ಭಾನುವಾರ, ಆಗಸ್ಟ್ 6, 2017

ನಮ್‌ಕತೆ

ನಟರಂಗ

ನಮ್ಮದೇ ಹವಾ

ಗುರುವಾರ, ಆಗಸ್ಟ್ 3, 2017

ಮುತ್ತಣ್ಣನ ಬರಹ

ನನ್ನ ಪ್ರೀತಿಯ ರಂಗಕಲಾ ಶಿಕ್ಷಕರಾದ ಗುರುರಾಜ L
ಹಜ್ಜೆಗಳಲ್ಲಿ ಸಂಗ್ರಹಿಸಿದ ಚಿತ್ರ .  9ನೇ ತರಗತಿ ಇದ್ದಾಗ ಪಾತ್ರಗಳನ್ನು ಹಂಚುತಿರುವಾಗ ಯಾವ ಯಾವ ಪಾತ್ರಗಳು ಎಂದು ಚರ್ಚೆ ಮಾಡುತ್ತಿರುವಾಗ ಕೋನೆಯದಾಗಿ ಆಯ್ಕೆ ಯಾದವನು ನಾನು.

     ಅಂದು ನಾನು ಗುರುಗಳ ಮಾತಿನಂತೆ ರಂಗಕಲೆಗೆ ಸೇರದಿದ್ದರೆ ಇನ್ನೆಂದು ನಿರ್ಭಯವಾಗಿ ವೇದಿಕೆಯ ಮೇಲೆ ಮಾತನಾಡುತ್ತಿರಲಿಲ್ಲವೇನೋ ಎಂದನಿಸುತ್ತಿದೆ.
      
        ಆ ದಿನಗಳಲ್ಲಿ  ನಾವು ನಾಟಕದ ರಿಹರ್ಷಲ್ಗಳಲ್ಲಿಯೇ ಕಾಲ ಕಳೆದೆವು. ಕನಸಿನೂರು, ವಿಜ್ಞಾನದ ಬಗ್ಗೆ ನಾಟಕಗಳ ರಿಹರ್ಷಲ್ ನಲ್ಲಿ ತೊಡಗಿರುತಿದ್ದೆವು.ಇಂತಹ ನಾಟಕಗಳ ಪಾತ್ರಗಳನ್ನು ಹೋತ್ತು ಊರೂರಿಗೆ ಆ ದಿನಗಳಲ್ಲಿ ಬಂಡೆಗಳನ್ನು ಏರಿ ಹೋಗುತಿದ್ದ ಕ್ಷಣಗಳು,ನಟನೆಯಲ್ಲಿ ಪಾತ್ರಕ್ಕೆ ತಕ್ಕ  ಬಟ್ಟೆಗಳನ್ನು  ಹೊತ್ತು ಹೋಗಿ ನಾಟಕ ಮಾಡಿ ಬರುತ್ತಿದ್ದೇವು.ಹಾಬಲಕಟ್ಟ, ಬಾದಿಮನಾಳ, ತುಮರಿಕೊಪ್ಪ , ಜ.ಗುಡದೂರ, ಮತ್ತು ತಾಲೂಕು ಹಂತದಲ್ಲಿ ನಿಡಶೇಸಿಗೆ ಮೊದಲ ಬಾರಿಗೆ ಹೋಗಿ ಬಂದ ಶಾಲೆಯ ಮಕ್ಕಳಾಗಿದ್ದೇವು.  ಮತ್ತು ನಮ್ಮ ಮೊದಲ ಹೆಜ್ಜೆಗಳೆ ಸರಿ.

ಮತ್ತೋಮ್ಮ ಶಾಲಾದಿನಗಳನ್ನು  ಹೆಜ್ಜೆಗಳಲ್ಲಿ ಸಂಗ್ರಹಿಸಿ  ನೆನಪಿಸಿದ ಗುರುರಾಜ ಗುರುಗಳಿಗೆ  ಧನ್ಯವಾದಗಳು.

ಶನಿವಾರ, ಜೂನ್ 3, 2017

ಶಾಲಾ ಪಠ್ಯ ಪುಸ್ತಕ ಹಾಗೂ ಸಮವಸ್ತ್ರ ವಿತರಣೆ

೨೦೧೭-೧೮ ನೇ ಸಾಲಿನ ಶಾಲಾ ಶೈಕ್ಷಣಿಕ ವರ್ಷದ ಆರಂಭದಲ್ಲಿ ಜನಪ್ರತಿನಿಧಿಗಳು ಹಾಗೂ ಶಾಲಾ ಸಿಬ್ಬಂದಿ ವರ್ಗದವರ ಉಪಸ್ಥಿತಿಯಲ್ಲಿ  ಪಠ್ಯ ಪುಸ್ತಕ ಹಾಗೂ ಸಮವಸ್ತ್ರ ಗಳನ್ನು ವಿತರಿಸಲಾಯಿತು.

