ಗುರುವಾರ, ಸೆಪ್ಟೆಂಬರ್ 18, 2014
ಹೈದ್ರಾಬಾದ್ ಕರ್ನಾಟಕ - ಸೆಪ್ಟಂಬರ್ ೧೭
ಸಂಶೋಧನೆ ಇತಿಹಾಸವನ್ನು ಕೆದಕಿ ನಮಗೆ ಗತಿಸಿಹೋದ ಘಟನೆಗಳನ್ನು ವಿವರವಾಗಿ ಹರವಿ ಇಡುತ್ತದೆ. ಅದಕ್ಕೆ ಸಂಶೋಧಕನ ಪಾತ್ರ ಮಹತ್ವದ್ದು. ತನಗೆ ಆಧಾರ ಹಾಗೂ ಸಾಕ್ಷ್ಯಾಧಾರಗಳ ಮೂಲಕ ಗತಿಸಿದ ಘಟನೆಗಳನ್ನು ಯಾವುದೇ ಪೂರ್ವಗ್ರಹ ಪೀಡಿತರಾಗದೆ ವಿವರಿಸಬೇಕು. ಇಲ್ಲದೇ ಹೋದರೆ ಅದೊಂದು ಕಟ್ಟು ಕಥೆಯಾಗಿ ಬಿಡುತ್ತದೆ. ಹೈದ್ರಾಬಾದ್ ಕರ್ನಾಟಕದ ಪ್ರದೇಶ ಇಂದು ಅಂಥ ಕಟ್ಟು ಕಥೆಗಳಲ್ಲಿ ರಚಿತವಾಗದೇ ವಸ್ತು ಸ್ಥಿತಿಯ ದೊರಕಿದ ಆಧಾರದಿಂದಲೇ ಹೇಳಿ ಮುಂದಿನ ಜಗತ್ತಿಗೆ ಸ್ಪಷ್ಟ ಮಾಹಿತಿ ನೀದಬೇಕಾಗಿದೆ.
ಜಹಗೀರ ಗುಡದೂರ ಒಂದು ಸಣ್ಣ ಗ್ರಾಮ. ಹೈದ್ರಾಬಾದ್ ಕರ್ನಾಟಕದ ಪ್ರದೇಶಕ್ಕೆ ಒಳಪಟ್ಟಿದ್ದು. ಕಳೆದ ಎರಡು ಮೂರು ವರ್ಷಗಳ ಹಿಂದೆ ಪ್ರೌಢಶಾಲೆಯ ಬಳಿ ಒಂದು ಸ್ಮಾರಕವನ್ನು ಕಟ್ಟಿಸಿದರು. ಹುತಾತ್ಮರಾದ ಅಲೀಸಾಬ್ ಹಾಗೂ ವಾಲೀಕರರನ್ನು ಸಾಂಕೇತಿಕವಾಗಿ ನೆನೆಯುವಂಥ ಕಾರ್ಯವನ್ನು ಇಲ್ಲಿ ಮಾಡುವ ಪ್ರಯತ್ನ. ರಜಕಾರಾರ ಸೇನೆಯು ಇಲ್ಲಿಂದ ಸಾಗುತ್ತಿರುವಾಗ ಅವರ ಮೇಲೆ ಈ ಊರಿನ ಗುಂಪೊಂದು ದಾಳಿ ಎಸಗಿತು. ಆದ್ರೆ ಗುಂಪಿನಲ್ಲಿ ಯಾರ ಹತ್ತಿರವು ಶಸ್ತ್ರಗಳಿಲ್ಲದೇ ಕಲ್ಲು, ಕೋಲುಗಳಿಂದ ದಾಳಿ ಮಾಡಿದರು. ರಜಾಕಾರರ ಬಂದೂಕಿನ ಗುಂಡಿಗೆ ಹೆದರಿದ ಗುಂಪು ಅದರಲ್ಲಿ ಅಲೀಸಾಬ್ ಹಾಗೂ ವಾಲೀಕರ್ ಬಲಿಯಾದವರು ಎಂದು ಹೇಳುತ್ತಾರೆ. ಆದ್ರೆ ಹಳ್ಲಿಯ ಹಿರೀಕರು ತಮ್ಮದೇ ಆದ ಮಾತುಗಳನ್ನು ಆಡುತ್ತಾ ಲಡಾಯಿಯ ಕುರಿತು ಭಿನ್ನತೆಯನ್ನು ಬಿಚ್ಚಿಡುತ್ತಿದ್ದಾರೆ.
