ಶನಿವಾರ, ಆಗಸ್ಟ್ 29, 2020

Live Mint Magzine





 

ಗುರುವಾರ, ಆಗಸ್ಟ್ 13, 2020

ಶನಿವಾರ, ಆಗಸ್ಟ್ 8, 2020

ಶನಿವಾರ, ಆಗಸ್ಟ್ 1, 2020

National Webinar


ಶುಕ್ರವಾರ, ಜುಲೈ 31, 2020

ಚಟುವಟಿಕೆ - 4


ಚಟುವಟಿಕೆ - ೩



ಚಟುವಟಿಕೆ - ೮


ಚಟುವಟಿಕೆ - ೦೧

ಚಟುವಟಿಕೆ ೦೧


ಚಟುವಟಿಕೆ - ೦೬








ಗುರುವಾರ, ಜುಲೈ 30, 2020

ಮಂಗಳವಾರ, ಜುಲೈ 28, 2020

E -CERTIFICATE


ಸೋಮವಾರ, ಜುಲೈ 27, 2020

Assignment - 10


Assignment - 09


Assignment - 2


Assignment - 02


ಭಾನುವಾರ, ಜುಲೈ 26, 2020

ಗುರುವಾರ, ಜುಲೈ 23, 2020


ಮಂಗಳವಾರ, ಜುಲೈ 21, 2020

10 th standard social science (ECONOMICS ) MODEL QUESTIONS.

                         ರಚನೆ:ಶ್ರೀ ತಿಪ್ಪಣ್ಣ ರಾಮದುರ್ಗ,   , ಸ ಶಿ( ಕಲಾ ಕನ್ನಢ)  .ಸೆಲ್-9480756727  

                                             ಸ ಪ್ರೌ ಶಾಲೆ ಜಹಗೀರ ಗುಡದೂರ ತಾ:ಕುಷ್ಟಗಿ ಜಿ:ಕೊಪ್ಪಳ

                         10ನೇ ತರಗತಿ, ಸಮಾಜವಿಜ್ಙಾನ.  ಅಧ್ಯಾಯ-1 ಅಭಿವೃದ್ಧಿ .(ಅರ್ಥಶಾಸ್ತ್ರ)

*  ಬಹು ಆಯ್ಕೆ ಪ್ರಶ್ನೆಗಳು                         

1.ಭಾರತವು ಈ ರಾಷ್ಟ್ರಗಳ ಗುಂಪಿಗೆ ಸೇರಿದೆ

ಎ)ಬಡರಾಷ್ಟ್ರ       ಬಿ)ಮುಂದುವರೆದ ರಾಷ್ಟ್ರ     ಸಿ)ಅಭಿವೃದ್ಧಿಶೀಲ ರಾಷ್ಟ್ರ  ಡಿ)ಹಿಂದುಳಿದ ರಾಷ್ಟ್ರ

2.ಒಂದು ರಾಷ್ಟ್ರದ ನೈಜ ವರಮಾನವು ದೀರ್ಘಾವಧಿಯವರೆಗೆ ಹೆಚ್ಚಳವಾಗುವ ಪ್ರಕ್ರಿಯೆಯೇ ಆರ್ಥಿಕ ಅಭಿವೃಧ್ಧಿ ಎಂದವರು

ಎ)ಪ್ರೋ ಕೋಲಿನ್ ಕ್ಲಾರ್ಕ  ಬಿ)ಪ್ರೋ ಮೇಯರ್ ಮತ್ತು ಬಾಲ್ಡವಿನ್  ಸಿ)ಆ್ಯಡಂಸ್ಮಿತ್   ಡಿ)ಕಾರ್ಲ ಲೂಯಿಸ್

3.ಅಭಿವೃದ್ಧಿ ಹೊಂದದೇ ಇರುವ ನಿಶ್ಚಲ ಸ್ಥಿತಿಯನ್ನು -------ಎನ್ನುವರು

ಎ)ಆರ್ಥಿಕ ಅಭಿವೃದ್ಧಿ   ಬಿ)ಅನಾಭಿವೃದ್ಧಿ    ಸಿ) ಅಭಿವೃದ್ಧಿ  ಡಿ)ಹಿಂದುಳಿದ ಅಭಿವೃದ್ಧಿ

4.ನಿರೀಕ್ಷಿತ ಜೀವಿತಾವಧಿಯನ್ನು ನಿರ್ಧರಿಸುವ ಅಂಶಗಳು

ಎ)ಪೌಷ್ಠಿಕ ಆಹಾರ  ಬಿ) ಆರೋಗ್ಯ ಮತ್ತು ನೈರ್ಮಲ್ಯ  ಸಿ)ಸ್ವಚ್ಛ ಪರಿಸರ   ಡಿ)ಈ ಮೇಲಿನ ಎಲ್ಲವೂ

5.2011ರ ಜನಗಣತಿಯ ಪ್ರಕಾರ ಲಿಂಗಾನುಪಾತದ ದರ

ಎ)960   ಬಿ)945  ಸಿ)975  ಡಿ)955

6.2014 ರ ಪ್ರಕಾರ ಭಾರತವು ಮಾನವ ಅಭಿವೃದ್ಧಿ ಸೂಚ್ಯಂಕದಲ್ಲಿ ಹೊಂದಿದ್ದ ಸ್ಥಾನ

ಎ)185ನೇ  ಬಿ)197ನೇ  ಸಿ)137ನೇ  ಡಿ) 135ನೇ

7.ಮಾನವ ಅಭಿವೃದ್ಧಿ ಸೂಚ್ಯಂಕದ ಮಾನದಂಡಗಳನ್ನು ರಚಿಸಿದ್ದು

ಎ)ವಿಶ್ವಸಂಸ್ಥೆ ಅಭಿವೃದ್ಧಿ ಕಾರ್ಯಕ್ರಮದ ವಿಭಾಗ     ಬಿ)ವಿಶ್ವ ಆರೋಗ್ಯ ಸಂಸ್ಥೆ ಸಿ)ಅಂತರಾಷ್ಟ್ರೀಯ ಕಾರ್ಮಿಕ ಸಂಘ ಡಿ) ವಿಶ್ವಬ್ಯಾಂಕ್.

8.ಆರ್ಥಿಕ ಅಭಿವೃದ್ಧಿಯು ಜನರ ಆರ್ಥಿಕ ಕಲ್ಯಾಣದ ಹೆಚ್ಚಳ ಎಂದವರು

ಎ)ಪ್ರೋ ಕೋಲಿನ್ ಕ್ಲಾರ್ಕ  ಬಿ) ಎ ಸಿ ಪಿಗೂ  ಸಿ)ಪ್ರೋ ಮೇಯರ್  ಡಿ)ಬಾರ್ಬರ್ ವೋಟನ್

9.ಅಭಿವೃದ್ಧಿಯ ಅರ್ಥ

ಎ) ಗ್ರಾಮೀಣ ಅಭಿವೃದ್ಧಿ   ಬಿ)ಸಾಮಾಜಿಕ ಅಭಿವೃದ್ಧಿ   ಸಿ) ಶೈಕ್ಷಣಿಕ ಅಭಿವೃದ್ಧಿ   ಡಿ)ಈ ಮೇಲಿನ ಎಲ್ಲವೂ

10.ಮಾನವ ಅಭಿವೃದ್ಧಿ ಕುರಿತು ಅಧ್ಯಯನ ನೆಡೆಸಿದ ಪ್ರಮುಖ  ಅರ್ಥಶಾಸ್ತ್ರಜ್ಞರು

ಎ)ಅಮರ್ತ್ಯ ಸೇನ್ ಮತ್ತು ಮೆಹಬೂಬ ಉಲ್ ಹಕ್        ಬಿ) ಅಮರ್ತ್ಯ ಸೇನ್ ಮತ್ತು ಮಹ್ಮದ್ ಯೂನಸ್

ಸಿ)ಜೆ ಎಂ ಕೇನ್ಸ ಮತ್ತು ಮೆಹಬೂಬ ಉಲ್ ಹಕ್           ಡಿ) ಜೆ ಎಂ ಕೇನ್ಸ ಮತ್ತು ಮಹ್ಮದ್ ಯೂನಸ್

 * ಒಂದು  ವಾಕ್ಯದಲ್ಲಿ ಉತ್ತರಿಸಿರಿ (ಒಂದು ಅಂಕದ ಪ್ರಶ್ನೆಗಳು)

11.ಅಭಿವೃದ್ಧಿಯ ಅರ್ಥವೇನು?

12.ಅನಾಭಿವೃದ್ಧಿ ಎಂದರೇನು?

13.ಮಾನವ ಅಭಿವೃದ್ಧಿ ಸೂಚಕಗಳಾವವು?

14.ಮಾನವ ಅಭಿವೃದ್ಧಿ ಸೂಚಕಗಳನ್ನು ಏಕೆ ಬಳಸಲಾಗುತ್ತಿದೆ.

15.ಭಾರತವು ಅಭಿವೃದ್ಧಿ ಹೊಂದುತ್ತಿರುವ ದೇಶವೆಂದು ಹೇಗೆ ಹೇಳುವಿರಿ.

16.ಮಹಿಳಾ ಸಬಲೀಕರಣ ಎಂದರೇನು?

17.ಸ್ವ ಸಹಾಯ ಗುಂಪುಗಳೆಂದರೇನು?

18.ತಲಾ ಆದಾಯವನ್ನು ಹೇಗೆ ಪಡೆಯಬಹುದು.

19.ಮಾನವ ಅಭಿವೃದ್ಧಿಯ ಅರ್ಥ ತಿಳಿಸಿ.

20.ಒಂದು ದೇಶದ ಶೈಕ್ಷಣಿಕ ಸಾಧನೆಯನ್ನು ಹೇಗೆ ಅಳೆಯಬಹುದು.

21.ಸ್ವ ಸಹಾಯ ಗುಂಪುಗಳನ್ನು ಏಕೆ ಸ್ಥಾಪಿಸಲಾಗಿದೆ.

22.ಆರ್ಥಿಕ ಅಭಿವೃದ್ಧಿ ಎಂದರೇನು?

23.ಪ್ರೋ ಮೆಯರ್ ಮತ್ತು ಬಾಲ್ಡವಿನ್ ಪ್ರಕಾರ ಆರ್ಥಿಕ ಅಭಿವೃದ್ಧಿಯ ಅರ್ಥ ತಿಳಿಸಿ.

24.ಪ್ರಕ್ರಿಯೆ ಎಂದರೇನು?

25.ರಾಷ್ಟ್ರೀಯ ವರಮಾನ ಎಂದರೇನು?

26.ಜಾಗತಿಕ ಮಾನವ ಅಭಿವೃದ್ದಿ ವರದಿಗಳ ಪ್ರಕಟಣೆಯ ಹೊಣೆ ಹೊತ್ತಿರುವ ಸಂಸ್ಥೆ ಯಾವದು?

27.ಅನಾಭಿವೃದ್ಧಿ ಎಂಬ ಶಬ್ದವು ಏನನ್ನು ಸೂಚಿಸುತ್ತದೆ.

28.ಲಿಂಗಾನಿಪಾತ ಎಂದರೇನು?

29.2011ರ ಜನಗಣತಿಯ ಪ್ರಕಾರ ಪುರುಷ ಮತ್ತು ಮಹಿಳೆಯರ ಸಾಕ್ಷರತಾ ಪ್ರಮಾಣ ತಿಳಿಸಿ.

30.ಭಾರತದಲ್ಲಿ ಲಿಂಗಾನುಪಾತ ಕುಸಿಯುತ್ತಿದೆ ಏಕೆ?

31.ವಿಶ್ವಸಂಸ್ಥೆ ಪ್ರಕಾರ ಆನಾಭಿವೃದ್ಧಿ ರಾಷ್ಟ್ರಗಳು ಎಂದರೇನು?

