ಶನಿವಾರ, ಫೆಬ್ರವರಿ 22, 2014

ಕೋತಿಯ ಅವಸರ



                  ನದಿಯ ದಡದಲ್ಲಿದ್ದ ಒಂದು ಮರದಲ್ಲಿ ದಿನಲೂ ಆಟವಾಡುತ್ತಾ ವಾಸ ಮಾಡಿಕೊಂಡಿತ್ತು. ಒಂದು ದಿನ ನದಿಯ ದಡದಲ್ಲಿಯೇ ಇದ್ದ ತೋಟದಲ್ಲಿ ಬಾಳೆಯ ಹಣ್ಣನ್ನು ಕಂಡು 
        "ಆಹ್ಹಾ ! ನನಗೆ ಇಷ್ಟವಾದ ಹಣ್ಣು." 

ಎಂದು ಅವಸರದಲ್ಲಿ ತೋಟಕ್ಕೆ ಓಡಿ, ಹಣ್ಣನ್ನು ಕಿತ್ತಿಕೊಂಡು ತನ್ನ ಮರ ಏರಿ ಕುಳಿತಿತು. ಹಣ್ಣನ್ನು ತಿನ್ನುವ ಆಸೆಯಲ್ಲಿ ಸಿಪ್ಪೆ ತೆಗೆದು ತಿನ್ನಬೇಕು ಎಂದು ಈಗಾಗಲೇ ಮನುಷ್ಯರನ್ನು ನೋಡಿ ತಿನ್ನುವ ಕಲೆಯನ್ನು ಕಲೆತಿದ್ದ ಕೋತಿ, ಸಿಪ್ಪೆ ತೆಗೆದು ಬಾಯಿಗೆ ಇಡಬೇಕು ಅಷ್ಟರಲ್ಲಿ ಅದು ಕೈಯಿಂದ ಜಾರಿ ನದಿಗೆ ಬಿದ್ದಿತು.
                    
                                                 "ಅಯ್ಯೋ.........." 

ಎಂದು ಕೆಳಗೆ ನೀರಲ್ಲಿ ನೋಡುತ್ತಾ, ಮರದಲ್ಲಿ ಅತ್ತಿಂದಿತ್ತ ಓಡಾಡ ತೊಡಗಿತು. ಬಾಳೆ ಹಣ್ಣಿನ ಆಸೆಯಲ್ಲಿ ಮರದಿಂದ ಇಳಿದು, ನೀರಿನಿಂದ ಹಣ್ಣನ್ನು ತೆಗೆಯಲು ಹುಡುಕಾಡ ತೊಡಗಿತು. ಈ ಎಲ್ಲವುದನ್ನು ನೋಡುತ್ತಾ ಇದ್ದ ಕಪ್ಪೆ ಬುದ್ಧಿವಂತನಾಗಿದ್ದು ಇಲ್ಲಿಯವರೆಗೆ ಕೋತಿಯೊಂದಿಗೆ ಮಾತನ್ನಾಡಿರಲಿಲ್ಲ. ಕೋತಿಯ ಅವಸರ ಕಂಡು, ನದಿಯಲ್ಲಿ ಇನ್ನೇನು ಇಳಿಯಬೇಕು ಎಂದು ಕಾಯುತ್ತಿದ್ದ ಕೋತಿಗೆ-

" ಕೋತಿಯೇ ಆ ಬಾಳೆ ಹಣ್ಣು ನಿನಗೆ ಸಿಗಲಾರದು. ಅದು ನೀರಿನಲ್ಲಿ ಬಹಳಷ್ಟು ಆಳದಲ್ಲಿ ಹೋಗಿದೆ " ಎಂದು

" ನೀನು ತೆಗೆಯಲು ಪ್ರಯತ್ನಿಸ ಬೇಡ " ಎಂದಿತು.

ಆಗ ಕೋತಿಯೂ " ಅಯ್ಯೋ ಅದು ನನ್ನ ಇಷ್ಟವಾದ ಹಣ್ಣು. ಅದು ನನಗೆ ಬೇಕೇ ಬೇಕು." ಎಂದು ಅಳತೊಡಗಿತು.

ಆಗ ಕಪ್ಪೆಯು " ನಿನಗೆ ಈಜು ಬರುವುದಿಲ್ಲ, ನಾನು ಹೋಗಿ ತೆಗೆದುಕೊಂಡು ಬರುತ್ತೇನೆ  ನೀನು ಅಳಬೇಡ " ಎಂದು ನದಿಗೆ ಇಳಿಯಲು ಸಿದ್ಧವಾಯಿತು. ತಕ್ಷಣವೇ ಕೋತಿಯು

" ನಿಲ್ಲು ನೀನು ಸುಳ್ಳು ಹೇಳುತ್ತಿರುವೆ. ನನ್ನ ಬಾಳೆ ಹಣ್ಣನ್ನು ನೀನು ತಿನ್ನಲು ಹೊಂಚು ಹಾಕಿರುವೆಯಾ ? ನಾನೇ ನೀರಿಗೆ ಜಿಗಿಯುತ್ತೇನೆ. " ಎಂದು ಕೋತಿ  ಹೇಳಿತು.  ಆಗ ಕಪ್ಪೆಯು

" ನೀನು ಈಜು ಬಾರದೇ,  ನೀರಿನಲ್ಲಿ ಮುಳುಗಿ ನಿನ್ನ ಪ್ರಾಣವನ್ನು ಕಳೆದುಕೊಳ್ಳುತ್ತೀಯಾ. ನಾನು ಖಂಡಿತವಾಗಿಯು ನೀನ್ನ

ಹಣ್ಣನ್ನು ತಿನ್ನುವುದಿಲ್ಲ. ನಿನಗೆ ತಂದುಕೊಡುವೆ.

ನಿಲ್ಲು..... ನೀರಿಗೆ ಜಿಗಿಯ ಬೇಡ." ಎಂದು ಕಪ್ಪೆ ಪರಿ ಪರಿಯಾಗಿ ಕೇಳಿಕೊಂಡಿತು.

ಆದರೂ ಕೋತಿಯು ಕಪ್ಪೆಯ ಮಾತನ್ನು ಕೇಳದೇ ನೀರಿಗೆ ಜಿಗಿಯಿತು. ಈಜು ಬಾರದೇ ಹಣ್ಣಿನ ಆಸೆಯಲ್ಲಿ ತನ್ನ ಪ್ರಾಣವನ್ನು ಕಳೆದುಕೊಂಡಿತು. ಕಪ್ಪೆಗೆ ಕೋತಿಯನ್ನು ರಕ್ಷಿಸಲು ಸಾಧ್ಯವಾಗದೆ ನೀರನ್ನೆ ನೋಡುತ್ತಾ ಕುಳಿತು ಬಿಟ್ಟಿತು.

ಮಂಜುಳಾ ಬಸವರಾಜ ಬಾದವಾಡಗಿ
೮ ನೇತರಗತಿ
ಸ.ಪ್ರೌ.ಶಾ, ಜಹಗೀರಗುಡದೂರ.