ಶುಕ್ರವಾರ, ಡಿಸೆಂಬರ್ 14, 2018

ಮಂಗಳವಾರ, ಡಿಸೆಂಬರ್ 11, 2018

ಕಲಿಸುವೆಯಾ ಗುರುವೇ

ಈ ಕವನವನ್ನು ಮಾನ್ಯ ಶ್ರೀ ಮಲ್ಲಿಕಾರ್ಜುನ ಸ್ವಾಮಿ ಡಿ ಡಿ ಪಿ ಐ  ಡಯಟ್ ರಾಯಚೂರ್ ರವರು ರಚನೆ ಮಾಡಿದ್ದು .

ಕಲಿಯಲು ಬಂದಿರುವೆ
ಕಲಿಸುವೆಯಾ ಗುರುವೇ?
ಬೆತ್ತವ ಪಕ್ಕಕ್ಕೆ ಸರಿಸು
ಮಮತೆ ಪ್ರೀತಿಯ ತೋರಿಸು
ಬಡವ ನಾನು ಬಂದಿರುವೆ ನಿನ್ನ ನಂಬಿ
ಕಲಿಸುವೆಯಾ ಗುರುವೆ

ಕಾಸಿಲ್ಲ ನನ್ನೊಳು ಮನೆಯಲ್ಲಿ ಕಾಳಿಲ್ಲ
ಕೂಲಿ ಮಾಡದಿದ್ದರೆ ಕೂಳೂ ಸಹ ಇಲ್ಲ
ಪಕ್ಕದ ಮನೆಯ ರವಿ  ಶಶಿಯಂತೆ
ಖಾಸಗಿ ಶಾಲೆಗೆ ಸೇರಲು ಕಾಸಿಲ್ಲ
ಬಂದಿರುವೆ ನಂಬಿ ನಿನ್ನ
ಕಲಿಯಲು ಬಂದಿರುವೆ
ಕಲಿಸುವೆಯಾ ಗುರುವೇ

ಹರುಕು ಬಟ್ಟೆ ಮುರುಕು ಗುಡಿಸಲು
ಮಣ್ಣಿನ ಮನೆಗಳವರು ನಾವು
ಮಳೆ ಬಂದರೆ ಭಯ ನೀರೆಲ್ಲ ಮನೆಯೊಳಗೆ
ಗೂಡು ಗ್ರಹಚಾರ ನೆಟ್ಟಗಿಲ್ಲದವರು ನಾವು
ನೆಚ್ಚಿ ನಿನ್ನ ಬಂದಿಹೆವು
ಕಲಿಸುವೆಯಾ ಗುರುವೆ ಕರುಣೆದೋರಿ

ಸುಖ ಸಂತೋಷಗಳ ನಾವರಿಯೆವು
ಮನೆಯಲ್ಲಿ ಬರಿಯ ಗೋಳು
ಬಂಧುಬಳಗ ಇದ್ದರೂ ಇಲ್ಲ ಬಾರರು ಯಾರೂ
ನೋವಿನ ಕಥೆಗಳು ಇವೆ ಬೇಕಾದಷ್ಟು
ಮಲಗಿದಾಗ ಅವುಗಳದ್ದೇ ಕನಸು
ಹಬ್ಬ ಹರಿದಿನಗಳು ನಮಗೆಲ್ಲಿ
ನಂಬಿ ನಿನ್ನ ಬಂದಿಹೆವು
ಕಲಿಸುವೆಯಾ ಗುರುವೇ??
ಕರುಣೆದೋರಿ

