ಶನಿವಾರ, ಸೆಪ್ಟೆಂಬರ್ 27, 2014

ನನ್ನಯ ಚಿತ್ರಗಳಿವು





ವಿದ್ಯಾರ್ಥಿನಿ ಸಾವಿತ್ರಿ ಕಿನ್ನಾಳ ರಚಿಸಿದ ಚಿತ್ರಗಳಿವು. ನಿರಂತರ ಓದು ನಂತರ ವಿಶ್ರಾಂತಿಗಾಗಿ ಚಿತ್ರ ರಚಿಸುವ ಅಭ್ಯಾಸ ಹಾಕಿಕೊಂಡಿರುವ ಮಗು ತನ್ನನ್ನು ತಾನು ಉನ್ನತ ಶಿಕ್ಷಣಕ್ಕೆ ಸಾಗುವ ಕನಸು ಕಾಣುವ ಸಾವಿತ್ರಿಯ ಹಾದಿಗೆ ಅಡ್ಡಿಯಾಗದೇ ಎಲ್ಲರ ಸಹಾಯ ದೊರಕಲಿ ಎಂದು ಆಶಿಸುವೆ.

ಶನಿವಾರ, ಸೆಪ್ಟೆಂಬರ್ 20, 2014

ಕಥಾ ಕಮ್ಮಟದ - ಪತ್ರಿಕಾ ವರದಿ



ಗುರುವಾರ, ಸೆಪ್ಟೆಂಬರ್ 18, 2014

ಜಿಲ್ಲಾ ಮಟ್ಟದ ವಿಜ್ಣಾನ ನಾಟಕ ಸ್ಪರ್ದೆಯಲ್ಲಿ ಪ್ರಥಮ



ಜಿಲ್ಲಾ ಮಟ್ಟದಲ್ಲಿ ವಿಜ್ನಾನ ನಾಟಕ ಸ್ಪರ್ಧೆಯಲ್ಲಿ ಮೊದಲ ಬಹುಮಾನ ಪಡೆದು ವಿಭಾಗ ಮಟ್ಟಕ್ಕೆ ಆಯ್ಕೆಯಾಗಿದ್ದಲ್ಲದೇ ಶಾಲೆಗೆ ಅತ್ಯುತ್ತಮ ನಟ ಹಾಗೂ ಅತ್ಯುತ್ತಮ ನಿರ್ದೆಶನ ಸಮ್ಮಾನ ದೊರಕಿದೆ. ಸಮಯ, ತಾಲೀಂ ಎಲ್ಲರೊಂದಿಗೆ ಹೊಂದಾಣಿಕೆ ಹೀಗೆ ನಾನಾ ರೀತಿಯ ಸೂಕ್ಷ್ಮ ಕಾರ್ಯಗಳು ಜರಗಬೇಕಾಗಿದೆ. ನಾವೇಲ್ಲರೂ ಮಕ್ಕಳೊಂದಿಗೆ ಸ್ವಲ್ಪ ಬಲೂನಿನಂತೆ ಉಬ್ಬಿದ್ದೇವೆ. ಆದರೆ ಸಾಗಬೇಕಾದ ಹಾದಿ ಸುಲಭದ್ದಲ್ಲ. ಮಕ್ಕಳ ಭರವಸೆ ಇದೆ ಆದರೆ ನನಗೆ ಭರವಸೆಯಲ್ಲ ಪರಿಶ್ರಮ ಬೇಕಾಗಿದೆ. ಅದು ಸಾಧ್ಯವೂ ಇದೆ ಎಂಬ ನಂಬಿಕೆ ಇದೆ.
ಭಾಗವಹಿಸಿದ ವಿದ್ಯಾರ್ಥಿಗಳು

ಪ್ರಶಾಂತ ಸುಳ್ಳದ
ಭೀಮವ್ವ ಡೊಳ್ಳಿನ
ಅಮರೇಶ ಚಿಕನಾಳ
ಸಾವಿತ್ರಿ ಕಿನ್ನಾಳ
ಮುರ್ತುಜಾಖಾದ್ರಿ
ದಾನೇಶ್ ಮಲ್ಲಾಡದ
ನಿಂಗಮ್ಮ ಮುಶಿಗೇರಿ
ರಫಿಯಾ ಜಾಲಿಹಾಳ

ತಂಡದ ವ್ಯವಸ್ಥಾಪಕರು : ಎಸ್.ಬಿ.ಮಾಲೀಪಾಟೀಲ್          ನಾಟಕ ನಿರ್ದೇಶಕರು : ಗುರುರಾಜ್. ಹೊಸಪೇಟೆ

