ಗುರುವಾರ, ಆಗಸ್ಟ್ 29, 2019
ಬುಧವಾರ, ಆಗಸ್ಟ್ 21, 2019
ಶುಕ್ರವಾರ, ಆಗಸ್ಟ್ 9, 2019
ಗುರುವಾರ, ಆಗಸ್ಟ್ 8, 2019
ಶನಿವಾರ, ಆಗಸ್ಟ್ 3, 2019
ಗುರುವಾರ, ಆಗಸ್ಟ್ 1, 2019
ಬುಧವಾರ, ಜುಲೈ 24, 2019
ಗುರುವಾರ, ಜೂನ್ 27, 2019
ಮಂಗಳವಾರ, ಜೂನ್ 25, 2019
ಮಂಗಳವಾರ, ಜೂನ್ 18, 2019
ವಿಧಾನ ಪರಿಷತ್ ಸದಸ್ಯರಾದ ಶ್ರೀ ಶರಣಪ್ಪ ಮಟ್ಟೂರ ಅವರಿಗೆ ರಂಗ ಶಿಕ್ಷಕರ ಮನವಿ
ಇಂದು ನಮ್ಮ ಶಾಲೆಗೆ ವಿಧಾನ ಪರಿಷತ್ ಸದಸ್ಯರಾದ ಶ್ರೀ ಶರಣಪ್ಪ ಮಟ್ಟೂರರವರು ನಮ್ಮ ಶಾಲೆಗೆ ಆಗಮಿಸಿದ್ದರು. ರಾಜ್ಯದಲ್ಲಿ ನಾಟಕ ಶಿಕ್ಷಕರು ಬೆರಳೆಣಿಕೆಯಷ್ಟಿದ್ದು ಎಲ್ಲರೂ ಇರುವ ಜಾಗಗಳಲ್ಲಿ ಕ್ರಿಯಾಶೀಲರಾಗಿದ್ದು ಶಾಲೆ, ಸಮುದಾಯವನ್ನು ಒಳಗೊಂಡಂತೆ ಸಾಂಸ್ಕೃತಿಕವಾಗಿ ಕಟ್ಟುವಲ್ಲಿ ನಿರತರಾಗಿದ್ದೇವೆ. ಆದರೆ ನಮ್ಮ ನೇಮಕಾತಿ, ವೇತನ ಶ್ರೇಣಿ, ವರ್ಗಾವಣೆಯಲ್ಲಿ ಆಗಿರುವ ತೊಂದರೆಗಳ ಬಗ್ಗೆ ಮನವರಿಕೆ ಮಾಡಿ ನಮ್ಮ ನಾಟಕ ಶಿಕ್ಷಕ ವೃಂದದ ಸಮಸ್ಯಗಳ ಅರ್ಜಿಯೊಂದನ್ನು ಶ್ರೀ ಶರಣಪ್ಪ ಮಟ್ಟೂರ ಅವರಿಗೆ ಸಲ್ಲಿಸಲಾಯಿತು.
ಗುರುವಾರ, ಜೂನ್ 13, 2019
ಸೋಮವಾರ, ಜೂನ್ 10, 2019
ಗಿರೀಶ್ ಕಾರ್ನಾಡ ಅವರ ಜೊತೆ
ಮಿ|| ಜಂಟಲಮ್ಯಾನ್ ,
"ಆಡಾಡತ ಆಯುಷ್ಯ " ದಲ್ಲಿ ನಿಮ್ಮ ಪಯಣವನ್ನು ಓದಿ ಹೇಗೆ ಪ್ರತಿಕ್ರಿಯಿಸ ಬೇಕೆಂದು ತಿಳಿಯದೆ ನನ್ನಿಂದ ಶಬ್ದಗಳೇಹೊರಡುತ್ತಿಲ್ಲ. ನಿಮ್ಮ ಈ ಬರವಣಿಗೆಯಲ್ಲಿ ನನ್ನನ್ನು ನಾನು ಕಂಡುಕೊಳ್ಳುತ್ತಿದ್ದೇನೆ. ಕಾರಂತರ ಪಲಾಯನ , ನಿಮ್ಮ oup ನಲ್ಲಿ ಚಿತ್ರಪಟ , ಬರವಣಿಗೆ ಹೀಗೆ ಎಲ್ಲವೂನನ್ನನ್ನು ಕಾಡುತ್ತವೆ.
ಈ ಮೊದಲು ಕಾರಂತರನ್ನು ಓದಿ ಕೊಂಡು ನಾನು ಓಡಿದ್ದೆ. ಆದರೆ ಒಳ್ಳೆ ಸ್ನೇಹಿತನ ಮನೆಯಲ್ಲಿ ಆಶ್ರಯ ಪಡೆದು ಅಂದು ಕೊಂಡ ಕ್ಷೇತ್ರದಲ್ಲಿ ಸಣ್ಣದಾಗಿಪಯಣವಂತು ನಡದೇ ಇದೆ. ಕ್ಷಮಿಸಿ ನಾನು ನಿಮ್ಮ ಮಗಳ ವಯಸ್ಸಿನವನು. ಭರವಸೆಯನ್ನು ಗಟ್ಟಿಯಾಗಿಯೇ ಇಟ್ಟುಕೊಂಡಿದ್ದೇನೆ. ನಿಮ್ಮ ಈ ಪುಸ್ತಕದ ಓದು ನನ್ನನ್ನು ಇನ್ನುಹುರಿಗೊಳಿಸಲು
ಸಹಾಯಕವಾಗಿದೆ ಎಂದು ತಿಳಿಸುತ್ತಾ ತಮ್ಮ ಮುಂದಿನ "ನೋಡುನೋಡುತ ದಿನಮಾನ" ಕಾಯುತ್ತೇನೆ.
ಗುರುರಾಜ
====================================================================================

ಪ್ರಿಯ ಗುರುರಾಜ್,
ನಿಮ್ಮ ಪತ್ರಕ್ಕಾಗಿ ಆಭಾರಿ. "ಆಡಾಡತ ಆಯುಷ್ಯ " ಓದಿ ನಿಮಗೆ ಖುಷಿ ಯಾಯಿತೆಂದು ತಿಳಿದು ಸಂತೋಷವಾಯಿತು.
