ಬುಧವಾರ, ಜನವರಿ 13, 2016

ಅಳಿಲಿನ ಕೊನೆ ಕ್ಷಣ



                          ರಾಸಾಯನಿಕ ಗೊಬ್ಬರದ ಹಾವಳಿಯಿಂದ ನಮ್ಮ ಶಾಲೆಯ ಕಾಂಪೋಂಡಿನ ಮೇಲೆ ಬಂದು ಬಿದ್ದು ತನ್ನ ಪ್ರಾಣ ಕಳೆದುಕೊಂಡಿರಲೇ ಬೇಕು. ಇದು ನಮ್ಮ ವಿದ್ಯಾರ್ಥಿನಿಯರ ಮಾತುಗಳು. ಮಧ್ಯಾಹ್ನದ ಊಟ ಮುಗಿಸಿ ಕುಳಿತ ಮಕ್ಕಳಿಗೆ ಆದ ಅಘಾತ. ಪಕ್ಕದ ಹೊಲದಿಂದ ಅವಸರ ಅವಸರವಾಗಿ ತಮ್ಮತ್ತ ಬಂದ ಈ ಅಳಿಲ ಮರಿಯನ್ನು ಕಂಡು ನಮ್ಮ ಮಕ್ಕಳಿಗೆ "ಅಳಿಲು ರಾಮಾಯಣ" ದಲ್ಲಿ ರಾಮನ ಸೇವೆ ಮಾಡಿದ ಅಳಿಲ ಕಥೆಯನ್ನು ನೆನಪಿಸಿಕೊಂಡರು. ಆದರೆ ಇಲ್ಲಿ ಸಂಭವಿಸಿದ ಘಟನೆಯಿಂದಾಗಿ ಮಕ್ಕಳಿಗೆ ಸಂಕಟ ಕಂಡು ನಾನು ದೌಡಾಯಿಸಿದೆ.
                              ಆದರೆ ಅಷ್ಟೋತ್ತಿಗಾಗಲೇ ಮಕ್ಕಳು ಆ ಅಳಿಲನ್ನು ರಕ್ಷಿಸಲು ನೀರನ್ನು ತಂದು ಕುಡಿಸುವ ಪ್ರಯತ್ನ ನಡೆದಿತ್ತು. ಕೊನೆಗೆ ಅಳಿಲು ಮರಿ ತನ್ನ ಪ್ರಾಣ ಕಳೆದುಕೊಂಡಿತು. ಇದಾದ ನಂತರ ಮಕ್ಕಳೊಳಗೆ ಆದ ಚರ್ಚೆ ನನ್ನ ತುಂಭಾ ಕಾಡಿತು. 

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ

Thank you.

.................
Gururaj.L
Drama Teacher