ಶನಿವಾರ, ಮಾರ್ಚ್ 27, 2021

ಜಹಗೀರಗುಡದೂರ ಸರಕಾರಿ ಪ್ರೌಢಶಾಲೆಯಲ್ಲಿ ವಿಶ್ವ ರಂಗಭೂಮಿ ದಿನಾಚರಣೆ

ಇಂದು ವಿಶ್ವ ರಂಗಭೂಮಿ ದಿನಾಚರಣೆ. ಪ್ರತಿ ವರುಷದಂತೆ ಈ ವರ್ಷ ನಮ್ಮ ಜಹಗೀರಗುಡದೂರ ಸರಕಾರಿ ಪ್ರೌಢಶಾಲೆ ಯಲ್ಲಿ  ಹನುಮಾ ಸಾಂಸ್ಕೃತಿಕ ವೇದಿಕೆಯ ವತಿಯಿಂದ ವಿಶ್ವ ರಂಗಭೂಮಿ ದಿನಾಚರಣೆ ಯನ್ನು ಆಚರಿಸಲಾಯಿತು. ಕಾರ್ಯಕ್ರಮ ದಲ್ಲಿ ಹತ್ತನೇ ತರಗತಿಯ ಮಕ್ಕಳಿಂದ ಪಠ್ಯ ಪದ್ಯಗಳ ರಂಗ ಪ್ರಸ್ತುತಿಯನ್ನು ಮಾಡಿದರು. ಪದ್ಯ ವಾಚನ, ಗಾಯನ, ನಿರೂಪಿಸುವ ಮಕ್ಕಳ ಬಗೆ ತುಂಬಾ ಸುಂದರವಾಗಿತ್ತು. ಸಂಕಲ್ಪ ಗೀತೆ, ಹಕ್ಕಿ ಹಾರುತಿದೆ ನೋಡಿದಿರಾ, ಹಲಗಲಿ ಬೇಡರು, ಕೌರವೇಂದ್ರನ ಕೊಂದೆ ನೀನು ಹಾಗೂ ಹಸುರು ಪದ್ಯಗಳನ್ನು ೧೦೬ ಮಕ್ಕಳಿಂದ  ಪದ್ಯ ರಂಗ ಪ್ರಸ್ತುತಿ ಯನ್ನು ಮಾಡಲಾಯಿತು.



  ರಂಗಕರ್ಮಿಯಾದ ಶ್ರೀಯುತ ಗುರುನಾಥ ಪತ್ತಾರ ಅವರಿಗೆ ರಂಗ ಸಮ್ಮಾನ ಮಾಡಲಾಯಿತು. ಈ ಭಾಗದಲ್ಲಿ ವಿಶೇಷವಾದ ವ್ಯಕ್ತಿತ್ವವನ್ನು ಹೊಂದಿರುವ ಕಲಾವಿದರು ಸಿತಾರ ವಾದಕರು ಆಗಿರುವ   ಶ್ರೀಯುತ ಗುರುನಾಥ ಪತ್ತಾರ ಅವರಿಗೆ ಹನುಮಾ ಸಾಂಸ್ಕೃತಿಕ ವೇದಿಕೆ ಹಾಗೂ ಸರಕಾರಿ ಪ್ರೌಢಶಾಲೆ ವತಿಯಿಂದ ಅಭಿನಂದಿಸಲಾಯಿತು.




ಪ್ರಸ್ತಾವಿಕವಾಗಿ ಮಾತಾನಾಡಿದ ನಾಟಕ ಶಿಕ್ಷಕರಾದ ಗುರುರಾಜ ಅವರು ರಂಗಭೂಮಿ ಬೌದ್ಧಿಕ, ಮಾನಸಿಕ ಹಾಗೆಯೇ ಶಾರೀರಿಕವಾಗಿ ಮಕ್ಕಳಿಗೆ ತೊಡಗಿಸಿಕೊಂಡು ವೈಚಾರಿಕವಾಗಿ ಚಿಂತಿಸುವ ಅದನ್ನು ಅಭಿವ್ಯಕ್ತಿಸುವ ವೇದಿಕೆಯನ್ನು ರಂಗಭೂಮಿ ನಿರ್ಮಾಣ ಮಾಡಿಕೊಡುತ್ತದೆ. ರಂಗಭೂಮಿಯ ಕಲಿಕೆ ಸೀಮಿತವಾಗಬಾರದು. ಅದು ವಿಶಾಲವಾಗಿ ತೆರೆದುಕೊಳ್ಳ ಬೇಕಾಗಿದೆ. ಎಲ್ಲಾ ಮಕ್ಕಳಿಗೂ ರಂಗ ಶಿಕ್ಷಣ ದೊರಕಬೇಕಾಗಿದೆ. ಎಂದು ತಿಳಿಸಿದರು. 