ಶುಭಾಶಯಗಳೊಂದಿಗೆ,
ಗಿರೀಶ್ ಕಾರ್ನಾಡ್
====================================================================================
ಅಕ್ಟೊಬರ್ ೨೦೧೧ ರಲ್ಲಿ ಬರೆದ ಬರಹ
ಶನಿವಾರ, ಜೂನ್ 8, 2019
ಶುಕ್ರವಾರ, ಮೇ 3, 2019
ಮಕ್ಕಳಿಗೆ ನಿಘಂಟು / dictionary ನೋಡುವುದನ್ನು ಕಲಿಸಿ.
ಯೋಗೇಶ್ ರಾಜಮಾರ್ಗ ಅವರ ಫೇಸ್ ಬುಕ್ ನಿಂದ
೧. ಅವರಿಗೆ ಪ್ರತಿದಿನ ಯಾವುದೋ ಸಾಹಿತ್ಯದ ಒಂದು ಪುಟ ಓದಿಸಿ.
೨. ಅದರಲ್ಲಿ ತಿಳಿಯದ, ಕಷ್ಟದ ಪದಗಳನ್ನು ಗುರುತಿಸಿ ಪಟ್ಟಿ ಮಾಡಲು ಹೇಳಿ.
೩. ನಂತರ ನಿಘಂಟಿನಲ್ಲಿ ಅವುಗಳ ಅರ್ಥ ಹುಡುಕಲು ಪ್ರೇರೇಪಿಸಿ.
೪. ಕಂಡುಕೊಂಡ ಅರ್ಥಗಳನ್ನೂ ಬರೆದಾದ ಮೇಲೆ, ಸ್ವಂತವಾಕ್ಯದಲ್ಲಿ ಉಪಯೋಗಿಸಲು ಪ್ರೇರೇಪಿಸಿ.
೫. ಕಠಿಣ ಪದಗಳ ಅರ್ಥ ಗೂಗಲ್ ಮಾಡಿದರೂ ಸಿಗುತ್ತವೆ. ಆದರೆ ಮನೆಯಲ್ಲಿ ಡಿಕ್ಶನರಿಯನ್ನೇ ಬಳಸಲಿ. ಗೂಗಲಮ್ಮ ಹೊರಗೆ ಅನಿವಾರ್ಯದ ಸಂದರ್ಭದಲ್ಲಿ ನೆರವಾಗಲಿ. ನಿಘಂಟಿನಲ್ಲಿ ಪದವನ್ನು ಹುಡುಕುವಾಗ ಬೇರೆ ಪದಗಳ ಪರಿಚಯವೂ ಆಗುತ್ತದೆ.
೬. ಇದಕ್ಕಾಗಿ ನೀವು ಮಕ್ಕಳ ಜೊತೆಗೆ ಒಂದು ಗಂಟೆ ಕೂತ್ಕೊಳ್ಳಿ. ಅವರಿಗೆ ಕಲಿಸುವ ನೆಪದಲ್ಲಿ ನೀವೂ ಕಲಿಯುತ್ತೀರಿ. Teaching is the best way of learning.
ಬುಧವಾರ, ಏಪ್ರಿಲ್ 24, 2019
ಮಕ್ಕಳು , ಶಿಕ್ಷಣ , ರಂಗಭೂಮಿ
ಮಕ್ಕಳು , ಶಿಕ್ಷಣ , ರಂಗಭೂಮಿ
ಹೆಚ್ಚಿನ ಫಸ್ಟ್ ವರ್ಲ್ಡ್ ದೇಶಗಳು ರಂಗಭೂಮಿಯ ಪಾಠಗಳನ್ನು ಅವರ ಶೈಕ್ಷಣಿಕ ಕಲಿಕೆಗಳ ಭಾಗವಾಗಿಸಿವೆ. ಅಂದರೆ ರಂಗಭೂಮಿಯನ್ನು ಅವರ ಕಲಿಕಾ ಮಾಧ್ಯಮವಾಗಿಸಿಕೊಂಡಿವೆ. ರಂಗಭೂಮಿ ಮಕ್ಕಳಿಗೆ ಹಲವು ಬಗೆಯ ಕೌಶಲ್ಯ ,ಕಸುಬುಗಾರಿಕೆಯನ್ನ ಕಲಿಸುತ್ತದೆ ,ಹೌದು. ಅದು ರಂಗಭೂಮಿಯ ತೀರ ಮೇಲ್ಪದರದ ಉಪಯೋಗ ಅದರ ಜೊತೆಗೆ ಇನ್ನೊಂದಷ್ಟು ದೇಹ ಸಂಬಂಧಿ , ಭಾವ ಸಂಬಂಧಿ ಉಪಯೋಗಗಳು ಇದ್ದೆ ಇರುತ್ತವೆ. ಅವುಗಳನ್ನು ನಾನಿಲ್ಲಿ ಅಲ್ಲಗಳೆಯುತ್ತಿಲ್ಲ.
ನನಗೆ ರಂಗಭೂಮಿ ಮಕ್ಕಳ ಕಲಿಕೆಯ ಭಾಗವಾಗಬೇಕು ಅನಿಸುವುದು ರಂಗಭೂಮಿ ಒಂದು ಸಾಮುದಾಯಿಕ ಕಲೆಯಾಗಿ ಮಕ್ಕಳಲ್ಲಿ ಸೃಜಿಸಬಹುದಾದ ಕಲ್ಪನಾಶಕ್ತಿಯ ಕಾರಣಕ್ಕಾಗಿ. ಅದು ಏಕಕಾಲಕ್ಕೆ ವೈಯಕ್ತಿಕವೂ ಮತ್ತು ಸಾಮುದಾಯಿಕವೂ ಆದ ಕಲ್ಪನಾಜಗತ್ತನು ಸೃಷ್ಟಿಸುತ್ತದೆ ಮತ್ತು ಆ ಜಗತ್ತಿನೊಳಗೆ ತನ್ನ ಸುತ್ತಲಿನ ಜೀವ ಕೋಟಿಯನ್ನು ಒಳಗೊಳ್ಳಲು ಬಯಸುತ್ತದೆ.
