ಕಳೆದ ಎರಡು-ಮೂರು ವರ್ಷಗಳಲ್ಲಿ ವಿದ್ಯಾರ್ಥಿಗಳು ಶಾಲೆಯಲ್ಲಿದ್ದು ಕಲೆತು ಈಗ ಅಂತಿಮ ಘಟ್ಟ ಪರೀಕ್ಷೆಗಳು. ಇಲ್ಲಿ ಎಷ್ಟರ ಮಟ್ಟಿಗೆ ನೀವು ನಿಮ್ಮನ್ನು ಕಟ್ಟಿ ಕೊಳ್ಳುವಿರೋ ಆಗ ಮಾತ್ರ ಯಶಸ್ಸು ನಿಮ್ಮ ಬೆನ್ನ ಹಿಂದೆಯೇ ಬೀಳುತ್ತದೆ. ಅದು ಬಿಟ್ಟು ನಾನು ಶಾಲೆಯಿಂದ ಕಾಲೇಜಿಗೆ ಹೋಗುತ್ತಿದ್ದೇನೆ ನನ್ನ ತಡ್ಯೋರು ಯಾರು ಎಂಬ ಆಲೋಚನೆಗಳು ಪುಸ್ತಕವನ್ನು ಬೆರೆಳಲ್ಲಿ ತಿರುಗಿಸುತ್ತಾ ಹೋಗುವುದೇ ನನ್ನ ಯಶಸ್ಸಿನ ಘಟ್ಟ ಎಂದು ಸಾಗಿದರೇ ನಿರಾಶೆ ಮುಂದೆ ಕಟ್ಟಿಟ್ಟಿದ್ದು. ನಿಮ್ಮ ಶ್ರಮದಿಂದ ಹೊಸತನಕ್ಕೆ ಸಾಗಲು ಪೂರ್ವ ತಯಾರಿಯೊಂದಿಗೆ ಸಾಗಿದರೆ ನಿಮ್ಮನ್ನು ಯಶಸ್ಸಿನ ಕದೇ ತೆಗೆದುಕೊಂಡು ಹೋಗುತ್ತದೆ.