ಮಂಗಳವಾರ, ಮೇ 21, 2024

Theater Song

ಗುರುವಾರ, ಮೇ 16, 2024

Hejjegalu May 2024 Edition



 

ನಮ್ಮ ಶಾಲೆಯ ಅತಿ ಹೆಚ್ಚು ಅಂಕ ಪಡೆದ ಮಕ್ಕಳು

Gangamma

ನಾನು ಕುಮಾರಿ ಗಂಗಮ್ಮ ಸಿದ್ದರಾಮಯ್ಯ ಲಿಂಗಸೂಗೂರು ಮಠ ನಾನು ಎಂಟನೇ ತರಗತಿ 2021 22 ರಲ್ಲಿ ಈ ಶಾಲೆಯಲ್ಲಿ ಪ್ರಾರಂಭಿಸಿದರು ನಾನು ಎಂಟನೇ ತರಗತಿಗೆ ಶಾಲೆಗೆ ಹೋಗುವಾಗ ಕರೋನ ಸಾಂಕ್ರಾಮಿಕ ರೋಗ ಹಬ್ಬಿಕೊಂಡಿದ್ದರಿಂದ ಈ ಶಾಲೆಗೆ ತಡವಾಗಿ ಬಂದೆವು 5 ತಿಂಗಳಗಳ ನಂತರ ಶಾಲೆಗೆ ಹೋದರು ತುಂಬಾ ವಿಷಯಗಳ ಬಗ್ಗೆ ತಿಳಿದುಕೊಂಡೆವು ಎಲ್ಲಾ ಶಿಕ್ಷಕರು ತಮ್ಮ ಮಕ್ಕಳ ತರಹ ಪ್ರೀತಿಯಿಂದ ಸ್ವಾಗತಿಸಿದರು ನಮ್ಮ ಬ್ಯಾಚ್ನಲ್ಲಿ ಶಾಲೆಗೆ ಮೊದಲು ಸ್ವಾಗತಿಸಿದ್ದು ನಮ್ಮ ಊರಿನ ತರಗತಿಯವರನ್ನು ಅಂದರೆ ವೆಂಕಟಪುರದವರನ್ನು ಪುಷ್ಪ ನೀಡುವುದರ ಮೂಲಕ ಸ್ವಾಗತಿಸಿದರು ಈ ನಮ್ಮ ಶಾಲೆಯಲ್ಲಿ ವಿಶೇಷ ಏನೆಂದರೆ, ಮೊದಲು 8ನೇ ತರಗತಿಯವರನ್ನು ತುಂಬಾ ಹೊಗಳುತ್ತಾರೆ ಇದು ಪ್ರತಿ ಬ್ಯಾಚಿಗೆ ಅನ್ವಯಿಸುತ್ತದೆ ಆದರೆ 9ನೇ ತರಗತಿಗೆ ಬಂದಾಗ ಹೊಗಳುಸುಕುತ ಬರೋರು ಉಗುಳುಸ್ಕೋತ ಬರ್ತಾರೆ 10ನೇ ತರಗತಿಕ್ಕೆ ತರಗತಿಗೆ ಇನ್ನೂ ಬೈಸ್ಕೊತಾರೆ ಅಷ್ಟೇ ಶಿಕ್ಷಕರಿಂದ ಪ್ರೀತಿ ಕೂಡ ಸಿಗುತ್ತೆ, ಬೇರೆ ಶಾಲೆಯಲ್ಲಿ ಹೇಗೋ ಗೊತ್ತಿಲ್ಲ ಆದರೆ ಈ ಶಾಲೆಯಲ್ಲಿ ಒಂದು ಕುಟುಂಬದ ತರಹ ಎಂಟನೇ ತರಗತಿಗೆ ಹೇಗೋ ತುಂಬಾ ಖುಷಿಯಾಗಿ ಕಳೆದೆ ಆದರೆ 9ಕ್ಕೆ ಬಂದಮೇಲೆ ನಾನು ಯಾರ ಜೊತೆ ಜಾಸ್ತಿ ಓಡಾಡ್ತಿದ್ನೋ ಅವರನ್ನು ಬಿಟ್ಟು ಎಲ್ಲರ ಜೊತೆ ಬೇರೆಯೋದಕ್ಕೆ ಶುರು ಮಾಡಿದ ಆದರೆ ಅದು ಅವರಿಗೆ ಇಷ್ಟ ಆಗ್ಲಿಲ್ಲ ಇಷ್ಟ ಅವರ ಜೊತೇನೆ ಓಡಾಡಬೇಕು ಎನ್ನುವುದು ಅವರ ಆಸೆ ನನಗೆ ಎಲ್ಲರ ಜೊತೆ ಕೂಡಿ ಇರಬೇಕು ಅನ್ನೋದು ನನ್ನ ಆಸೆ ಆ ಕೆಲವರಿಗೆ ನಾನು ಬೇಡವಾದೆ ನನ್ನ ಶಿಕ್ಷಕರಿಗೆ ನನ್ನ ಹೆಸರು 9ನೇ ತರಗತಿಗೆ ಹೋದಾಗ ತಿಳಿತು ಅಂದ್ರೆ ಆ ಸಮಯದಲ್ಲಿ ಅವರಿಗೆ ನಾನು ಹೆಚ್ಚು ಪರಿಚಯವಾದೆ ನಾನು ಮೊದಲು ನಿರೂಪಣೆ ಮಾಡಿದ್ದು ಕೂಡ ಇದೇ ಶಾಲೆಯಲ್ಲಿ ಪ್ರಯೋಗ ಕೂಡ ಮೊದಲು ಶುರು ಮಾಡಿದ್ದು ರಂಗಭೂಮಿ ಎಂದರೆ ರಂಗ ತಲೆಯಲ್ಲಿ ಭಾಗವಹಿಸಿದ್ದು ಕೂಡ ಇದೇ ಶಾಲೆಯಲ್ಲಿ ಒಂಬತ್ತನೇ ತರಗತಿಯಲ್ಲಿ ಒಂದು ನಾಟಕ ಶುರು ಮಾಡಿದರು ನಮ್ಮ ಸರ್ ನಾಟಕಕ್ಕೆ ಆಯ್ಕೆ ಮಾಡುವಾಗ ಮೊದಲು ನನ್ನನ್ನೇ ಆಯ್ಕೆ ಮಾಡಿದ್ರು ಏಕೆ ಅಂತ ಗೊತ್ತಾಗ್ಲಿಲ್ಲ ನಾನು ತುಂಬಾ ಖುಷಿ ಪಟ್ಟೆ ರಂಗಮಂದಿರದಲ್ಲಿ ನಾವು ಭಾಗವಹಿಸುತ್ತಿದ್ದೀನಿ ಅಂತ ನಾನು ಪ್ರತಿಯೊಂದು ಮನೆಯಲ್ಲಿ ಹೇಳ್ತಿದ್ದೆ ಇದನ್ನು ಇದನ್ನು ಹೇಳಿದೆ ಆದರೆ ಮನೆಯಲ್ಲಿ ಬೇಡ ಅಂತ ಹೇಳಿದರು ನಮ್ಮ ಮನೆಯವರು ತಲೆಯಲ್ಲಿ ಒಂದೇ ನೀನು ಚೆನ್ನಾಗಿ ಓದಬೇಕು ಆಟ ನಾಟಕ ಹೀಗೆ ಅನ್ಕೊಂಡು ಗಮನ ಕೊಡಲ್ಲ ಬೇಡ ಅಂತ ಹೇಳಿದರು ಅವತ್ತು ನಾನು ತುಂಬಾ ಅತ್ತೆ ಮರುದಿನ ನಮ್ಮ ಗುರುರಾಜ ಸರ್ ಗೆ ಹೇಳೋಕೆ ಮುಜುಗರ ಅನ್ನಿಸ್ತು. ಏಕೆಂದರೆ ಮೊದಲು ಹೂ ಅಂತ ಹೇಳಿ ಆಮೇಲೆ ನನಗೆ ಅಗಲ ಸರ್ ಅಂದ್ರೆ ಅವರಿಗೆ ಎಷ್ಟು ಬೇಜಾರಾಗುತ್ತೆ ಅಂತ ಹೇಳಿಲ್ಲ ಹೋಗಿ ನಾಟಕ ಮುಗಿಸಿಕೊಂಡು ಬಂದ್ವಿ. ಡೈರೆಕ್ಟ್ ಡಿಸ್ಟ್ರಿಕ್ಟ್ ಲೆವೆಲ್ಲಿಗೆ ಸೆಲೆಕ್ಟ್ ಆಯಿತು ಇಲ್ಲಿ ವಿಶೇಷ ಏನೆಂದರೆ ಸರ್ ನನ್ನ ಅರ್ಥ ಮಾಡಿಕೊಂಡಿದ್ದು ನಾನು 9ರಲ್ಲಿ ತುಂಬಾ ಚೆನ್ನಾಗಿ ವಿಜ್ಞಾನ ಚಿತ್ರಗಳನ್ನು ಬಿಡಿಸುತ್ತಿದ್ದೆ ಅದಕ್ಕೆ ಎಲ್ಲರೂ ಹೇಗೆ ಅಂತ ಕೇಳ್ತಿದ್ರು ಅದೇ ರೀತಿ ಕೆಲವರಿಗೆ ತುಂಬಾ ಹೊಟ್ಟೆಕಿಚ್ಚು ಕೂಡ ಇತ್ತು ನನ್ ಫ್ರೆಂಡ್ಸ್ ಜಗಳ ಆಡಿದರೂ ದೂರಾದ್ರು ಅಂದ್ರೆ ಅವರನ್ನ ನಾನೇ ಒಂದ್ ಮಾಡ್ತಿದ್ದೆ ನನಗೆ ಶಾಲೆಯಲ್ಲಿ ಅಮೂಲ್ ಬೇಬಿ ರೌಡಿ ಬೇಬಿ ಅಂತ ಕರೀತಿದ್ರು ಯಾಕಂದ್ರೆ ಅನು ಅನ್ನೋರು ಮತ್ತೆ ಕೆಲವರು ಸೇರಿ ಇಟ್ಟಿದ್ದು ಯಾಕೆ ಅಂತ ನನಗೂ ಗೊತ್ತಿಲ್ಲ ಕೇಳೋದಕ್ಕೆ ಹೋದರೆ ಏನು ಹೇಳುತ್ತಿರಲಿಲ್ಲ ನನ್ನ ಕ್ಲಾಸ್ಮೇಟ್ ಪ್ರವೀಣ ಮಲಗಿತ್ತಿ ಅನ್ನೋನು ರೌಡಿ ಬೇಬಿ ಅಂತ ಇಟ್ಟಿದ್ದ ಯಾಕೆ ಅಂತ ಹೇಳಿಲ್ಲ ಅತ್ತಿದಿವಿ ಹಾಗೆ ಖುಷಿನೂ ಕೊಟ್ಟಿದ್ದೀವಿ ಆದರೆ ಶಾಲೆಯಲ್ಲಿ ಕೊರತೆನೆಂದರೆ ಸೈನ್ಸ್ ಈ ವಿಷಯ ಎಲ್ಲರೂ ತುಂಬಾ ದ್ವೇಷಿಸುತ್ತಿದ್ದರು ನಮಗೆ ಎಂಟು ಒಂಬತ್ತು ಹಾಗೂ ಹತ್ತಕ್ಕೆ ಮ್ಯಾಚ್ ಮತ್ತು ಸೈನ್ಸ್ ಬೇರೆ ಬೇರೆ ಟೀಚರ್ಸ್ ಪಾಠ ಮಾಡಿದ್ದರಿಂದ ಹೀಗೆ ಆಯಿತು ಗೊತ್ತಿಲ್ಲ ಆದರೆ ಕೆಲವೊಂದು ನನಗೆ ಅರ್ಥನೇ ಆಗ್ಲಿಲ್ಲ ಅವರು ಟೀಚರ್ ಹೇಳಿದರು ಗೊಂದಲ ಆಗುತ್ತಿತ್ತು ಪ್ರತಿದಿನ ಎರಡರಿಂದ ಮೂರು ಪಿರೇಡ್ ಮಾತ್ರ ನಡೆಯುತ್ತಿದ್ದವು. ನಾವು ಜಾಸ್ತಿ ಶಾಲೆಯಲ್ಲಿ ಆಟ ಆಡ್ತಿದ್ವಿ ನಾನು ಎಂಟು ಮತ್ತು ಒಂಬತ್ತುರಲ್ಲಿ ನಮ್ಮ ಊರಿನವರ ಜೊತೆಗೆ ಇರ್ತಾನೆ ಇರ್ಲಿಲ್ಲ ಹತ್ತಕ್ಕೆ ಅವರ ಜೊತೆ ಬೆರೆತುಕೊಂಡೆ ಶಾಲೆಗೆ ಹೋಗುವಾಗ ನಿಧಾನವಾಗಿ ಹೋಗುತ್ತಿದ್ದೇವೆ ಆದರೆ ಆ ಎರಡು ಕಿಲೋಮೀಟರ್ ನಡೆಯುವಾಗ ತುಂಬಾ ಮಾತಾಡ್ತಾ ಇದ್ವಿ. ಒಂದೊಂದು ಸಾರಿ ಬಸ್ ಸ್ವಲ್ಪ ದೂರ ಇರುವಾಗಲೇ ಬಸ್ ಬಂದಿದೆ ಅಂದ ತಕ್ಷಣಕ್ಕೆ ಓಡೋದಿಕ್ಕೆ ಶುರು ಮಾಡ್ತಿದ್ದೆ ಅನಂತರ ಹತ್ತಕ್ಕೆ ಬಂದೆ ಹತ್ತನೇ ತರಗತಿಯ ಬ್ಯಾಚ್ ಅನ್ನೋದು

 ಒಂದು ಸಿಹಿಯಾದ ನೆನಪಿನ ತರ ಈ 2023ರಲ್ಲಿ ಭಯ ಜೊತೆ ಖುಷಿನೂ ತುಂಬಿಕೊಂಡು ಹೊಸ ವರ್ಷ ಆರಂಭಿಸಿದೆ 10ನೇ ತರಗತಿ ಅನ್ನೋ ಭಯ ಕಾಣುತ್ತಿತ್ತು ಅರ್ಧ ವಾರ್ಷಿಕ ಪರೀಕ್ಷೆ ಹೇಗೆ ಕಲಿತು ಗೊತ್ತಾಗ್ಲೇ ಇಲ್ಲ ಹೋಂ ವರ್ಕ್ ಚಟುವಟಿಕೆಗಳು ಹೀಗೆ ಬರೆಯೋದು ಶುದ್ಧ ಬರಹ ಅಂಕಕ್ಕೆ ಆಸೆಪಟ್ಟು ಜಾಸ್ತಿ ಬರೆಯುತ್ತಾ ಇತ್ತು ಅರ್ಧ ವಾರ್ಷಿಕ ಪರೀಕ್ಷೆ ಮಾಡಲು ಎರಡು ವಿಷಯ ತುಂಬಾ ಸರಳವಾಗಿ ನಡೆದು ಮೂರನೇ ಪರೀಕ್ಷೆ ವಿಜ್ಞಾನ ದಿನದಂದು ತುಂಬಾ ಟೈಟ್ ಮಾಡಿದ್ರು ನಾನು ಓದ್ಕೊಂಡು ಹೋಗಿದ್ದಿಲ್ಲ ಆದ್ರೂ ಹೇಗೋ ಪರದೆ ಚಿತ್ರನು ಬಿಡಿಸಿದೆ ರಜೆ ನಂತರ ಫಲಿತಾಂಶ ಹೇಳುವಾಗ ನಾನು ಆ ದಿನನೇ ಕಸ ಗುಡಿಸ್ತಾ ಇದ್ದೆ ಕ್ಲಾಸ್ ರೂಮಿಂದ ಟೀಚರ್ಸ್ ಮೈಕಲ್ಲಿ ಕೂಡ ಹೇಳಿದರು ಆಶ್ಚರ್ಯ ಜೊತೆ ಅಸೂಹೆನೋ ಪಟ್ಟಲು ನನಗೆ ಖುಷಿಯಾಗಿಲ್ಲ ಏಕೆಂದರೆ ನಾನು ಜಸ್ಟ್ ಪಾಸ್ ಆಗಿದ್ದೆ ಅದಕ್ಕೆ ನನ್ನ ಫ್ರೆಂಡ್ಸ್ ಎಲ್ಲರೂ ಗಂಗಮ್ಮ ಪಾಸ್ ಆಗಿಲ್ಲ ಮೇಡಂ ಅವ್ರೆ ಪಾಸ್ ಮಾಡ್ಯಾರ ಅಂದಾಗ ಏನೋ ಬೇಜಾರು ಕಾಣಿಸಿ ತೋರಿಸುತ್ತಾರೆ ನಾವೆಲ್ಲ ಲೆಕ್ಕಕ್ಕೆ ಇಲ್ಲ ಅವರಿಗೆ ಅಂತ ಎಲ್ಲಾ ಹೇಳುತ್ತಿದ್ದರು ಅದಕ್ಕೆಲ್ಲ ನಾನು ಕಿವಿ ಕೊಡದೆ ಖುಷಿಯಾಗಿ ಇದ್ದೆ 9ನೇ ತರಗತಿಯಲ್ಲಿ ಇದ್ದಾಗ ಪ್ರವಾಸಕ್ಕೆ ಹೋಗಿದ್ವಿ ಮಿರ್ಜನ್ ಕೋಟೆ  ಬಗ್ಗೆ ನಮಗೆ ಪಾರ್ಟಿ ಇತ್ತು ಅದನ್ನು ನಾವು ಯಾರು ಗಮನಿಸಿರಲಿಲ್ಲ ಹೇಳೋದಕ್ಕೆ ಬರಲ್ವಾ ಅಂತ ನಮ್ಮ ಗುರುರಾಜ್ ಸರ್ ಬೈದಿದ್ರು ಹತ್ತನೇ ತರಗತಿಕ್ಕೆ ಬಂದ ಬಂದರೂ ಕೂಡ ಪ್ರವಾಸದ ದಿನಗಳ ಬಗ್ಗೆ ಮಾತಾಡ್ತಾ ಇದ್ವಿ ಶಿಕ್ಷಕರು ಎಲ್ಲಾ ನಿಮ್ಮ ಪರೀಕ್ಷೆ ತುಂಬಾ ಸ್ಟ್ರಿಕ್ಟ್ ಆಗಿ ನಡೆಯುತ್ತದೆ ಯಾಕೆಂದರೆ ನಮ್ಮ ಸೀನಿಯರ್ಸ್ ಮೊದಲು ಹಾಗೆ ಹೇಳುತ್ತಾರೆ ಆದರೆ ಪರೀಕ್ಷೆ ಲೂಸ್ ನಡೆಯುತ್ತವೆ ಅಂತ ಹೇಳುತ್ತಿದ್ದರು ನಾವು ಅದನ್ನೇ ನಂಬಿದೀವಿ ಹಾಗೆ ದಿನಗಳು ಕಳೆದವು ಸರಣಿ ಪರೀಕ್ಷೆ ಒಂದು ಬಂತು ಈ ಪರೀಕ್ಷೆಯಲ್ಲಿ ನಾನು ಸಿನ್ಸಿಯರ್ ಆಗಿ ಬರಿದೆ ಕೆಲವರು ಕಾಪಿ ಮಾಡಿದ್ರು ಕೆಲವರು ಇಚ್ಛೆಯಿಂದ ಕಾಪಿ ಮಾಡಿ ಬರೆದು ಸರಣಿ ಒಂದರಲ್ಲಿ ನಾನು ಫಸ್ಟ್ ಬಂದೆ ಕನ್ನಡ 86 ಇಂಗ್ಲಿಷ್ 52 ಸರಣಿ ಗಣಿತ 508 ಹಿಂದಿ 79 ವಿಜ್ಞಾನ 35 ಸಮಾಜ 61 ತೆಗೆದುಕೊಂಡಿದ್ದೆ

ಹಿಂದಿ ವಿಜ್ಞಾನ ಮತ್ತು ಸಮಾಜ ಮೊದಲ ಬಹುಮಾನ ಹಾಗೂ ಎಲ್ಲ ವಿಷಯ ಅಂದ್ರೆ ಟೋಟಲ್ ಫಸ್ಟ್ ಬಂದು ಜಾಮೆಟ್ರಿ ಬಾಕ್ಸ್ ಪಡಕೊಂಡಿದ್ದೆ ವಿಶೇಷತೆ ಏನಂದ್ರೆ ನಾನು ಜಾಸ್ತಿ ಓದಿದ್ದೇ ಇಲ್ಲ ಆದ್ರೂ ಫಸ್ಟ್ ಬಂದಿನಾ ಅಂತ ನನಗೆ ಅನುಮಾನ ಇತ್ತು ನನ್ನ ಫ್ರೆಂಡ್ಸ್ ಓದಿದ್ದನ್ನು ನೋಡಿದರೆ ಅವರೇ ಫಸ್ಟ್ ಬರ್ತಾರೆ ಅನ್ಕೊಂಡಿದ್ದೆ ನಮ್ಮ ಶಾಲೆಗೆ ಈ ಮೊದಲು ನ್ಯಾಯಾಧೀಶರು ಬಂದಿದ್ದರು ಅಂತ ಸೀರೆ ಹುಟ್ಟಿಕೊಳ್ಳುವುದಕ್ಕೆ ಸರ್ ನನ್ನ ಕೂಡ ಆಯ್ಕೆ ಮಾಡಿದ್ರು ಒತ್ಕೊಂಡಿದ್ದೆ ಕೂಡ ಎಲ್ಲರೂ ಚೆನ್ನಾಗಿ ಕಾಣಿಸ್ತಿದಿಯ ನಂತರ ಸರಣಿ ಎರಡು ಪರೀಕ್ಷೆಯಲ್ಲಿ ಕೂಡ ಚೆನ್ನಾಗಿ ಬರೆಲು ಫಸ್ಟ್ ಬಂದೆ ಎಲ್ಲರೂ ಆಶ್ಚರ್ಯ ಪಡುತ್ತಿದ್ದರು ಯಾಕೆಂದರೆ ಸರಣಿ ಒಂದರಲ್ಲಿ ಫಸ್ಟ್ ಬಂದು ಸರಣಿ ಎರಡರಲ್ಲಿನ ಅಂತ ಸರಣಿ ಎರಡರಲ್ಲಿ ನಾನು ಕನ್ನಡಕ್ಕೆ 93 ಇಂಗ್ಲಿಷ್ ಅರವತ್ತೊಂದು ಗಣಿತ 72 ಹಿಂದಿ 76 ವಿಜ್ಞಾನ 32 ಸಮಾಜ 72 ತೆಗೆದುಕೊಂಡಿದ್ದೆ ನಾನು ಕನ್ನಡ ಇಂಗ್ಲಿಷ್ ಸಮಾಜ ಮತ್ತು ಗಣಿತದಲ್ಲಿ ಫಸ್ಟ್ ಬಂದಿದೆ ಆದರೆ ಬಹುಮಾನ ಕೊಡಲೇ ಇಲ್ಲ ಈ ಪರೀಕ್ಷೆಗೆ ಕೂಡ ಓದಿರಲಿಲ್ಲ ಆದರೆ ಅಂದ್ರೆ ಓದಿದ್ದೆ ಆದರೆ ಫಸ್ಟು ಬರಲೇಬೇಕು ಅಂತ ಅಂದ್ರೆ ಓದಿದ್ದೆ ನಾನು ಮೂರು ಪರೀಕ್ಷೆಯಲ್ಲಿ ಬೆಳಿಗ್ಗೆ ಮಾತ್ರ ಓದಿದ್ದೆ ಅದು ಶಾಲೆಗೆ ಬಂದ ನಂತರ ಪ್ರಿಪರೇಟರಿ ಪರೀಕ್ಷೆಯಲ್ಲಿ ಕೂಡ ಫಸ್ಟ್ ಬಂದೆ ಇದರಲ್ಲಿ ಕನ್ನಡ 88 ಇಂಗ್ಲಿಷ್ 50 65 ಹಿಂದಿ 77 ಸಮಾಜ 68 ವಿಜ್ಞಾನ 62 ಗಣಿತ 65 ತೆಗೆದುಕೊಂಡಿದ್ದೆ ಇದ್ರಲ್ಲಿ ಇಂಗ್ಲಿಷ್ ವಿಜ್ಞಾನ ಮತ್ತು ಹಿಂದಿ ವಿಷಯಗಳಲ್ಲಿ ಫಸ್ಟ್ ಒಂದು ನನಗೆ ಒಂದೊಂದು ಸಾರಿ ಆಶ್ಚರ್ಯ ಆಗ್ತಿತ್ತು ತುಂಬಾ ಓದ್ಕೊಂಡು ಅವರಿಗಿಂತ ಕಡಿಮೆ ಒತ್ತಿಕೊಂಡು ಫಸ್ಟ್ ಹೇಗೆ ಬಂದೆ ಅಂತ ಆಗ ಒಂದು ವಿಷಯ ಸ್ಪಷ್ಟವಾಗಿ ತಿಳಿತು ಅದು ಏನೆಂದರೆ ಪುಸ್ತಕ ಹಿಡಿದು ಎಲ್ಲರೂ ಉತ್ತರ ಆದರೆ ಎಷ್ಟು ಜನ ಇಟ್ಕೋತಾರೆ ಅನ್ನೋದು ಮುಖ್ಯ ಅಂತ ಅರ್ಥ ನಮ್ಮ ಶಾಲೆಯಲ್ಲಿ ತುಂಬಾ ವಿಷಯಗಳ ಬಗ್ಗೆ ತಿಳಿಕೊಂಡೆ ಎಷ್ಟೋ ಹೊಸ ವಿಚಾರಗಳನ್ನು ಮಾರಿದೆ ಇಲ್ಲಿ ನನಗೆ ಮತ್ತೆ ಶಾಲೆಗೆ ಕೊರತೆ ಅನಿಸಿದ್ದು ಶಿಕ್ಷಕರ ಒಗ್ಗಟ್ಟು ಬೇರೆ ಶಾಲೆ ಬೇರೆ ಜನ ಅಂತ ಬಂದ್ರೆ ಒಗ್ಗಟ್ಟಿನಿಂದ ಇರುತ್ತಾರೆ ಮಕ್ಕಳ ಮುಂದೇನು ಹಾಗೆ ಕೆಲಸ ಏನೇ ಇರಲಿ ಸಹಾಯ ಕೇಳಿದರೆ ಇಲ್ಲ ಅಂತ ಹೇಳಿಲ್ಲ ಟೀಚರ್ಸ್ ಡೇ ದಿನ ನಮಗೆ ಕೇಕ್ ತರಿಸಿದ್ದಕ್ಕೆ ಸಹಾಯ ಮಾಡುತ್ತಾರೆ ಇವನು ತನ್ನ ಕೆಲಸ ಅಂದ್ರೆ ಕೆಲಸ ಮಾಡಬೇಕು ನಂತರ ಬೇಕಾದರೆ ಬೇರೆ ಕೆಲಸ ಮಾಡಿ ಇಲ್ಲ ಅಂತ ಇಲ್ಲ ಸ್ಟೂಡೆಂಟ್ಸ್ ತನ್ನ ಕೆಲಸ ತಾನೇ ಮಾಡಲ್ಲ ಅಂತ ಎಲ್ಲ ಹಿಂದೆಸ್ತಾರೆ ನಾನು ಕೇಳಿದ್ದೇನೆ ಇದೊಂದೇ ಅವನ ತಪ್ಪು ಇನ್ನು ಕೊನೆಯದಾಗಿ ಗುರುರಾಜ್ ಸರ್ ಇವರು ನಟನೆ ಹೇಗೆ ಇರುತ್ತೆ ಅಂತ ಹೇಳಿಕೊಟ್ಟವರು ಯಾಕಂದ್ರೆ ನಟನೆ ತುಂಬಾ ಕಷ್ಟ ಅಂತ ಗೊತ್ತಾಗಿದೆ ಇವರಿಂದ ಎಷ್ಟೋ ಕಲಾವಿದರು ತಮ್ಮಲ್ಲಿ ಹೇಳಕ್ಕೆ ಆಗದೆ ಇರುತ್ತೆ ಅಷ್ಟು ಕಷ್ಟ ಇಟ್ಕೊಂಡು ಕಣ್ಣೀರು ಬರುತ್ತಿದ್ದರು ನಟನೆಯಲ್ಲಿ ನಗುವಿನಿಂದ ಇರುತ್ತಾರೆ ಇಂಥ ಕರೆ ಬಗ್ಗೆ ತಿಳಿಸಿಕೊಟ್ಟರು ನಾವು ಕನ್ನಡ ಓದುತ್ತೇವೆ ಆದರೆ ಓದೋದಕ್ಕೂ ಒಂದು ನಿಯಮ ಇದೆ ಹೀಗೆ ಓದಿದ್ರೆನೇ ಚಂದ ಅಂತ ತಾವು ಓದುತ್ತ ನಮಗೂ ಓದಿಸಿದ್ರು ನಮ್ಮ ಮನೆಯಲ್ಲಿ ಮೂರು ಜನ ಇವರ ಕೈಯಲ್ಲಿ ಕಲಿತಿದ್ದವರು ನನಗೆ ಅವರ ಬಗ್ಗೆ ತುಂಬಾ ಹೇಳ್ತಿದ್ರು ಆದ್ರೆ ನಾನು 9ಕ್ಕೆ ಬಂದಾಗ ಅವರು ಹೇಳಿದ ಮಾತು ನಿಜ ಅನ್ನಿಸ್ತು. ನಾನು ಕೆಲವು ಸಾರಿ ಇವರಲ್ಲಿ ಇರೋ ನಿಸ್ವಾರ್ಥದ ಪ್ರೀತಿ ಕಾಳಜಿ ನನಗೆ ತುಂಬಾ ಇಷ್ಟ ಆಯ್ತು ಯಾರ ಜೊತೆ ಹೇಗೆ ಇರಬೇಕು ಅಂತ ಇವರಿಂದ ನಾನು ಕಲಿತು ಇವರ ನನಗೆ ದೊಡ್ಡ ಇನ್ಸ್ಪಿರೇಷನ್ ಅನಿಸಿದ್ರು ಇವರು ಹತ್ತನೇ ತರಗತಿ ಫೇಲ್ ಆದರು ಅವರ ಧೈರ್ಯ ಆಟಿಟ್ಯೂಡ್ ತುಂಬಾ ಇಷ್ಟ ಆಯ್ತು ಇದೇ ರೀತಿ ತನುಜಾ ಮೇಡಮ್ ರಲ್ಲಿ ಕಂಡಿದ್ದೇನೆ ಕೊನೆಯದಾಗಿ ನನಗೆ ಬೇಜಾರಾಗಿತ್ತು ಏನೆಂದರೆ ನಾನು ಪ್ರಿಪರೇಟರಿ ಪರೀಕ್ಷೆಯಲ್ಲಿ ಕಾಫಿ ಮಾಡಿದೆ ಇದ್ರು ಮಾಡಿದೀನಿ ಅಂತ ಹೇಳಿದ ಬೇಜಾರಾಯ್ತು ಅಷ್ಟೇ ಅಲ್ದೆ ವಾರ್ಷಿಕ ಪರೀಕ್ಷೆಯಲ್ಲಿ ಕೂಡ ಹೀಗೆ ಆಯಿತು ನನ್ನ ಪಕ್ಕದಲ್ಲಿರುವ ಗಂಗಮ್ಮ ಕಾಫಿ ತಂದು ಬರೆದು ನಂತರ ನನಗೆ ಕೊಟ್ಟಳು ನಾನದು ಗೊತ್ತಿತ್ತು ಉತ್ತರ ಆದ್ರೂ ಎರಡು ಪಾಯಿಂಟ್ಗೋಸ್ಕರ ಇಸ್ಕೊಂಡು ಬರದೇ ವಾಪಸ್ ಕೊಡುವಾಗ ಸೂಪರ್ ನೋಡಿ ಬೈದ್ರು ಅಂದ್ರೆ ಆದರೆ ಕಾಫಿ ತಂದಿದ್ದು ಅವಳು ಆದರೂ ಅದರಲ್ಲಿ ಇರೋ ಆನ್ಸರ್ ಬರೆದಿದ್ದು ಅವಳೇ ಆದರೆ ತುಂಬಾ ಬೇಜಾರಾಯ್ತು ಇದೇ ನನ್ನ ಶಾಲೆಗೆ ನೆನಪುಗಳು


ಶುಕ್ರವಾರ, ಮೇ 10, 2024

ಎಸ್.ಎಸ್‌. ಎಲ್.ಸಿ ಪರೀಕ್ಷೆಯಲ್ಲಿ ನಮ್ಮ ಶಾಲೆಗೆ ಅತಿ ಹೆಚ್ಚು ಅಂಕ ಪಡೆದ ಕುಮಾರಿ ಗಂಗಮ್ಮ ಲಿಂಗಸೂರಮಠ.


ಗಂಗಮ್ಮ ಲಿಂಗಸೂರಮಠ ಈ ಬಾರಿ ಎಸ್.ಎಸ್‌. ಎಲ್.ಸಿ ಪರೀಕ್ಷೆಯಲ್ಲಿ ನಮ್ಮ ಶಾಲೆಗೆ ಅತಿ ಹೆಚ್ಚು ಅಂಕ ಪಡೆದಿದ್ದಾಳೆ. ನಮ್ಮ ಶಾಲೆ ಯ ಎಲ್ಲಾ ಶಿಕ್ಷಕ ವೃಂದ, ಎಸ್.ಡಿ.ಎಂ.ಸಿ ಯ ಅಧ್ಯಕ್ಷ ಹಾಗೂ ಸದಸ್ಯರು ಅಭಿನಂದನೆಗಳನ್ನು ತಿಳಿಸಿದ್ದಾರೆ. ನಮ್ಮ ಶಾಲೆಯ ಪತ್ರಿಕೆಯ ಬಳಗವು ಗಂಗಮ್ಮ ವಿದ್ಯಾರ್ಥಿನಿ ಗೆ ಮುಂದಿನ ಶೈಕ್ಷಣಿಕವಾಗಿ ಅತ್ಯುತ್ತಮವಾಗಿರಲಿ ಎಂದು ಹಾರೈಸುತ್ತದೆ.