ನಾಟಕ ದಾಂಪತ್ಯ ಗೀತ
ನಿನ್ನೆ ಹನಮಸಾಗರ ದಲ್ಲಿ ನಾಟಕ ನೋಡಿ ಅನಿಸಿದನ್ನು ಹಂಚಿಕೊಳ್ಳುತ್ತಿರುವೆ.
ಡಾ|| ನಿಂಗೂ ಸೊಲಗಿ ಅವರು ಬರೆದ
' ನನ್ನಿನ ನಗೀ ನೋಡಿ ' ಅತ್ಯಂತ ಮಹತ್ವದ ಪುಸ್ತಕ. ಅದನ್ನು ರಂಗಕ್ಕೆ ತಂದು ಪ್ರದರ್ಶನ ನೀಡುತ್ತಿರುವ ಶ್ರೀಕಾಂತ್ ಹಾಗೂ ಅಕ್ಕಮ್ಮ ದಂಪತಿಗಳು ಸೊಲಗಿ ಸರ್ ದಂಪತಿಗಳ ಬದುಕಿದ ರೀತಿಯಲ್ಲಿ ತಾವು ಬದುಕಿ ತೋರಿಸುವಾಗ ನಾನೂ ಭಾವುಕತೆಯಲ್ಲಿ ಮುಳುಗಿ ಹೋದೆ. ನೋಡುಗರನ್ನು ಹಿಡಿದಿಡುವ ಈ ನಾಟಕ ಪ್ರತಿಯೊಬ್ಬರು ಹೇಗೆ ಬದುಕಬೇಕು ಎಂದು ಅರ್ಥೈಸುತ್ತದೆ.
'ಹೂ ಅರಳೀದಂಗಾ ನಮ್ಮಿಬ್ಬರ ಬದುಕು ಅರಳಬೇಕು'
'ನಾವು ಎಷ್ಟು ದಿನ ಇರ್ತಿವಿ ಅನ್ನೋದು ಮುಖ್ಯ ಅಲ್ಲ. ನಾವು ಹ್ಯಾಂಗಾ ಬದುಕ್ತಿವಿ ಅನ್ನೋದು ಮುಖ್ಯ' ಅನ್ನೋದನ್ನ ಪ್ರೇಕ್ಷಕರನ್ನ ಎಚ್ಚರಿಸುವ ರೀತಿಯಲ್ಲಿ ನಾಟಕ ಕಟ್ಟಿ ಕೊಡುತ್ತದೆ.
ನಾಟಕದಲ್ಲಿ ಸಂಗಾತಿಗೆ ತಿಳಿಸುತ್ತಾ ನಮ್ಮ ಬದುಕಿಗೆ ವಿಮರ್ಶಕರ ರೀತಿಯಲ್ಲಿ ಹೊರಗೂ ಮತ್ತು ಒಳಗೂ ಇರುವವರು ಬಹಳಷ್ಟು ಜನ ಇರ್ತಾರೆ. ಅವರಿಗೆ ನಾವು ಉತ್ತರ ನೀಡಬೇಕಾಗಿಲ್ಲ ನಮ್ಮ ಕೆಲಸಗಳಿಂದ ಅರ್ಥೈಸಬೇಕು ಅಂತ ತಿಳಿ ಹೇಳ್ತಾ
ಲವ್ ಫ್ಯಾಕ್ಟರಿ
ಐಸ್ ಫ್ಯಾಕ್ಟರಿ
ಶುಗರ್ ಫ್ಯಾಕ್ಟರಿ
ಅನ್ನೋ ನಮ್ಮ ಮನದಲ್ಲಿ ಮೂರು ರೀತಿಯ ಫ್ಯಾಕ್ಟರಿ ಗಳನ್ನು ಕಟ್ಟಿಕೊಳ್ಳಬೇಕು ಎಂದು ತಿಳಿಸುತ್ತಾ ಮಕ್ಕಳಿಗೆ ಈ ಜಾತಿ ಧರ್ಮ ಬೇದ ಭಾವಗಳಲ್ಲಿ ನಾವು ಏನನ್ನು ಕಲಿಸಬೇಕು ಎಂದು ತಿಳಿಸುವ ಬಗೆಯನ್ನು ಅತ್ಯಂತ ಸುಂದರವಾಗಿ ದೃಶ್ಯ ರೂಪಕವಾಗಿ ಅಭಿನಯಿಸಿದ್ದಾರೆ.