ಅಪ್ಪ ಅಮ್ಮ ಕೂಲಿಗಳು
ಕೂಲಿ ಸಿಕ್ಕರೆ ಕೂಳು
ಕೂಲಿ ಸಿಗದಿದ್ದರೆ ಮನೆಯಲ್ಲಿ ಗೋಳು
ಓದಲು ತೆಗೆದರೆ ಪುಸ್ತಕ
ಅಪ್ಪ ಅಮ್ಮನ ಸ್ಥಿತಿಯ ಚಿತ್ರಣ ಹಾಳೆಹಾಳೆಗಳಲ್ಲಿ
ಕಣ್ಣೀರ ಧಾರೆ ತೊಟ್ಟಿಕ್ಕುತ್ತಿದೆ
ಗಂಟಲುಬ್ಬಿ ಬರುತ್ತಿದೆ
ನಮ್ಮದೇತರ ಬಾಳು
ಅಪ್ಪ ಅಮ್ಮಂದಿರಿಗೆ ಕನಸು ನಾನು
ಭವಿಷ್ಯ ನಾನು
ಮುನ್ನುಡಿ ಬರೆ ಗುರುವೇ
ಅಕ್ಷರವ ಕಲಿಸು ಗುರುವೇ
ಕಲಿಸುವೆಯಾ ಗುರುವೇ ಕರುಣೆದೊರಿ

ಅಪ್ಪನ ಹರುಕು ಅಂಗಿ ಅಮ್ಮನ ಹರುಕು ಸೀರೆ
ಬದಲಿಸಬೇಕು ನಾನು
ಎತ್ತರಕ್ಕೇರಬೇಕು ನಾನು
ಮನೆಯ ತಮ್ಮ ತಂಗಿಯರ ಆಶಾಕಿರಣ ನಾನು
ರವಿ ಶಶಿಯ ಮನೆಗಳಂತೆ ಮನೆ ಕಟ್ಟಬೇಕು ನಾನು
ನನಗೂ ಒಳ್ಳೆಯ ಉಡುಪು ಧರಿಸುವಾಸೆ
ಒಳ್ಳೆಯ ಬದುಕು ಬದುಕುವಾಸೆ
ಕಲಿಸುವೆಯಾ ಗುರುವೇ
ಬದಲಿಸಿಕೊಳ್ಳಲು ನನ್ನ ಭವಿಷ್ಯ

ನಾನು ನಿಮ್ಮ ಮಗ ಮಗಳಂತೆ
ಅಪ್ಪನ ನಂತರದ ಅಪ್ಪ ನೀನು
ಅಮ್ಮನ ನಂತರದ ಅಮ್ಮ ನೀನು
ದೇವರನ್ಮೇ ನಿನ್ನಲ್ಲಿ ಕಂಡಿರುವೆ
ಕಲಿಸುವೆಯಾ ಗುರುವೇ ಕರುಣೆತೋರಿ