ಕಥಾ ಕಮ್ಮಟದ ಕೆಲವು ಚಿತ್ರಗಳು

ಛಾಯಚಿತ್ರಗಳು : ಮೇಘಶ್ಯಾಮ್ ಹಾಗೂ ಅನಿಲ್ ಕುಮಾರ - ಸಿದ್ಧಿ ಫೌಂಡೇಶನ್, ಬೆಂಗಳೂರು








ಹೈದ್ರಾಬಾದ್ ಕರ್ನಾಟಕ - ಸೆಪ್ಟಂಬರ್ ೧೭



ಸಂಶೋಧನೆ ಇತಿಹಾಸವನ್ನು ಕೆದಕಿ ನಮಗೆ ಗತಿಸಿಹೋದ ಘಟನೆಗಳನ್ನು ವಿವರವಾಗಿ ಹರವಿ ಇಡುತ್ತದೆ. ಅದಕ್ಕೆ ಸಂಶೋಧಕನ ಪಾತ್ರ ಮಹತ್ವದ್ದು. ತನಗೆ ಆಧಾರ ಹಾಗೂ ಸಾಕ್ಷ್ಯಾಧಾರಗಳ ಮೂಲಕ ಗತಿಸಿದ ಘಟನೆಗಳನ್ನು ಯಾವುದೇ ಪೂರ್ವಗ್ರಹ ಪೀಡಿತರಾಗದೆ ವಿವರಿಸಬೇಕು. ಇಲ್ಲದೇ ಹೋದರೆ ಅದೊಂದು ಕಟ್ಟು ಕಥೆಯಾಗಿ ಬಿಡುತ್ತದೆ. ಹೈದ್ರಾಬಾದ್ ಕರ್ನಾಟಕದ ಪ್ರದೇಶ ಇಂದು ಅಂಥ ಕಟ್ಟು ಕಥೆಗಳಲ್ಲಿ ರಚಿತವಾಗದೇ ವಸ್ತು ಸ್ಥಿತಿಯ ದೊರಕಿದ ಆಧಾರದಿಂದಲೇ ಹೇಳಿ ಮುಂದಿನ ಜಗತ್ತಿಗೆ ಸ್ಪಷ್ಟ ಮಾಹಿತಿ ನೀದಬೇಕಾಗಿದೆ.

ಜಹಗೀರ ಗುಡದೂರ ಒಂದು ಸಣ್ಣ ಗ್ರಾಮ. ಹೈದ್ರಾಬಾದ್ ಕರ್ನಾಟಕದ ಪ್ರದೇಶಕ್ಕೆ ಒಳಪಟ್ಟಿದ್ದು. ಕಳೆದ ಎರಡು ಮೂರು ವರ್ಷಗಳ ಹಿಂದೆ ಪ್ರೌಢಶಾಲೆಯ ಬಳಿ ಒಂದು ಸ್ಮಾರಕವನ್ನು ಕಟ್ಟಿಸಿದರು. ಹುತಾತ್ಮರಾದ ಅಲೀಸಾಬ್ ಹಾಗೂ ವಾಲೀಕರರನ್ನು ಸಾಂಕೇತಿಕವಾಗಿ ನೆನೆಯುವಂಥ ಕಾರ್ಯವನ್ನು ಇಲ್ಲಿ ಮಾಡುವ ಪ್ರಯತ್ನ. ರಜಕಾರಾರ ಸೇನೆಯು ಇಲ್ಲಿಂದ ಸಾಗುತ್ತಿರುವಾಗ ಅವರ ಮೇಲೆ ಈ ಊರಿನ ಗುಂಪೊಂದು ದಾಳಿ ಎಸಗಿತು. ಆದ್ರೆ ಗುಂಪಿನಲ್ಲಿ ಯಾರ ಹತ್ತಿರವು ಶಸ್ತ್ರಗಳಿಲ್ಲದೇ ಕಲ್ಲು, ಕೋಲುಗಳಿಂದ ದಾಳಿ ಮಾಡಿದರು. ರಜಾಕಾರರ ಬಂದೂಕಿನ ಗುಂಡಿಗೆ ಹೆದರಿದ ಗುಂಪು ಅದರಲ್ಲಿ ಅಲೀಸಾಬ್ ಹಾಗೂ ವಾಲೀಕರ್ ಬಲಿಯಾದವರು ಎಂದು ಹೇಳುತ್ತಾರೆ. ಆದ್ರೆ ಹಳ್ಲಿಯ ಹಿರೀಕರು ತಮ್ಮದೇ ಆದ ಮಾತುಗಳನ್ನು ಆಡುತ್ತಾ ಲಡಾಯಿಯ ಕುರಿತು ಭಿನ್ನತೆಯನ್ನು ಬಿಚ್ಚಿಡುತ್ತಿದ್ದಾರೆ.

ಸ್ವತಂತ್ರದ ದಿನಗಳಲ್ಲಿ ಇಡೀ ರಾಷ್ಟ್ರವೇ ಒಂದಾದರೆ ನಿಜಾಮನ ಸಂಸ್ಥಾನ ವಿಲೀನಕ್ಕೆ ಮಣಿಯದೇ ಹೋಯಿತು. ಹಳ್ಳಿ ಹಳ್ಳಿಯಗಳಲ್ಲಿ ಈ ಕುರಿತು ಚರ್ಚೆಗಳಾಗತೊಡಗಿದವು. ಪ್ರತ್ಯೇಕತೆಯೇ ಬೇಡವೆಂದು ಹಲವಾರು ದನಿಗಳನ್ನು ಹತ್ತಿಕ್ಕಲು ನಿಜಾಮನ ಸೇನೆ ಮುಂದಾಯಿತು. ಆದರೆ ಸರ್ದಾರ್ ವಲ್ಲಭಾಬಾಯಿ ಪಟೇಲ್ರ ಆಗಮನದಿಂದ ಆದ ಬದಲಾವಣೆ, ಸಂಪೂರ್ಣ ರಾಷ್ಟ್ರದ ಒಗ್ಗಡೂವಿಕೆಯಾಯಿತು. 

 ಆದರೆ ಇಂದು ಮುಕ್ಯವಾಗಿ ಮಕ್ಕಳಿಗೆ ಇತಿಹಾಸದ ಆ ದಿನಗಳ ಕುರಿತು ಹೇಳುವಾಗ ವಹಿಸುವ ಎಚ್ಚರಿಕೆ, ವಸ್ತು ಸ್ಥಿತಿಯ ಆಧಾರಗಳೇ ಅತ್ಯಂತ ಮುಖ್ಯವಾದದ್ದು. ನಾವು, ನಮ್ಮ ಸ್ಥಳೀಯ ದಿಂದ ರಾಷ್ಟ್ರ ಮಟ್ಟದ ರಾಜಕಾರಣೀಗಳ ಹೇಳಿಕೆಗಳು ಅದು ಭಾಷಣದ ಉಮೇದಿನಲ್ಲಿ ಏನೆಲ್ಲ ಮಾತನಾಡದೇ ಮಕ್ಕಳಿಗೆ ಅರ್ಥವಾಗುವಂತೆ ಬಿಡಿಸಿ ಹೇಳಬೇಕಾಗಿದೆ. ಹೈದ್ರಾಬಾದ್ ಕರ್ನಾಟಕ ದಿನಾಚರಣೆಯನ್ನು ೧೯೯೮ ರಿಂದ ಆಚರಿಸುತ್ತಾ ಬರಲಾಗುತ್ತಿದೆ. ರಾಜಕಾರಣಿ, ಶಿಕ್ಷಕ, ಸಂಶೋಧಕನ ಹೇಳಿಕೆಗಳು ಕಟ್ತು ಕಥೆಯಾಗದೇ ಆಧಾರಗಳಿಂದಲೇ ಮಾತನಾದುವಂತಾಗಲಿ.

