ಸೋಮವಾರ, ನವೆಂಬರ್ 25, 2019

ಕೊಪ್ಪಳ ಜಿಲ್ಲೆಯಾದ್ಯಂತ ಜನ -ಜಲ ಕ್ರಾಂತಿ


ರಂಗಭೂಮಿ ನೆಲೆಯಲ್ಲಿ ನೆಲೆ ನಿಂತ ನಾವು ಸಮಾಜ ಮುಖಿಯಾಗಿ ಸಂದೇಶಗಳನ್ನು ಜನ ಮನಗಳಲ್ಲಿ ಎಚ್ಚರಿಸುವ ಕಾಯಕ ಮಾಡುವುದು ಅತೀ ಜರೂರಿನ ಕೆಲಸವಾಗಿದೆ. ಕಳೆದ ೫-೬ ವರುಷಗಳಿಂದ ನಾನು ನೀರು, ಪರಿಸರದ ನೆಲೆಯಲ್ಲಿಯೇ ನಾಟಕಗಳನ್ನು ರಚಿಸಿ, ನಿರ್ದೇಶಿಸಿರುವೆ. ಶಾಲೆ, ಗ್ರಾಮ ಹಾಗೂ ವಿವಿಧ ನಗರಗಳಲ್ಲಿ ಪ್ರದರ್ಶನಗಳನ್ನು ಮಕ್ಕಳಿಂದ ಪ್ರಸ್ತುತ ಪಡಿಸಿರುವೆ.


ರಾಜೇಂದ್ರಸಿಂಗ್ ಅವರ ಕಾರ್ಯಗಳು, ಮಹಾರಾಷ್ಟ್ರದಲ್ಲಿ ಕೆರೆಗಳ ಪುನಶ್ಚೇತನಕ್ಕಾಗಿ ಪಾನಿ ಫೌಂಡೇಶನ್ ನಡೆಸುತ್ತಿರುವ ಕಾರ್ಯಕ್ರಮಗಳು ಹೀಗೆ ವಿವಿಧ ರಾಜ್ಯ ಜಿಲ್ಲೆಗಳಲ್ಲಿ ನಡೆಸುತ್ತಿರುವ ನೀರಿಗಾಗಿ ನಡೆಸುತ್ತಿರುವ ಚಳುವಳಿಗಳನ್ನು ಮಕ್ಕಳೊಂದಿಗೆ ಹಂಚಿಕೊಳ್ಳುತ್ತಾ ನಾಟಕ ಕಟ್ಟುವ ಕಾರ್ಯ ನಿರಂತರವಾಗಿ ಸಾಗಿದೆ. 




ಕಳೆದ ಫೇಬ್ರವರಿ ೭ ನೇ ತಾರೀಖಿನಿಂದ ಪ್ರಾರಂಭವಾದ ಈ ಆಭಿಯಾನ ಇಂದು ತೆರೆ ಬೀಳುತ್ತಿದೆ. ಇದಕ್ಕಾಗಿ ದುಡಿದ ಹಲವಾರು ಕಣ್ಣುಗಳಲ್ಲಿ ಆನಂದವೇ ತುಂಬಿರುತ್ತದೆ. ಕೆರೆಯ ಉಳುವಿಗಾಗಿ ಕೈ ಜೋಡಿಸಿ ಹಣ, ಆಹಾರ ನೀಡಿದ ಅಪಾರ ಶುದ್ಧ ಮನಸ್ಸುಗಳಿಗೆ ಇನ್ನೂ ಹೆಚ್ಚಿನದನ್ನು ದೇವರು ಅವರಿಗೆ ನೀಡಲಿ. ಮಳೆಯು ಬಂದು ಕೆರೆ ತುಂಬಿ ಈ ಭಾಗದ ಎಲ್ಲರೂ ಮತ್ತೋಮ್ಮೆ ಸಂಭ್ರಮಿಸುವ ಕ್ಷಣಗಳು ಬೇಗ ಬರಲಿ. ನಮ್ಮ ಗವಿಮಠದ ಜಾತ್ರೆಯಲ್ಲಿ ರಾಜೇಂದ್ರಸಿಂಗ ಅವರನ್ನು ಕರೆಯಿಸಿದ್ದ ನಮ್ಮ ಶ್ರೀಗಳು ಇಂಥಹ ಹೊಸತೊಂದು ಕಾಯಕಕ್ಕೆ ಕೈ ಹಾಕಿದ್ದು ನಾಡಿನ ಉಳ್ಳವರೆಲ್ಲರೂ ಇನ್ನಷ್ಟೂ ಕೈ ಜೋಡಿಸಿದರೆ ಶ್ರೀಗಳ ನೇತೃತ್ವದಲ್ಲಿ ಜಲಕ್ರಾಂತಿಯನ್ನೇ ಮಾಡಬಹುದು.