ಮಳೆ ಬಗ್ಗೆ ಬರೆಯಬೇಕು ಎಂದು ತಿಳಿಸುತ್ತಾ ಜಾನಪದೀಯ ರೀತಿಯಲ್ಲಿ ಮಳೆಯನ್ನ ಕಟ್ಟಿ ಕೊಡೋದು, ಗುರ್ಜಿ ಬಗ್ಗೆ ಹೇಳುವ ಹಿರಿಯರು 'ಕೊಣಿಯೊಳಗಿನ ಮಗು ಕೊಳಿತು ಒಣಿಯೋಳಗಿನ ಮಗು ಬೇಳಿತು ಎನ್ನುವುದನ್ನು ಹೇಳುವಾಗ ನಟರಿಬ್ಬರ ಚರ್ಚೆ ಪ್ರತಿಯೊಂದು, ಪ್ರತಿಯೊಬ್ಬರ ಮನೆಯ ಚರ್ಚೆಯಾಗಬೇಕು ಎಂದೆನಿಸುತ್ತದೆ.
ಇಂದಿನ ಶಿಕ್ಷಣ ಬಗ್ಗೆ ತಮ್ಮ ಬೇಸರವನ್ನು ತಿಳಿಸುತ್ತಾ ಸ್ನೇಹ ಶಾಲೆಗಳು ಕಡಿಮೆಯಾಗಿವೆ. ಪುಸ್ತಕಗಳಿಂದ ಹೊರ ಬಂದು ಕಲಿಸುವ ರೀತಿಯನ್ನು ಪ್ರಯೋಗಿಕ ಶಿಕ್ಷಣದ ಬಗ್ಗೆ ಅನಿವಾರ್ಯತೆಯನ್ನು ನಟರಿಬ್ಬರೂ ರಂಗದ ಮೇಲೆ ಸಾತ್ವಿಕತೆಯಲ್ಲಿ ಪ್ರದರ್ಶಿಸಿದ್ದಾರೆ.
ಇಲ್ಲಿ ಬರೆಯುತ್ತಾ ಹೋದ್ರೇ ಬರೇ ಬರವಣಿಗೆ ಆಗೋಗುತ್ತೋ ಅನಿಸುತ್ತೇ ಆದರೆ ನಾವು ನಮ್ಮ ಜೀವನದಲ್ಲಿ ಅನುಸರಿಸಿದರೆ ಅದು ಸಾರ್ಥಕತೆ ಅನಿಸುತ್ತೆ.
ಇಲ್ಲ ಮತ್ತೇ ಮತ್ತೇ ಈ ನಾಟಕ ನೋಡಬೇಕೆನಿಸುತ್ತದೆ.
ಧನ್ಯವಾದಗಳು Ningu Solagi ಸೊಲಗಿ ಸರ್ ಇಂತಹ ಕೃತಿಯೊಂದನ್ನು ಹೊರ ತಂದಿರುವುದಕ್ಕೆ. ಅಭಿನಯಿಸುತ್ತಿರುವ ಗೆಳೆಯ Shrikant Pn Shrikant Pn ಶ್ರೀಕಾಂತ್ ಹಾಗೂ ಅಕ್ಕಮ್ಮ ಅವರಿಗೆ ಸಾಕಷ್ಟು ಯಶಸ್ವಿ ಪ್ರದರ್ಶನಗಳು ಸಿಗಲಿ ಎಂದು ಆಶಿಸುತ್ತೇನೆ.
ರಂಗ ರೂಪ ಹಾಗೂ ನಿರ್ದೇಶನ
ಮಹಾಂತೇಶ ರಾಮದುರ್ಗ
ಸಂಗೀತ : ರಾಘವ ಕಮ್ಮಾರ
ಪ್ರದರ್ಶನ ನೀಡುತ್ತಿರುವ ನಿಮಗೆ ಒಳಿತಾಗಲಿ.
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ
Thank you.
.................
Gururaj.L
Drama Teacher