ಬುಧವಾರ, ಅಕ್ಟೋಬರ್ 26, 2022

ಬಾದ್ನಳ ಕ್ರಾಸಿನ ಮುದುಕಿ

 ಬಾದ್ನಳ ಕ್ರಾಸಿನ್ಯಾಗ ಆ ಮುದುಕಿ ಸಿಗ್ತಾಳೆ. ತನ್ನದೇ ಪ್ರಪಂಚ, ಮನೆ, ಸಾಮಾನು, ಬೇಕಾದದ್ದು ಎಲ್ಲ ಇದೆ. ತುಂಭಾ ಮುಕ್ತವಾದ ವಾತವರಣದಲ್ಲಿ ಅದು ಅಂಥಹ ಜಾಗದಲ್ಲಿ ಮನೆ ಕಟ್ಟಿಕೊಂಡಿರುವುದೆಂದರೇ ಸಾಧ್ಯನೇ...? ಚಾದಂಗಡಿ ಮಂಜಪ್ಪ ಹೆಚ್ಚು ಹೆಚ್ಚು ಮಾತನಾಡೊದೇ ಇಲ್ಲ ಆದ್ರೆ ಮುದುಕಿಗೆ ಬೇಕಾದ ಎಲ್ಲವನ್ನು ತಕ್ಷಣಕ್ಕೆ ನೀಡಿಬಿಡುವಂಥ ಮನುಷ್ಯ. ಯಾರೊಂದಿಗೂ ಹೆಚ್ಚಾಗಿ ಬೆರೆಯದ ಮುದುಕಿ ತನ್ನ ಪಾಡಿಗೆ ತಾನು ಸ್ವತಂತ್ರಳಾಗಿ ಇರುವಂಥವಳು. ಮತ್ತು ಯಾರು ಆ ಮುದುಕಿಯ ತಂಟೆಗೆ ಹೋಗದೇ ಅವಳನ್ನು ಅವಳ ಪಾಡಿಗೆ ಇರಲು ಬಿಟ್ಟಿದ್ದಾರೆ. ಆದರೆ ಯಾರೋ ಪರ ಸ್ಥಳದವರು ಕ್ರಾಸಿಗೆ ಬಂದಾಗ ಮುದುಕಿ ವಿಶೇಷವಾಗಿ ಆಕರ್ಶಿಸುತ್ತಾಳೆ. 


ಊರಿನ ಜನ ಅವಳ ಕ್ರೀಯಾಶೀಲ ಕಾರ್ಯಗಳನ್ನು ಹುಚ್ಚು ಎಂದು ಕರೆದರೆ, ಕನ್ನಡ ಶಾಲೆ ಮಕ್ಕಳು ಮತ್ತು ಹೈಸ್ಕೂಲ್ ಮಕ್ಕಳು ಅವಳು ತಮ್ಮ ಆಟಗಳನ್ನು ಆಡುತ್ತಿದ್ದಾಳೆ ಎಂದು ಕಣ್ಣಾಲಿಸಿ ನೋಡುತ್ತಾರೆ. ಬಸಮ್ಮ ಬಾದ್ನಳ್ ಕನ್ನಡ ಶಾಲೆಯಲ್ಲಿ ಓದುವ ಹುಡುಗಿ. ಅವ್ವಳ ಜೊತೆ, ಅಪ್ಪನ ಜೊತೆ ಬಾದ್ನಳ್ ಕತ್ರಿಯಾಗ ಬಂದಾಗ ಈ ಮುದುಕಿನಾ ನೋಡುತ್ತಾ ತನ್ನನ್ನು ಆಟಕ್ಕೆ ಕರಕೊಳ್ಲುತ್ತಾಳ ಎಂದು ನೋಡುತ್ತಾ ಅತ್ತ ಕಡೇನೆ ಗಮನಿಸೋದು. ಪ್ರಸಾದ ಅದೇ ನಾಲ್ಕು ರಸ್ತೆಯ ಕತ್ರಿಯಲ್ಲಿಯೇ ಇರುವ ಹುಡುಗ ತನ್ನ ತಂದೆ-ತಾಯಿಯ ಚಾ ಅಂಗಡಿಯಲ್ಲಿಯೇ ಜೀವನ ಕಳೆಯುತ್ತಾ ಈ ಮುದುಕಿಯನ್ನು ಪ್ರತಿನಿತ್ಯ ನೋಡುವವ. ಆದರೆ ಆ ಮುದುಕಿಯ ಯಾವ ಆಟಗಳು ಇವನನ್ನು ಕಾಡಿದಂತಿರಲಿಲ್ಲ.  ಅವನಿಗಷ್ಟೇ ಅಲ್ಲ ಅಲ್ಲಿ ಯಾರಿಗೂ ಕಾಡಿರಲಿಕ್ಕೂ ಇಲ್ಲ. 

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ

Thank you.

.................
Gururaj.L
Drama Teacher