*ಮೂರು –ನಾಲ್ಕು ವಾಕ್ಯಗಳಲ್ಲಿ ಉತ್ತರಿಸಿರಿ (2ಅಂಕದ ಪ್ರಶ್ನೆಗಳು)

32.ತಲಾ ವರಮಾನವು ಅಭಿವೃದ್ಧಿಯ ನೈಜ ಮಾಪಕವಲ್ಲ ಏಕೆ?

33.ಆರ್ಥಿಕಾಭಿವೃದ್ಧಿಯ ಗುರಿಗಳೇನು?

34.ಲಿಂಗ ಸಮಾನತೆಯನ್ನು ಹೇಗೆ ಸಾಧಿಸಬಹುದು.

35.ಭಾರತದಲ್ಲಿ ಮಹಿಳೆಯರು ಇನ್ನೂ ಸಂಪೂರ್ಣವಾಗಿ ಅಭಿವೃದ್ಧಿ ಪಾಲುದಾರರಾಗಿಲ್ಲ.ಏಕೆ?

36.ಅಭಿವೃದ್ಧಿಯ ಉದ್ದೇಶಗಳಾವವು?

37.ಅಭಿವೃದ್ಧಿ ಪ್ರಕ್ರಿಯೆಯ ವಿವರಣೆ ಕೊಡಿ.

38.ಅನಾಭಿವೃದ್ಧಿಯ ಲಕ್ಷಣಗಳಾವವು?

39.ಭಾರತದಲ್ಲಿ ಮಾನವ ಅಭಿವೃದ್ಧಿ ಸೂಚ್ಯಂಕ ಕಡಿಮೆ ಇರುವದಕ್ಕೆ ಕಾರಣ ನೀಡಿರಿ.

40.ರಾಷ್ಟ್ರೀಯ ವರಮಾನದ ಮೂಲಕ ಅಭಿವೃದ್ಧಿಯನ್ನು ಅಳೆಯುವದು ಅಸಮಂಜಸ, ಏಕೆ?

41.ಕೇವಲ ರಾಷ್ಟ್ರೀಯ ಆದಾಯ ಮತ್ತು ತಲಾ ಆದಾಯಗಳು ದೇಶದ ಅಭಿವೃದ್ಧಿಯ ನೈಜ ಮಾಪಕವಾಗಲಾರವು ಏಕೆ?

42.ಭಾರತದ ಸಂವಿಧಾನವು ಮಹಿಳೆಯರಿಗೆ ಪುರುಷನಷ್ಟೆ ಸ್ವಾತಂತ್ರ್ಯ ಸಮಾನತೆ ನೀಡಿದ್ದರು ತಾರತಮ್ಯತೆ ಇನ್ನೂ ಕಡಿಮೆಯಾಗಿಲ್ಲ ಏಕೆ?

43.ಅಭಿವೃದ್ಧಿ ಹೊಂದಿದ ರಾಷ್ಟ್ರಗಳು ಯಾವವು?

44.ಗರ್ಭದಲ್ಲಿರುವ ಬ್ರೂಣದ ಲಿಂಗ ಕಂಡುಕೊಳ್ಳುವದು ಕಾನೂನು ಬಾಹಿರ ಏಕೆ?

45.ಮಾನವ ಅಭಿವೃದ್ಧಿ ಕುರಿತು ಅಮರ್ತ್ಯ ಸೇನರು ಏನೆಂದು ಹೇಳಿದ್ಧಾರೆ?

*ಐದು-ಆರು ವಾಕ್ಯಗಳಲ್ಲಿ ಉತ್ತರಿಸಿರಿ  (3ಅಂಕದ ಪ್ರಶ್ನೆಗಳು)

46.ಅಭಿವೃದ್ಧಿ ಪ್ರಕ್ರಿಯೆಯಲ್ಲಿ ಮಹಿಳೆಯರ ಪಾತ್ರ ಅತ್ಯಂತ ಮಹತ್ವವಾದುದು ,ವಿವರಿಸಿರಿ.

47.ಮಹಿಳಾ ಸ್ವಸಹಾಯ ಸಂಘಗಳು ಮಹಿಳಾ ಸಬಲೀಕರಣಕ್ಕೆ ಪೂರಕವಾಗಿವೆ, ಸಮರ್ಥಿಸಿ.

48.ಭಾರತದಲ್ಲಿ ಮಾನವ ಅಭಿವೃದ್ಧಿ ಸೂಚ್ಯಂಕ ಕಡಿಮೆ ಇರುವದಕ್ಕೆ ಕಾರಣಗಳೇನು?

49.ಲಿಂಗತಾರತಮ್ಯ ಸಮಾಜದ ಪ್ರಗತಿಗೆ ಮಾರಕ , ವಿಶ್ಲೇಷಿಸಿರಿ.

ಅಧ್ಯಾಯ-2 ಗ್ರಾಮೀಣಾಭಿವೃದ್ಧಿ.

*ಬಹು ಆಯ್ಕೆ ಪ್ರಶ್ನೆಗಳು

1.ಗ್ರಾಮ ಸ್ವರಾಜ್ಯ ಕಲ್ಪನೆಯನ್ನು ಕಟ್ಟಿಕೊಟ್ಟವರು

ಎ)ಮಹಾತ್ಮ ಗಾಂಧೀಜಿ   ಬಿ) ಜವಹರಲಾಲ್ ನೆಹರೂ  ಸಿ) ಡಾ// ಬಿ ಆರ್ ಅಂಬೇಡ್ಕರ್   ಡಿ)ಲಾಲ್ ಬಹದ್ದೂರ ಶಾಸ್ತ್ರೀ

2.2011ರ ಜನಗಣತಿ ಪ್ರಕಾರ ಹಳ್ಳಿಗಳಲ್ಲಿ ವಾಸಿಸುವ ಜನರ ಪ್ರಮಾಣ

ಎ)ಶೇ68%    ಬಿ)ಶೇ68.84%   ಸಿ)ಶೇ69.84%   ಡಿ)ಶೇ70%

3.ಭಾರತದ ನೈಜ  ಅಭಿವೃದ್ಧಿ ಎಂದರೆ ಅದು ಗ್ರಾಮಗಳ ಅಭಿವೃದ್ದಿ ಎಂದವರು

ಎ)ಜವಹರಲಾಲ್ ನೆಹರೂ    ಬಿ) ಮಹಾತ್ಮ ಗಾಂಧೀಜಿ      ಸಿ) ಸರ್ ಎಂ ವಿಶ್ವೇಶ್ವರಯ್ಯ    ಡಿ) ನರೇಂದ್ರ ಮೋದಿ

4.ಏಕರೂಪದ ಪಂಚಾಯತ್ ರಾಜ್ ಸಂಸ್ಥೆಗಳು ಆಸ್ತಿತ್ವಕ್ಕೆ ಬಂದ ವರ್ಷ

ಎ)1992   ಬಿ) 1994   ಸಿ)1993   ಡಿ)1995

5.ಗ್ರಾಮೀಣ ಉತ್ಪಾದಕ ಚಟುವಟಿಕೆಗಳು

ಎ)ಕೃಷಿ ಮತ್ತು ಪಶುಪಾಲನೆ  ಬಿ)ಮೀನುಗಾರಿಕೆ ಮತ್ತು ಕೋಳಿಸಾಕಾಣಿಕೆ  ಸಿ)ಸಾಮಾಜಿಕ ಅರಣ್ಯ  ಡಿ) ಈ ಮೇಲಿನ ಎಲ್ಲವೂ

6.ಗ್ರಾಮೀಣ ಹಿಂದುಳಿಯುವಿಕೆ ಮತ್ತು ಗ್ರಾಮೀಣ ಬಡತನಕ್ಕೆ ಅತ್ಯಂತ ಪ್ರಮುಖ ಕಾರಣ

ಎ)ನಗರ ವಲಸೆ   ಬಿ)ಜಾಗತೀಕರಣ   ಸಿ)ಗೃಹ ಕೈಗಾರಿಕೆ   ಡಿ)ಕೃಷಿಯ ಸ್ಥಗಿತತೆ ಮತ್ತು ನಿದಾನಗತಿಯ ಬೆಳವಣಿಗೆ

7.ಪಂಚಾಯತ್ ರಾಜ್ ಸಂಸ್ಥೆಗಳು ಈ ತತ್ವಗಳ ಅಡಿಯಲ್ಲಿ ಕಾರ್ಯನಿರ್ವಹಿಸುತ್ತವೆ

ಎ)ಕೇಂದ್ರಿಕರಣ  ಬಿ)ವಿಕೇಂದ್ರಿಕರಣ   ಸಿ)ಸುಖೀರಾಜ್ಯ  ಡಿ) ಉದಾರೀಕರಣ

8.ಉದ್ಯೋಗ ನಿರ್ಮಾಣ ಮತ್ತು ಬಡತನ ನಿರ್ಮೂಲನೆಯ ಯೋಜನೆ

ಎ)ಪ್ರಧಾನಮಂತ್ರಿ ಆವಾಸ ಯೋಜನೆ                     ಬಿ) ಅಂಬೇಡ್ಕರ್-ವಾಲ್ಮೀಕಿ ವಸತಿ ಯೋಜನೆ

ಸಿ)ಆಶ್ರಯ ಯೋಜನೆ                           ಡಿ) ಮಹಾತ್ಮ ಗಾಂಧೀಜಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆ

9.ಮಹಿಳಾ ಸ್ವಸಹಾಯ ಸಂಘಗಳು

ಎ) ಗ್ರಾಮೀಣ ಬಡ ಮಹಿಳೆಯರನ್ನು ಸಂಘಟಿಸುತ್ತವೆ,      ಬಿ) ಗ್ರಾಮೀಣ ಜನರನ್ನು ಆರ್ಥಿಕ ಸ್ವಾವಲಂಬಿಗಳಾಗಿ ಮಾಡುತ್ತವೆ,

ಸಿ)ಉತ್ಪಾದಕ ಚಟುವಟಿಕೆಗಳನ್ನು ಪ್ರೋತ್ಸಾಹಿಸುತ್ತವೆ      ಡಿ) ಈ ಮೇಲಿನ ಎಲ್ಲವೂ

10.ಅಧಿಕಾರ ವಿಕೇಂದ್ರಿಕರಣವು

ಎ)ಎಲ್ಲಾ ರೀತಿಯ ಶೋಷಣೆಗಳನ್ನು ತಡೆಯುತ್ತದೆ.           ಬಿ) ಮಾನವನ ಸ್ವಾತಂತ್ರ್ಯ ಮತ್ತು ಘನತೆಯನ್ನು ಸಂರಕ್ಷಿಸುತ್ತದೆ.

ಸಿ)ಸಹಾನುಭೂತಿ ಮತ್ತು ಸಹಕಾರದಂತಹ ಮಾನವೀಯ ಮೌಲ್ಯಗಳನ್ನು ವೃದ್ಧಿಸುತ್ತವೆ            . ಡಿ) ಈ ಮೇಲಿನ ಎಲ್ಲವೂ.

* ಒಂದು ವಾಕ್ಯದಲ್ಲಿ ಉತ್ತರಿಸಿರಿ (ಒಂದು ಅಂಕದ ಪ್ರಶ್ನೆಗಳು)

11.ಗ್ರಾಮೀಣ ಅಭಿವೃದ್ಧಿ ಎಂದರೇನು?

12.ವಿಕೇಂದ್ರಿಕರಣ ಎಂದರೇನು?

13.ಗ್ರಾಮಸಭೆಯ ಸದಸ್ಯರು ಯಾರಾಗಿರುತ್ತಾರೆ?

14.ಗ್ರಾಮಸಭೆ ಎಷ್ಟು ತಿಂಗಳಿಗೊಮ್ಮೆ ಸಭೆ ಸೇರಬೇಕು?