ನನಗೆ ಕಲಿಯುವಾಸೆ
ಕಲಿಸುವೆಯಾ ಗುರುವೇ
ಕರುಣೆದೋರಿ
ಕೈಮುಗಿದು ಬೇಡುವೆ
ಕಲಿಸು ಗುರುವೇ ಕಲಿಸು

#ಮಹಿಮ

ಮಂಗಳವಾರ, ಡಿಸೆಂಬರ್ 4, 2018

ಮಂಗಳವಾರ, ನವೆಂಬರ್ 27, 2018

ಚಾಳಪ್ಪ ಹರಿಜನ ವಿದ್ಯಾರ್ಥಿಯ ಚಿತ್ರ

ಚಾಳಪ್ಪ ಹರಿಜನ ವಿದ್ಯಾರ್ಥಿಯ ಚಿತ್ರ


ಗುರುವಾರ, ನವೆಂಬರ್ 22, 2018

ಪ್ರಜಾವಾಣಿಯಲ್ಲಿ ದೇವತಾಪುರದ ಮಕ್ಕಳು ನಾಟಕ

ಪ್ರಜಾವಾಣಿಯಲ್ಲಿ ದೇವತಾಪುರದ ಮಕ್ಕಳು ನಾಟಕ 



ಸೋಮವಾರ, ನವೆಂಬರ್ 19, 2018

ವಿಜಯ ಕರ್ನಾಟಕ ಪತ್ರಿಕೆಯಲ್ಲಿ ನಮ್ಮ ನಾಟಕ

ವಿಜಯ ಕರ್ನಾಟಕ  ಪತ್ರಿಕೆಯಲ್ಲಿ ನಮ್ಮ ನಾಟಕ 

ಭಾನುವಾರ, ನವೆಂಬರ್ 18, 2018

ನಮ್ಮೂರ ಜನಪದ

https://youtu.be/QnXyHK4id8Y

ಶನಿವಾರ, ನವೆಂಬರ್ 17, 2018

ಪೆನ್ಸಿಲ್ ಚಿತ್ರ - ಚಾಳಪ್ಪ ಹುಲಗಪ್ಪ ಹರಿಜನ


ಚಾಳಪ್ಪ ಹುಲಗಪ್ಪ ಹರಿಜನ 
೯ ನೆ ತರಗತಿ





ಗುರುವಾರ, ನವೆಂಬರ್ 15, 2018

"ದೇವತಾಪುರದ ಮಕ್ಕಳು"



ದೇವತಾಪುರದ ಮಕ್ಕಳು 

ರಚನೆ : ವೆಣ್ಣಿಲಾ ಹಾಲ್ಕುರಿಕಿ 

ನಿರ್ದೇಶನ : ಗುರುರಾಜ ಹೊಸಪೇಟೆ 













































ಮಂಗಳವಾರ, ನವೆಂಬರ್ 13, 2018

ಭಾನುವಾರ, ನವೆಂಬರ್ 11, 2018

ಗುರುವಾರ, ಅಕ್ಟೋಬರ್ 25, 2018

ಅರುಂಧತಿ ಹಾದಿಮನಿ

ನಮ್ಮವ್ವ ನಮ್ಮನ್ನು ಹಡೆದು ತುಂಭಾ ಜಾಗೃತಿಯಿಂದ ಆರೈಕೆ ಮಾಡುತ್ತಾಳೆ. ಹುಟ್ಟಿದಾಗಿನಿಂದ ನಮಗೆ ಬುದ್ಧಿ ತಿಳಿಯುವವರೆಗೂ ನಮ್ಮ ಎಲ್ಲಾ ಬೇಕು ಬೇಡಗಳನ್ನು ಪೂರೈಸುತ್ತಾ ಬೆಳಸುವಳು. ಚಿಕ್ಕವರಿದ್ದಾಗ ನಮ್ಮ ಬುದ್ಧಿಶಕ್ತಿ ಹೆಚ್ಚಿರುತ್ತದೆ ಅಂತೆ. ಬೆಳೀತಾ ನಮ್ಮ ಬುದ್ದಿಶಕ್ತಿ ಕಮ್ಮಿ ಆಗುತ್ತಂತೇ. ನಮ್ಮ ಮನೆಯಲ್ಲಿ ಅಜ್ಜ-ಅಜ್ಜಿಯವರಿಗೆ ಬುದ್ಧಿ ಅಥಾವ ತಿಳುವಳಿಕೆ ಕಡಿಮೆ ಇರುತ್ತದೆ. ನಮ್ಮ ಅಮ್ಮನಿಗೆ ವಯಸ್ಸಾಗಿದೆ ಅವರಿಗೆ ಅರುವು ಮರುವು ಆಗ್ತಾ ಇರ್ತಾದೆ. ಎಷ್ಟೋ ಮಾತುಗಳು ನೆನಪೇ ಇರೋದಿಲ್ಲ.


