ಗುರುವಾರ, ಜೂನ್ 28, 2012

2012-13 ನೇ ಸಾಲಿನ ಶಾಲಾ ಸಂಸತ್ತು



ಚುನಾವಣೆ ಬೂತ್ 
ಮತದಾರರು ಸರದಿಯಲ್ಲಿ 
ಮತದಾರರು ಸರದಿಯಲ್ಲಿ 

 ಬೆರಳಿಗೆ ಶಾಹಿ 

ಕೌಂಟರ್ 
ಮತದಾನದ ಪೆಟ್ಟಿಗೆ 

 ಎಣಿಕೆಗೆ ಪೆಟ್ಟಿಗೆಯಿಂದ ಮತಗಳನ್ನು ತೆಗೆಯುತ್ತಿರುವುದು 

ಸುರಕ್ಷತೆಯಲ್ಲಿ  ಪೊಲೀಸರು 
ಬ್ಯಾಲೆಟ್ ವಿತರಣೆ


ಚುನಾವಣೆಯಲ್ಲಿ ಗಲಾಟೆ ಮಾಡಿದವ ಪೋಲೀಸರ ಸೆರೆ

ಶುಕ್ರವಾರ, ಜೂನ್ 22, 2012

ಹಸಿರು ಹಾಡು (ಮಕ್ಕಳಕವನ ಸಂಕಲನ) : ಬಲೂನುವಾಲಾ

ಹಸಿರು ಹಾಡು (ಮಕ್ಕಳಕವನ ಸಂಕಲನ) : ಬಲೂನುವಾಲಾ


ಬಲೂನು ವಾಲಾ
ಬಂದನು ಬಾಲಾ
ಬೇಗನೆ ಬಾ ಬಾ ಹೊರಗೋಡಿ
ಬಗೆ ಬಗೆ ಬಣ್ಣ
ಸೆಳೆವುದು ಕಣ್ಣ
ಖುಷಿ ಪಡು ಬಾ ಬಾ ನೀ ನೋಡಿ
ಕೋಲಿಗೆ ತಾನು
ಸಾಲು ಬಲೂನು
ಸಿಕ್ಕಿಸಿ ಕೈಯಲಿ ಹಿಡಿದಹನು
“ಕೊಡುವೆನು ನಾನು
ಬೇಕೆ ಬಲೂನು?”
ಎನ್ನುತ ಕೂಗುತ ನಡೆದಿಹನು
ಕಾಸನು ತಂದು
ನೀಡುತ ನಿಂದು
“ಕೊಡು ನನಗೊಂದು” ಎಂದು ಬಿಡು,
ಕೊಂಡು ಬಲೂನು
ಹಾರಿಸಿ ನೀನು
ಕುಣಿ ಕುಣಿದಾಡಲು ಬಂದು ಬಿಡು


( ಕಣಜದಿಂದ  : ಪಡೆದಿದ್ದು  ) 

ಗುರುವಾರ, ಜೂನ್ 21, 2012

ಸಾಮೂಹಿಕ ಕ್ರೀಡೆಗಳು



ಸಾಮೂಹಿಕ  ಕ್ರೀಡೆಗಳಲ್ಲಿ  -ಕಬ್ಬಡಿ  ಆಟದ ಕೆಲವು ಛಾಯಾಚಿತ್ರಗಳು.












ಬುಧವಾರ, ಜೂನ್ 6, 2012

ಶಾಲೆಆರಂಭ



ಶಾಲೆ ಪುನರ್ ಆರಂಭಗೊಂಡಿದೆ ಮಕ್ಕಳು ಪ್ರಸ್ತುತ ಮುಂಗಾರು ಮಳೆಯಂತೆ  ನಿಧಾನವಾಗಿ ಶಾಲೆಯತ್ತ ಗಮನ ಹರಿಸುತ್ತಿದ್ದು  ಆಶಾದಾಯಕ. ಗುಳೆ ಹೋಗುವಂಥ ನಮ್ಮ ಗ್ರಾಮೀಣ ಜನರು ಮಕ್ಕಳನ್ನು  ಮರಳಿ ಶಾಲೆಯತ್ತ ಕಳುಹಿಸುವಲ್ಲಿ ಚಿತ್ತ ಹರಿಸುತ್ತಿದ್ದರೆ. ಹೊಸ ಪುಸ್ತಕ, ಬಟ್ಟೆ ಸೈಕಲ್ ಗಳೊಂದಿಗೆ ಮಕ್ಕಳ ಜೇಂಕಾರದ  ಕಲರವ ಎಲ್ಲ ಶಾಲೆಗಳಲ್ಲಿ ಮಾರ್ದನಿಸಲಿವೆ. ಎಲ್ಲೋ ಕಳೆದು ಹೋಗಿದ್ದರೆನೋ ಎಂಬ ಭಾವನೆಗಳನ್ನು ದೂರ ತಳ್ಳಿ ನಾವಿಲ್ಲೇ  ಎಂದು ಅಂಗಳದಲ್ಲೆಲ್ಲ ಜಿಗಿದಾಡುವ ಕ್ಷಣಗಳು ಕಣ್ಣ ತುಂಬಲಿವೆ.

