೨೦೧೭-೧೮ ನೇ ಸಾಲಿನ ಶಾಲಾ ಶೈಕ್ಷಣಿಕ ವರ್ಷದ ಆರಂಭದಲ್ಲಿ ಜನಪ್ರತಿನಿಧಿಗಳು ಹಾಗೂ ಶಾಲಾ ಸಿಬ್ಬಂದಿ ವರ್ಗದವರ ಉಪಸ್ಥಿತಿಯಲ್ಲಿ ಪಠ್ಯ ಪುಸ್ತಕ ಹಾಗೂ ಸಮವಸ್ತ್ರ ಗಳನ್ನು ವಿತರಿಸಲಾಯಿತು.
ಶನಿವಾರ, ಜೂನ್ 3, 2017
ಶನಿವಾರ, ಮೇ 20, 2017
ಶನಿವಾರ, ಏಪ್ರಿಲ್ 22, 2017
ಮಂಗಳವಾರ, ಏಪ್ರಿಲ್ 18, 2017
ಆದರ್ಶ ವಿದ್ಯಾರ್ಥಿಗಳು
ಭಾನುವಾರ, ಏಪ್ರಿಲ್ 2, 2017
"ಜೀವ ಜಲ ಜೀವ ಸಂಪತ್ತು " ಮಕ್ಕಳ ಶಿಬಿರ
ಒಂದು ಬೇಸಿಗೆ ಶಿಬಿರ ವಿಶಿಷ್ಟ ರೀತಿಯಲ್ಲಿ ಉದ್ಘಾಟನೆ ನಡೆಸಿದ್ದಾರೆ ವಿಸ್ತಾರ ದ ಅಡಿಯಲ್ಲಿ.ತುಂಬಾ ಸಂತೋಷ ಕೊಡುತ್ತದೆ ಅವರ ಚಟುವಟಿಕೆಗಳನ್ನು ಕಂಡು.
ಶುಕ್ರವಾರ, ಮಾರ್ಚ್ 31, 2017
ಸೋಮವಾರ, ಮಾರ್ಚ್ 27, 2017
ಶನಿವಾರ, ಮಾರ್ಚ್ 18, 2017
ಗುರುವಾರ, ಮಾರ್ಚ್ 9, 2017
ಸೋಮವಾರ, ಮಾರ್ಚ್ 6, 2017
ಮಕ್ಕಳ ಹೆಜ್ಜೆಗಳು ಜಾನಪದದತ್ತ.... ಕಾರ್ಯಕ್ರಮದ ಸಮಾರೋಪ ಹಾಗೂ ಪುಸ್ತಕ ಬಿಡುಗಡೆ
ದಿನಾಂಕ 03-03-2017 ರಂದು ಸ್ಥಳೀಯ ಜಹಗೀರಗುಡದೂರ ಪ್ರೌಢಶಾಲೆಯಲ್ಲಿ ಮಕ್ಕಳ ಹೆಜ್ಜೆಗಳು ಜಾನಪದದತ್ತ .... ಕಾರ್ಯಕ್ರಮದ ಸಮಾರೋಪ ಸಮಾರಂಭದ ನಡೆಸಲಾಯಿತು. ಸಮಾರಂಭದಲ್ಲಿ ಸ್ಥಳೀಯ ಜನಪದರ ಜಾನಪದ, ಸೋಬಾನೆ, ರಿವಾಯತಿ ಪದ, ತತ್ವಪದ, ಜೋಗುಳ ಪದಗಳನ್ನು ಪುಸ್ತಕದ ರೂಪದಲ್ಲಿ ತಂದಿರುವುದನ್ನು ಮುಖ್ಯೋಪಾಧ್ಯಾಯರಾದ ಶ್ರೀ ಈಶಪ್ಪ ತಳವಾರ ಅವರಿಂದ ಬಿಡುಗಡೆ ಮಾಡಲಾಯಿತು.
ಉದ್ಘಾಟನಾ ಕಾರ್ಯಕ್ರಮದ ನಂತರ ಇಬ್ಬರು ಸಂಪನ್ಮೂಲ ವ್ಯಕ್ತಿಗಳಿಂದ ಉಪನ್ಯಾಸ ನಡೆಸಲಾಯಿತು. "ಶಾಲಾ ಹಂತದಲ್ಲಿ ಕ್ರಿಯಾಶೀಲ ಕಲಾ ಚಟುವಟಿಕೆ " ಎನ್ನುವ ವಿಷಯವನ್ನು ಕುರಿತು ಶ್ರೀ ಶಿವಪ್ಪ ಇಲಾಳ ಅವರು ಮಾತಾನಾಡಿ ವಿದ್ಯಾರ್ಥಿಗಳ ಭಾಗವಹಿಸುವಿಕೆಯಿಂದ ಸೃಜನಶೀಲ ವ್ಯಕ್ತಿಗಳಾಗಿ ಹೊರ ಹೊಮ್ಮಲು ಇಂಥ ವೇದಿಕೆಗಳೇ ಹೆಚ್ಚು ಅವಕಾಶವನ್ನು ಒದಗಿಸುತ್ತವೆ ಹೀಗಾಗಿ ವಿದ್ಯಾರ್ಥಿಗಳು ಅವಕಾಶ ಸಿಕ್ಕಾಗ ಬಳಸಿ ಕೊಳ್ಳಲೇಬೇಕು ಎಂದು ತಿಳಿಯಪಡಿಸಿದರು. "ಶಿಕ್ಷಣದಲ್ಲಿ ಜಾನಪದ" ಎನ್ನುವ ವಿಷಯ ಕುರಿತು ಶ್ರೀ ಮರಿಯಪ್ಪ ಜರಕುಂಟಿ ಮಾತನಾಡುತ್ತಾ ನಮ್ಮ ಶಾಲಾ ರಂಗಶಿಕ್ಷಕರ ಕಾರ್ಯಗಳಂತೆ ಪ್ರತಿ ವಿದ್ಯಾರ್ಥಿಗಳು ತೊಡಗಿಸಿಕೊಂಡರೇ ಜಾನಪದ ಮುಂದಿನ ತಲೆಮಾರಿಗೆ ಉಳಿಯಬಹುದು ಎಂದು ತಿಳಿಸಿದರು.
ರಂಗಶಿಕ್ಷಕರಾದ ಗುರುರಾಜ ಅವರು "ಮಕ್ಕಳ ಹೆಜ್ಜೆಗಳು ಜಾನಪದದತ್ತ...." ಯೋಜನೆಯ ಕಾರ್ಯಕ್ರಮವನ್ನು ಕಳೆದ ವರ್ಷದಿಂದ ಆರಂಭಿಸಿ ಮಕ್ಕಳು ತಮ್ಮ ಮನೆಯಲ್ಲೇ ಹಾಡುವ ಯಾವುದೇ ಪ್ರಕಾರಗಳನ್ನು ಸಂಗ್ರಹಿಸಿ ಅದನ್ನು ಬರಹ ರೂಪಕ್ಕೆ ತರುವುದು ಮತ್ತು ಅದರ ದಾಖಲೀಕರಣ ಮಾಡುವುದು. ಶಾಲೆಯ ತರಗತಿ ಕೋಣೆಯಲ್ಲಿ ರಂಗಸಂಗೀತವನ್ನು ಹೇಳಿಕೊಡುವಾಗ ಸ್ಥಳೀಯ ಜನಪದವನ್ನು ತರಗತಿಯ ಕೋಣೆಯಲ್ಲಿ ತರುವ ಕಾರ್ಯ ಇಲ್ಲಿ ನಡೆಸಲಾಗಿದೆ. ಅದರ ಹಿನ್ನಲೆಯಲ್ಲಿ ಪಠ್ಯದ ಪಾಠವನ್ನು ಅದರ ಪೂರಕ ಮೂಲ ನಾಟಕವನ್ನು ತೆಗೆದುಕೊಂಡು ಎಂಟನೇ ತರಗತಿ ವಿದ್ಯಾರ್ಥಿಗಳಿಗೆ ರಂಗಶಿಕ್ಷಕ ಗುರುರಾಜ್ ಅವರು "ಬಿಲ್ಲಹಬ್ಬ" ನಾಟಕ ಸಿದ್ದ ಪಡಿಸಿ ಸಮಾರೋಪ ಸಮಾರಂಭದ ಸಮಯದಲ್ಲಿ ಪ್ರಯೋಗ ಪಡಿಸಿದರು. ನಾಟಕದ ನಂತರ ಎಲ್ಲಾ ಮಕ್ಕಳಿಗೆ ಪ್ರಮಾಣ ಪತ್ರಗಳನ್ನು ವಿತರಿಸಲಾಯಿತು. ಕಾರ್ಯಕ್ರಮಕ್ಕೆ ಇಂಡಿಯಾ ಫೌಂಡೇಶನ್ ಫಾರ್ ದಿ ಅರ್ಟ್ಸ ಬೆಂಗಳೂರು ಹಾಗೂ ಸರ್ವ ಶಿಕ್ಷಣ ಅಭಿಯಾನ, ಗೋಥೆ ಇನ್ ಸ್ಟಿಟ್ಯೂಟ್ ಹಾಗೂ ಜಹಗೀರಗುಡದೂರ ಪ್ರೌಢಶಾಲೆಯ ಆಶ್ರಯದಲ್ಲಿ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು. ರಂಗಶಿಕ್ಷಕರಾದ ಗುರುರಾಜ್ ಅವರ ಪ್ರಸ್ತಾವನೆಯ ಅಂತಿಮ ಘಟ್ಟದಲ್ಲಿ ಈ ಕಾರ್ಯಕ್ರಮವು ಕಳೆಗಟ್ಟಲು ಸಾಧ್ಯವಾಯಿತು. ಕಾರ್ಯಕ್ರಮದಲ್ಲಿ ಸಂಗನಗೌಡ ಮಾಲೀಪಾಟೀಲ, ತಿಪ್ಪಣ್ಣ ರಾಮದುರ್ಗ, ಶ್ರೀದೇವಿ ಗುಳಬಾಳ, ಪ್ರಶಾಂತ, ಜಗದೀಶ್ ಬಾಸಿಂಗದ ಹಾಗೂ ಐಎಫ್ಎ ನ ಯೋಜನಾಧಿಕಾರಿಗಳಾದ ಕೃಷ್ಣಮೂರ್ತಿ ಅವರು ಉಪಸ್ಥಿತರಿದ್ದರು.
ಶನಿವಾರ, ಫೆಬ್ರವರಿ 18, 2017
ಶುಕ್ರವಾರ, ಫೆಬ್ರವರಿ 17, 2017
ಶನಿವಾರ, ಫೆಬ್ರವರಿ 11, 2017
ಪೋನ್ ಇನ್ ಕಾರ್ಯಕ್ರಮ
ಕುಷ್ಟಗಿ ತಾಲೂಕಿನ ಹತ್ತನೇ ತರಗತಿ ವಿದ್ಯಾರ್ಥಿ ಗಳಿಗಾಗಿ ತಾಲೂಕಿನ ಬಿ.ಇ.ಒ ಕಛೇರಿಯಿಂದ ಪೋನ್ ಇನ್ ಕಾರ್ಯಕ್ರಮವನ್ನು ನಡೆಸುತ್ತಿದ್ದು ಅದರ ವೇಳಪಟ್ಟಿ ಈ ಕೆಳಗಿನಂತಿದೆ.
13-02-2017 ಸೋಮವಾರ. ಕನ್ನಡ
14-02-2017 ಮಂಗಳವಾರ. ಗಣಿತ
15-02-2017 ಬುಧವಾರ ಇಂಗ್ಲೀಷ್
16-02-2017. ಗುರುವಾರ ವಿಜ್ಞಾನ
17-02-2017. ಶುಕ್ರವಾರ ಹಿಂದಿ
18-02-2017. ಶನಿವಾರ ಸಮಾಜ
ವಿದ್ಯಾರ್ಥಿಗಳು ಈ ಕಾರ್ಯಕ್ರಮದಲ್ಲಿ ಭಾಗವಹಿಸಿ ತಮಗೆ ಇರುವ ಪ್ರಶ್ನೆಗಳನ್ನು ಕಛೇರಿಯ ದೂರವಾಣಿಗೆ ಕರೆ ಮಾಡಿ ಉತ್ತರಗಳನ್ನು ಪಡೆಯಲು ಕೋರಿದ್ದಾರೆ.
ದೂರವಾಣಿ ಸಂಖ್ಯೆ - 08536-267043
ಸೋಮವಾರ, ಜನವರಿ 2, 2017
ಎಸ್.ಡಿ.ಎಮ್.ಸಿ ಸದಸ್ಯರ ಕಾರ್ಯಗಾರ
ಕಳೆದ ೨೬ ಹಾಗೂ೨೭ ನೇ ಡಿಸೆಂಬರ್ ನಲ್ಲಿ ನಡೆದ ಪ್ರೌಢಶಾಲಾ ಎಸ್.ಡಿ.ಎಮ್.ಸಿ ಸದಸ್ಯರ ತರಬೇತಿ ಯ ಚಿತ್ರಗಳು ಹಾಗೂ ಪತ್ರಿಕೆಯ ಪ್ರಕಟವಾದ ಬರಹ.



