ಧಾರವಾಡ ಜಿಲ್ಲೆ ಕುಂದುಗೋಳ ತಾಲೂಕು ಬೆಟ್ಟದೂರ ಗ್ರಾಮದ ಹುಡುಗ
ಕಾರ್ಗಿಲ್ ಸಮೀಪ ಸಿಯಾಚಿನ್ ನಿಂದ ಕಂಡ ವೀರ ಸ್ವರ್ಗ.
ಗಂಡು ಗಲಿಗಳ ಹುಬ್ಬಳ್ಳಿ ನಾಡಿನ ಬೆಟ್ಟದೂರ ಗ್ರಾಮದವರು
ದೇಶ ರಕ್ಷಣೆಗೆ ಪ್ರಾಣ ನೀಡಲು ಯಾವತ್ತು ಮುಂದಿವರು
ಅಂಥಹ ಗ್ರಾಮದ ಹನಮಂತ ಕೊಪ್ಪದ ಎಂಬುವವರು
ಇಪ್ಪತ್ತೈದಡಿ ಆಳಕ್ಕೆ ಸಿಲುಕಿ ಪ್ರಾಣವ ಕೊಟ್ಟವರು
ಜಮ್ಮು ಕಾಶ್ಮೀರ ಸಿಯಾಚಿನ್ ಶೀತವಲಯದಲ್ಲಿ
ಭಾರತ ಸೇನೆಯ ಮುಂದಾಳತ್ವ ವಹಿಸಿದ ಸಮಯದಲ್ಲಿ
ಕಬಳಿಸಿ ಬಂತು ಪರ್ವತದ ಮಜಲು ಮೇಲಿಂದ ಕೆಳಕ್ಕೆ
ಹನಮಂತಪ್ಪರ ತಂಡದ ಮೇಲೆ ರಭಸದಿಂದ ಬಿತ್ತು.
೫ ನೆ ತಾರೀಖು ಎರಡನೇ ತಿಂಗಳು ೨೦೧೬
ಭಾರತ ಸೇನೆಯು ಹುಡುಕಲು ಹೊರಟಿತು ಸಿಯಾಚಿನ್ ಪ್ರದೇಶಕ್ಕೆ
ಹರಸಾಹಸ ಪಟ್ಟ ೬ ದಿನಗಳವರೆಗೆ ಕಾರ್ಯಚರಣೆ ಮಾಡಿದರು
ಹತ್ತು ಯೋಧರಲ್ಲಿ ಹನಮಂತಪ್ಪ ನವರ ಹೃದಯ ಡಬ-ಡಬ ಬಡಿತಿತ್ತು
ಸೈನಿಕ ತಂಡ ಸಿಯಾಚಿನ್ ನಿಂದ ಆಸ್ಪತ್ರೆಗೆ ಕರೆದೊಯ್ದ್ರು
೩ ದಿನಗಳವರೆಗೆ ಆಸ್ಪತ್ರೆಯಲ್ಲಿ ಬದುಕಿ ಉಳಿದವರು
ಇವರಿಗಾಗಿ ಕಿಡ್ನಿ-ಹೃದಯ ಕೊಡಲು ಮುಂದಾದರು
ಆದರೂ ಈ ಯೋಧನ ಜೀವ ಬದುಕಿ ಉಳಿಯಲಿಲ್ಲ
ತಂದೆ-ತಾಯಿ ಮನೆ ಪರಿವಾರವನ್ನು ಬಿಟ್ಟು
ಎಲ್ಲ ಭಾರತೀಯರ ಕಣ್ಣಂಚಿನಲ್ಲಿ ನೀರು ತಂದರಿಂದು
ಒಂದೂವರೆ ವರ್ಶ ಕಂದಮ್ಮನ ಬಿಟ್ಟು ಅಗಲಿ ಹೋದರಿವರು
ಪತ್ನಿಯನ್ನು ಶಿವ ನಿನ್ನ ಉಡಿಯಾಗ ಕೊಟ್ಟನೆಂದೂ ಜೀವ ಬಿಟ್ಟರಿವರು
ಇಂದಿನ ಮಕ್ಕಳು ನಾವು ಹನಮಪ್ಪನಂಗ ಸೈನ್ಯ ಸೇರಬೇಕು
ದೈರ್ಯ ಸಾಹಸದಿಂದ ಭಾರತಂಬೆಯ ಮಡಿಲನ್ನು ಕಾಪಾಡಿ
ದೇಶಕೋಸ್ಕರ ಶೌರ್ಯ ಸಾಹಸದಿಂದ ಮನ್ನುಗ್ಗಿ ನಡೆಯಿರಿ
ಭಾರತಂಬೆಯ ಮಕ್ಕಳು ನಾವು ಎಂದೂ ಮರೆಯಬೇಡಿ.
- ಪರಶುರಾಮ ಬಸಪ್ಪ ಕಡಿವಾಲರ
೯ ನೆ ತರಗತಿ
ಸರಕಾರಿ ಪ್ರೌಢಶಾಲೆ
ಜಹಗೀರಗುಡದೂರ
ತಾ||ಕುಷ್ಟಗಿ, ಜಿ||ಕೊಪ್ಪಳ
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ
Thank you.
.................
Gururaj.L
Drama Teacher