15.ಮಹಿಳಾ ಸ್ವಸಹಾಯ ಸಂಘಗಳನ್ನು ಏಕೆ ಸ್ಥಾಪಿಸಲಾಗಿದೆ?

16.ಗ್ರಾಮೀಣ ಪ್ರದೇಶದಲ್ಲಿ ಪಡಿತರ ವ್ಯವಸ್ಥೆಯನ್ನು ಏಕೆ ಬಲಪಡಿಸಲಾಗಿದೆ?

17.ಕರ್ನಾಟಕದ ಪಂಚಾಯತ್ ರಾಜ್ ಸಂಸ್ಥೆಗಳಲ್ಲಿ ಅರ್ಧಕ್ಕಿಂತ ಹೆಚ್ಚು ಮಹಿಳಾ ಸದಸ್ಯರಿದ್ದಾರೆ, ಏಕೆ?

18.ಮೂರು ಹಂತದ ಪಂಚಾಯತ್ ರಾಜ್ ಸಂಸ್ಥೆಗಳನ್ನು ಹೆಸರಿಸಿರಿ.

19.ವಸತಿ ಯೋಜನೆಗಳ ಅನುಷ್ಟಾನದ ಉದ್ದೇಶವೇನು?

20.ಗ್ರಾಮೀಣ ಉತ್ಪಾದಕ ಚಟುವಟಿಕೆಗಳ ಅಭಿವೃದ್ಧಿಯ ಮಹತ್ವವೇನು?

21.ಗ್ರಾಮೀಣ ಕಲೆ ಮತ್ತು ಸಂಸ್ಕೃತಿಯನ್ನು ಹೇಗೆ ಶ್ರೀಮಂತಗೊಳಿಸಬಹುದು.

22.ಭಾರತ ಹಳ್ಳಿಗಳ ದೇಶ ಹೇಗೆ?

*ಮೂರು-ನಾಲ್ಕು ವಾಕ್ಯಗಳಲ್ಲಿ ಉತ್ತರಿಸಿರಿ(2 ಅಂಕದ ಪ್ರಶ್ನೆಗಳು)

23.ಗ್ರಾಮದ ಅಭಿವೃದ್ಧಿಯಲ್ಲಿ ಗ್ರಾಮಸಭೆಯ ಪಾತ್ರವೇನು?

24.ಸ್ವಾತಂತ್ರ್ಯ ನಂತರ ಗ್ರಾಮೀಣ ಪ್ರದೇಶಗಳು ನಿರೀಕ್ಷಿತ ಅಭಿವೃದ್ಧಿಯಾಗಿಲ್ಲ, ಏಕೆ?

25.ವಸತಿ ಹೀನರಿಗೆ ಮನೆಗಳನ್ನು ನಿರ್ಮಿಸಿಕೊಡುವ ಯೋಜನೆಗಳನ್ನು ಹೆಸರಿಸಿರಿ?

26.ಇಂದು ಗ್ರಾಮೀಣ ಪ್ರಧೇಶಗಳನ್ನು ಅಭಿವೃದ್ಧಿಪಡಿಸುವದು ಅತ್ಯವಶ್ಯಕವಾಗಿದೆ, ಸಮರ್ಥಿಸಿರಿ.
27,ಪಂಚಾಯತ್ ರಾಜ್ ವ್ಯವಸ್ಥೆಯ ಪ್ರಮುಖ ಲಕ್ಷಣಗಳೇನು?

28.ಮೂರು ಹಂತದ ಪಂಚಾಯತ್ ಸಂಸ್ಥೆಗಳನ್ನು ಹೆಸರಿಸಿರಿ?

29.ಪ್ರಸ್ತುತ ಸಮಾಜದಲ್ಲಿ ಜೀವಂತವಾಗಿರುವ ಸಾಮಾಜಿಕ ಪಿಡುಗುಗಳಾವವು?

30. ಮಹಿಳೆಯರು ಇಂದು ಯಾವ ಯಾವ ಕ್ಷೇತ್ರಗಳಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ?

31.ಗ್ರಾಮೀಣ ಉತ್ಪಾದಕ ಚಟುವಟಿಕೆಗಳ್ಯಾವವು?

*ಐದು-ಆರು ವಾಕ್ಯಗಳಲ್ಲಿ ಉತ್ತರಿಸಿರಿ ( 3ಅಂಕದ ಪ್ರಶ್ನೆಗಳು)

32.ಗ್ರಾಮೀಣಾಭಿವೃದ್ಧಿಯಲ್ಲಿ ಪಂಚಾಯತ್ ರಾಜ್ ಸಂಸ್ಥೆಗಳ ಪಾತ್ರವೇನು?

33.ಗ್ರಾಮೀಣ ಅಭಿವೃದ್ಧಿಗೆ ನಿಮ್ಮ ಸಲಹೆಗಳೇನು?

34.ಗ್ರಾಮೀಣಾಭಿವೃದ್ಧಿಯು ಗ್ರಾಮೀಣ ಪರಿವರ್ತನೆಗೆ ಕಾರಣವಾಗುತ್ತದೆ-ಈ ಹೇಳಿಕೆಯನ್ನು ಸ್ಪಷ್ಟೀಕರಿಸಿರಿ.

35.ವಿಕೇಂದ್ರಿಕರಣದ ಹಿನ್ನಲೆಯಲ್ಲಿ ಗಾಂಧೀಜಿಯವರ ಗ್ರಾಮ ಸ್ವರಾಜ್ಯ ಕಲ್ಪನೆಯನ್ನು ವಿವರಿಸಿರಿ.

36.ಗ್ರಾಮೀಣಾಭಿವೃದ್ಧಿಯ ಮಹತ್ವವನ್ನು ವಿವರಿಸಿರಿ.

37.ಗ್ರಾಮೀಣ ಜನರ ಆರ್ಥಿಕ ಪರಿಸ್ಥಿತಿಯನ್ನು ವಿವರಿಸಿರಿ.

38.ಗ್ರಾಮೀಣಾಭಿವೃದ್ಧಿಯಲ್ಲಿ ಸ್ತ್ರೀಶಕ್ತಿ ಸಂಘಗಳ ಪಾತ್ರವನ್ನು ವಿವಿಸಿರಿ.

39.ಗ್ರಾಮೀಣ ಭಾಗದ ಬಡಜನರ ಜೀವನ ಸ್ಥಿತಿಯನ್ನು ಸುಧಾರಿಸಲು ಯಾವ ಕ್ರಮಗಳನ್ನು ಕೈಗೊಳ್ಳಲಾಗಿದೆ?

ಅಧ್ಯಾಯ-3 ಹಣ ಮತ್ತು ಸಾಲ

*ಬಹು ಆಯ್ಕೆ ಪ್ರಶ್ನೆಗಳು

1.ಭಾರತೀಯ ರಿಜರ್ವ ಬ್ಯಾಂಕ್ ಸ್ಥಾಪನೆಯಾದ ವರ್ಷ

ಎ)1935  ಬಿ) 1936  ಸಿ)1948 ಡಿ) 1949

2.ಭಾರತ ಸರ್ಕಾರ 14 ಬ್ಯಾಂಕಗಳನ್ನು ರಾಷ್ಟ್ರೀಕರಣಗೊಳಿಸಿದ್ದು

ಎ)1976   ಬಿ)1980   ಸಿ) 1969    ಡಿ) 1979

3.ಅಮೇರಿಕಾದ ಹಣದ ಹೆಸರು

ಎ) ಪೌಂಡ್   ಬಿ)ಡಾಲರ್    ಸಿ)ರೂಪಾಯಿ    ಡಿ) ಯೆನ್

4.ಆರ್ ಬಿ ಐ ರಾಷ್ಟ್ರೀಕರಣಗೊಂಡ ವರ್ಷ

ಎ)1939  ಬಿ)1949   ಸಿ)1959   ಡಿ)1969

5.ಬ್ಯಾಂಕುಗಳ ಬ್ಯಾಂಕು ಎಂದು ಹೆಸರಾಗಿದೆ.

ಎ)ಎಸ್ ಬಿ ಐ  ಬಿ) ವಿಜಯಾ ಬ್ಯಾಂಕ್  ಸಿ) ಆರ್ ಬಿ ಐ   ಡಿ) ಸಿಂಡಿಕೇಟ್ ಬ್ಯಾಂಕ್

6.ಚೆಕ್ ಬುಕ್ ಎಂತಹ ಹಣಕ್ಕೆ ಉತ್ತಮ ಉದಾಹರಣೆ

ಎ)ಲೋಹದ ಹಣ   ಬಿ)ಬ್ಯಾಂಕ್ ಹಣ    ಸಿ) ಕಾಗದದ ಹಣ   ಡಿ) ಪ್ಲಾಸ್ಟಿಕ್ ಹಣ

7.ಸರಕುಗಳಿಗಾಗಿ ಸಂದಾಯ ಮಾಡುವಲ್ಲಿ ಅಥವಾ ಇತರೆ ವಾಣಿಜ್ಯ ಸಾಲಗಳನ್ನು ತೀರಿಸುವಲ್ಲಿ ವ್ಯಾಪಕವಾಗಿ ಸ್ವೀಕರಿಸಲ್ಪಟ್ಟ ಯಾವದೇ ವಸ್ತು ಹಣವಾಗಿದೆ ಎಂದವರು.

ಎ)ರಾಬರ್ಟಸನ್    ಬಿ)ಜಾಫರ್ ಕ್ರೌಥರ್    ಸಿ) ಜೆ ಬಿ ಸೇ     ಡಿ) ಆ್ಯಡಂಸ್ಮಿತ್

8.ಹಣದ ವಿಕಾಸದ ಮೊದಲ ಹಂತ

ಎ) ವಸ್ತುರೂಪದ ಹಣ   ಬಿ) ಸಾಟಿ(ವಸ್ತು) ವಿನಿಮಯ ಹಂತ    ಸಿ) ಕಾಗದದ ಹಣ   ಡಿ) ಲೋಹದ ಹಣ

9.ಈ ಕೆಳಗಿನವುಗಳಲ್ಲಿ ಯಾವದು ಹಣದ ಪೂರಕ ಕಾರ್ಯವಲ್ಲ.

ಎ)ವಿಳಂಬಿತ ಸಂದಾಯದ ಪ್ರಮಾಣ                               ಬಿ) ಮೌಲ್ಯ ಅಥವಾ ಖರೀದಿ ಶಕ್ತಿಯ ಸಂಗ್ರಹ

ಸಿ)ಮೌಲ್ಯ ವರ್ಗಾವಣೆ ಅಥವಾ ಖರೀದಿ ಶಕ್ತಿಯ ವರ್ಗಾವಣೆ       ಡಿ) ವಿನಿಮಯದ ಮಾದ್ಯಮ ಅಥವಾ ಸಂದಾಯದ ಸಾಧನ

10.ಭಾರತ ಸರ್ಕಾರ 1980ರಲ್ಲಿ ರಾಷ್ಟ್ರೀಕರಣಗೊಳಿಸಿದ ಬ್ಯಾಂಕುಗಳ ಸಂಖ್ಯೆ

ಎ)8 ವಾಣಿಜ್ಯ ಬ್ಯಾಂಕುಗಳು    ಬಿ) 7ವಾಣಿಜ್ಯ ಬ್ಯಾಂಕುಗಳು  ಸಿ) 6ವಾಣಿಜ್ಯ ಬ್ಯಾಂಕುಗಳು   ಡಿ) 10 ವಾಣಿಜ್ಯ ಬ್ಯಾಂಕುಗಳು

*ಒಂದು ವಾಕ್ಯದಲ್ಲಿ ಉತ್ತರಿಸಿರಿ (ಒಂದು ಅಂಕದ ಪ್ರಶ್ನೆಗಳು)

11.ಹಣದ ಅರ್ಥ ತಿಳಿಸಿ.

