ಶನಿವಾರ, ಡಿಸೆಂಬರ್ 28, 2019

ರಾಷ್ಟ್ರೀಯ ಗಣಿತ ದಿನಾಚರಣೆ

ದಿನಾಂಕ ೨೪ ರಂದು ರಾಷ್ಟ್ರೀಯ ಗಣಿತ ದಿನಾಚರಣೆ ಅಂಗವಾಗಿ ಜಿಲ್ಲಾ ಪಂಚಾಯಿತಿ ಕೊಪ್ಪಳ, ಸಾರ್ವಜನಿಕ ಶಿಕ್ಷಣ ಇಲಾಖೆ, ಕೊಪ್ಪಳ, ಕರ್ನಾಟಕ ರಾಜ್ಯ ವಿಜ್ಞಾನ ಮತ್ತು ತಂತ್ರ ವಿದ್ಯಾ ಮಂಡಳಿ (KSCST) ಬೆಂಗಳೂರು ಇವರ ಸಹಯೋಗದಲ್ಲಿ ನಮ್ಮ ಸರಕಾರಿ ಪ್ರೌಢಶಾಲೆ, ಜಹಗೀರಗುಡದೂರಿನಲ್ಲಿ ನಡೆಸಲಾಯಿತು. ಕಾರ್ಯಕ್ರಮದ ಉದ್ಘಾಟನೆಯನ್ನು KSCST ಹಾಗೂ ಜಿಲ್ಲಾ ಪಂಚಾಯಿತಿ ಕೊಪ್ಪಳದ NRDMS ನ ಆಧಿಕಾರಿಗಳಾದ  ಗುರುಸ್ವಾಮಿ ಯವರು ಸಸಿಗೆ ನೀರೆರಿಯುವುದರ ಮೂಲಕ ಉದ್ಘಾಟಿಸಿ KSCSTಯಿಂದ ಕರ್ನಾಟಕದ ಕೆಲವೇ ಶಾಲೆಗಳಲ್ಲಿ ಇಂಥ ಪ್ರಯೋಗಾತ್ಮಕ ಚಟುವಟಿಕೆಗಳನ್ನು ನಡೆಸುತ್ತಿದ್ದು ಕಳೆದ ಐದು ವರುಷಗಳಿಂದ ಹಲವು ಚಟುವಟಿಕೆಗಳಿಂದ ನಿಮ್ಮ ಶಾಲೆ ಸೃಜನಾತ್ಮಕವಾಗಿ ತೊಡಗಿಸಿಕೊಂಡಿರುವುದಕ್ಕೆ ಸಂತೋಷವಾಗುತ್ತದೆ. ಮಕ್ಕಳು ಹೀಗೆ ನಿರಂತರವಾಗಿ ಅಭ್ಯಾಸದಿಂದ ಹೊರ ಬಾರದಂತೆ ತೊಡಗಿಸಿಕೊಂಡಿದ್ದರೆ ನಿಮ್ಮ ಭವಿಷ್ಯದಲ್ಲಿ ಉನ್ನತ ಸ್ಥಾನಮಾನವನ್ನು ಪಡೆಯಬಹುದು ಎಂದು ತಿಳಿಸಿದರು. ಕಾರ್ಯಕ್ರಮಕ್ಕೆ ವಿಶೇಷ ಉಪನ್ಯಾಸಕರಾಗಿ ಬಂದಿದ್ದ ನಿವೃತ್ತ ಅಧ್ಯಾಪಕರಾದ ಶ್ಯಾಮರಾವ್ ಕುಲಕರ್ಣಿರವರು ಮಕ್ಕಳೊಂದಿಗೆ ಸರಳ ಗಣಿತ ಪ್ರಯೋಗಗಳನ್ನು ಮಾಡಿ ಆಸಕ್ತಿದಾಯಕವಾಗಿ ಮಕ್ಕಳನ್ನು ಸೆಳೆದು, ಗಣಿತದ ಪ್ರಯೋಗಗಳಿಂದ ಹೊರ ಬಾರದಂತೆ ಮಾಡಿ ಇಡೀ ಶಾಲೆಯ ಮಕ್ಕಳನ್ನು ಹಿಡಿದಿಟ್ಟುಕೊಂಡಿದ್ದು