ಭಾನುವಾರ, ನವೆಂಬರ್ 24, 2024

ರಂಗ ಕುಸುಮ ಕಲಾನಿಧಿ ಪ್ರಶಸ್ತಿ

 







ಕರ್ನಾಟಕ ರಾಜ್ಯ ಮಕ್ಕಳ ಸಾಹಿತ್ಯ ಪರಿಷತ್ತು. ಜಿಲ್ಲಾ ಘಟಕ ಹಾವೇರಿ ಹಾಗೂ ರಂಗ ಕುಸುಮ ಪ್ರಕಾಶನ (ರಿ) ರಾಣೇಬೆನ್ನೂರು ಪ್ರಸ್ತುತಪಡಿಸುವ ಮಕ್ಕಳ ಸಾಂಸ್ಕೃತಿಕ ಸೌರಭ -  2024

ರಂಗ ಕಾಯಕ, ರಂಗಶಿಕ್ಷಕನಾಗಿ ಕಾರ್ಯ ನಿರ್ವಹಿಸಿ ಕಳೆದ 16 ವರ್ಷದ ರಂಗ ಕ್ಷೇತ್ರದಲ್ಲಿ  ಮಾಡಿದ ಕಾರ್ಯಗಳನ್ನು ಗಮನಿಸಿ ನನಗೆ ನನ್ನ ಸಾಧನೆಯನ್ನು ಗುರುತಿಸಿ 2024 ನೇ ಸಾಲಿನ " *ರಂಗ ಕುಸುಮ ಕಲಾ ನಿಧಿ* "ಪ್ರಶಸ್ತಿ ಪ್ರಧಾನ ಮಾಡಿದರು.


ಇಂದು ಈ ಪ್ರಶಸ್ತಿ ಕಾರ್ಯಕ್ರಮವು ರಾಣೆಬೆನ್ನೂರು ನಗರದ ಕನ್ನಡ ಸಾಹಿತ್ಯ ಭವನದಲ್ಲಿ ನಡೆಯಿತು ಈ ಸಂದರ್ಭದಲ್ಲಿ ಮಕ್ಕಳ ಕಾರ್ಯಕ್ರಮ ಆಗಿದ್ದರಿಂದ ಮಕ್ಕಳು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಭರತನಾಟ್ಯ, ಕವಿ ಗೋಷ್ಠಿ, ರಂಗೋಲಿ ಸ್ಪರ್ಧೆಯಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಮಕ್ಕಳು ಭಾಗವಹಿಸಿ ಅವರ ಕಲಾ ಪ್ರತಿಭೆಯನ್ನು ಪ್ರದರ್ಶಿಸಿದರು. ಮಕ್ಕಳ ಕಾರ್ಯಕ್ರಮದಲ್ಲಿ ಪ್ರಶಸ್ತಿ ಪಡೆದ ನನಗೂ ಕೂಡ ತುಂಬಾ ಖುಷಿಯಾಯಿತು ಈ ಕಾರ್ಯಕ್ರಮದಲ್ಲಿ ಸಂಸ್ಥೆಯ ಅಧ್ಯಕ್ಷರು ವೆಂಕಟೇಶ್ ಈಡಿಗರ, ಮುಖ್ಯ ಅತಿಥಿಯಾಗಿ ಶಿವಮೊಗ್ಗ ರಂಗಾಯಣದ ನಿರ್ದೇಶಕರಾದ ಪ್ರಸನ್ನ ಡಿ ಸಾಗರ ಹಾಗೂ ಹಲವಾರು ಗಣ್ಯರು ಭಾಗವಹಿಸಿ ಪ್ರಶಸ್ತಿ ಪ್ರಧಾನ ಮಾಡಿ ಅಭಿನಂದಿಸಿದರು.

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ

Thank you.

.................
Gururaj.L
Drama Teacher