12.ಇ ಹಣ ಎಂದರೇನು?

13 ಸಾಟಿ ವಿನಿಮಯ ಪದ್ಧತಿ ಎಂದರೇನು?

14.ಬ್ಯಾಂಕ್ ಹಣಕ್ಕೆ ಉದಾಹರಣೆ ನೀಡಿ.

15.ಬ್ಯಾಂಕ್ ದರ ಎಂದರೇನು?

16.ಬೇಡಿಕೆ ಅಥವಾ ಡಿಮ್ಯಾಂಡ್ ಠೇವಣಿಗಳೆಂದರೇನು?

17.ಹಣದುಬ್ಬರವು ಹೇಗೆ ಸಂಭವಿಸುತ್ತದೆ.

18.ಮುಕ್ತ ಮಾರುಕಟ್ಟೆ ಕಾರ್ಯಾಚರಣೆ ಎಂದರೇನು?

19.ಉಳಿತಾಯ ಮತ್ತು ಚಾಲ್ತಿ ಖಾತೆಯನ್ನು ಬೇಡಿಕೆ ಅಥವಾ ಡಿಮ್ಯಾಂಡ್ ಠೇವಣಿಗಳೆಂದು ಕರೆಯಲು ಕಾರಣವೇನು?

20.ಕಿರಿದಾದ ಹಣದ ಪೂರೈಕೆ ಯಾವುದು?

21.ವಸ್ತು ರೂಪದ ಹಣಕ್ಕೆ ಉದಾಹರಣೆ ಕೊಡಿ.

22.ಪ್ಲಾಸ್ಟಿಕ್ ಹಣಕ್ಕೆ ಉದಾಹರಣೆ ನೀಡಿ.

23.ಬ್ಯಾಂಕಿಂಗ್ ಎಂದರೇನು?

24.ಭಾರತದಲ್ಲಿ ಒಂದು ರೂಪಾಯಿ ನೋಟನ್ನು ಯಾರು ಮುದ್ರಿಸಿ ಚಲಾಯಿಸುತ್ತಾರೆ.

25.ಮುದ್ದತ್ತು ಠೇವಣೆ ಎಂದರೇನು?

26.ಹಣಕಾಸು ನೀತಿ ಎಂದರೇನು?

27.ನಗದು ಮೀಸಲು ಅನುಪಾತ ಎಂದರೇನು?

28.ಶಾಸನಬದ್ಧ ದ್ರವ್ಯತೆ ಅನುಪಾತ ಎಂದರೇನು?

29.ಹಣ ವಿನಿಮಯ ಮಾದ್ಯಮ ಹೇಗೆ?

30. ಬ್ಯಾಂಕ್ ಹಣ ಆಸ್ತಿತ್ವಕ್ಕೆ ಬರಲು ಕಾರಣವೇನು?

31.ಲೋಹದ ಹಣ ಬಳಕೆ ದೋಷಪೂರಿತವಾಗಿತ್ತು ಹೇಗೆ?

32.ಹಣದ ಕುರಿತು ರಾಬರ್ಟಸನ್ ರವರ ವ್ಯಾಖ್ಯಾನವೇನು?

*ಮೂರು-ನಾಲ್ಕು ವಾಕ್ಯಗಳಲ್ಲಿ ಉತ್ತರಿಸಿರಿ  ( 2ಅಂಕದ ಪ್ರಶ್ನೆಗಳು)

33.ಹಣದ ವಿಕಾಸದ ಯಾವುದಾದರೂ ನಾಲ್ಕು ಹಂತಗಳನ್ನು ತಿಳಿಸಿರಿ.

34.ಭಾರತದಲ್ಲಿ ಬಳಸಲಾಗುತ್ತಿರುವ ಹಣದ ಪೂರೈಕೆಯ ವಿವಿಧ ಪರಿಕಲ್ಪನೆಗಳನ್ನು ತಿಳಿಸಿರಿ.

35.ಹಣದ ಪೂರಕ ಕಾರ್ಯಗಳಾವವು?

36.ಪ್ಲಾಸ್ಟಿಕ್ ಹಣದ ಮಹತ್ವವೇನು?
37.ಪುರಾತನ ಕಾಲದಲ್ಲಿ ಜನರು ಸಾಟಿ ವಿನಿಮಯ ಪದ್ದತಿಯನ್ನು ಬಳಸುತ್ತಿದ್ದರು. ವಿಶ್ಲೇಷಿಸಿ.

38.ಲೋಹದ ಹಣ ಮತ್ತು ಕಾಗದದ ಹಣದ ನಡುವಿನ ವ್ಯತ್ಯಾಸಗಳೇನು?

*ಐದು-ಆರು ವಾಕ್ಯಗಳಲ್ಲಿ ಉತ್ತರಿಸಿರಿ (3ಅಂಕದ ಪ್ರಶ್ನೆಗಳು)

39.ಹಣದ ಕಾರ್ಯಗಳನ್ನು ಪಟ್ಟಿ ಮಾಡಿ.

40.ಹಣದ ವಿಕಾಸದ ಹಂತಗಳನ್ನು ಬರೆಯಿರಿ.

41.ಆರ್ ಬಿ ಐ ದ ಕಾರ್ಯಗಳೇನು?

42.ಆರ್ ಬಿ ಐ ಸರ್ಕಾರದ ಬ್ಯಾಂಕಾಗಿ ಕಾರ್ಯನಿರ್ವಹಿಸುತ್ತದೆ, ಸಮರ್ಥಿಸಿರಿ.

43.ಆರ್ ಬಿ ಐ ಬಳಸುವ ಸಾಲ ನಿಯಂತ್ರಣ ಕ್ರಮಗಳನ್ನು ವಿವರಿಸಿರಿ.
44.ಧೇಶವೊಂದರ ಪ್ರಗತಿಯಲ್ಲಿ ಬ್ಯಾಂಕುಗಳ ಪಾತ್ರ ಮಹತ್ವದ್ದಾಗಿದೆ, ವಿಶ್ಲೇಷಿಸಿರಿ.

45.ಭಾರತದಲ್ಲಿ ಬಳಸಲ್ಪಡುವ ಹಣದ ಪೂರೈಕೆಯ ವಿವಿಧ ಪರಿಕಲ್ಪನೆಗಳನ್ನು ವಿವರಿಸಿರಿ.

46.ಬ್ಯಾಂಕುಗಳ ಪ್ರಾಮುಖ್ಯತೆಯನ್ನು ವಿವರಿಸಿ.

47.ಇತ್ತೀಚಿನ ದಿನಗಳಲ್ಲಿ ಪ್ಲಾಸ್ಟಿಕ್ ಹಣ ಕ್ಕೆ ಹೆಚ್ಚಿನ ಮಹತ್ವವಿದೆ, ಸಮರ್ಥಿಸಿ.

48 ಆರ್ ಬಿ ಐ ಬ್ಯಾಂಕುಗಳ ಬ್ಯಾಂಕ್ ಆಗಿ ಕಾರ್ಯ ಮಾಡುತ್ತಿದೆ, ವಿವರಿಸಿರಿ.

ಅಧ್ಯಾಯ-4  ಸಾರ್ವಜನಿಕ ಹಣಕಾಸು ಮತ್ತು ಆಯವ್ಯಯ

*ಬಹುಆಯ್ಕೆ ಪ್ರಶ್ನೆಗಳು

1.ಪ್ರಸ್ತುತ ಭಾರತದ ಹಣಕಾಸು ಮಂತ್ರಿ

ಎ)ಸುರೇಶ ಅಂಗಡಿ     ಬಿ) ರಾಜನಾಥ ಸಿಂಗ್  ಸಿ) ನಿರ್ಮಲಾ ಸೀತಾರಾಮನ್   ಡಿ) ಅಮಿತ್ ಶಾ

2.ಭಾರತದಲ್ಲಿ ಹಣಕಾಸು ವರ್ಷದ ಅವಧಿ

ಎ) ಜನೇವರಿ 01-ಡಿಸೆಂಬರ್31                  ಬಿ) ಜನೇವರಿ 01-ಜುಲೈ31

ಸಿ)ಏಪ್ರೀಲ್ 01-ಮಾರ್ಚ31                       ಡಿ) ಏಪ್ರೀಲ್ 01- ಡಿಸೆಂಬರ್ 31

3.ಕೋಶಿಯ(ವಿತ್ತೀಯ) ನೀತಿ ಯಾವುದಕ್ಕೆ ಸಂಬಂಧಿಸಿದೆ.

ಎ) ಸರಕಾರದ ವರಮಾನ  ಬಿ) ಸರಕಾರದ ವೆಚ್ಚ    ಸಿ) ಸರಕಾರದ ಸಾಲ   ಡಿ) ಈ ಮೇಲಿನ ಎಲ್ಲವೂ

4.ಸರಕಾರದ ಬಹುಮುಖ್ಯ ವರಮಾನದ ಮೂಲ

ಎ)ತೆರಿಗೆ     ಬಿ)ವಿದೇಶಿ ವ್ಯಾಪಾರ    ಸಿ) ಸಾರಿಗೆ ಸಂಪರ್ಕ   ಡಿ) ಕೈಗಾರಿಕೆಯ ವರಮಾನ

5.ಆಯವ್ಯಯ ಕೊರತೆಯ ಸರಿಯಾದ ಸೂತ್ರ

ಎ)ವಿತ್ತೀಯ ಕೊರತೆ-ಬಡ್ಡಿ ಪಾವತಿ   ಬಿ) ಕಂದಾಯ ಖಾತೆಯ ವರಮಾನ ಸಿ) ಒಟ್ಟು ವರಮಾನ-ಒಟ್ಟು ವೆಚ್ಚ ಡಿ) ಒಟ್ಟು          ವರಮಾನ+ಒಟ್ಟು ವೆಚ್ಚ.

6.ಭಾರತ ಸರಕಾರ ಕೋಶಿಯ ಹೊಣೆಗಾರಿಕೆ ಮತ್ತು ಮುಂಗಡ ಪತ್ರ ನಿರ್ವಹಣೆ ಕಾಯ್ದೆಯನ್ನು ಜಾರಿಗೆ ತಂದ ವರ್ಷ

ಎ)2005     ಬಿ) 2002   ಸಿ) 2003    ಡಿ)2004

7.ಕೇಂದ್ರ ಸರಕಾರದ ಮುಂಗಡ ಪತ್ರ(ಆಯವ್ಯಯ ಪತ್ರ)ವನ್ನು ಲೋಕಸಭೆಯಲ್ಲಿ ಮಂಡಿಸುವವರು

ಎ)ಪ್ರಧಾನಮಂತ್ರಿ   ಬಿ) ಹಣಕಾಸು ಮಂತ್ರಿ   ಸಿ) ರಾಷ್ಟ್ರಪತಿ  ಡಿ) ಸಭಾಪತಿ

8.ಸರಕು ಮತ್ತು ಸೇವಾ ತೆರಿಗೆ (ಜಿ ಎಸ್ ಟಿ) ಜಾರಿಗೆಯಾದ ವರ್ಷ

ಎ)ಜುಲೈ01, 2017.     ಬಿ)ಏಪ್ರೀಲ್01, 2017    ಸಿ) ಜನೇವರಿ01, 2017  ಡಿ) ಜೂನ್01, 2017

9.ಪ್ರತ್ಯಕ್ಷ ತೆರಿಗೆಗೆ ಉದಾಹರಣೆ

ಎ) ಸರಕು ಮತ್ತು ಸೇವಾ ತೆರಿಗೆ ಬಿ)ಆಮದು ಮತ್ತು ರಪ್ತು ಸುಂಕ ಸಿ) ಮೌಲ್ಯವರ್ಧಿತ ತೆರಿಗೆ ಡಿ)ಕಂಪನಿ ತೆರಿಗೆ

10.ಸಾರ್ವಜನಿಕ ವೆಚ್ಚದ ಪ್ರಮುಖ ಉದ್ದೇಶ

ಎ) ಆರ್ಥಿಕ ಬೆಳವಣಿಗೆ ತೀವ್ರಗೊಳಿಸುವದು               ಬಿ)ಸಂಪೂರ್ಣ ಉದ್ಯೋಗ ಸಾಧಿಸುವದು

ಸಿ) ಸಾಮಾಜಿಕ ಕಲ್ಯಾಣವನ್ನು ಅಧಿಕಗೊಳಿಸುವದು       ಡಿ) ಈ ಮೇಲಿನ ಎಲ್ಲವೂ

* ಒಂದು ವಾಕ್ಯದಲ್ಲಿ ಉತ್ತರಿಸಿರಿ  (ಒಂದು ಅಂಕದ ಪ್ರಶ್ನೆಗಳು)

11.ಸಾರ್ವಜನಿಕ ಹಣಕಾಸು ಎಂದರೇನು?