ಕಲ್ಪನಶಕ್ತಿಗೂ, ಜ್ಞಾನಕ್ಕೂ,ಪ್ರಭುತ್ವಕ್ಕೂ ದೊಡ್ಡ ಸಂಭದವಿದೆ.ಕಲ್ಪನಾಶಕ್ತಿ ಯಾವುದೇ ಸೃಜನಶೀಲ ಪ್ರಕ್ರಿಯೆಯ ಮೂಲ ಬೇರು. ಅದು ನಟನೆ, ಚಿತ್ರಕಲೆ, ಕಾವ್ಯರಚನೆ ಇಷ್ಟೇ ಅಲ್ಲ ನಾವು ತೀರ ಲೆಕ್ಕಾಚಾರದ ವಿಷಯಗಳು ಅಂದುಕೊಳ್ಳುವ ಗಣಿತ ಮತ್ತು ವಿಜ್ಞಾನ,ರಾಜಕಾರಣದಂತಹ ಜ್ಞಾನಶಾಖೆಗಳು ಕೂಡ ಕಲ್ಪನಾಶಕ್ತಿಯ ಬೆಂಬಲವಿಲ್ಲದೆ ಹೆಚ್ಚಿನದನ್ನು ಕಾಣಲಾರವು ಮತ್ತು ಹೇಳಲಾರವು.ದಾರ್ಶನಿಕತೆ, ಕಾಲಜ್ಞಾನ ಇವೆಲ್ಲವೂ ಕೂಡ ಒಂದು ಸೂಕ್ಷ್ಮ ಕಲ್ಪನಾಶೀಲಗ್ರಹಿಕೆಗೆ ದಕ್ಕುವ ಅಭಿವ್ಯಕ್ತಿಗಳು . ಮಾನವಶಾಸ್ತ್ರದಲ್ಲಿ ಹೇಳುವ ಹಾಗೆ ಕಲ್ಪನಾ ಶಕ್ತಿ ಎನ್ನುವುದು ರೂಪುಗೊಂಡಿರುವುದು ಮನುಷ್ಯನ ಉಳಿವಿಗಾಗಿ ಬೇಕಾಗಿರುವ ಹತಾರವಾಗಿ. imagination is part of human survival instinct. ಇನ್ನು ಹೆಚ್ಚು ಹೇಳಬೇಕಂದರೆ imagination is power. ಆದ್ದರಿಂದ ಮಕ್ಕಳ ಕಲ್ಪನಾ ಜಗತ್ತನ್ನು ವಿಸ್ತರಿಸುವುದು ಮತ್ತು ಆ ಮೂಲಕ ಅವರು ಬೇರೆ ಬೇರೆ ಜ್ಞಾನದ ಬೆರಗುಗಳಿಗೆ ತೆರೆದುಕೊಳ್ಳುವಂತೆ ಮಾಡಬೇಕಾದ್ದು ನಮ್ಮ ಶಿಕ್ಷಣದ ಮೂಲ ಉದ್ದೇಶಗಳಲ್ಲಿ ಒಂದಾಗಬೇಕಾಗಿತ್ತು. ಆದರೆ ಹಾಗೆ ಆಗುತ್ತಿದೆಯೇ? ಪ್ರತಿಮಗುವಿಗೂ ಹುಟ್ಟಿನಿಂದ ಹಾಗೂ ತನ್ನ ಜನಾಂಗಿಯ ಸ್ಮೃತಿಯ ಹಿನ್ನೆಲೆಯಲ್ಲಿ ಬಳುವಳಿಯಾಗಿ ಬಂದಿರುವ ಹಲವಾರು ಜ್ಞಾನವನ್ನು ವಿಜ್ಞಾನದ ಭಾಷೆಯಲ್ಲಿ ಸೆಲ್ಯುಲರ್ ಮೆಮೋರಿ (ಕೋಶ ಸ್ಮೃತಿ )ಎಂದು ,ರಂಗಭೂಮಿಯ ಭಾಷೆಯಲ್ಲಿ ದೇಹ ಸ್ಮೃತಿ (body memory ,ಇದು ಸ್ತನಿಸ್ಲಾವಕ್ಸಿ ಹೇಳುವ ಭಾವಸ್ಮ್ರುತಿಗಿಂತ ಬೇರೆಯಾದ್ದು ) ಎಂದು ಕರೆಯುತ್ತೇವೆ. ಈ ಜ್ಞಾನಕ್ಕೆ ಮಗುವಿನ ಕಲ್ಪನಾ ಜಗತ್ತಿನಲ್ಲಿ ಜಾಗವಿರುತ್ತದೆ ಅದು ಅಭಿವ್ಯಕ್ಥಿಗೊಳ್ಳಲು ಕಾಯುತ್ತಿರುತ್ತದೆ.ಮಗುವಿನ ಕಲ್ಪನಾ ಜಗತ್ತನ್ನು ನಾವು ಆರೋಗ್ಯಪೂರ್ಣವಾಗಿ ಇರುವಂತೆ ನೋಡಿಕೊಂಡರೆ ಆಯಾ ಕಾಲದ, ಪರಿಸರದ, ಇನ್ನು ಹಲವು ಸ್ಮೃತಿಗಳು ದಾಖಲಾಗುತ್ತಾ ಹೋಗುತ್ತವೆ. ಇವು ಮಕ್ಕಳ ಗ್ರಹಿಕೆ ಮತ್ತು ಅಭಿವ್ಯಕ್ತಿಗಳು ಸ್ಪಷ್ಟವಾಗುತ್ತಾ ಸೂಕ್ಷ್ಮವಾಗುತ್ತಾ ಹೋಗುವುದಕ್ಕೆ ಸಹಾಯ ಮಾಡುತ್ತವೆ. ಇದ್ದನ್ನೇ ನಾವು ಪ್ರಜ್ಞೆಯ ವಿಕಾಸ ಅನ್ನುವುದು. ನಾವು ನಮ್ಮ ಶಿಕ್ಷಣದ ಗುಣಮಟ್ಟವನ್ನು ಅಳೆಯಬೇಕಾದ್ದು ಇದರ ಆಧಾರದ ಮೇಲೆ ಹೊರತು ಅಂಕಗಳು ಮತ್ತು ರಾಂಕ್ಗಳ ಮೂಲಕವಲ್ಲ.