ಪೆದ್ದನಕೆರೆ, ಭಾಗೀರಥಿ, ನಮ್ಮೂರಕೆರೆ, ನಮ್ಮ ಕೂಗು ಹೀಗೆ ಪ್ರತಿ ವರುಷವು ನೀರು ನೀರಿನ ನೆಲೆಗಳ ಹುಡುಕಾಟದ ನಾಟಕಗಳನ್ನು ಪ್ರದರ್ಶಿಸಿದ್ದೇವೆ. ಇಲ್ಲಿ ಮಕ್ಕಳೊಂದಿಗೆ ಇನ್ನೂ ಹಲವರಿಗೆ ಎಚ್ಚರಿಕೆ ಮೂಡಿಸುವಂಥ ಕಾರ್ಯವನ್ನು ಮಾಡಲೇಬೇಕಿದೆ. 

ಕೆರೆಯ ಉಳುವಿಗಾಗಿ ನಮ್ಮ ಗವಿ ಮಠದ ಶ್ರೀಗಳು ಆಶೀರ್ವಾದ ನೀಡಿ ಸುತ್ತ ಮುತ್ತಲಿನ ಜನರ ಹೃದಯಕ್ಕೆ ಬೇಕಾದ ಕಾರ್ಯಕ್ಕೆ ಚಾಲನೆ ನೀಡಿದರು. ಮಳೆಗಾಲದಲ್ಲಿ ನಾನು ಕುಷ್ಟಗಿಯಿಂದ ಗಜೇಂದ್ರಗಡಕ್ಕೆ ಸಾಗುವಾಗ ಕೆರೆಯ ಒಂದಿಷ್ಟು ಕುರೂಹ ಕಾಣುತ್ತಿರಲಿಲ್ಲ. ಅದು ರಸ್ತೆಯಷ್ಟೇ ಸಮವಾಗಿ ಅಂಗಳ ಕಾಣಿಸುತ್ತಿತ್ತು. ಹಿಂದೊಮ್ಮೆ ನಿಡಶೇಸಿ  ಮುರಾರ್ಜಿ ಶಾಲೆಗೆ ನಾಟಕ ಮಾಡಿಸಲು ತೆರಳಿದ್ದ ಸಮಯದಲ್ಲಿ ಮುಖವಾಡ ಮಾಡಿಸಲು ಮಣ್ಣು ಬೇಕಿತ್ತು ಆಗ ಇದೆ ಕೆರೆಗೆ ಸಾಗಿದ್ದಾಗ ನನಗೆ ಇದೊಂದು ಕೆರೆನಾ ...? ಎಂಬುವುದು ಆಗ ಕಾಡಿತ್ತು. ಆದರೆ ಇಂದು ಆದ ಕಾರ್ಯ ಅತ್ಯಂತ ಶ್ಲಾಘನೀಯ. 



ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ

Thank you.

.................
Gururaj.L
Drama Teacher