ಬುಧವಾರ, ಸೆಪ್ಟೆಂಬರ್ 17, 2014

ಕಥಾ ಕಮ್ಮಟ

              ಪ್ರಿತಿಯಿಂದ ಅನಿಲ್ ಬರೆದು ನನಗೆ ಜಯಂತ ಕಾಯ್ಕಿಣಿಯವರ ಒಂದು ಪುಸ್ತಕವನ್ನು ಇಟ್ಟು ಹೋಗಿದ್ದ ಅನಿಲ್ ಗೆ ಹೇಗೆ ಕೃತಜ್ಜತೆ ತಿಳಿಸಬೇಕೋ ತಿಳಿಯುತ್ತಿಲ್ಲ. ಮೇಘಶ್ಯಾಮ್ ಹಾಗೂ ಅನಿಲ್ ನನ್ನ ಅನುಪಸ್ಥಿತಿಯಲ್ಲಿಯು ಶಾಲೆಯಲ್ಲಿ ಕಮ್ಮಟವನ್ನು ನಡೆಸಿದಾಗ ನನಗೆ ತುಂಭಾ ಸಂತೋಷವಾಯಿತು. ( ೧೩ ನೇ ಸೆಪ್ಟಂಬರ್ ೨೦೧೪ ರಂದು ಮೈಸೂರಿನ ಜಿಲ್ಲಾ ತರಬೆತಿ ಕೇಂದ್ರದಲ್ಲಿ ನಡೆದ ರಾಜ್ಯ ಮಟ್ಟದ ನಾಟಕ, ನೃತ್ಯ ಶಿಕ್ಷಕರ ಶೈಕ್ಷಣಿಕ ಕಾರ್ಯಗಾರದಲ್ಲಿ ಭಾಗವಹಿಸುವ ಅನಿವಾರ್ಯ ಸ್ಥಿತಿಯಲ್ಲಿ ) ಸಿದ್ಧಿ ಫೌಂಡೇಶನ್ ನ ಎಲ್ಲ ಬಳಗಕ್ಕೂ ನಾನು ಸದಾ ನೆನೆಯುತ್ತಾ ನಮ್ಮ ಮಕ್ಕಳು ಈ ಕಮ್ಮಟದ ಅನುಭವವನ್ನು ತಮ್ಮ ಮನಸ್ಸಿನಿಂದ ಎಂದಿಗೂ ತೆಗೆದು ಹಾಕೋದಿಲ್ಲ ಎನ್ನುವುದು ನಾನು ಇಲ್ಲಿ ತಿಳಿಸಲು ಬಯಸುವೆನು. ನಮ್ಮ ಶಾಲೆಯ ಅಕ್ಷರ ನಾಟಕ ಸಂಘ ದ ವಿದ್ಯಾರ್ಥಿಗಳು ಜವಾಬ್ದಾರಿ ನನಗೆ ಹಿಡಿಸಿತು.





ಮಂಗಳವಾರ, ಸೆಪ್ಟೆಂಬರ್ 9, 2014

ಸಿದ್ಧಿ ಫೌಂಡೇಶನ್ - ಕಥಾ ಕಮ್ಮಟ

                     
                ಸಿದ್ಧಿ ಫೌಂಡೇಶನ್ ಬೆಂಗಳೂರು ಇದರ ಸ್ಥಾಪಕರಲ್ಲಿ ಒಬ್ಬರಾದ ಮೇಘಶ್ಯಾಮ್ ರವರು ಫೇಸ್ ಬುಕ್ ನಲ್ಲಿ ಹಾಕಿದ ಒಂಡು ಸ್ಟೇಟಸ್ ನಿಂದ ಅದು ನಮ್ಮ ಕೊಪ್ಪಳದ ಮೂಲೆಯಲ್ಲಿರುವ ಪ್ರೌಡಶಾಲೆಗೆ ಬೆಂಗಳೂರಿನಿಂದ ಬಂದು ಮಕ್ಕಳಿಗೆ "ಕಥಾ ಕಮ್ಮಟ" ವನ್ನು ನಡೆಸಲು ಇಚ್ಚಿಸಿ ಆಗಮಿಸಿದ್ದು ನಮಗೆ ತಿಳಿಸಲಾರದಷ್ಟು ಸಂತೋಷವಾಗುತ್ತಿದೆ. ದಿನಾಂಕ ೬.೯.೨೦೧೪ ಹಾಗೂ ೧೩.೯.೨೦೧೪ ರ ಎರಡು ಶನಿವಾರಗಳನ್ನು ನಮ್ಮ ಮಕ್ಕಳೊಂದಿಗೆ ಕಳೆಯಲು ಬಯಸಿದ್ದಾರೆ. ಅದರ ಮೊದಲ ದಿನದ ಮಕ್ಕಳ  ಭಾಗವಹಿಸುವಿಕೆ ಚೆನ್ನಾಗಿತ್ತು. ನಮ್ಮ ವಿದ್ಯಾರ್ಥಿಗಳೊಂದಿಗೆ ಕಳೆದ ಸಾಲಿನ ವಿದ್ಯಾರ್ಥಿನಿಯರು ಹಾಗೂ ವಿದ್ಯಾರ್ಥಿಗಳನ್ನು ಆಹ್ವಾನಿಸಿ ಭಾಗವಹಿಸಿ ತಮ್ಮ ಭವಿಷ್ಯವನ್ನು ಕಟ್ಟಿಕೊಳ್ಳಲು ಹಾದಿಯನ್ನು ತೊರಿಸುವ ಕಾರ್ಯ ನನ್ನದು. ಮುಂದೆ ನಿಮ್ಮದೇ ದಾರಿ. ಆ ಮೊದಲ ದಿನದ ಛಾಯಚಿತ್ರಗಳು ಇಲ್ಲಿವೆ.