ವಿಶ್ವ ರಂಗಭೂಮಿ ದಿನಾಚರಣೆ ಅಂಗವಾಗಿ ರಂಗ ಸಂದೇಶವನ್ನು ನೀಡಿರುವ ಇಂಗ್ಲೇಂಡಿನ ಹೆಲೆನ್ ಮಿರೆನ್ ಅವರು ನೀಡಿರುವುದನ್ನು  ರಂಗಶಿಕ್ಷಕ ವೆಂಕಟೇಶ್ವರ ಕೆ ಅವರು ಕನ್ನಡಕ್ಕೆ ಅನುವಾದಿಸಿದ್ದಾರೆ. ಅದನ್ನು ಶಿವಪ್ಪ ಇಲಾಳರವರು ವಾಚಿಸಿದರು. ಕಾರ್ಯಕ್ರಮ ದಲ್ಲಿ ಗುರುನಾಥ ಪತ್ತಾರರವರು ಸಿತಾರ್ ನುಡಿಸುವುದರೊಂದಿಗೆ  ಕಾರ್ಯಕ್ರಮ ದ ಮೆರುಗನ್ನು ಹೆಚ್ಚಿಸಿದರು. ಗುರು ಗಂಗಾಧರೇಶ್ವರ ಸಂಗೀತ ಶಾಲೆಯ ಕಲಾವಿದರಿಂದ ಗಾಯನವು ಕಾರ್ಯಕ್ರಮ ಕ್ಕೆ ಕಳೆ ಕಟ್ಟಿ ಕೊಟ್ಟಿತು. 

ಪ್ರತಿಯೊಬ್ಬರ ಮನಸ್ಸು ಹೃದಯದಲ್ಲಿ ಪ್ರತಿಭೆ ಎನ್ನುವಂಥಹದು ಸೂಪ್ತವಾಗಿ ಹುದುಗಿರುತ್ತದೆ ಅದನ್ನು ಹೊರಗೆ ತರುವಂತಹ ಕಾರ್ಯವನ್ನು ಒಬ್ಬ ಗುರು ಮಾಡುತ್ತಾನೆ. ಒಂದು ವೇದಿಕೆ ಅಂತಹ ಪ್ರತಿಭೆಯನ್ನು ಹೊರ ಹಾಕುವ ಸ್ಥಳವಾಗಿ ಮಾರ್ಪಟ್ಟು ಜೀವಂತ ಪ್ರತಿಭೆಗೆ ಮಾನ್ಯತೆ ದೊರಕುತ್ತದೆ. ಹೀಗೆ ಹಲವು ಪ್ರತಿಭೆಗಳು ಹೊರ ಬಂದಾಗ ಸಮಾಜಕ್ಕೆ ಮಾದರಿಯಾಗಿ ಹೊರ ಹೊಮ್ಮುತ್ತಾರೆ ಎಂದು  ಶಾಲೆಯ ಮುಖ್ಯೋಪಾಧ್ಯಾಯರು ತಿಳಿಸಿದರು.




ಕಾರ್ಯಕ್ರಮ ದಲ್ಲಿ ಮುಖ್ಯೋಪಾಧ್ಯಾಯರಾದ ಈಶಪ್ಪ ತಳವಾರ, ಸಂಗನಗೌಡ ಪಾಟೀಲ್, ಶಿವಪ್ಪ ಇಲಾಳ, ಬಸವರಾಜ ದಾಸರ, ವೀರಭದ್ರಪ್ಪ, ಚಿದಾನಂದ ಬಡಿಗೇರ,ಹನುಮಾ ಸಾಂಸ್ಕೃತಿಕ ವೇದಿಕೆ ಯ ಅಧ್ಯಕ್ಷ ಯಲ್ಲಾಲಿಂಗ,  ತಿಪ್ಪಣ್ಣ, ಜಗದೀಶ್ ಬಾಸಿಂಗದ, ಬಸಪ್ಪ ಹಿರೇಮನಿ, ಶರಣಪ್ಪ ರಾಂಪೂರ, ರಮೇಶ, ಹುಲಿಗೆಮ್ಮ, ಪ್ರಶಾಂತ ಸುಳ್ಳದ, ಮುರ್ತುಜಾ ಇನ್ನೂ ಮತ್ತಿತರರು ಹಾಜರಿದ್ದರು.

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ

Thank you.

.................
Gururaj.L
Drama Teacher