ಮಂಗಳವಾರ, ಸೆಪ್ಟೆಂಬರ್ 20, 2016

ಬೀಳ್ಕೋಡುಗೆ ಕಾರ್ಯಕ್ರಮ

ಹಿರಿಯ ಶಿಕ್ಷಕರಾದ ಶ್ರೀ ದತ್ತಾತ್ರೇಯ ಎಸ್.ಪತ್ತಾರ ನಿವೃತ್ತಿ ಹೊಂದಿದ್ದಾರೆ ಹಾಗೂ ಪ್ರಥಮ ದರ್ಜೆ ಸಹಾಯಕರಾಗಿ ಬಡ್ತಿ ಹೊಂದಿರುವ ಶ್ರೀ ಆನಂದಪ್ಪ ಕುರಿ ಅವರನ್ನು ಗೌರವದೊಂದಿಗೆ ಬಿಳ್ಕೋಡಲಾಯಿತು.

ಸೋಮವಾರ, ಸೆಪ್ಟೆಂಬರ್ 5, 2016

ಶಿಕ್ಷಕರ ದಿನಾಚರಣೆ

ಪ್ರತಿ ವರುಷದಂತೆ ಆಚರಣೆ ಗಳು ಬರುತ್ತವೆ. ಆದರೆ ನಮ್ಮ ನ್ನು ನಾವು ನೋಡಿ ಕೊಳ್ಳುವುದನ್ನು ಎಂದಾದರೂ ಮಾಡಿದ್ದೇವೆಯೇ..‌.. ವಿದ್ಯಾರ್ಥಿ ಗಳು ಶಾಲಾ ಶಿಕ್ಷಕರ ಜೊತೆಗೆ ಹಾಡಿ ಕುಣಿದು ಕುಪ್ಪಳಿಸಿ ಆ ವಿಶಿಷ್ಟ ಅನುಭವ ಹಾಗೂ ಆ ಸಂದರ್ಭವನ್ನು ಅನುಭವಿಸುವುದೇ ಸಾರ್ಥಕ.

ಶನಿವಾರ, ಆಗಸ್ಟ್ 20, 2016

ತಾಲಿಮು

ಮಂಗಳವಾರ, ಜೂನ್ 28, 2016

ಮಕ್ಕಳ ಕೈ ಬರಹದ ಚಿತ್ರಗಳು

ನೇ ತರಗತಿ ವಿದ್ಯಾರ್ಥಿ ಅಣ್ಣಯ್ಯ ಸುಳದರ ಬರೆದ ಚಿತ್ರಗಳು.

ಶುಕ್ರವಾರ, ಜೂನ್ 17, 2016

ನಮ್ಮ ಕೋಣೆಗೆ ಬಣ್ಣದ ರಂಗು

ನಮ್ಮ ಕೋಣೆಗೆ ಇಂದು ನಮ್ಮ ಶಾಲೆಯ ಹಳೆಯ ವಿದ್ಯಾರ್ಥಿ ಯಾದ ಸಚಿನ್ ಸಾಳುಂಕಿ ಕೈಯಲ್ಲಿ ಅರಳುತ್ತಿರುವುದು

ಶುಕ್ರವಾರ, ಮೇ 6, 2016

ಶಾಮಂತಿ ೫


ಶನಿವಾರ, ಏಪ್ರಿಲ್ 23, 2016

ಬುಧವಾರ, ಏಪ್ರಿಲ್ 20, 2016

Makkala Hejjegalu - Documentary

Hejjegalu Janapadadatta... Metro

ಭಾನುವಾರ, ಏಪ್ರಿಲ್ 3, 2016

ಮಕ್ಕಳ ಹೆಜ್ಜೆಗಳು ಜಾನಪದದತ್ತ.... ಹಾಗೂ ವಿಶ್ವ ರಂಗಭೂಮಿ ದಿನಾಚರಣೆಯ ಛಾಯ ಚಿತ್ರಗಳು









ಕೊಳವೆ ನೀರನ್ನು ಉಳಿಸುವ ವ್ಯವಸ್ಥೆ



ಇದಕ್ಕೆ ಸರ್ಕಾರ ನೀಡುವ ವೆಚ್ಚ 68,000 /- ರೂಪಾಯಿಗಳು 
(ಕ್ಷಮಿಸಿ ಕೊಳವೆ ಬಾವಿಗೆ ಅಲ್ಲ ಅದರ ಸುತ್ತಾ ಇರುವ ಗೋಡೆಗೆ ಮಾತ್ರ ) 