ಪ್ರಜ್ಞೆಯ ವಿಕಾಸದ ಪ್ರಕ್ರಿಯೆಯನ್ನು ನಮ್ಮ ಶಿಕ್ಷಣ ವ್ಯವಸ್ತೆಯು ಇನ್ನಷ್ಟು ಮುತವರ್ಜಿ ವಹಿಸಿ ಹೆಚ್ಚಿನ ಜವಾಬ್ದಾರಿಯಿಂದ ಮಾಡಬೇಕಿತ್ತು. ಆದರೆ ಪ್ರಭುತ್ವ ಅದನ್ನು ಮಾಡುಲು ಬಿಡುವುದಿಲ್ಲ. ಕಾರಣ ಪ್ರಜ್ಞಾವಂತಿಕೆ ಯಾವಾಗಲು ಸ್ವತಂತ್ರವಾಗಿರಲು , ಅನನ್ಯವಾಗಿರಲು ಬಯಸುತ್ತದೆ. ಅದು ಗುಲಾಮತನವನ್ನು ,ಸರ್ವಾಧಿಕಾರವನ್ನು ಮತ್ತು ಏಕಮುಖ ಸಂಸ್ಕೃತಿಯನ್ನು ವಿರೋದಿಸುತ್ತದೆ. ಹೀಗೆ ಕಲ್ಪನಾ ಶಕ್ತಿಯನ್ನು ದುರ್ಬಳಗೊಳಿಸುವ ಮೂಲಕ , ಪ್ರಜ್ಞಾವಂತಿಕೆಯನ್ನು ಇಲ್ಲವಾಗಿಸಿ ಪ್ರಭುತ್ವವು ತನ್ನ ಆಟವನ್ನು ನಡೆಸುತ್ತ ಹೋಗುತ್ತದೆ. ಆ ಆಟದ ಭಾಗವಾಗಿಯೇ ನಾವಿಂದು ಸರ್ವಾಧಿಕಾರವನ್ನು ತೀರ ಸಹಜವೆಂಬಂತೆ ಒಪ್ಪಿಕೊಳ್ಳುತ್ತಿರುವುದು.
ರಂಗಭೂಮಿಯದು ಇದಕ್ಕೆ ವಿರುದ್ದವಾದ ಕೆಲಸ. ಕಾಲ ಕಾಲಕ್ಕೂ ನಿಶ್ಯಕ್ತವಾಗುತ್ತಿರುವ ಪ್ರಜ್ಞಾವಂತಿಯನ್ನು ಹರಿತ ಮಾಡುತ್ತಾ ಹೋಗುವುದು. ಮಕ್ಕಳ ರಂಗಭೂಮಿಯು ಈ ಪ್ರಜ್ಞಾವಿಕಾಸ ಪ್ರಕ್ರಿಯೆಯ ಆರಂಭದ ಹದಗೊಳಿಸುವ ,ಬೀಜ ಬಿತ್ತುವ ಕೆಲಸವನ್ನು ಸರಿಯಾಗಿ ಮಾಡಬೇಕು. ಮಕ್ಕಳ ಶಿಬಿರಗಳಲ್ಲಿ ರಿಯಾಲಿಟಿ ಶೋಗಳ ನಟ ನಟಿಯರನ್ನೋ ,ಸಿನಿಮಾ ಕಲಾವಿದರನ್ನೋ ಮಕ್ಕಳ ಮುಂದೆ ಮಾದರಿಯಾಗಿ ಇಡುವುದು ಅವರು ಮಾಡುತ್ತಿರುವ ವೃತ್ತಿಯ ಕಾರಣಕ್ಕೆ ಕೆಟ್ಟ ಮಾದರಿಗಳಲ್ಲ, ಬದಲಿಗೆ ಅವು ಮಕ್ಕಳ ಕಲ್ಪನಾ ಶಕ್ತಿಯನ್ನು, ಜಗತ್ತನ್ನು, ಪ್ರಜ್ಞಾವಿಕಾಸವನ್ನುಮಿತಗೊಳಿಸುತ್ತವೆಯಾದ್ದರಿಂದ ಅವು ಹೆಚ್ಚು ಮಾರಕವಾದವು.ಇಂತಹ ಮಾದರಿಗಳಿಂದ ರಂಗಭೂಮಿ ಮೂಲಸತ್ವವೇ ಮಕ್ಕಳಿಗೆ ದಾಟುವುದಿಲ್ಲ. ಅದು ಒಂದು ಸಮಾಜವು ,ಸಮುದಾಯವು ಒಂದು ಕೂಸಿಗೆ ಅಂದರೆ ತನ್ನ ಮುಂದಿನ ತಲೆಮಾರಿಗೆ ಮಾಡಬಹುದಾದ ಮಹಾವಂಚನೆ. ಇದೊಂದು ಸಣ್ಣ ವಿಚಾರ ಇದ್ಯಾಕೆ ಇಷ್ಟೊಂದು ದೊಡ್ಡದಾಗಿ ಬರೆಯುತ್ತಿದ್ದಾರೆ ಅನ್ನಿಸಿಬಹುದು. ಆದರಿದು ನಾವು ಅಂದುಕೊಂಡಷ್ಟು ಸಣ್ಣದಲ್ಲ. ಈ ರೀತಿ ನಾವು ಕಳೆದ ದಶಕಗಳಲ್ಲಿ ಶಿಕ್ಷಣದಲ್ಲಿ ಮಾಡಿರಬಹುದಾದ ಸಣ್ಣ ಸಣ್ಣ ತಪ್ಪುಗಳೇ ಇಂದು ಇಂಡಿಯ ದೇಶವನ್ನು ಇಷ್ಟು ಕೆಟ್ಟ ರಾಜಕೀಯ ವ್ಯವಸ್ತೆಗೆ,ಸರ್ವಾದಿಕಾರಕ್ಕೆ ಹತ್ತಿರತ್ತಿರ ತಂದು ನಿಲಿಸಿವೆ. ಇಂದು ಯಾವುದೇ ಪಕ್ಷವು ನಮ್ಮ ಮೂಲಭೂತ ಅಗತ್ಯವಾದ ಶಿಕ್ಷಣ , ಅರೋಗ್ಯ, ಪರಿಸರದ ವಿಷಯಗಳ ಕುರಿತು ಮಾತಾಡುತ್ತಿಲ್ಲ. ನಮ್ಮ ಮಾಧ್ಯಮಗಳು ಅದನ್ನು ಕೇಳುತ್ತಿಲ್ಲ. ಜನಸಮುಹವೂ ರಾಜಕೀಯ ಆಡುವ ಭಾಷಣಗಳ ಆಚೆಗೆ ಏನನ್ನೂ ನೋಡಲಾರದು. ಅಷ್ಟರ ಮಟ್ಟಿಗೆ ನಮ್ಮ ಕಲ್ಪನಾ ಜಗತ್ತನ್ನು ಮಿತಿಗೊಳಿಸಲಾಗಿದೆ. ಪಳಗಿಸಲಾಗಿದೆ. ಒಂದು ಸುಶಿಕ್ಷಿತ, ಸ್ವಾಯುತ್ತ ಚಿಂತನೆಯುಳ್ಳ ಸಮಾಜವನ್ನು ಯಾವುದೇ ಪ್ರಭುತ್ವವು ಭಾವನಾತ್ಮಕ ವಿಷಯಗಳ ಮೂಲಕ ವಂಚಿಸಲಾಗದು. ಮುಂದಿನ ಹತ್ತಿಪತ್ತು ವರ್ಷಗಳಲ್ಲಾದರು ಆರೋಗ್ಯಪೂರ್ಣ ಯುವ ಸಮೂಹವನ್ನು ಬಯಸುತ್ತವಾದರೆ ರಂಗಭೂಮಿ ಸಮುದಾಯವು ಮಕ್ಕಳ ಶಿಬಿರಗಳನ್ನು ಮುಖ್ಯವಾಗಿ ಪರಿಗಣಿಸಬೇಕು. ಅವರಿಗೆ ರಾಜಕೀಯ ಪಾಠ ಮಾಡಬೇಕು ಅನ್ನುವುದು ಇದರ ಅರ್ಥವಲ್ಲ, ಅವರ ಕಲ್ಪನಾಶಕ್ತಿ ಬಂಜರಾಗದಂತೆ, ಭ್ರಷ್ಟಗೊಳ್ಳದಂತೆ , ಕೆಟ್ಟ ಮಾದರಿಗಳಿಗೆ ಮಾರುಹೋಗದಂತೆ ಎಚ್ಚರವಹಿಸಬೇಕು.ಹಾಗೆ ನೋಡಿದರೆ ಮಕ್ಕಳ ಶಿಬಿರಗಳು ವಯಸ್ಕರಿಗೆ ನಡೆಸುವ ರಂಗಶಿಬಿರಗಳಿಗಿಂತ ಹೆಚ್ಚು ಸೂಕ್ಷ್ಮತೆ ಮತ್ತು ಸಂವೇದನಾಶೀಲತೆಯನ್ನ ಬೇಡುತ್ತವೆ. ರಂಗಕರ್ಮಿಗಳಿಗೆ ಇದೊಂದು ದೊಡ್ಡ ಸವಾಲು ಮತ್ತು ಜವಾಬ್ದಾರಿ ಇದನ್ನು ಸರಿಯಾಗಿ ನಿಭಾಯಿಸಲು ಸಾಧ್ಯವಾದರೆ ಇದಕ್ಕಿಂತ ದೊಡ್ಡ ಸಮಾಜಸೇವೆಯಾಗಲಿ , ದೇಶಸೇವೆಯಾಗಲಿ ಮತ್ತೊಂದಿಲ್ಲ.

- ಕೆ .ಪಿ .ಲಕ್ಷ್ಮಣ್
(ಅಂತಾರಾಷ್ಟ್ರೀಯ ನಟ ಹಾಗು ನಿರ್ದೆಶಕರು)
(ಅಂತಾರಾಷ್ಟ್ರೀಯ ನಟ ಹಾಗು ನಿರ್ದೆಶಕರು)
ಗುರುವಾರ, ಏಪ್ರಿಲ್ 11, 2019
ಸೋಮವಾರ, ಏಪ್ರಿಲ್ 8, 2019
ರಂಗಶಿಬಿರಕ್ಕೇಕೆ ರಂಗಿನ ಪ್ರಚಾರ?
ಬೇಸಿಗೆ ಶಿಬಿರಗಳ ಉದ್ದೇಶದ ಸ್ಪಷ್ಟ ಕಲ್ಪನೆ ಅದನ್ನು ನಡೆಸುವವರಿಗೇ ಇಲ್ಲದಿದ್ದರೆ, ಅಂತಹ ಶಿಬಿರಗಳನ್ನು ನಡೆಸುವುದಕ್ಕೆ ಅರ್ಥವಾದರೂ ಇದೆಯೇ?
ಮಹದೇವ ಹಡಪದ ಸಾಲಾಪುರ
ಈಗ ಮಕ್ಕಳಿಗಾಗಿ ರಜಾ ಕಾಲದ ಶಿಬಿರಗಳು ಆರಂಭವಾಗಿವೆ. ಮೊದಮೊದಲು ಈ ಶಿಬಿರ ಮಾಡುವುದರ ಬಗ್ಗೆ ಹೆಚ್ಚು ಒಲವು ಇರುತ್ತಿತ್ತು. ತಂದೆತಾಯಿಗಳ ಮೂಲಕವೋ ಅಥವಾ ಭವಿಷ್ಯದಲ್ಲಿ ಆ ಮಗುವಾದರೂ ರಂಗಭೂಮಿಯ ಮೂಲಕ ಜಗತ್ತನ್ನು ನೋಡಬಲ್ಲದಾಗುತ್ತದೆ ಎಂಬ ಆಸೆ ಇತ್ತು. ಜೊತೆಗೆ ಈ ಶಿಬಿರಗಳ ಮೂಲಕ ರಂಗಭೂಮಿಗೆ ಪ್ರೇಕ್ಷಕ ವರ್ಗ ಹೆಚ್ಚಾಗುತ್ತದೆ, ಒಂದಷ್ಟು ವೇದಿಕೆಗಳು ಸೃಷ್ಟಿ ಆಗುವ ಮೂಲಕ ನಾಟಕ ಪ್ರದರ್ಶನಗಳ ಸಂಖ್ಯೆ ಹೆಚ್ಚಾಗುತ್ತದೆ ಅಂದುಕೊಳ್ಳುತ್ತಿದ್ದೆ. ಹಾಗೆಯೇ ಕೆಲವು ಕಾಲ ಮಕ್ಕಳ ರಂಗಭೂಮಿಯ ಮೂಲಕ ಕೆಲವೊಂದಷ್ಟು ಬದಲಾವಣೆಗಳು ಕೂಡ ಆದವು ಎಂಬುದರಲ್ಲಿ ಎರಡು ಮಾತಿಲ್ಲ. ಶಿಕ್ಷಣದಲ್ಲಿಯೂ ಸಣ್ಣ ಮಟ್ಟದಲ್ಲಿ ಬದಲಾವಣೆ ಆದಂತೆ ತೋರಿತು. ಯಾವಾಗ ಈ ಬೇಸಿಗೆ ಶಿಬಿರಗಳನ್ನು ಆದಾಯದ ಮೂಲವೆಂಬಂತೆ ವ್ಯಾವಹಾರಿಕವಾಗಿ ನಿರ್ವಹಿಸಲು ಆರಂಭಿಸಿದೆವೋ ಆಗ ಸಿನಿಮಾ, ಧಾರಾವಾಹಿ ಕಲಾವಿದರ ಹೆಸರು ಬಳಸಿಕೊಂಡು ಆಕರ್ಷಿಸುವ ಪರಿಪಾಟ ಶುರುವಾಯಿತು. ಈ ಆಕರ್ಷಣೆ ಇಂದು ರಂಗಭೂಮಿಯನ್ನೇ ಮಕ್ಕಳ ದೃಷ್ಟಿಯಲ್ಲಿ ಜಾಳಪೋಳ ಆಗಿ ಬಿಂಬಿಸುವಲ್ಲಿಗೆ ಬಂದು ನಿಂತಿದೆ ಅನಿಸುತ್ತಿದೆ.