ವಿಶೇಷ. ಗಣಿತದ ಪಾಠೋಪಕರಣಗಳನ್ನು ಬಳಸಿ ಕ್ರಿಯಾಶೀಲವಾಗಿ ಗಣಿತವನ್ನು ಅರ್ಥೈಸಿದರು. ಮಕ್ಕಳಿಗೂ ಸಣ್ಣ ಸಣ್ಣ ಚಟುವಟಿಕೆಗಳನ್ನು ನೀಡಿ ಮಕ್ಕಳೇ ಗಣಿತವನ್ನು ಅರ್ಥೈಸಿಕೊಂಡು ಎಲ್ಲರೊಂದಿಗೆ ಹಂಚಿಕೊಳ್ಳುವಂತೆ ಮಾಡಿದ್ದು ನೆನೆಯುವಂಥದ್ದು.
ಶಾಲೆಯ ಕ್ರಿಯಾಶೀಲ ಗಣಿತ ಶಿಕ್ಷಕರಾದ ಪ್ರಶಾಂತ ಕಟ್ಟಿಯವರು ಮಕ್ಕಳಿಗೆ ವೇದಗಣಿತದ ಮೂಲಕ ವೇಗ ಗುಣಕಾರವನ್ನು ಮತ್ತು ಸಂಖ್ಯೆಗಳ ವರ್ಗಗಳನ್ನು ಸುಲುಭವಾಗಿ ಕಂಡುಹಿಡಿಯುವುದನ್ನು ವಿವರಿಸಿದರು.
ಸಮಾರೋಪದ ಕಾರ್ಯಕ್ರಮದಲ್ಲಿ  ಮುಖ್ಯ ಶಿಕ್ಷಕರಾದ ಈಶಪ್ಪ ತಳವಾರ ಅವರು ಮಾತನಾಡಿ ರಾಮಾನುಜನ್ ಅವರ ಜೀವನ ಹಾಗೂ ಅವರ ಶೋಧನೆ ಗಳಿಂದ ನಾವು  ನಮ್ಮ ಮಕ್ಕಳು ಕಲಿಯಬೇಕಾಗಿದೆ. ಅವರ ಚಿಂತನೆಗಳು ನಮ್ಮ ವಿದ್ಯಾರ್ಥಿಗಳಲ್ಲಿ ಹರಿಯಬೇಕಾಗಿದೆ ಎಂದು ತಮ್ಮ ಮಾತುಗಳಲ್ಲಿ ತಿಳಿಸಿದರು. ಇಡೀ ಕಾರ್ಯಕ್ರಮದ ನಿರ್ವಹಣೆಯನ್ನು ಶಿವಪ್ಪ ಇಲಾಳ ಅವರು ಅಚ್ಚುಕಟ್ಟಾಗಿ ನಿರ್ವಹಿಸಿದರು. ಕಾರ್ಯಕ್ರಮದಲ್ಲಿ ಎಸ್.ಡಿ.ಎಂ.ಸಿ ಉಪಾಧ್ಯಕ್ಷರಾದ ಭೀಮರಾವ್ ಸಾಳುಂಕಿ, ಶಾಲೆಯ ವರ್ಚ್ಯುಲ್ ಲ್ಯಾಬ್ ನ ಸಂಯೋಜಕರಾದ ಎಸ್ ಬಿ ಪಾಟೀಲ್ ರು, ಶಿವಪ್ಪ ಇಲಾಳ, ಜಗದೀಶ ಬಾಸಿಂಗದ, ಗುರುರಾಜ ಎಲ್, ತಿಪ್ಪಣ್ಣ ರಾಮದುರ್ಗ, ಇಮಾಂಬಿ ಯಲಬುರ್ಗಿ ಹಾಗೂ ಹುಲಿಗೆಮ್ಮ ಅವರು ಉಪಸ್ಥಿತರಿದ್ದರು.

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ

Thank you.

.................
Gururaj.L
Drama Teacher