ವಿಶ್ವ ರಂಗಭೂಮಿಯ ದಿನಾಚರಣೆ

     ವಿಶ್ವ ರಂಗಭೂಮಿ ದಿನಾಚರಣೆಯ ದಿನವಾದ ಮಾರ್ಚ ೨೭ ರಂದು ಬಾದಿಮನಾಳ ಗ್ರಾಮದಲ್ಲಿ ಕಾರ್ಯಕ್ರಮಗಳು ನಮ್ಮ ಅಕ್ಷರ ವಿದ್ಯಾರ್ಥಿ ಸಂಘದಿಂದ ಜರುಗಿದವು. ವಿದ್ಯಾರ್ಥಿಗಳೇ ಇಡೀ ಕಾರ್ಯಕ್ರಮಕ್ಕೆ ಬೇಕಾದ ವಿನ್ಯಾಸ , ಸಂಪನ್ಮೂಲ ವ್ಯಕ್ತಿಗಳನ್ನು, ಲೈಟ್, ಚೇರ್, ಉಪಹಾರ ನೀಡುವ, ಹೀಗೆ ಹಲವು ರೀತಿಯ ವ್ಯವಸ್ಥೆಗಳನ್ನು ಮಾಡಿದ್ದರು. ಇಡೀ ಕಾರ್ಯಕ್ರಮಕ್ಕೆ ಸಂಪೂರ್ಣ ಸಹಕಾರ ನೀಡಿದ ಡೊಳ್ಳಿನ ಬಂಧುಗಳಿಗೆ ಧನ್ಯಾವಾದಗಳು. 

ಮಂಗಳವಾರ, ಮಾರ್ಚ್ 22, 2016

ಮಂಗಳವಾರ, ಮಾರ್ಚ್ 8, 2016

[ವೀರ ಯೋಧ ಹನಮಂತಪ್ಪ ಕೊಪ್ಪದರವರ ಬಗ್ಗೆ ನಮ್ಮ ಶಾಲೆಯ ವಿದ್ಯಾರ್ಥಿ ಪರಶುರಾಮ ಕಡಿವಾಲರ ೯ ನೆ ತರಗತಿ ಓದುತಿದ್ದು ಹುಡುಗ ಪತ್ರಿಕೆ ಹಾಗೂ ಮಾಧ್ಯಮಗಳಿಂದ ನೋಡಿ ರಚಿಸಿದ ಗೀತೆ ಇದು.]




ಧಾರವಾಡ ಜಿಲ್ಲೆ ಕುಂದುಗೋಳ ತಾಲೂಕು ಬೆಟ್ಟದೂರ ಗ್ರಾಮದ ಹುಡುಗ
ಕಾರ್ಗಿಲ್ ಸಮೀಪ ಸಿಯಾಚಿನ್ ನಿಂದ ಕಂಡ ವೀರ ಸ್ವರ್ಗ.

ಗಂಡು ಗಲಿಗಳ ಹುಬ್ಬಳ್ಳಿ ನಾಡಿನ ಬೆಟ್ಟದೂರ ಗ್ರಾಮದವರು
ದೇಶ ರಕ್ಷಣೆಗೆ ಪ್ರಾಣ ನೀಡಲು ಯಾವತ್ತು ಮುಂದಿವರು
ಅಂಥಹ ಗ್ರಾಮದ ಹನಮಂತ ಕೊಪ್ಪದ ಎಂಬುವವರು
ಇಪ್ಪತ್ತೈದಡಿ ಆಳಕ್ಕೆ ಸಿಲುಕಿ ಪ್ರಾಣವ ಕೊಟ್ಟವರು

