ಇಂದು ಜಹಗೀರಗುಡದೂರ ಪ್ರೌಢಶಾಲೆಯಲ್ಲಿ ರಾಜ್ಯ ಸರ್ಕಾರಿ ನೌಕರರ ಕ್ರೀಡಾ ಕೂಟದಲ್ಲಿ ನಮ್ಮ ಕೊಪ್ಪಳ ಜಿಲ್ಲೆಯಿಂದ ಪ್ರತಿನಿಧಿಸಿ ರಾಜ್ಯ ಮಟ್ಟದ ಕುಸ್ತಿಯಲ್ಲಿ ತೃತೀಯ ಸ್ಥಾನವನ್ನು ಪಡೆದ ಬಂದಿರುವ ಶಾಲೆಯ ಸಹಶಿಕ್ಷಕರಾದ *ಶ್ರೀ ರಮೇಶ್ ಚೌವ್ಹನ್* ಅವರಿಗೆ ಶಾಲೆಯ ಸಿಬ್ಬಂದಿ, ಎಸ್.ಡಿ.ಎಮ್.ಸಿ ಹಾಗೂ ಗ್ರಾಮಸ್ಥರ ಪರವಾಗಿ ಸನ್ಮಾನ ಮಾಡಲಾಯಿತು. ಜೊತೆಗೆ ಶಾಲೆಯ ಶೈಕ್ಷಣಿಕ ವರ್ಷದ ಕ್ರೀಡಾ ಕೂಟಕ್ಕೆ ಹಾಗೂ ಪಠ್ಯೇತರ ಚಟುವಟಿಕೆಗಳಿಗೆ ಚಾಲನೆಯನ್ನು ಈ ಕಾರ್ಯಕ್ರಮದ ಮೂಲಕ ನೀಡಲಾಯಿತು.
ಕಾರ್ಯಕ್ರಮದಲ್ಲಿ ಮುಖ್ಯೋಪಾಧ್ಯಾಯರಾದ ಶ್ರೀ ಶಿವಪ್ಪ ಇಲಾಳ, ಜಗದೀಶ ಬಾಸಿಂಗದ, ಬಸಪ್ಪ ತಳವಾರ, ಗುರುರಾಜ, ಶರಣಪ್ಪ ರಾಂಪೂರ, ರಮೇಶ ಚೌವ್ಹನ್, ಶ್ರೀಮತಿ ತನುಜಾ ಪೋಲಿಸ್, ಸುಮಿತ್ರಾ, ಹುಲಿಗೆಮ್ಮ ಹಾಗೂ ರವಿಕುಮಾರ ಪಾಲ್ಗೊಂಡಿದ್ದರು.
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ
Thank you.
.................
Gururaj.L
Drama Teacher