ಸ್ವತಂತ್ರದ ದಿನಗಳಲ್ಲಿ ಇಡೀ ರಾಷ್ಟ್ರವೇ ಒಂದಾದರೆ ನಿಜಾಮನ ಸಂಸ್ಥಾನ ವಿಲೀನಕ್ಕೆ ಮಣಿಯದೇ ಹೋಯಿತು. ಹಳ್ಳಿ ಹಳ್ಳಿಯಗಳಲ್ಲಿ ಈ ಕುರಿತು ಚರ್ಚೆಗಳಾಗತೊಡಗಿದವು. ಪ್ರತ್ಯೇಕತೆಯೇ ಬೇಡವೆಂದು ಹಲವಾರು ದನಿಗಳನ್ನು ಹತ್ತಿಕ್ಕಲು ನಿಜಾಮನ ಸೇನೆ ಮುಂದಾಯಿತು. ಆದರೆ ಸರ್ದಾರ್ ವಲ್ಲಭಾಬಾಯಿ ಪಟೇಲ್ರ ಆಗಮನದಿಂದ ಆದ ಬದಲಾವಣೆ, ಸಂಪೂರ್ಣ ರಾಷ್ಟ್ರದ ಒಗ್ಗಡೂವಿಕೆಯಾಯಿತು.
ಆದರೆ ಇಂದು ಮುಕ್ಯವಾಗಿ ಮಕ್ಕಳಿಗೆ ಇತಿಹಾಸದ ಆ ದಿನಗಳ ಕುರಿತು ಹೇಳುವಾಗ ವಹಿಸುವ ಎಚ್ಚರಿಕೆ, ವಸ್ತು ಸ್ಥಿತಿಯ ಆಧಾರಗಳೇ ಅತ್ಯಂತ ಮುಖ್ಯವಾದದ್ದು. ನಾವು, ನಮ್ಮ ಸ್ಥಳೀಯ ದಿಂದ ರಾಷ್ಟ್ರ ಮಟ್ಟದ ರಾಜಕಾರಣೀಗಳ ಹೇಳಿಕೆಗಳು ಅದು ಭಾಷಣದ ಉಮೇದಿನಲ್ಲಿ ಏನೆಲ್ಲ ಮಾತನಾಡದೇ ಮಕ್ಕಳಿಗೆ ಅರ್ಥವಾಗುವಂತೆ ಬಿಡಿಸಿ ಹೇಳಬೇಕಾಗಿದೆ. ಹೈದ್ರಾಬಾದ್ ಕರ್ನಾಟಕ ದಿನಾಚರಣೆಯನ್ನು ೧೯೯೮ ರಿಂದ ಆಚರಿಸುತ್ತಾ ಬರಲಾಗುತ್ತಿದೆ. ರಾಜಕಾರಣಿ, ಶಿಕ್ಷಕ, ಸಂಶೋಧಕನ ಹೇಳಿಕೆಗಳು ಕಟ್ತು ಕಥೆಯಾಗದೇ ಆಧಾರಗಳಿಂದಲೇ ಮಾತನಾದುವಂತಾಗಲಿ.
