ಮದಲ ಸಭೆದೊಳು ಗಜಮುಖ ಗಣಪತಿ
ಭಜಿಸುವೆ ನಾ ಬಂದ
ಬುದ್ಧಿಕೊಡೋ ಭಕ್ತ ನಾ ನಿಮ ಕಂದ ||ಪ||
ಕೇಳೋ ಗಣಪತಿ ನಾಳಿನ ಉದಯಕ ಮ್ಯಾಳ ಸಹಿತ ಬಂದ
ನಿಮಗ ತಾಳ ತಂಬುರಿ ತಂದ
ಪದಗಳ ಹಾಡುತಿವರೀ ಒಂದೊಂದ ||ಪ||
ಚದುರ ಗಣಪತಿ ಸದರಿಗೆ ಒಪ್ಪುವಂಥ
ಉದರ ಮಲ್ಲಿಗೆ ತಂದ,
ಸ್ವಾಮಿ ನೆನೆಸುವೆ ನಿಮಕಂದ ||ಪ||
ಸಿಸುನಾಳ ಹುಸೇನ್ ವಕೀಲ್ ಸಾಹೇಬರು
ಬರೆದಂಥ ಕವಿಗಾರ
ಚಿತ್ತವಿಟ್ಟು ಕೇಳಿರಿ ಜನರೆಲ್ಲ ||ಪ||
ಕುಷ್ಟಗಿ ತಾಲೂಕಾ ಗುಡದೂರ ಹುಡಗರೂ
ಹಾಡುವರೋ ಮುಂದ
ಚಿತ್ತವಿಟ್ಟು ಕೇಳಿರಿ ಮುಂದ ಮುಂದ ||ಪ||
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ
Thank you.
.................
Gururaj.L
Drama Teacher