ಗುರುವಾರ, ಡಿಸೆಂಬರ್ 22, 2011

ಶರಣಪ್ಪ ವಡಗೇರಿ-ಜಾನಪದ





               ಶರಣಪ್ಪ ವಡಗೇರಿ  ಅವರು ನಮ್ಮ ಶಾಲೆಯಲ್ಲಿ ಜನಪದ ಹಾಗೂ ಸ್ವಚ್ಛತ ಕುರಿತು ಹಾಡುಗಳನ್ನು ಮಕ್ಕಳ ಮುಂದೆ ಪ್ರದರ್ಶಿಸಿದರು. ಜಾನಪದವನ್ನು ಇಂದು ಜಾಗೃತಿಗಾಗಿ ಹಳ್ಳಿ ಹಳ್ಳಿಯಲ್ಲಿ ಪ್ರದರ್ಶನವನ್ನು ನೀಡುತ್ತಿರುವ ಶರಣಪ್ಪ ವಡಗೇರಿ ಹಳ್ಳಿಗರ ಮನಸ್ಸನ್ನು ಸೆರೆ ಹಿಡಿಯುವಲ್ಲಿ ಮುಂಚುಣಿಯಲ್ಲಿದ್ದಾರೆ. ತಮ್ಮ ಮಾತಿನ - ಹಾಡಿನಲ್ಲಿ ಎಚ್ಚರ ಆಗು ಇಲ್ಲದಿದ್ದರೆ ಹಾಳಾಗಿ ಹೋಗ್ತೀಯಾ ಎಂದು ಬಡೆದಂತೆ ಓದು ಬಾರದ, ಮಕ್ಕಳು-ಹಿರಿಯರು-ತಿಳಿದವರಿಗೂ ತಮ್ಮ ಜಾನಪದದ ಹಾಡುಗಳ ಮುಖಾಂತರ ಜಾಗೃತಿಯನ್ನು ಮೂಡಿಸುವಲ್ಲಿ ಮುಂದಿದ್ದಾರೆ ಎಂದು ಹೇಳಬೇಕು. ನನಗೆ ನನ್ನ ಪ್ರೌಧಶಾಲೆಯಲ್ಲಿ  ಅಭ್ಯಾಸ ಮಾಡುವ ದಿನಗಳು ನೆನಪಿಗೆ ಬರುತ್ತವೆ. ಅಬ್ದುಲ್ ಸಾಬ್ ನನ್ನ  ಗೆಳೆಯರನೆಲ್ಲ  ಬೀದಿನಾಟಕ ಮಾಡಲಿಕ್ಕೆ ಕರೆದುಕೊಂಡು ಹೋಗುವ ಸಮಯ, ಸಂಗೀತ ಮತ್ತು ನಾಟಕ ವಿಭಾಗದಿಂದ ಆಯ್ಕೆಗೊಂಡು ಜಿಲ್ಲೆಯಿಂದ ಜಿಲ್ಲೆಗೆ, ಹಳ್ಳಿಯಿಂದ ಹಳ್ಳಿಗೆ ಸಾಗುತ್ತಾ  ಜನರ ಪ್ರೀತಿ ವಿಶ್ವಾಸ ...... ಹೇಳಲಾರದಷ್ಟು ಅನುಭವಗಳು ನನ್ನ ವಿದ್ಯಾಭ್ಯಾಸದ ದಿನಗಳಲ್ಲಿಯೇ ದೊರಕುತ್ತಿದ್ದನ್ನು ಎಂದಿಗೂ ಮರೆಯಲು ಸಾಧ್ಯವಿಲ್ಲ. 

      ಜಾನಪದದಲ್ಲಿಯೇ ತೊಡಗಿಸಿಕೊಂಡಿರುವ ಶಂಕ್ರಣ್ಣ ಸಂಕಣ್ಣನವರು ಹಾಗೂ ಶರಣಪ್ಪ ವಡಗೇರಿಯವರು ನನಗೆ ಬೆಂಗಳೂರಿನಲ್ಲಿಯೇ ಪರಿಚತರಾಗಿದ್ದರು ಇಂದು ಅವರು ಗುರುತಿಸದಂತೆ ಆಗಿದ್ದೇನೆ.  ಅವರು ಹಳ್ಳಿಯ ಜನರ ಜಾಗೃತಿಯ ಕಾರ್ಯಕ್ರಮದ ನಡುವೆ ನಮ್ಮ ಶಾಲೆಗೂ ಬೇಟಿ ನೀಡಿ, ನಮ್ಮ ಮಕ್ಕಳು ನಾಟಕಗಳಲ್ಲಿ ಜಾನಪದದ ಕುರಿತು ಆಲೋಚಿಸುವಂಥ ಅವಕಾಶವನ್ನು ತೆರೆದಿಟ್ಟಿದ್ದಾರೆ. ಅವರ ಹಾಗೂ ತಂಡದವರೆಲ್ಲರಿಗೂ ನಮ್ಮ ಶಾಲೆಯ ಪರವಾಗಿ ಅಭಿನಂದನೆಗಳನ್ನು ತಿಳಿಸುತ್ತೇನೆ.