ಶಿಬಿರದ ಆರಂಭದ ಪಾಂಪ್ಲೆಟ್ ಹೇಗಿರುತ್ತದೆ ಅಂದರೆ ‘ನಿಮ್ಮ ಮಕ್ಕಳು ಡ್ರಾಮಾ ಜೂನಿಯರ್ಸ್‌ಗೆ ಹೋಗಬೇಕೇ...! ನಮ್ಮ ಶಿಬಿರದಲ್ಲಿ ಮಜಾಭಾರತ ಖ್ಯಾತಿಯ ಇಂಥವರು ಬಂದು ಅಭಿನಯ ಕಲಿಸಿಕೊಡುತ್ತಾರೆ...! ಕಾಮಿಡಿ ಕಿಲಾಡಿ ಖ್ಯಾತಿಯ... ಈ ಇಂಥವರು ಅಭಿನಯ ಕಲಿಸಿಕೊಡುತ್ತಾರೆ. ಸಿನಿಮಾ ಸ್ಟಾರ್ ಶಿಬಿರಕ್ಕೆ ಬರುತ್ತಾರೆ. ಧಾರಾವಾಹಿಯ ಈ ಅಭಿನಯ ಚತುರ ಶಿಬಿರದಲ್ಲಿ ಪಾಠ ಮಾಡುತ್ತಾರೆ ಎಂದೆಲ್ಲ ಪ್ರಚಾರ ಮಾಡುವ ಮೂಲಕ ಈ ಶಿಬಿರಗಳು ಏನು ಮಾಡಹೊರಟಿವೆ ಎಂಬುದೇ ಯಕ್ಷಪ್ರಶ್ನೆ. ಮಕ್ಕಳ ಕಲ್ಪನಾಶಕ್ತಿ ಇಮ್ಮಡಿಸಲು ಯಾವ ಶಿಬಿರಗಳು ಸಹಾಯಕವಾಗಲಿದ್ದವೋ ಅಂಥ ಶಿಬಿರಗಳು ಈಗ ಸಮುದಾಯಕ್ಕೆ ರಂಗಶಿಬಿರದ ಮೂಲಕ ಏನನ್ನು ಹೇಳಹೊರಟಿವೆ? ಇಡೀ ಶಿಬಿರದ ವಿನ್ಯಾಸಗಳು ಬಹುತೇಕ ಕರ್ನಾಟಕದಾದ್ಯಂತ ಒಂದೇ ಮಾದರಿಯವು ಆಗಿರುವುದರಿಂದ, ಆ ಸಿದ್ಧ ಚೌಕಟ್ಟಿನಾಚೆ ಮಕ್ಕಳ ಮನೋವಿಕಾಸ ಹೇಗೆ ಬೆಳೆಯುತ್ತದೆ ಎಂಬುದನ್ನು ಹೇಗೆ ತಿಳಿದುಕೊಳ್ಳುವುದೋ ನಾ ಕಾಣೆ. ರಂಗಾಯಣದ ಶಿಬಿರಗಳಲ್ಲೂ ಏಕತಾನತೆ ಹೊರತು, ಮಕ್ಕಳ ದೃಷ್ಟಿಯಲ್ಲಿ ಆರಂಭ ವಾಗಿದ್ದ ಶಿಬಿರದ ವಿನ್ಯಾಸದಲ್ಲಿ ಹೊಸ ಬದಲಾವಣೆ ರೂಢಿಸಿಕೊಂಡಿರುವುದಂತೂ ಇಲ್ಲವೇ ಇಲ್ಲ.
ಅದೇ ಹತ್ತು-ಹದಿನೈದು ಮಾದರಿಯ ಕಲಿಕೆಗಳನ್ನು ಮಕ್ಕಳು ಬೇಸಿಗೆ ರಜೆಯಲ್ಲಿ ಕಲಿಯುತ್ತಾರೆ ಎಂಬ ಕಾರಣಕ್ಕಷ್ಟೇ ಬಹುತೇಕ ತಂದೆತಾಯಿ ಸೇರಿಸುವುದಿಲ್ಲ. ಮನೆಯಲ್ಲಿ ಒಂಟಿಯಾಗಿರುವ ಮಕ್ಕಳು ಬೇರೆಬೇರೆ ವಯೋಮಾನದವರೊಂದಿಗೆ, ಬೇರೆಬೇರೆ ಸಮುದಾ ಯದ ಮಕ್ಕಳೊಟ್ಟಿಗೆ (ಯಾಕೆಂದರೆ ಈಗ ಕೆಲವು ಶಾಲೆಗಳಲ್ಲೂ ಜಾತಿ-ಧರ್ಮ ಕೇಂದ್ರಿತ ಪ್ರವೇಶಗಳು ಆಗುತ್ತಿವೆ) ಬೆರೆಯುತ್ತಾರೆ. ಆಟವಾಡುತ್ತ ತಮ್ಮ ಸಂವೇದನೆಯನ್ನು ಚುರುಕುಗೊಳಿಸಿಕೊಳ್ಳುತ್ತಾರೆ ಎಂಬ ಆಶಯವೂ ಪಾಲಕರಲ್ಲಿ ಇರುತ್ತದೆ ಎಂದು ನಂಬಿದ್ದೇನೆ. ಇನ್ನು ಕೆಲವು ಪಾಲಕರಂತೂ ಈ ಬೇಸಿಗೆ ಕಾಲದ ರಜೆಯಲ್ಲಿ ಟೈಂಪಾಸ್ ಮಾಡಲಿ ಅಂತಲೂ ಮಕ್ಕಳನ್ನು ಬೇಸಿಗೆ ಶಿಬಿರಕ್ಕೆ ಸೇರಿಸುವವರಿದ್ದಾರೆ. ಕೆಲವರು ಆಸಕ್ತಿಗೆ ಅನುಸಾರವಾಗಿ, ಊಟದಲ್ಲಿ ಉಪ್ಪಿನಕಾಯಿಯ ಹಾಗೆ ಕಲೆಯ ಅಭಿರುಚಿಯೂ ಮಕ್ಕಳಿಗೆ ಬರಬೇಕೆಂದು ಸೇರಿಸುವವರೂ ಇದ್ದಾರೆ. ಅವೆಲ್ಲವೂ ಈ ಬಾಲ್ಯಕ್ಕೆ ಮಾತ್ರ ಸೀಮಿತ, ಬದುಕಿಗಲ್ಲ. ಅದೂ ಶಾಲೆಯ ರಜಾ ಅವಧಿಯಲ್ಲಿ ಮಾತ್ರ ಇಂಥವೆಲ್ಲ. ಒಮ್ಮೆ ಶಾಲೆ ಶುರುವಾದರೆ ಮಕ್ಕಳ ಆಸಕ್ತಿಗೆ ವಿರುದ್ಧವಾಗಿ ನಡೆದುಕೊಳ್ಳುತ್ತಾರೆ. ಇದೆಲ್ಲವೂ ಹಾಗಿರಲಿ... ಸದಾ ಚಲನಶೀಲರಾದ ರಂಗಕರ್ಮಿಗಳು ರಂಗಶಿಬಿರಗಳನ್ನು ಭಾವಿಸಿಕೊಳ್ಳುವ ರೀತಿ ಮಾತ್ರ ಸೋಜಿಗದ್ದಾಗಿದೆ. ಟಿ.ವಿ ಮಾಧ್ಯಮದ ರಿಯಾಲಿಟಿ ಶೋಗಳ ಮಾದರಿಯಲ್ಲಿ ರಂಗಶಿಬಿರ ಗಳನ್ನು ಆಯೋಜಿಸುತ್ತಿರುವುದು ಯಾಕೋ ಅಷ್ಟಾಗಿ ಸರಿಯಾದ ಮಾದರಿಯಲ್ಲವೇನೋ ಅನಿಸುತ್ತದೆ. ನಾವು ಶಿಬಿರಗಳ ಉದ್ಘಾಟನೆಗೆ ಆಗಲಿ, ಶಿಬಿರದ ಸಂಪನ್ಮೂಲ ವ್ಯಕ್ತಿಗಳನ್ನಾಗಿ ಅಥವಾ ಪ್ರಚಾರಕ್ಕಾಗಿ ರಿಯಾಲಿಟಿ ಶೋಗಳಲ್ಲಿ ಭಾಗಿಯಾಗುವವರನ್ನು ಬಳಸಿಕೊಳ್ಳುವ ಮೂಲಕ ಮಕ್ಕಳಿಗಾಗಲಿ, ಪೋಷಕರಿಗಾಗಲಿ ಯಾವ ಬಗೆಯ ಸಂದೇಶವನ್ನು ಕೊಡುತ್ತಿದ್ದೇವೆ ಅನ್ನುವುದನ್ನು ಯೋಚಿಸಬೇಕಾಗಿದೆ.
ಇಡೀ ಶಿಬಿರಗಳ ಉದ್ದೇಶದ ಸ್ಪಷ್ಟ ಕಲ್ಪನೆ ನಮಗೇ ಇಲ್ಲದಿದ್ದರೆ ನಾವು ಏನು ಮಾಡುತ್ತಿದ್ದೇವೆ ಎನ್ನುವುದಕ್ಕೆ ಅರ್ಥವಾದರೂ ಏನು? ರಂಗಭೂಮಿಯೊಳಗಿನ ಶಿಕ್ಷಣ ಮಕ್ಕಳ ಮೇಲೆ ಯಾವ ರೀತಿಯ ಪರಿಣಾಮ ಬೀರುತ್ತದೆ, ಇಂಥ ಚಟುವಟಿಕೆಗಳು ಮಕ್ಕಳ ಮನಸ್ಸಿನ ಮೇಲೆ ಯಾವ ಪರಿಣಾಮ ಬೀರಬಲ್ಲವು ಎಂಬುದನ್ನಾದರೂ ಊಹಿಸಬೇಕಲ್ಲವೇ? ದಯಮಾಡಿ ನೀವು ಈ ರಿಯಾಲಿಟಿ ಶೋಗಳಲ್ಲಿ ಭಾಗವಹಿಸುವವರನ್ನು ಶಿಬಿರಗಳಿಗೆ ಕರೆಸುವಿರಾದರೆ ಅಂಥ ಬೇಸಿಗೆ ಶಿಬಿರ ನಡೆಸುವವರು ‘ಇದು ರಿಯಾಲಿಟಿ ಶೋಗಳ ಬೇಸಿಗೆ ಶಿಬಿರ. ಡ್ರಾಮಾ ಜೂನಿಯರ್ಸ್ ಬೇಸಿಗೆ ಶಿಬಿರ, ಕಾಮಿಡಿ ಕಿಲಾಡಿ ಬೇಸಿಗೆ ಶಿಬಿರ, ಸೀರಿಯಲ್ ಬೇಸಿಗೆ ಶಿಬಿರ, ಸಿನಿಮಾ ಬೇಸಿಗೆ ಶಿಬಿರ’ ಎಂದು ಪ್ರಚಾರ ಮಾಡಲಿ. ಬೇಕಾದರೆ ಅದರಲ್ಲಿ, ನಾಟಕವನ್ನೂ ಹೇಳಿಕೊಡಲಾಗುತ್ತದೆ ಎಂದು ಸೇರಿಸಿಕೊಳ್ಳಲಿ.
ಗುರುವಾರ, ಮಾರ್ಚ್ 28, 2019
ವಿಶ್ವರಂಗಭೂಮಿ ದಿನಾಚರಣೆ
೨೭.೦೩.೨೦೧೯ ರಂದು ಸರ್ಕಾರಿ ಪ್ರೌಢಶಾಲೆ, ಜಹಗೀರ ಗುಡದೂರಿನಲ್ಲಿ ವಿಶ್ವರಂಗಭೂಮಿ
ದಿನಾಚರಣೆಯನ್ನು ಆಚರಿಸಲಾಯಿತು. ರಂಗಭೂಮಿ ಮನುಷ್ಯನನ್ನು ಸದಾ ಜೀವಂತವಾಗಿಡುತ್ತದೆ. ಕ್ರಿಯಾಶೀಲವಾಗಿ ಸದಾ ತೊಡಗುವ ಉತ್ಸಾಹ ಇಮ್ಮಡಿಯಾಗಿಸುತ್ತದೆ.
