು ಮತ್ತು ವಿದ್ಯಾರ್ಥಿಗಳು ಶಾಲಾಕಾರ್ಯಗಳಲ್ಲಿ ಭಾಗವಹಿಸಲು ತೊಡಗಿಕೊಮ್ದಿದ್ದೇವೆ. ಆಟ-ಪಾಠಗಳೊಂದಿಗೆ , ಶೈಕ್ಷಣಿಕ ಪ್ರವಾಸಗಳೊಂದಿಗೆ , ಊರವರೊಂದಿಗೆಲವಲವಿಕೆಯಿಂದ ಕುಡಿದ ಬಾಗುವಹಿಸುವಿಕೆಯೊಂದಿಗೆ ..................

ಪ್ರಜ್ಞಾ ಹೆಗಡೆ, ಹಾನಗಲ್.


ಶುಕ್ರವಾರ, ಮೇ 21, 2010

ಕನಸಿನೂರು - ಅರಳುಮೊಗ್ಗು

ಶಾಲೆಯಲ್ಲಿ  ಪ್ರಥಮ ಬಾರಿಗೆ ಕರ್ನಾಟಕ ಬಾಲ ವಿಕಾಸ ಅಕಾಡೆಮಿ -ಧಾರವಾಡ ಇವರ ಸಹಯೋಗದಲ್ಲಿ ಅರಳುಮೊಗ್ಗು ಮಕ್ಕಳ ರಂಗಕಾರ್ಯಗಾರವನ್ನು ಶಾಲೆಯಲ್ಲಿ ನಡೆಸಿ ನಾಟಕ ಪ್ರದರ್ಶನಗಳಿಗೆ ಸ್ಥಳೀಯ ಊರಿನ ಶಾಲೆಗಳಲ್ಲಿ ಪ್ರದರ್ಶನ ನೀಡಿದೇವು. ಅದರ ಛಾಯಚಿತ್ರಗಳು ಮತ್ತು ನಾಟಕ ವೀಕ್ಷಿಸಿದವರ ಅನಿಸಿಕೆಗಳು.



ಇಂದು ದಿನಾಂಕ ೧೯.೦೨.೨೦೧೦ ರಂದು ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ತುಮರಿಕೊಪ್ಪದಲ್ಲಿ ಪ್ರದರ್ಶನಗೊಂಡ "ಕನಸಿನೂರು" ನಾಟಕ ಪ್ರದರ್ಶನಗೊಂಡಿದ್ದು ಅತ್ಯಂತ ಖುಷಿ ತಂದಿದೆ. ಮಕ್ಕಳ ಮೂಲಕ ಸಮಾಜದಲ್ಲಿನ ಲೋಪ ದೋಷಗಳನ್ನು ಎತ್ತಿ ತೋರಿಸಿ ಸಮಾಜವನ್ನು ಸರಿ ದಿಕ್ಕಿನೆಡೆಗೆ ಸಾಗುವಲ್ಲಿ ಇಂಥಹ ಪ್ರದರ್ಶನ - ತಿರುಗಾಟ ಅತ್ಯಂತ ಅವಶ್ಯವಾಗಿದೆ. ಇವರಿಗೆ ಬೇಕಾದ ಪ್ರೋತ್ಸಾಹ, ಸಹಕಾರ ಎಲ್ಲರಿಂದ ಸಿಗಬೇಕೆಂದು ಆಶಿಸುತ್ತೇನೆ.

ಅಧ್ಯಕ್ಷರು
ಎಸ್.ಡಿ.ಎಮ್.ಸಿ
ಸ.ಹಿ.ಪ್ರಾ.ಶಾಲೆ,
ತುಮರಿಕೊಪ್ಪ



      ನಾಟಕದ ನಿರೂಪಣೆ, ಹಾಗೂ ಪಾತ್ರಗಳು ತುಂಭಾ ಮಾರ್ಮಿಕವಾಗಿ ಮೂಢಿಬಂದವು. ಮಕ್ಕಳು ತಮ್ಮ ವಯಸ್ಸಿಗೆ ಮೀರಿ ತುಂಭಾ ಚೆನ್ನಾಗಿ ಅಭಿನಯಿಸಿದರು.

ಸಂಗಣ್ಣ ಎಸ್.ಕೆ
ಸಹ ಶಿಕ್ಷಕರು
ಸ.ಹಿ.ಪ್ರಾ.ಶಾಲೆ
ಹಿರೇಗೊಣ್ಣಗರ






ನಾಟಕ ಶಿಕ್ಷಕರಾದ ಶ್ರೀ ಗುರುರಾಜ್.ಎಲ್ ರವರು ತಮ್ಮ ಶಾಲೆಯ ವಿದ್ಯಾರ್ಥಿಗಳಲ್ಲಿ ಹುದುಗಿರುವ ಅಭಿನಯ ಕಲೆಯನ್ನು ಮತ್ತು ಮಕ್ಕಳ ವಯುಕ್ತಿಕ ಪ್ರತಿಭೆಯನ್ನು ಹೊರ ಹಾಕುವಲ್ಲಿ ಯಶಸ್ವಿಯಾಗಿದ್ದಾರೆ. ಈ ನಾಟಕದ ಮೂಲಕ ಸಮಾಜದಲ್ಲಿನ ಪ್ರತಿಯೊಬ್ಬ ನಾಗರಿಕರಿಗೂ ಸ್ಪೂರ್ತಿಯಾಗುತ್ತದೆ. ಮತ್ತು ಇದರ ಜೊತೆಗೆ ಗ್ರಾಮದಲ್ಲಿನ ಹವ್ಯಾಸಿ ಕಲಾವಿದರನ್ನು ಕರೆತಂದು ಜನಪದ ಗೀತೆಗಳನ್ನು ಹಾಡಿಸಿ ಮಕ್ಕಳ ಹಾಗೂ ಗ್ರಾಮಸ್ಥರ ಮನ ಸೆಳೆಯುವಲ್ಲಿ ಯಶಸ್ವಿಯಾಗಿದ್ದಾರೆ. ಶ್ರೀ ಗುರುರಾಜ್ ಹಾಗೂ ಅವರ ವಿದ್ಯಾರ್ಥಿ ತಂಡಕ್ಕೂ ತುಂಭು ಹೃದಯದ ಧನ್ಯವಾದಗಳು.

ಚನ್ನಪ್ಪ ಭಾವಿಕಟ್ಟಿ 
ಶಿಕ್ಷಕರು
ಸ.ಹಿ.ಪ್ರಾ.ಶಾಲೆ
ಬಾದಿಮನಾಳ








ಗುರುವಾರ, ಮೇ 20, 2010





ಶಾಲೆಯಲ್ಲಿ ಜಾನಪದ ಹಾಡುಗಳನ್ನು ಮಕ್ಕಳ ಮುಂದೆ ಹಾಡಿ ತೋರಿಸುತ್ತಿರುವ ಶ್ರೀಮತಿ ಶ್ಯಾವಂತ್ರಮ್ಮ ಹಾಗೂ ಸಂಗಡಿಗರು

ಶನಿವಾರ, ಏಪ್ರಿಲ್ 3, 2010

ನೆನಪುಗಳು



ನೆನೆಪುಗಳು ಎಂದರೇ ನಾವು ಯಾವಾಗ ಸಪ್ಪೆ ಮೂರೇ ಹಾಕಿಕೊಂದು ಕುಳಿತಾಗ ನಮ್ಮ ಮನಸಿನಲ್ಲಿ ಮೂಡುವ ಭಾವನೆಗಳೇ ನೆನಪುಗಳು. ಹಿಂದೆ ನಡೆದಂತಹ ಸಂಧರ್ಬ ಮರಳಿ ಬರುವುದು . ನೆನಪುಗಳಲ್ಲಿ ದುಖ್ಹದಾಯಕ ನೆನಪುಗಳು ಹಾಗು ಉಲ್ಲಾಸಕರ ನೆನಪುಗಳು ಇರುತ್ತವೆ.