ಶನಿವಾರ, ಮೇ 20, 2017

ಮಂಗಳವಾರ, ಏಪ್ರಿಲ್ 18, 2017

ಆದರ್ಶ ವಿದ್ಯಾರ್ಥಿಗಳು

೨೦೧೬-೧೭ ನೇ ಸಾಲಿನಿಂದ ನಮ್ಮ ಶಾಲೆಯ ವಿದ್ಯಾರ್ಥಿಗಳಲ್ಲಿ ಇಬ್ಬರ (ಬಾಲಕ+ಬಾಲಕಿ) ನ್ನು ಆದರ್ಶ ವಿದ್ಯಾರ್ಥಿಗಳೆಂದು ಆಯ್ಕೆ ಮಾಡಿ ಗೌರವಿಸುವ ಹೊಸ ಕಾರ್ಯಕ್ಕೆ ಚಾಲನೆ ನೀಡಲಾಗಿದೆ. ಮಕ್ಕಳನ್ನು ಈ ರೀತಿ ಪ್ರೋತ್ಸಾಹಿಸುವುದರಿಂದ ಅವರ ಭವಿಷ್ಯಕ್ಕೆ ಉತ್ತಮವಾದ ವಾತಾವರಣವನ್ನು ಸೃಷ್ಟಿಸಿದಂತೆ ಆಗುತ್ತದೆ ಎಂಬ ದೃಷ್ಟಿಯಲ್ಲಿ ನಮ್ಮೆಲ್ಲ ಶಿಕ್ಷಕ ವೃ೦ದ ನಿರ್ಧರಿಸಿ ಆಯ್ಕೆ ಮಾಡಲಾಗುತ್ತದೆ. ಮಕ್ಕಳು ಎಲ್ಲ ರೀತಿಯ ಶೈಕ್ಷಣಿಕ ಹಂತದಿಂದ ತೊಡಗಿಸಿಕೊಳ್ಳುವಿಕೆಯಲ್ಲಿ ಧನಾತ್ಮಕವಾಗಿ ಇರುವ ವಿದ್ಯಾರ್ಥಿಗಳನ್ನು ಆಯ್ಕೆ ಮಾಡಲಾಗುತ್ತದೆ. ಮೊದಲು ಶಾಲೆಯ  ಆದರ್ಶ ವಿದ್ಯಾರ್ಥಿಗಳಾಗಿ 
ಕುಮಾರಿ ಭೀಮಾಂಬಿಕಾ ಸಣ್ಣಡೋಣಿ 
ಕುಮಾರ ಶಿವರಾಜ್ ತುಗ್ಗಲಡೋಣಿ 
ಈ ಎರಡು ಮಕ್ಕಳನ್ನು ಎಲ್ಲ ಶಿಕ್ಷಕ ಬಳಗ ಆಯ್ಕೆ ಮಾಡಿ ಅಭಿನಂದಿಸುತ್ತಿದ್ದಾರೆ.  



ಭಾನುವಾರ, ಏಪ್ರಿಲ್ 2, 2017

"ಜೀವ ಜಲ ಜೀವ ಸಂಪತ್ತು " ಮಕ್ಕಳ ಶಿಬಿರ

ಒಂದು ಬೇಸಿಗೆ ಶಿಬಿರ ವಿಶಿಷ್ಟ ರೀತಿಯಲ್ಲಿ ಉದ್ಘಾಟನೆ ನಡೆಸಿದ್ದಾರೆ ವಿಸ್ತಾರ ಅಡಿಯಲ್ಲಿ.ತುಂಬಾ ಸಂತೋಷ ಕೊಡುತ್ತದೆ ಅವರ ಚಟುವಟಿಕೆಗಳನ್ನು ಕಂಡು.

ಶುಕ್ರವಾರ, ಮಾರ್ಚ್ 31, 2017

ಸೋಮವಾರ, ಮಾರ್ಚ್ 27, 2017

ಆದರ್ಶ ವಿದ್ಯಾರ್ಥಿಗಳು

ಶೈಕ್ಷಣಿಕ ವರ್ಷದಿಂದ ಹತ್ತನೇ ತರಗತಿಯ ವಿದ್ಯಾರ್ಥಿಗಳಲ್ಲಿ ಇಬ್ಬರಿಗೆ "ಆದರ್ಶ ವಿದ್ಯಾರ್ಥಿ" ಎಂದು ಅಭಿನಂದಿಸಲಾಯಿತು.