ಬುಧವಾರ, ಸೆಪ್ಟೆಂಬರ್ 17, 2014
ಕಥಾ ಕಮ್ಮಟ
ಪ್ರಿತಿಯಿಂದ ಅನಿಲ್ ಬರೆದು ನನಗೆ ಜಯಂತ ಕಾಯ್ಕಿಣಿಯವರ ಒಂದು ಪುಸ್ತಕವನ್ನು ಇಟ್ಟು ಹೋಗಿದ್ದ ಅನಿಲ್ ಗೆ ಹೇಗೆ ಕೃತಜ್ಜತೆ ತಿಳಿಸಬೇಕೋ ತಿಳಿಯುತ್ತಿಲ್ಲ. ಮೇಘಶ್ಯಾಮ್ ಹಾಗೂ ಅನಿಲ್ ನನ್ನ ಅನುಪಸ್ಥಿತಿಯಲ್ಲಿಯು ಶಾಲೆಯಲ್ಲಿ ಕಮ್ಮಟವನ್ನು ನಡೆಸಿದಾಗ ನನಗೆ ತುಂಭಾ ಸಂತೋಷವಾಯಿತು. ( ೧೩ ನೇ ಸೆಪ್ಟಂಬರ್ ೨೦೧೪ ರಂದು ಮೈಸೂರಿನ ಜಿಲ್ಲಾ ತರಬೆತಿ ಕೇಂದ್ರದಲ್ಲಿ ನಡೆದ ರಾಜ್ಯ ಮಟ್ಟದ ನಾಟಕ, ನೃತ್ಯ ಶಿಕ್ಷಕರ ಶೈಕ್ಷಣಿಕ ಕಾರ್ಯಗಾರದಲ್ಲಿ ಭಾಗವಹಿಸುವ ಅನಿವಾರ್ಯ ಸ್ಥಿತಿಯಲ್ಲಿ ) ಸಿದ್ಧಿ ಫೌಂಡೇಶನ್ ನ ಎಲ್ಲ ಬಳಗಕ್ಕೂ ನಾನು ಸದಾ ನೆನೆಯುತ್ತಾ ನಮ್ಮ ಮಕ್ಕಳು ಈ ಕಮ್ಮಟದ ಅನುಭವವನ್ನು ತಮ್ಮ ಮನಸ್ಸಿನಿಂದ ಎಂದಿಗೂ ತೆಗೆದು ಹಾಕೋದಿಲ್ಲ ಎನ್ನುವುದು ನಾನು ಇಲ್ಲಿ ತಿಳಿಸಲು ಬಯಸುವೆನು. ನಮ್ಮ ಶಾಲೆಯ ಅಕ್ಷರ ನಾಟಕ ಸಂಘ ದ ವಿದ್ಯಾರ್ಥಿಗಳು ಜವಾಬ್ದಾರಿ ನನಗೆ ಹಿಡಿಸಿತು.
ಮಂಗಳವಾರ, ಸೆಪ್ಟೆಂಬರ್ 9, 2014
ಸಿದ್ಧಿ ಫೌಂಡೇಶನ್ - ಕಥಾ ಕಮ್ಮಟ
ಸಿದ್ಧಿ ಫೌಂಡೇಶನ್ ಬೆಂಗಳೂರು ಇದರ ಸ್ಥಾಪಕರಲ್ಲಿ ಒಬ್ಬರಾದ ಮೇಘಶ್ಯಾಮ್ ರವರು ಫೇಸ್ ಬುಕ್ ನಲ್ಲಿ ಹಾಕಿದ ಒಂಡು ಸ್ಟೇಟಸ್ ನಿಂದ ಅದು ನಮ್ಮ ಕೊಪ್ಪಳದ ಮೂಲೆಯಲ್ಲಿರುವ ಪ್ರೌಡಶಾಲೆಗೆ ಬೆಂಗಳೂರಿನಿಂದ ಬಂದು ಮಕ್ಕಳಿಗೆ "ಕಥಾ ಕಮ್ಮಟ" ವನ್ನು ನಡೆಸಲು ಇಚ್ಚಿಸಿ ಆಗಮಿಸಿದ್ದು ನಮಗೆ ತಿಳಿಸಲಾರದಷ್ಟು ಸಂತೋಷವಾಗುತ್ತಿದೆ. ದಿನಾಂಕ ೬.೯.೨೦೧೪ ಹಾಗೂ ೧೩.೯.೨೦೧೪ ರ ಎರಡು ಶನಿವಾರಗಳನ್ನು ನಮ್ಮ ಮಕ್ಕಳೊಂದಿಗೆ ಕಳೆಯಲು ಬಯಸಿದ್ದಾರೆ. ಅದರ ಮೊದಲ ದಿನದ ಮಕ್ಕಳ ಭಾಗವಹಿಸುವಿಕೆ ಚೆನ್ನಾಗಿತ್ತು. ನಮ್ಮ ವಿದ್ಯಾರ್ಥಿಗಳೊಂದಿಗೆ ಕಳೆದ ಸಾಲಿನ ವಿದ್ಯಾರ್ಥಿನಿಯರು ಹಾಗೂ ವಿದ್ಯಾರ್ಥಿಗಳನ್ನು ಆಹ್ವಾನಿಸಿ ಭಾಗವಹಿಸಿ ತಮ್ಮ ಭವಿಷ್ಯವನ್ನು ಕಟ್ಟಿಕೊಳ್ಳಲು ಹಾದಿಯನ್ನು ತೊರಿಸುವ ಕಾರ್ಯ ನನ್ನದು. ಮುಂದೆ ನಿಮ್ಮದೇ ದಾರಿ. ಆ ಮೊದಲ ದಿನದ ಛಾಯಚಿತ್ರಗಳು ಇಲ್ಲಿವೆ.