ಮಂಜುನಾಥ. ಎಸ.ಮುರುಡಿ
ನೇ ತರಗತಿ
ಜಾ.ಗುಡದೂರ














ನಾಟಕ ಮಾಡಿಸ್ತಾರೆ
ಗುರಾಜ್ ಸಾರ್ ನಾಟಕ
ಮಾಡಿಸ್ತಾರಂತೆ

ಹೇ ನಾನು ಬರಾಲ್ಲಾಪ್ಪ
ಮಡಿಕೇರಿ ಜಾತ್ರೆ ಐತಿ
ಅರೇ ನಾನು ಟೂರ್ ಗೇ
ಹೋಗಬೇಕು. ದುಡ್ಡು ಕೊಟ್ಟಿನಿ.

ಯವ್ವಾ ನಾನಂತು ಒಲ್ಲೆವ್ವ
ಹೂಂ , ಹೇ ನೀನು ಕೈ ಎತ್ತೆ
ನೀ ಬರ್ತಿಯಾ......? ಹಾಗಾದರೆ,
ನಾನು ಬರ್ತೀನಿ. ಹೇ -
ನೀನು ಬಾರೇ

ಸಾರ್ ಪಾರಟು ಯಾವುದು ಸಾರ್
ಯಾವುದು .....?
ಹೇ ವಜ್ರಮನಿ ಪಾರ್ಟ್ ಕಣೋ ...
ಸಾರ್ ನಾನು ಹಾಕ್ತೀನಿ ...
ಹ್ಹ ..ಹ್ಹ ..ಹ್ಹ ______

( ಶಿಬಿರದ ದಿನಗಳಲ್ಲಿ )



ಶುಕ್ರವಾರ, ಏಪ್ರಿಲ್ 2, 2010

ಮಳೆಗಾಲದ ಒಂದು ದಿನ

ಮಳೆ ಬಂದಾಗ ಇರುವ ಉತ್ಸಾಹ ಮಕ್ಕಳಿರಲಿ, ಯುವಕರಿರಲಿ ಅಥಾವಯಾವುದೇ ವಯಸ್ಸಿನವರಾಗಿರಲಿ ಎಲ್ಲಿಲ್ಲದ ಸಂತೋಷ. ಆದರೆ ಅದೇ ಮಳೆಅತಿಯಾದಾಗ ನೆರೆ,ಪ್ರವಾಹ ಹೀಗೆ ಏನೆಲ್ಲಾ ಅವಾಂತರ ಸೃಷ್ಟಿಸಿ ಎಲ್ಲರಬದುಕುಗಳನ್ನೇ ಅಲುಗಾಡಿಸಿ ಹೋಗಿರುವುದು ನಾವು ಕಳೆದ ಬಾರಿಯಂತುಕಂಡಿದ್ದೆ ಇದೆ. ನಮ್ಮ ಶಾಲೆಯಾ ಮಕ್ಕಳ ಪುಸ್ತಕ, ಬಟ್ಟೆ ಎಲ್ಲವುಗಳುಮಳೆಯಲ್ಲಿ ಕೊಚ್ಚಿ ಹೋಗಿದ್ದು ಇವೆ. ಅವುಗಳೆಲ್ಲವುಗಳಿಂದ ಎದ್ದು ಬದುಹೊಸ ಬದುಕುಗಳನ್ನು ಕಟ್ಟಿಕೊಳ್ಳುವ ಹೊಸ ಹಾದಿಯಲ್ಲಿ ಈಗಾಗಲೇಸಾಗಲು ತೊಡಗಿದ್ದಾರೆ. ಮಳೆ ಮತ್ತೇ ಇಂತಹ ಅವಾಂತರ ತರದಿರಲಿಎಂಬ ಬಯಕೆ ಮಕ್ಕಳೆಲ್ಲರ ಕಂಗಳಲ್ಲಿ ಮೂಡುತ್ತಿದೆ.