ಶನಿವಾರ, ಮಾರ್ಚ್ 18, 2017

ಮಕ್ಕಳ ಹೆಜ್ಜೆಗಳು ಉದಯವಾಣಿ ದಿನಪತ್ರಿಕೆಯಲ್ಲಿ

ಉದಯವಾಣಿ ದಿನಪತ್ರಿಕೆಯಲ್ಲಿ



ಮಕ್ಕಳ ಹೆಜ್ಜೆಗಳು ಸಮಾರೋಪ ಸಮಾರಂಭದ ವರದಿ ಪತ್ರಿಕೆಯಲ್ಲಿ

ಸಂಯುಕ್ತ ಕರ್ನಾಟಕ

ಗುರುವಾರ, ಮಾರ್ಚ್ 9, 2017

ಸೋಮವಾರ, ಮಾರ್ಚ್ 6, 2017

ಮಕ್ಕಳ ಹೆಜ್ಜೆಗಳು ಜಾನಪದದತ್ತ.... ಕಾರ್ಯಕ್ರಮದ ಸಮಾರೋಪ ಹಾಗೂ ಪುಸ್ತಕ ಬಿಡುಗಡೆಯ ಛಾಯಾಚಿತ್ರಗಳು

ಮಕ್ಕಳ ಹೆಜ್ಜೆಗಳು ಜಾನಪದದತ್ತ.... ಕಾರ್ಯಕ್ರಮದ ಸಮಾರೋಪ ಹಾಗೂ ಪುಸ್ತಕ ಬಿಡುಗಡೆ

ದಿನಾಂಕ 03-03-2017 ರಂದು ಸ್ಥಳೀಯ ಜಹಗೀರಗುಡದೂರ ಪ್ರೌಢಶಾಲೆಯಲ್ಲಿ ಮಕ್ಕಳ ಹೆಜ್ಜೆಗಳು ಜಾನಪದದತ್ತ .... ಕಾರ್ಯಕ್ರಮದ ಸಮಾರೋಪ ಸಮಾರಂಭದ ನಡೆಸಲಾಯಿತು. ಸಮಾರಂಭದಲ್ಲಿ ಸ್ಥಳೀಯ ಜನಪದರ ಜಾನಪದ, ಸೋಬಾನೆ, ರಿವಾಯತಿ ಪದ, ತತ್ವಪದ, ಜೋಗುಳ ಪದಗಳನ್ನು ಪುಸ್ತಕದ ರೂಪದಲ್ಲಿ ತಂದಿರುವುದನ್ನು ಮುಖ್ಯೋಪಾಧ್ಯಾಯರಾದ ಶ್ರೀ ಈಶಪ್ಪ ತಳವಾರ ಅವರಿಂದ ಬಿಡುಗಡೆ ಮಾಡಲಾಯಿತು. 
   ಉದ್ಘಾಟನಾ ಕಾರ್ಯಕ್ರಮದ ನಂತರ ಇಬ್ಬರು ಸಂಪನ್ಮೂಲ ವ್ಯಕ್ತಿಗಳಿಂದ ಉಪನ್ಯಾಸ ನಡೆಸಲಾಯಿತು. "ಶಾಲಾ ಹಂತದಲ್ಲಿ ಕ್ರಿಯಾಶೀಲ ಕಲಾ ಚಟುವಟಿಕೆ " ಎನ್ನುವ ವಿಷಯವನ್ನು ಕುರಿತು ಶ್ರೀ ಶಿವಪ್ಪ ಇಲಾಳ ಅವರು ಮಾತಾನಾಡಿ ವಿದ್ಯಾರ್ಥಿಗಳ ಭಾಗವಹಿಸುವಿಕೆಯಿಂದ ಸೃಜನಶೀಲ ವ್ಯಕ್ತಿಗಳಾಗಿ ಹೊರ ಹೊಮ್ಮಲು ಇಂಥ ವೇದಿಕೆಗಳೇ ಹೆಚ್ಚು ಅವಕಾಶವನ್ನು ಒದಗಿಸುತ್ತವೆ ಹೀಗಾಗಿ ವಿದ್ಯಾರ್ಥಿಗಳು ಅವಕಾಶ ಸಿಕ್ಕಾಗ ಬಳಸಿ ಕೊಳ್ಳಲೇಬೇಕು ಎಂದು ತಿಳಿಯಪಡಿಸಿದರು. "ಶಿಕ್ಷಣದಲ್ಲಿ ಜಾನಪದ" ಎನ್ನುವ ವಿಷಯ ಕುರಿತು ಶ್ರೀ ಮರಿಯಪ್ಪ ಜರಕುಂಟಿ  ಮಾತನಾಡುತ್ತಾ ನಮ್ಮ ಶಾಲಾ ರಂಗಶಿಕ್ಷಕರ ಕಾರ್ಯಗಳಂತೆ ಪ್ರತಿ ವಿದ್ಯಾರ್ಥಿಗಳು ತೊಡಗಿಸಿಕೊಂಡರೇ ಜಾನಪದ ಮುಂದಿನ ತಲೆಮಾರಿಗೆ ಉಳಿಯಬಹುದು ಎಂದು ತಿಳಿಸಿದರು.