ಶನಿವಾರ, ಆಗಸ್ಟ್ 23, 2014
ಬುಧವಾರ, ಆಗಸ್ಟ್ 13, 2014
ಹೆಜ್ಜೆಗಳಿಗೆ : ಹೆಜ್ಜೆ ಜೋಡಿಸಿದವರು
ಶಾಲೆಯ ಪಯಣ ಪ್ರಾರಂಭಿಸಿ ಐದು ವರ್ಷಗಳು ಕಳೆಯಲಿಕ್ಕೆ ಬಂದವು. ಅದರಲ್ಲಿ ನಮ್ಮ ಪ್ರಾಮಾಣಿಕವಾದ ಪ್ರಯತ್ನದಿಂದ ಸಾಕಷ್ಟು ಜನರ ಸಂಪರ್ಕ, ಗೆಳೆತನದ ಜೊತೆಗೆ ಕೆಲಸ ಕಾರ್ಯಗಳು ಹೊಸ ದಿಕ್ಕಿನತ್ತ ಸಾಗುತ್ತಿರುವುದಂತು ನಿಜ. ಕಳೆದ ಒಂದು ವರ್ಷದಿಂದ ನಮಗೆ ಸಹಕಾರ ನೀಡಿದ ಇಂಡಿಯಾ ಫೌಂಡೇಷನ್ ಫಾರ್ ದಿ ಆರ್ಟ್ಸ್ - ಬೆಂಗಳೂರು ಹಾಗೂ ಗೋಥೆ ಇನ್ಸಟಟ್ಯೂಟ್ ಮ್ಯಾಕ್ಸ್ ಮುಲ್ಲರ ಭವನ - ಬೆಂಗಳೂರು ಸಂಸ್ಥೆಗಳು ಕಾರ್ಯಕ್ರಮದಲ್ಲಿ ನಮ್ಮನ್ನು ತೊಡಗಿಸಿಕೊಂಡು ಆರ್ಥಿಕ, ಬೌದ್ಧಿಕ ಹಾಗೂ ಸಂವಹನಾತ್ಮಕವಾಗಿ ನಮಗೆ ಸಹಕಾರವನ್ನು ನೀಡಿದೆ.
ಹೊರ ಊರಿನಿಂದ ನಮ್ಮ ಹಳ್ಳಿಗೆ ಬೇಟಿ ನೀಡಿದವರು.....
ಅನುಪಮಾ ಪ್ರಕಾಶ
ಅನಿಲ್ ಕುಮಾರ ಎಚ್.ಎ
ಬೆಂಗಳೂರಿನ ಚಿತ್ರಕಲಾ ಪರಿಷತ್ ನ ಉಪನ್ಯಾಸಕರಾದ
ಶುಭಂ ರಾಯ್ ಚೌದರಿ
ಕಲ್ಕತ್ತಾ ಮೂಲದ ಇಂಡಿಯಾ ಫೌಂಡೇಶನ್ ಫಾರ್ ದಿ ಆರ್ಟ್ಸ್ ನ
ಜೊತೆಯಲ್ಲಿ ಅಕ್ಕಮ್ಮ ಹಾಗೂ ಅನ್ನಪೂರ್ಣ ಬಳ್ಳಾರಿ ಜಿಲ್ಲೆಯ ರಂಗ ಶಿಕ್ಷಕಿಯರು
ಸಹಾನ.ಪಿ
ರಾಷ್ಟ್ರೀಯ ನಾಟಕ ಶಾಲೆಯ ಪದವೀಧರೆ
ಇದಕ್ಕೆ ಸಬ್ಸ್ಕ್ರೈಬ್ ಆಗಿ:
ಪೋಸ್ಟ್ಗಳು (Atom)



