ಗುರುರಾಜ

ಶನಿವಾರ, ಮಾರ್ಚ್ 27, 2010

ಸ್ವಚ್ಚತೆ

ನಾವು ಹೇಗೆ ಸ್ವಚ್ಚವಾಗಿರಬೇಕೆಂದರೆ ನಾವು ದಿನಾಲು ಹಲ್ಲನ್ನು ಉಜ್ಜ ಬೇಕು. ತಲೆ ಬಾಚಿಕೊಳ್ಳಬೇಕು , ಸ್ನಾನ ಮಾಡಬೇಕು , ಶಿಸ್ತು ನಿಂದ ಇರಬೇಕು. ಮನೆಯನ್ನು ಸ್ವಚ್ಚವಾಗಿಟ್ಟುಕೊಳ್ಳಬೇಕು. ಮನೆಯ ಮುಂದೆ ಗಿಡ ಮರಗಳನ್ನು ಹಚ್ಚಬೇಕು. ನಾವು ಯಾವುದೇ ಕೆಲಸ ಮಾಡಿದರು ಸಹ ಸ್ವಚ್ಚವಾಗಿ ಮಾಡಬೇಕು. ಇವುಗಳೆಲ್ಲವುದಕ್ಕಿಂತ ನಮ್ಮ ಮನಸ್ಸನ್ನು ಸ್ವಚ್ಚವಾಗಿಟ್ಟುಕೊಳ್ಳಬೇಕು. ನಮಗೆ ಯಾವುದೇ ರೋಗ ಹರಡದಂತೆ ಎಚ್ಚರಿಕೆ ವಹಿಸಬೇಕು.

ಚೈತ್ರಾ . ಕೆ .ಸುಳ್ಳದ
೮ ನೇ ತರಗತಿ

ಭಾನುವಾರ, ಮಾರ್ಚ್ 21, 2010

ಸೂರ್ಯ ಬಂದ









ಯಾವುದಾದರೊಂದು ಊರಿನಲ್ಲಿ ಸೂರ್ಯನೇ ಬರದಿದ್ದರೆ ಅನೇಕ ತೊಂದರೆಗಳಾಗುತ್ತವೆ. ಊರಿನಲ್ಲಿ ಯಾವ ಚಟುವಟಿಕೆಗಳು ನಡೆಯದೇ ಎಲ್ಲ ಜನರೂ ನಿದ್ದೆ ಮಾಡುತ್ತಿದ್ದರು. ನಾಟಕ ರೀಡಿಂಗನಲ್ಲಿ ನಾನು ನನ್ನದೇ ಊರು ಹೀಗಾದರೆ ಎಂದು ಆಲೋಚಿಸಿದೆ. ಸೂರ್ಯ ಬರದೇ ಇದ್ದರೆ ಯಾವ ಸಸ್ಯಗಳು ಬೆಳೆಯುವುದಿಲ್ಲ ಊರಿನಲ್ಲಿರುವ ಅಜ್ಜ ಮತ್ತು ಮಕ್ಕಳ ತರಹ ಎಲ್ಲರೂ ಧೈರ್ಯ ಮಾಡಿದ್ದರೆ ಯಾವಾಗಲೋ ಸೂರ್ಯನನ್ನು ರಾಕ್ಷಸ ನಿಂದ ಬಿಡಿಸಬಹುದಾಗಿತ್ತು.  ಕಥೆಯಲ್ಲಿ ಮಕ್ಕಳ ಪಾತ್ರ ಅತೀ ಮುಖ್ಯವಾಗಿದೆ. ಮಕ್ಕಳೆಲ್ಲರೂ ರಾಕ್ಷಸ ನಿಗೆ ಹೆದರದೇ ಧೈರ್ಯದಿಂದ ಹೋರಾಡಿ ಸೂರ್ಯನನ್ನು ಬಿಡಿಸಿ ತಂದರು. ಊರಿನ ಜನರೆಲ್ಲಾ ಎದ್ದು ತಮ್ಮ ತಮ್ಮ ಕೆಲಸದಲ್ಲಿ ತೊಡಗಿ ಎಲ್ಲರು ಸುಖವಾಗಿ ಬಾಳ ತೊಡಗಿದರು. ಎಲ್ಲರೂ ಹೇಳುತ್ತಾರೆ ಮಕ್ಕಳೇ ಮುಖ್ಯ ಎಂದು ನಾವು ಎಷ್ಟು ಮುಖ್ಯ ಅನ್ನೋದನ್ನು ನಾವೇ ಮೊದಲು ತಿಳಿದುಕೊಳ್ಳಬೇಕು.  ಒಟ್ಟಾರೆ ಹೇಳಬೇಕಾದರೆ ನಮ್ಮ ಊರಿಗೆ ಎಂತ ದೊಡ್ಡ ತೊಂದರೆ ಬಂದರೂ ಎಲ್ಲರೂ ಸೇರಿ ಎದುರಿಸಬೇಕು ಎಂದು  ನಾಟಕದಿಂದ ತಿಳಿದು ಬರುತ್ತದೆ.