   ರಂಗಶಿಕ್ಷಕರಾದ ಗುರುರಾಜ ಅವರು "ಮಕ್ಕಳ ಹೆಜ್ಜೆಗಳು ಜಾನಪದದತ್ತ...." ಯೋಜನೆಯ ಕಾರ್ಯಕ್ರಮವನ್ನು ಕಳೆದ ವರ್ಷದಿಂದ ಆರಂಭಿಸಿ ಮಕ್ಕಳು ತಮ್ಮ ಮನೆಯಲ್ಲೇ ಹಾಡುವ ಯಾವುದೇ ಪ್ರಕಾರಗಳನ್ನು ಸಂಗ್ರಹಿಸಿ ಅದನ್ನು ಬರಹ ರೂಪಕ್ಕೆ ತರುವುದು ಮತ್ತು ಅದರ ದಾಖಲೀಕರಣ ಮಾಡುವುದು. ಶಾಲೆಯ ತರಗತಿ ಕೋಣೆಯಲ್ಲಿ ರಂಗಸಂಗೀತವನ್ನು ಹೇಳಿಕೊಡುವಾಗ ಸ್ಥಳೀಯ ಜನಪದವನ್ನು ತರಗತಿಯ ಕೋಣೆಯಲ್ಲಿ ತರುವ ಕಾರ್ಯ ಇಲ್ಲಿ ನಡೆಸಲಾಗಿದೆ. ಅದರ ಹಿನ್ನಲೆಯಲ್ಲಿ ಪಠ್ಯದ ಪಾಠವನ್ನು ಅದರ ಪೂರಕ ಮೂಲ ನಾಟಕವನ್ನು ತೆಗೆದುಕೊಂಡು ಎಂಟನೇ ತರಗತಿ ವಿದ್ಯಾರ್ಥಿಗಳಿಗೆ ರಂಗಶಿಕ್ಷಕ ಗುರುರಾಜ್ ಅವರು "ಬಿಲ್ಲಹಬ್ಬ" ನಾಟಕ ಸಿದ್ದ ಪಡಿಸಿ ಸಮಾರೋಪ ಸಮಾರಂಭದ ಸಮಯದಲ್ಲಿ ಪ್ರಯೋಗ ಪಡಿಸಿದರು. ನಾಟಕದ ನಂತರ ಎಲ್ಲಾ ಮಕ್ಕಳಿಗೆ ಪ್ರಮಾಣ ಪತ್ರಗಳನ್ನು ವಿತರಿಸಲಾಯಿತು. ಕಾರ್ಯಕ್ರಮಕ್ಕೆ ಇಂಡಿಯಾ ಫೌಂಡೇಶನ್ ಫಾರ್ ದಿ ಅರ್ಟ್ಸ ಬೆಂಗಳೂರು ಹಾಗೂ ಸರ್ವ ಶಿಕ್ಷಣ ಅಭಿಯಾನ, ಗೋಥೆ ಇನ್ ಸ್ಟಿಟ್ಯೂಟ್ ಹಾಗೂ ಜಹಗೀರಗುಡದೂರ ಪ್ರೌಢಶಾಲೆಯ ಆಶ್ರಯದಲ್ಲಿ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು. ರಂಗಶಿಕ್ಷಕರಾದ ಗುರುರಾಜ್ ಅವರ ಪ್ರಸ್ತಾವನೆಯ ಅಂತಿಮ ಘಟ್ಟದಲ್ಲಿ ಈ ಕಾರ್ಯಕ್ರಮವು ಕಳೆಗಟ್ಟಲು ಸಾಧ್ಯವಾಯಿತು. ಕಾರ್ಯಕ್ರಮದಲ್ಲಿ ಸಂಗನಗೌಡ ಮಾಲೀಪಾಟೀಲ, ತಿಪ್ಪಣ್ಣ ರಾಮದುರ್ಗ, ಶ್ರೀದೇವಿ ಗುಳಬಾಳ, ಪ್ರಶಾಂತ, ಜಗದೀಶ್ ಬಾಸಿಂಗದ ಹಾಗೂ ಐಎಫ್ಎ ನ ಯೋಜನಾಧಿಕಾರಿಗಳಾದ ಕೃಷ್ಣಮೂರ್ತಿ ಅವರು ಉಪಸ್ಥಿತರಿದ್ದರು.

ಶನಿವಾರ, ಫೆಬ್ರವರಿ 18, 2017