12.ವೈಯಕ್ತಿಕ ಹಣಕಾಸು ಎಂದರೇನು?

13.ಮುಂಗಡ ಪತ್ರದ(ಆಯವ್ಯಯ) ಅರ್ಥ ತಿಳಿಸಿ.

14.ಸರಕಾರವು ಸಾರ್ವಜನಿಕ ಹಣಕಾಸನ್ನು ಯಾವ ನೀತಿಯ ಮೂಲಕ ನಿರ್ವಹಿಸುತ್ತದೆ.

15.ಪ್ರತ್ಯಕ್ಷ ತೆರಿಗೆ ಎಂದರೇನು?

16.ಪರೋಕ್ಷ ತೆರಿಗೆ ಎಂದರೇನು?

17.ಕೊರತೆ ಹಣಕಾಸು ಎಂದರೇನು?

18.ಸರಕಾರದ ಪ್ರಗತಿಪರ ತೆರಿಗೆ ನೀತಿಯು ಬಡವರಿಗೆ ಹೇಗೆ ಸಹಕಾರಿಯಾಗಿದೆ.

19.ಸಾರ್ವಜನಿಕ ಹಣಕಾಸು ಕುರಿತು ಡಾಲ್ಟನ್ ರವರ ವ್ಯಾಖ್ಯಾನವೇನು?

20.ಕೋಶಿಯ ನೀತಿ ಎಂದರೇನು?

21.ಸರಕಾರದ ಆಯವ್ಯಯಕ್ಕೆ ಯಾವುದರ ಅನುಮೋದನೆ ಅಗತ್ಯವಾಗಿದೆ.

22.ಮುಂಗಡ ಪತ್ರಕ್ಕೆ ಯಾವ ಅವಧಿಯೊಳಗೆ ಅನುಮೋದನೆ ಪಡೆಯಬೇಕು.

23.ಉಳಿತಾಯ ಮುಂಗಡ ಪತ್ರ ಎಂದರೇನು?

24 ಕೊರತೆಯ ಮುಂಗಡ ಪತ್ರ ಎಂದರೇನು?

25 ಸಮತೋಲನ ಮುಂಗಡ ಪತ್ರ ಎಂದರೇನು?

26, ಸಾರ್ವಜನಿಕ ವೆಚ್ಚ ಎಂದರೇನು?

27.ಸಾರ್ವಜನಿಕ ವೆಚ್ಚ ಏರಿಕೆಯಾಗಲು ಕಾರಣವೇನು?

28,ಕಂದಾಯ ವರಮಾನ ಎಂದರೇನು?

29.ಕಂದಾಯ ವರಮಾನದ ಎರಡು ವಿಧಗಳು ಯಾವವು?

30.ತೆರಿಗೆ ವರಮಾನ ಎಂದರೇನು?

31.ಪ್ರಗತಿಪರ ತೆರಿಗೆ ನೀತಿ ಎಂದರೇನು?

32.ತೆರಿಗೆಯ ಎರಡು ವಿಧಗಳು ಯಾವವು?

33.ಜಿ ಎಸ್ ಟಿ ಯಾವಾಗ ಜಾರಿಗೆ ಬಂದಿದೆ?

34.ತೆರಿಗೆಯೇತರ ಆದಾಯದ ಮೂಲ ಎಂದರೇನು?

35.ಸಾರ್ವಜನಿಕ ಸಾಲ ಎಂದರೇನು?

36.ಆಂತರಿಕ ಸಾಲ ಎಂದರೇನು?

37.ವಿದೇಶಿ ಸಾಲ ಎಂದರೇನು?

38.ಹೂಡಿಕೆ ಹಿಂತೆಗೆತ ಎಂದರೇನು?

39.ಸಾಲೇತರ ಬಂಡವಾಳ ಎಂದರೇನು?

40.ಕೊರತೆಯ ಹಣಕಾಸು ಎಂದರೇನು?

41.ವಿತ್ತೀಯ (ಕೋಶಿಯ) ಕೊರತೆ ಎಂದರೇನು?

42.ಮುಂಗಡ ಪತ್ರದ ಕೊರತೆಯ ಸೂತ್ರವನ್ನು ಹೆಸರಿಸಿರಿ.

43.ಪ್ರಾಥಮಿಕ ಕೊರತೆಯನ್ನು ಸೂತ್ರ ರೂಪದಲ್ಲಿ ಬರೆಯಿರಿ.

44.ಭಾರತದಂತಹ ಅಭಿವೃದ್ಧಿಶೀಲ ರಾಷ್ಟ್ರದಲ್ಲಿ ಸರಕಾರವು ಕೊರತೆಯ ಆಯವ್ಯಯವನ್ನೇ ಮಂಡಿಸುತ್ತದೆ, ಏಕೆ?

45. ಜಿ ಎಸ್ ಟಿ ವಿಸ್ತರಿಸಿ ಬರೆಯಿರಿ.

*ಮೂರು –ನಾಲ್ಕು ವಾಕ್ಯಗಳಲ್ಲಿ ಉತ್ತರಿಸಿರಿ  (2ಅಂಕದ ಪ್ರಶ್ನೆಗಳು)

46.ಕೇಂದ್ರ ಸರಕಾರವು ತನ್ನ ವೆಚ್ಚ ಮತ್ತು ವರಮಾನಗಳ ನಡುವಿನ ವ್ಯತ್ಯಾಸವನ್ನು ಹೇಗೆ ಸರಿದೂಗಿಸುತ್ತದೆ?

47.ಕೋಶಿಯ ಹೊಣೆಗಾರಿಕೆ ಮತ್ತು ಮುಂಗಡ ಪತ್ರ ನಿರ್ವಹಣೆ ಕಾಯ್ದೆಯ ಉದ್ಧೇಶಗಳು ಯಾವವು?

48.ಕೊರತೆ ಹಣಕಾಸಿನ ವಿಧಗಳು ಯಾವವು?

47.ಪ್ರತ್ಯಕ್ಷ ಮತ್ತು ಪರೋಕ್ಷ ತೆರಿಗೆ ನಡುವಿನ ವ್ಯತ್ಯಾಸಗಳೇನು.

48.ಮುಂಗಡ ಪತ್ರ ಎಂದರೇನು? ಮುಂಗಡಪತ್ರದ ವಿಧಗಳನ್ನು ತಿಳಿಸಿ.

49.ಕೇಂದ್ರ ಸರಕಾರದ ತೆರಿಗೆಯೇತರ ವರಮಾನದ ಮೂಲಗಳು ಯಾವವು?

50.ಪ್ರಗತಿಪರ ತೆರಿಗೆಯು ಬಡವರಿಗೆ ಹೇಗೆ ಸಹಕಾರಿಯಾಗಿದೆ.

51.ಸರಕಾರವು ಯಾವ ಚಟುವಟಿಕೆಗಳ ಮೇಲೆ ವೆಚ್ಚ ಮಾಡುತ್ತದೆ?

52.ಆಂತರಿಕ ಸಾಲದ ಬಗೆಗಳಾವವು?

53.ಕೋಶಿಯ ನೀತಿಯ ಉದ್ಧೇಶಗಳೇನು?

54.ಸಾರ್ವಜನಿಕ ಹಣಕಾಸಿನ ಅಧ್ಯಯನವು ಆಯವ್ಯಯಗಳ ವಿಶ್ಲೇಷಣೆಗೆ ಹೇಗೆ ಸಹಾಯಕಾರಿಯಾಗುತ್ತದೆ?
*ಐದು-ಆರು ವಾಕ್ಯಗಳಲ್ಲಿ ಉತ್ತರಿಸಿರಿ  (3ಅಂಕದ ಪ್ರಶ್ನೆಗಳು)

55.ಸಾರ್ವಜನಿಕ ಹಣಕಾಸಿನ ಮಹತ್ವವನ್ನು ವಿವರಿಸಿರಿ.

56.ಸಾರ್ವಜನಿಕ ವೆಚ್ಚದ ಪ್ರಮುಖ ಉದ್ದೇಶಗಳೇನು?

57.ಸಾರ್ವಜನಿಕ ವೆಚ್ಚದ ಏರಿಕೆಗೆ ಕಾರಣಗಳನ್ನು ವಿವರಿಸಿರಿ.
58. ತೆರಿಗೆಯೇತರ ವರಮಾನದ ಮೂಲಗಳನ್ನು ವಿವರಿಸಿರಿ.

59.ಅಧಿಕ ಪ್ರಮಾಣದ ಕೊರತೆಗಳು ಆರ್ಥಿಕ ವ್ಯವಸ್ಥೆಗೆ ಉತ್ತಮವಲ್ಲ ಏಕೆ?

60.ಕಂದಾಯ ವರಮಾನ ಎಂದರೇನು? ಅದರ ವಿಧಗಳು ಯಾವವು?

61.ಪ್ರತ್ಯಕ್ಷ ಮತ್ತು ಪರೋಕ್ಷ ತೆರಿಗೆಗಳ ನಡುವಿನ ಭಿನ್ನತೆಗಳನ್ನು ತಿಳಿಸಿರಿ.

62.ಆಯವ್ಯಯ ಪತ್ರದ ಅರ್ಥ ತಿಳಿಸಿ?ವಿಧಗಳನ್ನು ವಿವರಿಸಿ.

63.ಪ್ರತಿಸಲವೂ ನಮ್ಮ ಕೇಂದ್ರ ಸರಕಾರವು ಕೊರತೆ ಮುಂಗಡ ಪತ್ರ ಮಂಡಿಸುತ್ತಿದೆ,ಸಮರ್ಥಿಸಿ.

                                                   --ಮುಕ್ತಾಯ--

 

.

 

 

 


ಶನಿವಾರ, ಜೂನ್ 27, 2020

ಮಕ್ಕಳ ರಂಗಭೂಮಿ ಕುರಿತು ವಿಚಾರ ಸಂಕೀರ್ಣ ದಲ್ಲಿ ಭಾಗುವಹಿಸುವಿಕೆ

ಮಕ್ಕಳ ರಂಗಭೂಮಿ ಕುರಿತು ವಿಚಾರ ಸಂಕೀರ್ಣ ದಲ್ಲಿ ಭಾಗುವಹಿಸುವಿಕೆ 


Vachanamrutha

ಬುಧವಾರ, ಜೂನ್ 24, 2020

ಭಾನುವಾರ, ಮೇ 31, 2020

Gudadur Kere

ಶನಿವಾರ, ಮೇ 30, 2020

ಶುಕ್ರವಾರ, ಮೇ 29, 2020

ಕೊರೊನಾ ಕಾಲದ ಮಕ್ಕಳ ಶಿಕ್ಷಣಕ್ಕೆ 'ವಠಾರ ಶಾಲೆ

ಕೊರೊನಾ ಕಾಲದ ಮಕ್ಕಳ ಶಿಕ್ಷಣಕ್ಕೆ 
'ವಠಾರ ಶಾಲೆ'

ಕೊರೊನಾದಿಂದ ಆತಂಕ ಮತ್ತು ತಲ್ಲಣಗಳ ಮಧ್ಯ ಬದುಕುತ್ತಿರುವ ಜನಸಮುದಾಯಕ್ಕೆ ವೈದ್ಯರು, ಪೋಲೀಸರು, ಆಶಾ ಕಾರ್ಯಕರ್ತರು ಕೊರೊನಾ ವಾರಿಯರ್ಸ್ ಆಗಿ ಕೆಲಸ ಮಾಡುತ್ತಿರುವ ಸಂದರ್ಭದಲ್ಲಿ ಶಿಕ್ಷಕರಾಗಿ ನಾವೇಕೆ ಸುಮ್ಮನಿರಬೇಕು. ಶಾಲೆಗೆ ಬರಲಾಗದೇ ಮನೆಯಲ್ಲಿಯೂ ಸುಮ್ಮನೇ ಇರಲಾಗದೇ ತೊಳಲಾಡುತ್ತಿರುವ 'ಮಕ್ಕಳಿಗೆ ಅವರ ವಠಾರ ಅಥವಾ ಮನೆಯಂಗಳದ ಸೂಕ್ತ ಜಾಗದಲ್ಲೇ ಸೂಕ್ತ ಅಂತರ ಹಾಗೂ ಜಾಗೃತಿ ಕ್ರಮಗಳನ್ನು ಅನುಸರಿಸುವ ಮೂಲಕ ಅನೌಪಚಾರಿಕ ಶಿಕ್ಷಣ ನೀಡುವ ಕಲಿಕಾ ಕೇಂದ್ರಗಳನ್ನು ನಾವೇಕೆ ತೆರೆಯಬಾರದು' ಎಂದು ಆಲೋಚಿಸುತ್ತ ಮೂಡಿದ ಪರಿಕಲ್ಪನೆ ಈ 'ವಠಾರ ಶಾಲೆ'. ಈ ಕುರಿತು ನಮ್ಮ ಭಾರತ ಜ್ಞಾನ ವಿಜ್ಞಾನ ಸಮಿತಿಯ ಗೆಳೆಯರ ಹಾಗೂ ಆಸಕ್ತರ ಒಂದು ಸಣ್ಣ ಗುಂಪಿನಲ್ಲಿ ನಡೆದ ಚರ್ಚೆ ಈಗ ವಿಸ್ತೃತ ರೂಪ ಪಡೆದುಕೊಳ್ಳುತ್ತಿದೆ. 
ವಠಾರ ಶಾಲೆಯ ಸ್ವರೂಪ:
    ಒಂದೇ ವಠಾರ ಅಥವಾ ಓಣಿಯ ಯಾವುದೇ ತರಗತಿ ಓದುವ ಅಥವಾ ಯಾವುದೇ ಶಾಲೆಗೆ ಹೋಗುವ ಗರಿಷ್ಟ ೧೦-೧೫ ಮಕ್ಕಳನ್ನು ಆಯ್ಕೆ ಮಾಡಿಕೊಂಡು ಅದೇ ವಠಾರದ ಸೂಕ್ತ ಜಾಗವೊಂದರಲ್ಲಿ ಪಠ್ಯಕ್ಕೆ ಪೂರಕವಾದ ಚಟುವಟಿಕೆಗಳನ್ನು ಹಮ್ಮಿಕೊಳ್ಳುವುದು. ಈ ಮೂಲಕ ಮಕ್ಕಳಲ್ಲಿ ಕಲಿಯುವಿಕೆಯ ಆಸಕ್ತಿ ಉಳಿಸಿ ಬೆಳೆಸಿಕೊಳ್ಳುವಂತೆ ಮಾಡಿ ಸ್ವಯಂ ಕಲಿಕೆಯ ಮೂಲಕ ತನ್ನ ಬಿಡುವಿನ ಸಮಯವನ್ನು ಸಾರ್ಥಕಗೊಳಿಸಿಕೊಳ್ಳುವಂತೆ ಮಾಡುವುದು. ಇದು ಇರುವ ಶಾಲೆಗಳ ಪರ್ಯಾಯ ಶಾಲೆಗಳಾಗಿರದೇ ಸಮುದಾಯದ ನೆರವಿನಲ್ಲಿ ತಮ್ಮ ಮಕ್ಕಳ ಶಿಕ್ಷಣಕ್ಕೆ ಕಟ್ಟಿಕೊಂಡ ಶೈಕ್ಷಣಿಕ ಮಾರ್ಗದರ್ಶಿ ಕೇಂದ್ರಗಳಷ್ಟೇ. ಶಾಲೆಗಳು ಆರಂಭವಾದ ಮೇಲೂ ಇವುಗಳನ್ನು ಅಗತ್ಯಾನುಸಾರ ಸಮುದಾಯದ ಒತ್ತಾಸೆಯನ್ನವಲಂಬಿಸಿ ಮುಂದುವರಿಸಿಕೊಂಡು ಹೋಗಬಹುದು.
ವಠಾರ ಶಾಲೆಯ ಅಗತ್ಯತೆ:
    ಮಕ್ಕಳು ಮೂರು ತಿಂಗಳಿಂದ ಶಾಲಾ ಶಿಕ್ಷಣದಿಂದ ದೂರವಿದ್ದು ಮನೆಯಲ್ಲೇ ಕಾಲ ಕಳೆಯುತ್ತಿದ್ದಾರೆ. ಪಾಲಕ ಪೋಷಕರೊಂದಿಗೆ ಕಳೆದ ಈ ದಿನಗಳು ಸಾರ್ಥಕವೆಂದೇ ಭಾವಿಸೋಣ. ಆದರೆ ಇದು ಇನ್ನೆಷ್ಟು ದಿನ ಎಂಬುದು ಪ್ರಶ್ನೆ. ಲಾಕ್ ಡೌನ್ ತೆರವಿನ ನಂತರ ತಂದೆ ತಾಯಿ ಪೋಷಕರು ತಮ್ಮ ಕೆಲಸದತ್ತ ಮುಖ ಮಾಡಿದ್ದಾರೆ. ಬಹುತೇಕ ಮಕ್ಕಳಿಗೆ ಮನೆಯಲ್ಲಿ ಹೇಳಿ ಕೇಳುವವರು ಇಲ್ಲವಾಗಿ ಏನೆಲ್ಲ ಚಟುವಟಿಕೆಗಳಲ್ಲಿ ತೊಡಗಿಕೊಳ್ಳುವ ಸಾಧ್ಯತೆಯಿದೆ. ಈ ಸಂದರ್ಭದಲ್ಲಿ ಇಂಥ ಮಕ್ಕಳಿಗೆ, ಪಾಲಕ-ಪೋಷಕರಿಗೆ ಸೂಕ್ತ ಮಾರ್ಗದರ್ಶನದ ಅಗತ್ಯತೆಯಿದೆ. 
    ಎಷ್ಟೆಲ್ಲ ಸಮರೋಪಾದಿಯಲ್ಲಿ ಕಾರ್ಯ ಮಾಡುತ್ತಿದ್ದರೂ ಕೊರೊನಾ ಇನ್ನೂ ವಿಸ್ತಾರವಾಗುತ್ತಲೇ ಇದೆ. ಇದರಿಂದಾಗಿ ಶಾಲೆಗಳು ಆರಂಭವಾಗುವಲ್ಲಿ ಇನ್ನೂ ತಡವಾಗುವ ಮುನ್ಸೂಚನೆಗಳು ಕಾಣುತ್ತಿವೆ. ಇದರಿಂದಾಗಿ ಸಾರ್ವಜನಿಕ ಶಿಕ್ಷಣ ಇಲಾಖೆ ಟಿ.ವಿ.ಪಾಠ, ಆನ್‌ಲೈನ್ ಪಾಠಗಳೂ ಸೇರಿದಂತೆ ಕಲಿಯಲು ನೆರವಾಗುವ ವಿವಿಧ ಅವಕಾಶಗಳ ಬಗ್ಗೆ ಚಿಂತನೆ ನಡೆಸಿದೆ. ಆದರೆ ನಮ್ಮ ಇದು ಎಲ್ಲ ವಯೋಮಾನದ ಕಲಿಕೆಗೆ ನೆರವಾಗಬಲ್ಲ ಸಾಧನವಾಗಲಾರದು. ಮೇಲಾಗಿ ಇದನ್ನು ಬಳಸಿಕೊಳ್ಳುವ ಅವಕಾಶ ಎಲ್ಲರಲ್ಲು ಇಲ್ಲ ಎಂಬುದು. ಜೊತೆಗೆ ಇದು ಪರಿಪೂರ್ಣ ಕಲಿಕಾ ಮಾಧ್ಯಮವಾಗುವು ಉಚಿತವಲ್ಲ. ಈ ಹಿನ್ನೆಲೆಯಲ್ಲಿ ಮುಖಾ ಮುಖಿ ಕಲಿಕೆಯ ಅವಕಾಶಗಳನ್ನು ಹುಡುಕುವ ಅಗತ್ಯತೆ ಇದೆ. 
    ಈ ವಠಾರ ಶಾಲೆಯ ಪರಿಕಲ್ಪನೆ ಈ ಚಿಂತನೆಯ ಭಾಗವಾಗಿ ಮೂಡಿ ಬಂದಿದ್ದು ಇಲಾಖೆಗೆ ಇದೂ ಒಂದು ಕಲಿಕಾ ಸಾಧ್ಯತೆಯಾಗಿ ಸ್ಥಾನ ಪಡೆಯಬಹುದು. ಹಾಗಾಗಿ ಇಲಾಖೆಯೊಟ್ಟಿಗೆ ಕೈಜೋಡಿಸಿ ಕ್ರಿಯಾಶೀಲ ಶಿಕ್ಷಕರು, ವಿದ್ಯಾವಂತ ಯುವಕ ಯುವತಿಯರು ತಮ್ಮದೇ ಆದ ಪರಿಸರದಲ್ಲಿ ಕಾರ್ಯ ಕೈಗೊಳ್ಳುವ ಅಗತ್ಯವಿದೆ. ಕೊರೊನಾ ಹರಡದಂತೆ ಸೂಚಿಸಿರುವ ನಿರ್ದೇಶನಗಳನ್ನು ಪಾಲಿಸುವಂತೆ ಮಕ್ಕಳು ಹಾಗೂ ಮಕ್ಕಳ ಪಾಲಕ ಪೋಷಕರಲ್ಲಿ ಜಾಗೃತಿ ಮೂಡಿಸಿ ಸಣ್ಣ ಸಣ್ಣ ಗುಂಪುಗಳಲ್ಲಿ ಕಾರ್ಯಪ್ರವೃತ್ತರಾಗಬೇಕಿದೆ.
ಏನೆಲ್ಲ ಚಟುವಟಿಕೆಗಳಿರಬಹುದು:
    ಪಠ್ಯ ಪೂರಕ-ಪೋಷಕ ಚಟುವಟಿಕೆಗಳಿಂದ ಸ್ವಯಂ ಕಲಿಕೆಗೆ ಬೆಂಬಲವಾಗಲು ನೆರವಾಗುವಂತೆ ಹಲವು ಚಟುವಟಿಕೆಗಳನ್ನು ಹಮ್ಮಿಕೊಳ್ಳಬಹುದು. ಈ ಚಟುವಟಿಕೆಗಳು ಸಂತಸಕಲಿಕೆಯ ಸಾಧನಗಳಾಗಿರಬೇಕೆಂಬುದು ವಿಶೇಷ. ಈ ಹಿನ್ನೆಲೆಯಲ್ಲಿ ದಿನದ ಎರಡು ಗಂಟೆಗಳಿಗೆ ಪೂರಕವಾಗಿ ಕೆಳಕಂಡಂತೆ ಸಮಯಗಳನ್ನು ಗುರುತಿಸಲು ಪ್ರಯತ್ನಿಸಿರುವೆ. ಇವುಗಳಲ್ಲಿ ದಿನಕ್ಕೆ ಒಂದು ಅಥವಾ ಎರಡು ಚಟುವಟಿಕಾ ಸಮಯಗಳನ್ನು ಗುರುತಿಸಿಕೊಂಡು ಕಾರ್ಯ ಪ್ರವೃತ್ತರಾಗಬಹುದು. ಈ ಚಟುವಟಿಕಾ ಸಮಯಗಳನ್ನು ಹೀಗೆ ಪಟ್ಟಿ ಮಾಡಬಹುದು.
೧.    ಕಥಾ ಸಮಯ : ಕತೆಹೇಳು-ಕಥೆ ಕಟ್ಟು.
೨.    ಗೀತ ಸಮಯ : ರಾಗ ಹಾಕಿ, ಗೀತೆ ಹಾಡು.
೩.    ಓದಿನ ಸಮಯ : ವಾಚನಾಭಿನಯ-ಅಭಿನಯ ವಾಚನ
೪.    ಕವಿತಾ ಸಮಯ : ಕವಿತೆ ಕಟ್ಟು, ಕವಿತೆ ಹೇಳು.
೫.    ದೇಸಿ ಆಟದ ಸಮಯ : ಮನೆಂಗಳದ ಆಟ, ಸವಿ ರಸದೂಟ.
೬.    ಮಾಡಿ ಆಡುವ ಸಮಯ : ಕಸದಲ್ಲಿ ರಸ, ತೆಗಿಯೊ ಸೃಜನಾತ್ಮಕ ಆಟ. 
೭.    ಗೀಚಾಟ ಸಮಯ : ಗೀಚಿದ್ದೆಲ್ಲಾ ಚಿತ್ರವಲ್ಲ, ಗೀಚಾಟವಿಲ್ಲದೇ ಚಿತ್ರವಾಗುವದಿಲ್ಲ.
೮.    ಮೋಜಿನ ಸಮಯ : ವಿಜ್ಞಾನದ ಮೋಜಿನಾಟ, ಗಣಿತದ ಮಜಾಗಟ.
೯.    ಮಾತಿನ ಸಮಯ : ಮಾತೇ ಮಾಣಿಕ್ಯ, ಬದುಕಿಗೆ ಲಾಲಿತ್ಯ.
೧೦.    ಸಿನೆಮಾ ಸಮಯ : ಸಿನೇಮಾ ನೋಡು-ಸಂವಾದ ಮಾಡು.
೧೧.    ಪತ್ರಿಕೆ ಸಮಯ : ಹುಡುಕಾಟ-ತಡಕಾಟ.
೧೨.    ನೃತ್ಯ ಸಮಯ : ಸಮೂಹ ನೃತ್ಯ-ಸಮನ್ವಯದ ಸತ್ಯ (ಅಂತರ ಕಾಪಾಡಲಾಗದಿದ್ದರೆ ಇದು ಬೇಡ.)
೧೩.    ನಕ್ಕು ನಗಿಸುವ ಸಮಯ : ವಿನೋದ-ವಿಕಾಸ
೧೪.    ನಾಟಕದ ಸಮಯ : ಪಠ್ಯ ನಾಟಕದಿಂದ  ಗಟ್ಟಿ ಕಲಿಕೆ 
೧೫.    ಕಾಗದ ಕುಸುರಿ ಸಮಯ : ಕತ್ತರಿಸು ಕಾಗದ ರೂಪಿಸು ಕಲಾಕೃತಿ.
೧೬.    ಮಗ್ಗಿ ಸುಗ್ಗಿ : ಮಗ್ಗಿ ಕಲಿ ವ್ಯವಹಾರದಲ್ಲಿ ನಲಿ.