ಯಶೋಧ ಸುಳ್ಳದ , 
೯ ನೇ ತರಗತಿ
ಜಹಗೀರಗುಡದೂರ.

ಭಾನುವಾರ, ಜನವರಿ 17, 2010

ನಾನು ಶಾಲೆ ಬಿಡಲು ಕಾರಣ



ನಾನು ಶಾಲೆಯನ್ನು ಬಿಡಲು ಕಾರಣ ನಮ್ಮ ತಂದೆ ತಾಯಿ ಊರಿಗೆ

ಹೋಗಿದ್ದರು, ನಮ್ಮ ಹೊಲದಲ್ಲಿ ಕೆಲಸ ಮಾಡಲು ಯಾರು ಇಲ್ಲದ

ಕಾರಣ ನಾನು ನಮ್ಮ ಒಲದಲ್ಲಿಹತ್ತಿ ಪ್ಲಾಟ ಮಗ್ಗಿಯನ್ನು ಮುರಿಯಲು

ಹೋಗಲೆಬೇಕಾಗಿದ್ದರಿಂದ ನಾನು ಹೋದೆ. ಆದರೆ ಶಾಲೆಬಿಡುವುದು

ತಪ್ಪು. ನಮ್ಮ ತಂದೆ ತಾಯಿ ಊರಿನಿಂದ ಬಂದರು ನಾನು ಶಾಲೆಗೇ

ಮತ್ತೆ ಬಂದೆ.