ಗುರುವಾರ, ಮೇ 31, 2012

ಶಾಲಾ ಪ್ರಾರಂಭ ಪ್ರಚಾರ


 ನಾನು ನಮ್ಮೂರು  ಮಕ್ಕಳ ವೇದಿಕೆಯಿಂದ ಶಾಲೆ ಪ್ರಾರಂಭವಾಗಿದೆ 
ಶಾಲೆಗೆ ಬನ್ನಿ ಎಂಬ ಪ್ರಚಾರವನ್ನ ಮಕ್ಕಳೊಂದಿಗೆ 
ನಾಟಕ ಶಿಕ್ಷಕರಾದ ಅಶೋಕ ತೊಟ್ನಳ್ಳಿ ಯವರು
 ದಿನಾಂಕ 31.5.2012 ರಂದು ತಮ್ಮ ಗ್ರಾಮದಲ್ಲಿ 
ವಿಶಿಷ್ಟ ರೀತಿಯಲ್ಲಿ ಗೊಂಬೆಗಳೊಂದಿಗೆ  
ಜನರ ಗಮನ ಸೆಳೆದಿದ್ದು 



ಸ್ಥಳ : ಜಾಕನಪಲ್ಲಿ, ಸೇಡಂ || ತಾ, ಗುಲ್ಬರ್ಗ 

ಸೋಮವಾರ, ಮೇ 28, 2012


2011-12 ನೇ  ಸಾಲಿನ ಎಸ್.ಎಸ್.ಎಲ್.ಸಿ  ಯಲ್ಲಿ  
ಉತ್ತೀರ್ಣರಾದ ಎಲ್ಲಾ ವಿಧ್ಯಾರ್ಥಿಗಳಿಗೆ 
ನಮ್ಮ ಪತ್ರಿಕೆ ಹಾಗೂ ಶಿಕ್ಷಕ ವೃಂದದಿಂದ 
ಶುಭ ಹಾರೈಕೆಗಳು.

ಭಾನುವಾರ, ಮೇ 13, 2012

ಕುವೆಂಪು ಅವರ ಹಸ್ತಪ್ರತಿಗಳನ್ನು 
 ಮುದ್ದಿನ ವಿದ್ಯಾರ್ಥಿಗಳಿಗೋಸ್ಕರ ಇಲ್ಲಿ 
ಕುವೆಂಪು.com ನಿಂದ  ತೆಗೆದುಕೊಂಡಿದ್ದೇವೆ. 
ಮಕ್ಕಳಿಗೆ ಹೊಸ ಹೊಸ ಆಲೋಚನೆ ಈ 
ಹಸ್ತ ಪ್ರತಿಗಳಿಂದ ದೊರಕುತ್ತದೆ ಎಂದು 
ನಂಬಿದ್ದೇನೆ.












ಕೃಪೆ : ಕುವೆಂಪು.com

ಸೋಮವಾರ, ಮೇ 7, 2012

World Theater Day

ವಿಶ್ವ  ರಂಗಭೂಮಿ  ದಿನ 























                   ವಿಶ್ವ  ರಂಗಭೂಮಿ ಅಂಗವಾಗಿ ಶಾಲೆಯಲ್ಲಿ ಕಾರ್ಯಕ್ರಮವನ್ನು ಹಮ್ಮಿಕೊಂಡು ಮಕ್ಕಳಿಗೆ ರಂಗಭೂಮಿಯ ಕುರಿತು ಶಾಲೆಯಲ್ಲಿ ವಿವರವಾಗಿ ಮತ್ತು ನಮ್ಮ ಗ್ರಾಮೀಣ  ಪ್ರದೇಶದಲ್ಲಿ  ಇರುವ ಜನಪದ ರಂಗಭೂಮಿಗೆ ಸಾಕಷ್ಟು ಸಂಪನ್ಮೂಲವನ್ನು ನೀಡಿರುವ ಕುರಿತು ಶಿಕ್ಷಕರು ವಿದ್ಯಾರ್ಥಿಗಳಿಗೆ ಕಿವಿಮಾತು ತಿಳಿ ಹೇಳಿದ್ದು ತುಂಬಾ ವಿಶೇಷವಾಗಿತ್ತು. ಮಕ್ಕಳೂ  ರಂಗಭೂಮಿಯ ದಿನಾಚರಣೆಯ ಮೂಲ ಉದ್ದೇಶವನ್ನು ಅರ್ಥ ಮಾಡಿಕೊಳ್ಳುವಲ್ಲಿ ಹೆಚ್ಚಿನ ಕಾರ್ಯ ಈ ಕಾರ್ಯಕ್ರಮದಿಂದ  ಸಹಾಯವಾಯಿತು. ನಂತರದಲ್ಲಿ ಊರಲ್ಲಿ  ರಂಗಭೂಮಿ ದಿನಾಚರಣೆ ಕುರಿತು ಕಲಾವಿದರು ಹಾಗು ಶಿಕ್ಷಕರು  ಆದ ಶ್ರೀ ರಾಮಚಂದ್ರ ಬಡಿಗೇರ ಅವರು ಹವ್ಯಾಸಿ ಮತ್ತು ವೃತ್ತಿ ರಂಗಭೂಮಿ ಕುರಿತು ವಿಶೇಷ ಉಪನ್ಯಾಸವನ್ನು ನೀಡಿದರು . ಜನರ  ನಡುವೆ ಮಕ್ಕಳು ಪ್ರದರ್ಶಿಸಿದ ನಾಟಕ ಅಳಿಲು ರಾಮಾಯಣ ಒಂದು ಘಂಟೆಗಳ ಕಾಲ ಪ್ರದರ್ಶನ ನೀಡಿದ್ದು, ಪಾಲಕರ ಮನಸೆಳೆಯಿತು .