ಜಮ್ಮು ಕಾಶ್ಮೀರ ಸಿಯಾಚಿನ್ ಶೀತವಲಯದಲ್ಲಿ
ಭಾರತ ಸೇನೆಯ ಮುಂದಾಳತ್ವ ವಹಿಸಿದ ಸಮಯದಲ್ಲಿ
ಕಬಳಿಸಿ ಬಂತು ಪರ್ವತದ ಮಜಲು ಮೇಲಿಂದ ಕೆಳಕ್ಕೆ
ಹನಮಂತಪ್ಪರ ತಂಡದ ಮೇಲೆ ರಭಸದಿಂದ ಬಿತ್ತು.

೫ ನೆ ತಾರೀಖು ಎರಡನೇ ತಿಂಗಳು ೨೦೧೬
ಭಾರತ ಸೇನೆಯು ಹುಡುಕಲು ಹೊರಟಿತು ಸಿಯಾಚಿನ್ ಪ್ರದೇಶಕ್ಕೆ
ಹರಸಾಹಸ ಪಟ್ಟ ೬ ದಿನಗಳವರೆಗೆ ಕಾರ್ಯಚರಣೆ ಮಾಡಿದರು
ಹತ್ತು ಯೋಧರಲ್ಲಿ ಹನಮಂತಪ್ಪ ನವರ ಹೃದಯ ಡಬ-ಡಬ ಬಡಿತಿತ್ತು

ಸೈನಿಕ ತಂಡ ಸಿಯಾಚಿನ್ ನಿಂದ ಆಸ್ಪತ್ರೆಗೆ ಕರೆದೊಯ್ದ್ರು
೩ ದಿನಗಳವರೆಗೆ ಆಸ್ಪತ್ರೆಯಲ್ಲಿ ಬದುಕಿ ಉಳಿದವರು
ಇವರಿಗಾಗಿ ಕಿಡ್ನಿ-ಹೃದಯ ಕೊಡಲು ಮುಂದಾದರು
ಆದರೂ ಈ ಯೋಧನ ಜೀವ ಬದುಕಿ ಉಳಿಯಲಿಲ್ಲ

ತಂದೆ-ತಾಯಿ ಮನೆ ಪರಿವಾರವನ್ನು ಬಿಟ್ಟು
ಎಲ್ಲ ಭಾರತೀಯರ ಕಣ್ಣಂಚಿನಲ್ಲಿ ನೀರು ತಂದರಿಂದು
ಒಂದೂವರೆ ವರ್ಶ ಕಂದಮ್ಮನ ಬಿಟ್ಟು ಅಗಲಿ ಹೋದರಿವರು
ಪತ್ನಿಯನ್ನು ಶಿವ ನಿನ್ನ ಉಡಿಯಾಗ ಕೊಟ್ಟನೆಂದೂ ಜೀವ ಬಿಟ್ಟರಿವರು

ಇಂದಿನ ಮಕ್ಕಳು ನಾವು ಹನಮಪ್ಪನಂಗ ಸೈನ್ಯ ಸೇರಬೇಕು
ದೈರ್ಯ ಸಾಹಸದಿಂದ ಭಾರತಂಬೆಯ ಮಡಿಲನ್ನು ಕಾಪಾಡಿ
ದೇಶಕೋಸ್ಕರ ಶೌರ್ಯ ಸಾಹಸದಿಂದ ಮನ್ನುಗ್ಗಿ ನಡೆಯಿರಿ
ಭಾರತಂಬೆಯ ಮಕ್ಕಳು ನಾವು ಎಂದೂ ಮರೆಯಬೇಡಿ.



- ಪರಶುರಾಮ ಬಸಪ್ಪ ಕಡಿವಾಲರ
  ೯ ನೆ ತರಗತಿ
  ಸರಕಾರಿ ಪ್ರೌಢಶಾಲೆ
  ಜಹಗೀರಗುಡದೂರ
  ತಾ||ಕುಷ್ಟಗಿ, ಜಿ||ಕೊಪ್ಪಳ