ನಾನು ಅರುಂಧತಿ ಈಗ ೮ ನೇ ತರಗತಿ. ನಮ್ಮ ಮನೆಯಲ್ಲಿ ಒಟ್ಟು ಹದಿನೆಂಟು ಜನ ಇರ್ತೇವೆ. ನಮ್ಮ ನಮ್ಮ ಕೆಲಸಗಳನ್ನು ನಾವೇ ಮಾಡಿಕೊಳ್ಳುತ್ತೇವೆ. ನನ್ನ ತಂಗಿ ಸಣ್ಣೋಳು ಒಮ್ಮೇ ನನ್ನ ಮೇಲೆ ಚಾ ಚೆಲ್ಲಿದಳು ಆದ್ರೆ ನಮ್ಮವ್ವ ಅವಳು ಚಿಕ್ಕೋಳು ಅವಳಿಗೆ ಗೊತ್ತಾಗೋದಿಲ್ಲ ಅಂತ ನಮ್ಮನ್ನೇ ಬೈತಾಳೆ. ನಮ್ಮ ಮನೆ ಮುಂದೆ ಹೂ ಗಿಡಗಳನ್ನಾ ಹಾಕಿವಿ. ಬೆಳಬೆಳಗ್ಗೆ ಗಮ್ಮ ಅಂತಾ ವಾಸ್ನಿ ಬರ್ತಾದೆ. ಆದ್ರೇ ಯಾಕೋ ನನಗೆ ಅವುಗಳನ್ನಾ ಕಿತ್ತು ಮುಡಿಬೇಕು ಅಂತ ಅನಿಸೋದಿಲ್ಲ. ನಮ್ಮ ಮನೆಯಲ್ಲಿ ಬೆಕ್ಕು ಮತ್ತೇ ನಾಯಿಮರಿಯನ್ನಾ ಸಾಕಿವೀ. ಅಂದ್ರೇ ಅವು ಬೀದಿಯಲ್ಲೇ ಓಡಾಡಿಕೊಂಡಿರುವಂಥ ಸಾಕು ಪ್ರಾಣಿಗಳು. ಸಾವುಕಾರರ ಮನೆಯಲ್ಲಿ ಇರೋ ನಾಯಿಗಳು ದೊಡ್ಡಿಗೆ ತಂದಿರ್ತಾರೆ. ನಾವು ಹಾಗೇ ಮಾಡಿರಲಿಲ್ಲ. ನಾನು ಶಾಲೆ ಬಿಟ್ಟು ಮನೆಗೆ ಹೋದ ತಕ್ಷಣ ಕಾಲ್ ಕಾಲಿಗೆ ಅಡ್ಡ ಬರ್ತಾವೇ. ಯಾಕಂದ್ರೇ ಅವು ನಮ್ಮನ್ನಾ ಬಹಳ ಪ್ರೀತಿ ಮಾಡ್ತಾವೇ.
(ಮುಂದುವರೆಯುವುದು.....)

ಶನಿವಾರ, ಅಕ್ಟೋಬರ್ 20, 2018

ಸ್ವಗತಗಳು

ಹೈದ್ರಾಬಾದ್ ಕರ್ನಾಟಕ ದಿನಾಚರಣೆ

ಹೈದ್ರಾಬಾದ್ ಕರ್ನಾಟಕ ದಿನಾಚರಣೆ ಅಂಗವಾಗಿ ನಮ್ಮ ಶಾಲೆಯ ಹತ್ತಿರದಲ್ಲಿರುವ ಎರಡು ಸ್ಮಾರಕಗಳಿಗೆ ಪುಷ್ಪಗಳನ್ನ ಅರ್ಪಿಸಿ ಧ್ವಜಾರೋಹಣವನ್ನು ಮಾಡಲಾಯಿತು. ಜಿಲ್ಲಾ ಪಂಚಾಯಿತಿ ಸದಸ್ಯರಾದ ನೇಮಣ್ಣ ಮೇಲಸಕ್ರಿಯವರು ಉಪಸ್ಥಿತರಿದ್ದು ಕಾರ್ಯಕ್ರಮವನ್ನು ವಿದ್ಯುಕ್ತವಾಗಿ ನಡೆಸಲಾಯಿತು.

chitr