ಹೊಸ ಅನುಭವ ನೀಡಿದ ದ್ವಾರಪಾಲಕ....!
*ಸಬ್ ಎಡಿಟರ್ ಸುಬ್ರಾಯ ಸತ್ತ ಮೇಲೆ....* ನಾಟಕದ ದ್ವಾರಪಾಲಕನ ಪಾತ್ರ ನನಗೆ ಹೊಸ ಅನುಭವ ಮತ್ತು ಜೀವನೋತ್ಸಾವನ್ನು ತಂದು ಕೊಟ್ಟಿದೆ.
ಹೌದು,
ನನ್ನಲ್ಲಿ ಹಲವಾರು ಬೆಸ್ಟ್‌ಗಳಿವೆ, ಜೊತೆಗೆ ಯಾವುದೇ ಸಮಯ ಸಂದರ್ಭ ಕ್ಕೆ ಹೊಂದಿಕೊಳ್ಳುವ ಗುಣ ನನಗೆ ಕರಗತವಾಗಿದೆ. ಹಾಗಿದದ್ದಕ್ಕೆ ನಾನು ದ್ವಾರಪಾಲಕ, ನಿರೂಪಕ, ಪ್ರಧಾನ ಅರ್ಚಕ ನಾಗಲು ಸಾಧ್ಯವಾಯಿತು ಎನ್ನುವುದು ನನ್ನ ಅನಿಸಿಕೆ, ಹಾಗೂ ಇದು ನನ್ನ ಹೆಮ್ಮೆ ಕೂಡಾ.
ಶರತ್ ಹೆಗಡೆ ಅವರ ಆ ಯಮಲೋಕದ ಕಲ್ಪನೆ ನನ್ನನ್ನು ಬಹಳಷ್ಟು ವಿಸ್ಮಯಗೊಳಿಸಿದೆ. ನಿಜವಾಗಿಯೂ ಅಂತಹ ವ್ಯವಸ್ಥೆ ಇದ್ದದ್ದೆ ನಿಜವಾದರೆ...! ಅದು ನಮ್ಮ ಅನುಭವಕ್ಕೆ ತಾಕುವಂತಿದ್ದರೆ, ಮಾನವ ಜನ್ಮದ ನಮ್ಮ ಬದುಕು ಹೀಗಿರುತ್ತಿರಲಿಲ್ಲ..
"ಇದೆಯೋ ಇಲ್ಲವೊ ಸ್ವರ್ಗ ನರಕ, ಪಾಪ ಪುಣ್ಯದ ಲೆಕ್ಕವು ಪಕ್ಕಾ, ಅದ್ಯರೋ ಯಮಧರ್ಮನಂತೆ, ನಮ ಲೆಕ್ಕ ಬರೆದಾನಂತೆ, ಇದ್ದರೆ ಪುಣ್ಯದ ಕಂತೆ , ಮುಕ್ತಿ ಸಿಗುವುದು ಅಂತೆ, ಜಾತ್ರೆಲಿ ಮಾಡಿದ ವ್ಯಾಪಾರ ಕೇಳತಾನೆ ನೋಡಿಲ್ಲಿ ಸಾವ್ಕಾರ, ಎಂಬ ಸಾಲುಗಳು ನನಗೆ ಗುಂಗು ಹಿಡಿಸಿವೆ.
ನಾಟಕ ಕೃತಿಕಾರರನ್ನೆ ನಿಬ್ಬೆರಗು ಗೊಳಿಸಿದ ಗುರುರಾಜ್ ಸರ್ ನಿರ್ದೇಶನ ನನ್ನ ಹೊಸ ಅನುಭವಕ್ಕೆ ಮುಖ್ಯ ಕಾರಣವಾಗಿದೆ. ಕಾರಣ, ಶರತ್ ಸರ್ ಬರವಣಿಗೆಯಲ್ಲಿ ಇದ್ದ ದ್ವಾರಪಾಲಕ ಗುರುರಾಜ್ ಸರ್ ಕೈಯಲ್ಲಿ ಕಲ್ಪನೆಗೂ ಮೀರಿ ಹೊರಹೊಮ್ಮಿದ. ಅದೇ ಕಾರಣಕ್ಕೆ ನಾನು ಕೆಲವು ಅದ್ಭುತ ಪಾತ್ರಗಳ ಭಾಗವಾಗಿ ಹೊರಹೊಮ್ಮಿದೆ. ಈ ನಾಟಕದ ಮೊದಲ ದಿನದಿಂದಲೂ ನಾನು ಬಹಳಷ್ಟು ನಕ್ಕಿದ್ದೇನೆ ಮತ್ತು ಬದುಕಿನ ಹಲವು ಒತ್ತಡಗಳನ್ನ ಮರೆತಿದ್ದೇನೆ. ಸಾಕಷ್ಟು ಹೊಸತನ್ನು ಕಲಿತಿದ್ದೇನೆ. ನಾನಷ್ಟೇ ಅಲ್ಲ ನನ್ನ ಜೊತೆಗಿದ್ದ ಇತರರೂ ಇದೇ ಅನುಭವ ಹೊಂದಿದ್ದಾರೆ ಎಂದು ನಾನು ಭಾವಿಸುತ್ತೇನೆ.
ನಾವಾಡಿದ ನಾಟಕ ಗೆದ್ದಿದೆಯೊ, ಸೋತಿದೆಯೊ, ಕೆಲವರಿಗೆ ತಿಳಿದಿಯೋ, ತಿಳಿದಿಲ್ಲವೊ ಗೊತ್ತಿಲ್ಲ. ಅದರೆ, ನನ್ನ ಬದುಕಿನ ಕೆಲ ಸುಂದರ ಕ್ಷಣಕ್ಕೆ ವೇದಿಕೆ ಕೊಟ್ಟ ಕ್ಲಬ್ ಗೆ, ನಾಟಕ ರಚನಾಕಾರರಿಗೆ, ನಿರ್ದೇಶಕರಿಗೆ, ಜೊತೆಗಿದ್ದ ಕಲಾವಿದರಿಗೆ, ಕಲಾ ರಸಿಕರಿಗೆ, ನನ್ನ ನಟನೆ ಮೆಚ್ಚಿಕೊಂಡವರಿಗೆ ಮತ್ತು ಮನಸ್ಸಿನಲ್ಲೇ ಬೈದುಕೊಂಡವರಿಗೆ ಎಲ್ಲರಿಗೂ ನಾನು ಕೃತಜ್ಞನಾಗಿದ್ದೇನೆ.
-----------------------
ಜಗದೀಶ್ ಚಟ್ಟಿ
ಈ ಟಿವಿ ಭಾರತ ವರದಿಗಾರರು
ಕೊಪ್ಪಳ
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ
Thank you.
.................
Gururaj.L
Drama Teacher