ಅಂಥಹ ರಂಗಭೂಮಿ ನಮ್ಮ ಶಾಲೆಯಲ್ಲಿ ಸದಾ ಹಸಿರಾಗಿರುವುದು ನಮ್ಮ ಹೆಮ್ಮೆಯಾಗಿದೆ - ಎಂದು
ಶಾಲೆಯ ಮುಖ್ಯೋಪಾಧ್ಯಾಯರಾದ ಶ್ರೀ ಈಶಪ್ಪ ತಳವಾರ ಅವರು ಹೇಳಿದರು. ವಿಶ್ವ ರಂಗಭೂಮಿ ದಿನಾಚರಣೆ ಅಂಗವಾಗಿ ಶಾಲೆಯಲ್ಲಿ 'ಹೂವಾದಳು ಹುಡುಗಿ' ಪಾಠದ ಕಥಾ ವಾಚನವನ್ನು ಎಂಟನೇ ತರಗತಿಯ ವಿದ್ಯಾರ್ಥಿಗಳು ಪ್ರಸ್ತುತ ಪಡಿಸಿದರು.
ಈ ವರ್ಷದ ರಂಗ ಸಂದೇಶವನ್ನು ಕ್ಯೂಬ್ ದೇಶದ ನಟ, ರಂಗಕರ್ಮಿ ಕಾರ್ಲೊಸ್ ಸೆಲ್ಡ್ರಾನ್ ಅವರು ನೀಡಿದ ಸಂದೇಶವನ್ನು ಶಿಕ್ಷಕರಾದ ಜಗದೀಶ ಬಾಸಿಂಗದ ಅವರು ಓದಿದರು.
ರಂಗಭೂಮಿ ಸಮಾಜದ ಕೈಗನ್ನಡಿ. ಸಮಾಜದ ಅಂಕು ಡೊಂಕುಗಳನ್ನು ಎತ್ತಿ ತೋರ್ಪಡಿಸುವುದು ಎಂದು ಶಿಕ್ಷಕರಾದ ಶಿವಪ್ಪ ಇಲಾಳ ಅವರು ತಮ್ಮ ಭಾಷಣದಲ್ಲಿ ತಿಳಿಯಪಡಿಸಿದರು.
ರಂಗಭೂಮಿಯಲ್ಲಿ ಬದುಕುವುದೇ ಚೆಂದ. ನೆರೆಹೊರೆಯಯಲ್ಲಿಯೇ ಬದುಕಿನ ವಾಸ್ತವತೆ ಇರುತ್ತದೆ. ಅಂಥಹ ವಾಸ್ತವತೆಯ ಬದುಕನ್ನು ರಂಗಕ್ಕೆ ತಂದು ನಮ್ಮನ್ನು ನಾವು ಕಟ್ಟಿಕೊಳ್ಳುವುದು ಅತ್ಯಂತ ಸುಂದರ ಗಳಿಗೆಗಳು ಎಂದು ರಂಗಭೂಮಿ ದಿನಾಚರಣೆಯ ಶುಭಾಷಯಗಳನ್ನು ತಿಳಿಸುತ್ತಾ ಮುಖ್ಯೋಪಾಧ್ಯಾಯರಾದ ಶ್ರೀ ಈಶಪ್ಪ ತಳವಾರ ಮಾತನಾಡಿದರು.
ನಾಟಕ ಶಿಕ್ಷಕರಾದ ಗುರುರಾಜ ಅವರು ಪ್ರಸ್ತಾವಿಕವಾಗಿ ಮಾತನಾಡುತ್ತಾ ಕಳೆದ ಶೈಕ್ಷಣಿಕ ವರ್ಷದಲ್ಲಿ ನಡೆಸಿದ ಕ್ಲಸ್ಟರ್ ನ ಎಲ್ಲ ಶಾಲೆಗಳು ಒಳಗೊಂಡಂತೆ ಹೆಜ್ಜೆಗಳು ನಾಟಕೋತ್ಸವ, ಪಾಪು ಬಾಪು ಹಾಗೂ ದೇವತಾಪುರದ ಮಕ್ಕಳು ಎಂಬ ಆಮಂತ್ರಿತ ತಂಡಗಳ ಪ್ರದರ್ಶನದಿಂದ ಮಕ್ಕಳು ಹಾಗೂ ನಮ್ಮೇಲ್ಲರ ಅತ್ಯಂತ ರಂಗ ಸಮೃದ್ದಿಯ ದಿನಗಳಾಗಿವೆ. ಇಂಥಹ ಪ್ರದರ್ಶನಗಳಿಂದ ಪ್ರತಿಯೊಬ್ಬರು ಸೂಕ್ಷ್ಮರಾಗುತ್ತಾ ಸಾಗಬೇಕಿದೆ. ನಮ್ಮನ್ನು ನಾವು ಹರಿತಗೊಳಿಸಿಕೊಳ್ಳುತ್ತಾ ನಮ್ಮ ತಿಳುವಳಿಕೆಯನ್ನು ಜಗತ್ತಿನ ಜೊತೆ ಹಂಚಿಕೊಳ್ಳಬೇಕಿದೆ. ನಮ್ಮತನವನ್ನು ಮರೆಮಾಚದೇ ಹೊಸ ಚಿಂತನೆಗೆ ತೆರೆದುಕೊಳ್ಳಬೇಕಿದೆ ಎಂದು ನಾಟಕ ಶಿಕ್ಷಕರಾದ ಗುರುರಾಜ ಅವರು ಮಾತನಾಡಿದರು.
ಕಾರ್ಯಕ್ರಮದಲ್ಲಿ ಸಂಗನಗೌಡಪಾಟೀಲ, ಶ್ರೀದೇವಿ ಗುಳಬಾಳ, ಮರಿಯಪ್ಪಜರಕುಂಟಿ, ಪ್ರಶಾಂತ ಕಟ್ಟಿ, ತಿಪ್ಪಣ್ಣರಾಮದುರ್ಗ ಹಾಗೂ ಹಳೇಯ ವಿದ್ಯಾರ್ಥಿಗಳು ಭಾಗವಹಿಸಿದ್ದರು
ಶನಿವಾರ, ಮಾರ್ಚ್ 23, 2019
ಬುಧವಾರ, ಮಾರ್ಚ್ 13, 2019
ಇದಕ್ಕೆ ಸಬ್ಸ್ಕ್ರೈಬ್ ಆಗಿ:
ಪೋಸ್ಟ್ಗಳು (Atom)