ಬುಧವಾರ, ನವೆಂಬರ್ 6, 2013

ಗ್ರಂಥಾಲಯ

ಗ್ರಂಥಾಲಯದಲ್ಲಿ ಪುಸ್ತಕಗಳನ್ನು ಓದುವದರಲ್ಲಿ ಓದುಗನ ಮನಸ್ಸು ಪಕ್ಷಿಯಂತೆ ಸ್ವತಂತ್ರ ಉಡ್ಡಾಣದಲ್ಲಿ ಹಾರತಿರುತ್ತದೆ. ಗ್ರಂಥಾಲಯದಲ್ಲಿ ಓದುವ ಜನರು ಸಹಸ್ರಾರು ವಿಚಾರಗಳನ್ನು ಓದಿ ತಮ್ಮ ಅಭಿಪ್ರಾಯಗಳನ್ನು ತಿಳಿಸುವ ಸಾಮಾರ್ಥ್ಯವನ್ನು ಹೊಂದಿರುತ್ತಾರೆ. ಓದುಗರ ಪ್ರತಿಭೆಯನ್ನು ಉದ್ಧೀಪನಗೊಳಿಸಿ ಸಾಮರ್ಥ್ಯವನ್ನು ಹೆಚ್ಚಿಸುತ್ತಾ, ಪುಸ್ತಕಗಳು ಜ್ಞಾನವನ್ನು ಹಂಚುತ್ತವೆ. ಪುಸ್ತಕದಲ್ಲಿ ಲೀನನಾಗುವ ಮನುಷ್ಯನಿಗೆ ಸಂಪೂರ್ಣವಾದ ಅವಕಾಶವನ್ನು ಗ್ರಂಥಾಲಯ ನೀಡುತ್ತದೆ. ಪುಸ್ತಕಗಳಿಲ್ಲದ ಮನೆ, ಗ್ರಂಥಾಲಯವಿಲ್ಲದ ಶಾಲೆ - ಕಾಲೇಜು,
ದೇವರಿಲ್ಲದ ಗುಡಿಯೆಂದು ಒಬ್ಬರು ವರ್ಣಿಸುತ್ತಾರೆ. ಪುಸ್ತಕದ ಉತ್ತಮ ಅಂಶಗಳ ಕುರಿತು ಎಲ್ಲರೂ ಸದಾ ಮಾತನಾಡುವಂತೆ ಆಗಬೇಕು. ಪುಸ್ತಕದಲ್ಲಿರುವ ಜ್ಞಾನ ಎಲ್ಲರಲ್ಲೂ ಬೆಳಕಿನಂತೆ ಹರಡಬೇಕು. ಪ್ರತಿದಿನ ಹೊಸ ಪುಸ್ತಕಗಳು ಹೊರಬರುತ್ತಲೇ ಇರುತ್ತವೆ. ಕೊಂಡು ಓದುಲು ಸಾಧ್ಯಾವಾಗದೆ ಇದ್ದಾಗ ನಾವು ಗ್ರಂಥಾಲಯದ ಸದ್ಬಳಕೆ ಸಂಪೂರ್ಣವಾಗಿ ಮಾಡಿಕೊಳ್ಳಬೇಕು. ನಾಗರಿಕತೆ, ಸಂಸ್ಕೃತಿ, ವಿಜ್ಞಾನ, ಭಕ್ತಿ, ಕಥೆ-ಕವನ, ಕಾವ್ಯ, ವಿಮರ್ಶೆ ಹೀಗೆ ನಾನಾ ತರಹದ ವಿಚಾರಗಳು ನಮ್ಮೊಳಗೆ ಹೊಯ್ದಾಡುತ, ಜ್ಞಾನ ವೃದ್ಧಿಯಾಗಲು ಸಾಧ್ಯ. 

               ಅದೇ ರೀತಿ ನಮ್ಮ ಊರು, ಬದುಕು, ಜೀವನ ದಿನನಿತ್ಯದ ಘಟನೆಗಳನ್ನು  ಇಟ್ಟುಕೊಂಡು ಹೊಸತನದ ಪುಸ್ತಕ ರಚಿಸುವಂಥ ವಾತವರಣ ನಾವು ವಿದ್ಯಾರ್ಥಿಗಳು ಬೆಳೆಸಿಕೊಳ್ಳಬೇಕಾಗಿದೆ. ನಾವು ನಮ್ಮದೇ ಪುಸ್ತಕವನ್ನು ಹೊರ ತರುವಲ್ಲಿ ಪ್ರಯತ್ನ ಮಾಡುತ್ತೇವೆ. 

ರವಿಕುಮಾರ ಬಾಳಪ್ಪ ಮುಶಿಗೇರಿ 
೧೦ ನೇ ತರಗತಿ