ಶುಕ್ರವಾರ, ನವೆಂಬರ್ 23, 2012

ಮಕ್ಕಳ ದಿನಾಚರಣೆ - ಬರಹ

ನೆಹರುಜೀ 
                        
              14.11.2012 ರಂದು ನಡೆದ ಮಕ್ಕಳ ದಿನಾಚರಣೆ ನೆಹರು ಅವರ 123 ನೇ ಜಯಂತೋತ್ಸವ ಬಗ್ಗೆ ನಮ್ಮ ಶಾಲೆಯ ಮುಖ್ಯ ಗುರುಗಳು, ನನ್ನ ಸಹಪಾಠಿಗಳು ಹಾಗೂ ನಮ್ಮ ಗುರುಬಳಗದವರೆಲ್ಲ ನಮಗೆ ಮಕ್ಕಳ ಜಯಂತೋತ್ಸವದ ಕುರಿತು ಉಪನ್ಯಾಸ ನೀಡಿದರು. ಸ್ವತಂತ್ರ್ಯ  ಸಿಕ್ಕ ನಂತರ ಪ್ರಪ್ರಥಮ ದೇಶದ ಪ್ರಧಾನಿ ಪಂಡಿತ್ ಜವಹರಲಾಲ್ ನೆಹರುರವರಾಗಿದ್ದರು. ಇವರಿಗೆ ಮಕ್ಕಳ ಭವಿಷ್ಯದಲ್ಲಿಯೇ ಭಾರತದ ಭವಿಷ್ಯವನ್ನು ಕಂಡು ಕೊಂಡಿದ್ದರು. 

                ಪಂಡಿತ್ ಜವಹರಲಾಲ್ ನೆಹರುರವರಿಗೆ ಮಕ್ಕಳೆಂದರೆ ಬಹಳ ಪ್ರೀತಿ. ನಮ್ಮ ಶಾಲೆಯಲ್ಲಿ  ಪಂಡಿತರ ಭಾವಚಿತ್ರಕ್ಕೆ ಪೂಜೆ ನೆರವೇರಿಸಿ ಅವರನ್ನ ಮನದಲ್ಲಿ ನೆನೆಯುವುದರ ಜೊತೆಗೆ ನಮ್ಮ ಶಾಲಾ ಸಂಸತ್ತಿನಿಂದ ಕಾರ್ಯಕ್ರಮವನ್ನು ನಡೆಸಿದೆವು. ಪ್ರಧಾನಿಯಾಗಿ ಆಯ್ಕೆಗೊಂಡಿರುವ ನಾನು ನನ್ನ ಸ್ನೇಹಿತರು ಸಂಸತ್ತಿನ ಸಚಿವರುಗಳು ಎಲ್ಲರೂ  ಕೂಡಿ ಕೊಂಡು ಮುಖ್ಯೋಪಾಧ್ಯಾಯರನ್ನು ಮಖ್ಯ ಅತಿಥಿಯಾಗಿ ಆಹ್ವಾನಿಸಿ, ದತ್ತಾತ್ರೇಯ ಪತ್ತಾರ ಗುರುಗಳನ್ನು ಪ್ರಾಸ್ತಾವಿಕವಾಗಿ ಮಾತಾನಾಡಲು ಆಮಂತ್ರಿಸಿ, ಪ್ರಾರ್ಥನೆಯೊಂದಿಗೆ ಕಾರ್ಯಕ್ರಮವನ್ನು ಪ್ರಾರಂಭಿಸಿದೆವು. ವೇದಿಕೆಯ ಮೇಲೆ ಸದಾ ಶಿಕ್ಷಕರನ್ನು ನೋಡುತ್ತಿದ್ದ ನಾವು ಇಂದು ವೇದಿಕೆಯ ಮೇಲೆ ಇದ್ದದ್ದು ವಿಶೇಷವಾಗಿತ್ತು. 

                   ಈ ರೀತಿ ಕಾರ್ಯಕ್ರಮಗಳನ್ನು ಮಾಡುವುದು, ವೇದಿಕೆಯ ಮೇಲೆ ವಿಧ್ಯಾರ್ಥಿಗಳನ್ನು ಕಳುಹಿಸುವುದರಿಂದ ಸಂತೋಷದ ಜೊತೆಗೆ ಮುಜುಗರ ಹೋಗುವುದು. ಭಯ ಪಡದೇ ನಾವು ರಂಗವನ್ನು ಹತ್ತಲು ಸಾಧ್ಯಾವಾಗುತ್ತದೆ. ಸದಾ ಈ ತರಹದ ಕಾರ್ಯಕ್ರಮಗಳನ್ನು ಆಯೋಜಿಸುವ ಶಿಕ್ಷಕರಿಗೆ ನಾವು ಧನ್ಯಾವಾದಗಳನ್ನು ತಿಳಿಸುತ್ತೇವೆ. ಮಕ್ಕಳ ಕನಸುಗಳಿಗೆ ಇದೊಂದು ಮೊದಲ ಹೆಜ್ಜೆಯಾಗುತ್ತಿರುವುದು ವಿಶೇಷ.

ಮಂಜುಳಾ ಎಸ್. ಇಲಾಳ 
ಶಾಲಾ ಸಂಸತ್ತಿನ ಪ್ರಾಧಾನಿ,
ಸರಕಾರಿ ಪ್ರೌಢಶಾಲೆ,
ಜಹಗಿರ್ ಗುಡದೂರ