ಈ ಎಲ್ಲ ಚಟುವಟಿಕಾ ಸಮಯಗಳಿಗೆ ಪೂರಕವಾಗಿ ರೂಪಿಸಿಕೊಂಡ ಚಟುವಟಿಗೆಗಳನ್ನು ದೈಹಿಕ ಅಂತರದೊಂದಿಗೆ ಅನುಷ್ಠಾನಗೊಳಿಸಬಹುದು. ಇವಿಷ್ಟೇ ಅಲ್ಲ ಇದಕ್ಕೆ ಪೂರಕವಾಗಿ ಇನ್ನೂ ಹೆಚ್ಚು ವೈವಿದ್ಯಮಯ ಚಟುವಟಿಕೆಗಳನ್ನು ರೂಪಿಸಿಕೊಳ್ಳಬಹುದು. 

 







  ಡಾ. ನಿಂಗು ಸೊಲಗಿ. ಮುಂಡರಗಿ.

ಸೋಮವಾರ, ಮೇ 11, 2020

ರಾಜ್ಯ ಮಟ್ಟದ ಕಲಾ ಉತ್ಸವ

ರಾಜ್ಯ ಮಟ್ಟದ ಕಲಾ ಉತ್ಸವ 
ನಾಟಕ : ಭಾಗೀರಥಿ

ರಚನೆ : ಕೆ.ವೈ.ನಾರಾಯಣ ಸ್ವಾಮಿ 
ನಿರ್ದೇಶನ : ಗುರುರಾಜ ಹೊಸಪೇಟೆ 
                    ರಂಗ ಶಿಕ್ಷಕರು 

ರಂಗ ಪ್ರಸ್ತುತಿ : ಹನುಮ ಸಾಂಸ್ಕೃತಿಕ ವೇದಿಕೆ, ಸ.ಪ್ರೌ.ಶಾಲೆ, ಜಹಗೀರಗುಡದೂರ 

ಅಭಿನಯಿಸಿದ ವಿದ್ಯಾರ್ಥಿಗಳು 

ಭೀಮ್ಮವ್ವ ಡೊಳ್ಳಿನ 
ವಿಜಯಲಕ್ಷ್ಮಿ ಗುಡೂರ 
ಶಿವಕ್ಕ ಚಿಕನಾಳ 
ಕುಮಾರ ಸಣ್ಣದೋಣಿ 
ಶಂಕರ ಮಿಟ್ಟಲಕೋಡ 
ಬಸವರಾಜ ನಾಗೂರ 
ಶರಣಪ್ಪ ಹವಾಲ್ದಾರ 
ಗೊಡಚಪ್ಪ ಆಲೂರ 
ಕನಕಪ್ರಸಾದ ಡೊಳ್ಳಿನ 
ವಿಜಯಕುಮಾರ ಪರಸಾಪುರ 
ಶಿವಪ್ಪ ಚಿಕನಾಳ 

ಬುಧವಾರ, ಮೇ 6, 2020

ಕೊರೋನ

ಮಂಗಳವಾರ, ಏಪ್ರಿಲ್ 21, 2020

ಶಿಕ್ಷಣದಲ್ಲಿ ಭಾಷಾ ಗ್ರಹಿಕೆ ಮತ್ತು ಅಭಿವ್ಯಕ್ತಿ ಸಾಧನವಾಗಿ ಮಕ್ಕಳ ರಂಗಭೂಮಿ - ಗುರುರಾಜ ಎಲ್


ಮಕ್ಕಳ ರಂಗಭೂಮಿಯಲ್ಲಿ ಭಾಷೆಯ ಗ್ರಹಿಕೆಯ ಕುರಿತು ನಾವು ಅತ್ಯಂತ ಜವಾಬ್ದಾರಿಯುವಾಗಿ ಹೆಜ್ಜೆಯನ್ನು ಇಡಬೇಕಾಗಿದೆ. ಭಾಷೆಯನ್ನು ಕಲಿಸುವುದು ಎಂದು ಹೇಳಲಿಕ್ಕೆ ಆಗುವುದಿಲ್ಲ. ಮಕ್ಕಳ ಗ್ರಹಿಕೆಯ ಆಧಾರದಲ್ಲಿ ನಾವು ರಂಗಭೂಮಿಯ ಅಭಿವ್ಯಕ್ತಿ ಸಾಧನವಾಗಿ ಪ್ರಕ್ರಿಯೆಗೆ ಒಳ ಪಡಿಸಬೇಕಾಗಿದೆ. ಭಾಷೆಯನ್ನು ಗ್ರಹಿಕೆಯಲ್ಲಿ ಜಾಗತಿಕವಾಗಿ ನಮ್ಮ ಹಲವು ವಿದ್ವಾಂಸರು ಈಗಾಗಾಲೇ ತಮ್ಮ ಗಮನವನ್ನು ಸೆಳೆದಿದ್ದಾರೆ. ನಾನು ಅದರಿಂದ ಸ್ವಲ್ಪ ಹೊರ ಬಂದು ವಿಚಾರವನ್ನು ಹಂಚಿಕೊಳ್ಳಲು ಬಯಸುವೆ. 
ಸ್ಥಳೀಯತೆಯ ನೆಲೆಯಲ್ಲಿ ಭಾಷಾ ಗ್ರಹಿಕೆ ಮತ್ತು ಅಭಿವ್ಯಕ್ತಿ ಸಾಧನವಾಗಿ ಮಕ್ಕಳ ರಂಗಭೂಮಿ ಹೇಗೆ ಕೆಲಸ ಮಾಡುತ್ತಿದೆ ಎನ್ನುವುದನ್ನು ನಾನಿಲ್ಲಿ ಸರಳೀಕರಿಸಲು ಪ್ರಯತ್ನಿಸುತ್ತೇನೆ. ರಂಗಭೂಮಿಯಲ್ಲಿ ತಮ್ಮದೇ ಚಾಪನ್ನು ಮೂಡಿಸಿದ್ದ ಬಿ.ವಿ ಕಾರಂತರು ತಮ್ಮ ನಾಟಕಗಳನ್ನು ಕಟ್ಟುವಾಗ ಬಳಸುತ್ತಿದ್ದ ಧ್ವನಿಯ ವಿನ್ಯಾಸವನ್ನು ಗಮನಿಸಿದರೇ ನಮಗೆ ಅವರ ಇನ್ನುಳಿದ ಎಲ್ಲ ನಾಟಕಗಳಲ್ಲಿ ಆ ಸೂಕ್ಷ್ಮ ರೀತಿಯಲ್ಲಿ ಧ್ವನಿಯ ಹಲವು ತಂದು ನಟರ ಜೊತೆಗೆ ಪ್ರೇಕ್ಷಕರನ್ನು ಕಟ್ಟಿ ಹಾಕುತ್ತದ್ದರು. ಪಂಜರ ಶಾಲೆಯಲ್ಲಿ ಆ ಪಕ್ಷಿಗಳು ರಾಜೋಧ್ಯನದಲ್ಲಿ ಬಂದು ಹಣ್ಣನ್ನು ತಿನ್ನುವಾಗ ತನ್ನ ಬಳಗವನ್ನು ಕರೆಯಲು ಬಳಸುವ ರೀತಿ
ಟೇಂ....ಟೇಂ....
ಅಪ್ಪ ಅಮ್ಮ
ಟೇಂ....ಟೇಂ....
ಚಿಕಪ್ಪ ದೊಡಪ್ಪ
ಟೇಂ....ಟೇಂ....
ಬನ್ನಿ ಬನ್ನಿ
ಟೇಂ....ಟೇಂ....
ಹಣ್ಣು ತಿನ್ನಿ
ಟೇಂ....ಟೇಂ....