ನೀಲಪ್ಪ . ಸಿ . ಪರಮನಟ್ಟಿ
೯ ನೇ ತರಗತಿ
ಜಾ . ಗುಡದೂರ

ನರಿಯ ಆತ್ಮ ವಿಶ್ವಾಸ



ಒಂದು ನರಿ ಹಾಗು ಒಂದು ಕಾಡು ಬೆಕ್ಕು ಹಳ್ಳಿಯ ಹೊರ ಭಾಗದಲ್ಲಿ ಸಂಧಿಸಿದವು. ಇದು ತುಂಭಾ ಆಪಾಯಕಾರಿ ಸ್ಥಳ. ನಾಯಿಗಳ ಕಾಟ ಇಲ್ಲಿ ವಿಪರೀತವಾಗಿ ಇದೆ ಎಂದು ಬೆಕ್ಕು ಹೇಳಿತು.ನಾಯಿಗಳು ನನ್ನನ್ನು ಏನು ಮಾಡಲಾರವು ಎಂದು ನಿರ್ಲಕ್ಷ್ಯ್ತೋರಿದ ನರಿ ಆ ಮೂರ್ಖಪ್ರಾಣಿಗಳಿಂದ ಪಾರಾಗಲು ತನ್ನಲ್ಲಿ ನೂರಾರು ತಂತ್ರಗಳಿವೆ ಎಂದು ಕೊಚ್ಚಿಕೊಂಡಿತು. ಅಷ್ಟರಲ್ಲಿಯೇ ನಾಯಿಯ ಗುಂಪೊಂದು ಅತ್ತ ಕಡೆ ಬರುತ್ತಿರುವುದನ್ನು ಅವು ನೋಡಿದವು. ಬರುತ್ತೇನೆ ಗೆಳೆಯ ಇಲ್ಲಿಂದ ನಾನು ಕಾಲು ಕೀಳುವುದು
ಮೇಲು ನಿನ್ನಂತೆ ನೂರಾರು ಉಪಾಯಾಗಳು ನನ್ನ ಬಳಿ ಇಲ್ಲ. ನಾಯಿಗಳಿಂದ ಪಾರಾಗಲು ಮರ ಏರುವುದು ಒಂದೇ ನನ್ನ ಬಳಿ ಇರುವ ಉಪಾಯ. ಎಂದು ಹೇಳಿ ಬೆಕ್ಕು ಓಡಿ ಹೋಗಿ ಎತ್ತರದ ಮರವನ್ನು ಏರಿತು. ನರಿ ತನ್ನ ಬಳಿ ಇರುವ ನೂರಾರು ತಂತ್ರಗಳಲ್ಲಿಯಾವುದನ್ನು ಬಳಸಿದರೆ ನಾಯಿಗಳಿಂದ ಪಾರಾಗಬಹುದು ಎಂದು ಯೋಚಿಸುವಷ್ಟರಲ್ಲಿಯೇ ನಾಯಿಗಳು ನರಿಯನ್ನು ಆಕ್ರಮಿಸಿ ಬಿಟ್ಟವು.



ಭೀಮಪ್ಪ. ಬಿ. ಕಲ್ಲೂರು
೮ ನೇ ತರಗತಿ, ಜಹಾಗಿರ ಗುಡದೂರ.

ಗುರುವಾರ, ಜನವರಿ 14, 2010

ಮನಸ್ಸು


ಮನುಷ್ಯನಿಗೆ ಎರಡು ಮನಸ್ಸುಗಳು. ಒಂದು ಕೆಟ್ಟ ಮನಸ್ಸು ಮತ್ತು ಒಂದು ಒಳ್ಳೆಯ ಮನಸ್ಸು. ಮನುಷ್ಯರು ಒಳ್ಳೆಯ ಮನಸ್ಸಿನ ಮೇಲೆ ಅವಲಂಬನೆ ಹೊಂದಿರಬೇಕು. ಏಕೆಂದರೆ ಒಳ್ಳೆಯ ಮನಸ್ಸು ನಮ್ಮನ್ನು ಒಳ್ಳೆಯ ದಾರಿಯ ಕಡೆ ಕರೆದುಕೊಂಡು ಹೋಗುತ್ತದೆ. ಕೆಟ್ಟ ಮನಸ್ಸು ಕೆಟ್ಟ ವಿಚಾರಗಳೆಡೆ ಕರೆದುಕೊಂಡು ಹೋಗುತ್ತದೆ. ಅದ್ದರಿಂದ ನಾವು ಒಳ್ಳೆ ಮನಸ್ಸಿನ ಕಡೆ ಗಮನ ಕೊಡಬೇಕು. ಒಳ್ಳೆಯ ವಿಚಾರಗಳನ್ನು ಬೆಳಸಿಕೊಳ್ಳಬೇಕು. ನಾವು ಒಳ್ಳೆಯ ವಿಚಾರಗಳನ್ನು ಬೆಳಸಿಕೋಳ್ಳ ವುದು ಒಳ್ಳೆಯ ಪ್ರಜೆಗಳಾಗ ಬೇಕಾಗಿದೆ.

ಸವಿತಾ.ಸ. ಬಾಗೂರ
೮ ನೇತರಗತಿ
ಜಹಾಗೀರ್ ಗುಡದೂರ