ಹೀಗೆ ಕೆ.ರಾಮಯ್ಯ ಅವರ ಒಗಟಿನ ರಾಣಿ ನಾಟಕವನ್ನು ನೋಡುವುದಾದರೇ ಇಡೀ ಉತ್ಸಾವವೇ ಸಾಗಿದಂತೆ   ತನ್ನ ಧ್ವನಿಯನ್ನು ಭಾಷೆಯನ್ನಾಗಿ ಬಳಸುವುದಕ್ಕೆ ನಮ್ಮ ಮಕ್ಕಳ ರಂಗಭೂಮಿಯಲ್ಲಿ ಹೆಚ್ಚಿನ ಸಾಧ್ಯತೆಗಳಿವೆ. ಮಕ್ಕಳು ರಂಗಭೂಮಿಯಲ್ಲಿ ತೊಡಗಿಸಿಕೊಳ್ಳುವಾಗ ಈ ಮ್ಯಾಜಿಕ್‍ನ್ನು ತುಂಬಾ ಆಸಕ್ತಿಯಿಂದ ಗ್ರಹಿಸುವುದರ ಜೊತೆಗೆ ತುಂಬಾ ಆಪ್ತತೆಯಿಂದ ಸ್ವೀಕರಿಸಿದ್ದರು ಹಾಗೇ ಇಂದಿಗೂ ಸ್ವೀಕರಿಸುತ್ತಿದ್ದಾರೆ. ಮಕ್ಕಳ ರಂಗಭೂಮಿಯಲ್ಲಿ ಮೊದಲು ನಾವು ರಚನೆಯಾದ ನಾಟಕಗಳನ್ನು ಗಮನಿಸ ಬೇಕಾಗುತ್ತದೆ. ಒಗಟಿನ ರಾಣಿಯಲ್ಲಿ ಕೆ.ರಾಮಯ್ಯ ಅವರು ಸರಳ ಹಾಗೂ ಸುಲಲಿತವಾಗಿ ಮಕ್ಕಳ ಬಾಯಲ್ಲಿ ಹರಿದಾಡುವಂಥ ಶಬ್ದಗಳ ಮೂಲಕ ಹೆಣೆದಿರುವುದು ತುಂಬ ಸುಂದರವಾಗಿದೆ.

ಹಗಲೆಲ್ಲ ಹಾಳ್ ತೋಟ
ರಾತ್ರಿ ಹೂವಿನ ತೋಟ
ಹೂ ಕುಯ್ಯೋರಿಲ್ಲ ಹೂ ಮುಡಿಯೋರಿಲ್ಲ
ಇದು ಯಾವ ತೋಟ ಹೇಳು

ಎಂಬ ಸಾಲುಗಳು ಭಾಷಾ ಗ್ರಹಿಕೆಯಲ್ಲಿ ನಾವೀನ್ಯತೆಯನ್ನೇ ತಂದು ಕೊಡುತ್ತದೆ. ಒಗಟುಗಳನ್ನು ಹಿಡಿದು ಮಕ್ಕಳ ಮನೋ ವಿಕಾಸವನ್ನು ಅದ್ಬುತವಾಗಿ ಕಟ್ಟಿ ಕೊಟ್ಟಿದ್ದಾರೆ. ಮನೆಯಲ್ಲಿ ಹಲವು ಸಂದರ್ಭಗಳಲ್ಲಿ ಹಿರಿಯರು ಒಗಟಿನ ರೂಪದಲ್ಲಿ ಬುದ್ದಿವಾದವನ್ನು ಹೇಳುವಾಗ ಬಳಸುವುದನ್ನೇ ಕೆ ರಾಮಯ್ಯ ನವರು ಮಕ್ಕಳಿಗಾಗಿ ಸುಂದರವಾಗಿ ಕಟ್ಟಿ ಕೊಟ್ಟಿದ್ದಾರೆ. ಇಡೀ ನಾಟಕ ಪೂರ್ತಿ ಹೀಗೆ ಕಣ್ಣಿಗೆ ಕಿವಿಗೆ ಇಂಪನ್ನು ನೀಡುತ್ತದೆ. ಮನೆಯ ಭಾಷೆಯನ್ನು ರಂಗಭಾಷೆಯಾಗಿ ಮಕ್ಕಳ ಅಭಿವ್ಯಕ್ತಿ ಸಾಧನವಾಗಿ ಬಳಸುವ ರೀತಿಯಾಗಿ ಕಂಡು ಬರುತ್ತದೆ. ಮಕ್ಕಳ ಮನಸ್ಸನ್ನು ಅರಳಿಸಿ, ಕುತೂಹಲವನ್ನು ಕೆರೆಳಿಸಿ, ಕಲ್ಪನೆಯ ರೂಪಿಸಿ ಮಕ್ಕಳ ವ್ಯಕ್ತಿತ್ವವನ್ನು ರೂಪಿಸುವುದರಲ್ಲಿ ಮಕ್ಕಳ ರಂಗಭೂಮಿ ಕಾರ್ಯ ನಿರ್ವಹಿಸುತ್ತದೆ.

ನಾನು ನಮ್ಮ ಶಾಲೆಯ ಸುತ್ತ ಮುತ್ತಲಿನ ಹಳ್ಳಿಗಳಲ್ಲಿ ಅನೇಕ ಬಾರಿ ಮಕ್ಕಳ ಮನೆ ಬೇಟಿ ಮಾಡುವಾಗ ಕಂಡ ಭಾಷಾ ವೈವಿಧ್ಯತೆ ಕಣ್ಣಿಗೆ ಕಟ್ಟುವ ರೀತಿಯಲ್ಲಿ ಮೂಡಿ ಬಂದಿದೆ. ಪ್ರತಿ ಹಳ್ಳಿಯಲ್ಲೂ ಹಾಡುಗಳನ್ನು ಹಾಡುವುದು ವಾಡಿಕೆ. ಸಂಪ್ರಾದಾಯಿಕ ಹಾಗೂ ಸಂಪ್ರಾದಾಯಿಕವಲ್ಲದ ಜನಪದವನ್ನು ಕಟ್ಟಿ ಹಾಡುವಾಗ ತಮ್ಮ ಎಲ್ಲ ಕೆಲಸಗಳು ಸರಳವಾಗಿ ಸಾಗುವವು ಎಂದು ಇವರನ್ನು ನೋಡಿದರೆ ಕಂಡು ಬರುತ್ತದೆ. ಹಿಂದಿನ ಕಾಲದಲ್ಲಿ ಗಿರಣಿಗಳು ಇಲ್ಲದಂತ ಸಮಯದಲ್ಲಿ ಪ್ರತಿ ಮನೆಯಲ್ಲು ಬೀಸುವ ಕಲ್ಲುಗಳಿದ್ದವು. ಈ ಬೀಸುವ ಕಲ್ಲುಗಳಲ್ಲಿ ಧಾನ್ಯಗಳನ್ನು ಹಾಕಿ ಬಿಸುತ್ತ ಹಾಡುಗಳನ್ನು ಮಹಿಳೆಯರು ಹಾಡುತ್ತಾ ಇದ್ದರು. ಮಹಿಳೆಯರಿಗೆ ಮೀಸಲಾದ ಈ ಜಾನಪದ ಗೀತೆಗಳು ಬೀಸುವ ಕಲ್ಲಿನ ಪದಗಳು. ಮುಖ್ಯವಾಗಿ ಭಾವನಾತ್ಮಕ ಸಂಬಂಧ ಕುರಿತು ಹಾಡುತ್ತಾರೆ. ಮಹಿಳೆಯರಿಗೆ ಸಹಾಯ ಮಾಡಿದ ಮಹನೀಯರ ಕುರಿತು, ಅಣ್ಣ-ತಮ್ಮಂದಿರನ್ನು ಕುರಿತು, ತಂದೆ-ತಾಯಿಯ ಕುರಿತು, ತವರು ಮನೆಯ ಪ್ರೀತಿ-ಪ್ರೇಮದ ಕುರಿತು ಮಹಿಳೆಯರು ಬೀಸುವ ಕಲ್ಲನ್ನು ಬೀಸುತ್ತಾ ಈ ಪದಗಳನ್ನು ಹೇಳುತ್ತಾರೆ. ಮುಖ್ಯವಾಗಿ ಬೀಸುವ ಸಮಯದಲ್ಲಿ ಆಗುವ ಆಯಾಸವನ್ನು ನಿವಾರಿಸಿಕೊಳ್ಳಲು ಈ ಹಾಡುಗಳನ್ನು ಹೇಳುತ್ತಾರೆ. ಇಂಥಹ ಧ್ವನಿಗಳು ನಮ್ಮ ಮಕ್ಕಳಿಂದ ಕಣ್ಮರೆಯಾಗುವ ಕಾಲದಲ್ಲಿ ನಾವು ಅವರ ಗ್ರಹಿಕೆಯ ಆಧಾರದಲ್ಲಿ ಕಲಿಕಾ ಪ್ರಕ್ರಿಯೆಯನ್ನು ರೂಪಿಸಬೇಕಾಗಿದೆ. ಮಕ್ಕಳ ರಂಗಭೂಮಿ ಇವೆಲ್ಲವುಗಳನ್ನು ಒಳಗೊಂಡಂತೆ ಕಾರ್ಯ ನಿರ್ವಹಿಸುವುದರಲ್ಲಿ ಹಿಂದೆ ಬಿದ್ದಿಲ್ಲ.
ಬಿ.ವಿ ಕಾರಂತ, ಸಿ.ಬಸವಲಿಂಗಯ್ಯ, ಎ.ಎಸ್.ಮೂರ್ತಿ, ಐ.ಕೆ ಬೊಳುವಾರ, ಇಕ್ಬಲ್ ಅಹ್ಮದ್, ನಟರಾಜ ಹೊನ್ನವಳ್ಳಿಯಂಥಹವರು ನಂತರದಲ್ಲಿ ಬಂದ ನೀನಾಸಂ ರಂಗ ಶಿಕ್ಷಣ ಪದವಿ ಪಡೆದ ಅನೇಕರು ಮಕ್ಕಳ ರಂಗಭೂಮಿಯ ಕುರಿತು ತುಂಭ ಗಂಭೀರವಾದ ಕಾರ್ಯಗಳನ್ನು ಮಾಡಿದ್ದಾರೆ.
ಶಿಕ್ಷಣದಲ್ಲಿ ಮಕ್ಕಳ ಭಾಷಾ ಗ್ರಹಿಕೆ ಹಾಗೂ ಅಭಿವ್ಯಕ್ತಿ ಸಾಧನವಾಗಿ ಮಕ್ಕಳ ರಂಗಭೂಮಿಯಲ್ಲಿ ಹೇಗೆ ಬದಲಾವಣೆಗಳು ತೆರದುಕೊಂಡಿವೆ ಎನ್ನುವುದನ್ನು ಕಳೆದ 10-11 ವರುಷಗಳಿಂದ ಶಾಲೆಯಲ್ಲಿ ನಾಟಕ ಶಿಕ್ಷಕರಾಗಿ ಕಾರ್ಯ ನಿರ್ವಹಿಸುವ ಎಲ್ಲರೂ ವಿಶಿಷ್ಟವಾದ ಪ್ರಯತ್ನಗಳನ್ನು ನಾವು  ಕಾಣಬಹುದಾಗಿದೆ.


ನಾನು ಓದಿದ ಇತರೆ ಮಕ್ಕಳ ನಾಟಕಗಳು :

ನನ್ನ ಗೋಪಾಲ - ಕುವೆಂಪು
ಜಯಂಟ್ ಮಾಮಾ – ಕೆ.ವಿ.ಸುಬ್ಬಣ್ಣ
ಒಗಟಿನ ರಾಣಿ – ಕೆ.ರಾಮಯ್ಯ
ನಾಯಿಮರಿ – ವೈದೇಹಿ
ಕತ್ತಲೆ ನಗರ – ವೈದೇಹಿ
ಪುಸ್ತಕದ ಅಜ್ಜಿ - ಐ.ಕೆ ಬೊಳುವಾರ
ಪಂಜರ ಶಾಲೆ - ಬಿ.ವಿ.ಕಾರಂತ
ಕನಸಿನೂರು – ರಾಘು ಶಿವಮೊಗ್ಗ