ಶುಕ್ರವಾರ, ಫೆಬ್ರವರಿ 21, 2025
ಭಾನುವಾರ, ಫೆಬ್ರವರಿ 9, 2025
ಶುಕ್ರವಾರ, ಫೆಬ್ರವರಿ 7, 2025
ಗುರುವಾರ, ಫೆಬ್ರವರಿ 6, 2025
ನಾಟಕ ತರಗತಿಗೆ ವೀಕ್ಷಕರ ಆಗಮನ
ಇಂದು ನಮ್ಮ ತರಗತಿಯ ವೀಕ್ಷಣೆಗೆ ತಾಲೂಕಿನ ಇ.ಸಿ.ಓ ಆದ ಶ್ರೀ ವೈಶಂಪಾಯನ ಸರ್ ಅವರು ಆಗಮಿಸಿ ಮಕ್ಕಳೊಂದಿಗೆ ಹಲವಾರು ವಿಷಯಗಳನ್ನು ಹಂಚಿಕೊಂಡರು.
ಬುಧವಾರ, ಫೆಬ್ರವರಿ 5, 2025
ಮಂಗಳವಾರ, ಜನವರಿ 28, 2025
ಸೋಮವಾರ, ಜನವರಿ 27, 2025
ಗುರುವಾರ, ಜನವರಿ 23, 2025
ಭಾನುವಾರ, ಜನವರಿ 19, 2025
ಶನಿವಾರ, ಜನವರಿ 11, 2025
ಮಂಗಳವಾರ, ಜನವರಿ 7, 2025
ತರಗತಿ ಕೋಣೆ
ಹೊಸ ವರ್ಷದ ದಿನದಂದು ಮಕ್ಕಳನ್ನು ರಂಗ ಶಿಕ್ಷಣದಡೆ ಹೇಗೆ ನಡೆಯವುದು ಎಂದು ಆಲೋಚಿಸುತ್ತ ತರಗತಿ ಕೋಣೆಯೊಳಗೆ ಹೋದ ನನಗೆ, ಮಕ್ಕಳನ್ನು ನಾಟಕ ಮಾಡೋಣ್ವ ಎಂದರೇ ಕೆಲವೇ ಮಕ್ಕಳಿಂದ 'ಹೂಂ' ಎನ್ನುವ ಉದ್ಗಾರ ದೊರಕಿತು. ಆದರೆ ಇನ್ನೂಳಿದ ಮಕ್ಕಳಿಂದ ಯಾವುದೇ ರೀತಿಯ ಉತ್ತರವು ಸಿಗದೆ ಮಕ್ಕಳು ತಮಗೆ ತಾವೇ ಮಾತಲ್ಲಿ ಮುಳುಗಿ ಹೋಗಿದ್ದರು. ನನಗೆ ನಾನು ಸಾಕಷ್ಟು ಬಾರಿ ಗೊಂದಲಕ್ಕೆ ಒಳಗಾಗುತ್ತಲೇ ಇರುತ್ತೆ ಅದರ ಪ್ರದೇಶದ ಮಕ್ಕಳನ್ನು ನನ್ನಡೆಗೆ ಹೇಗೆ ತಿಳಿದುಕೊಳ್ಳುವುದು ಎಲ್ಲಾ ಶಾಲೆಗಳಲ್ಲಿ ಇರದ ರಂಗ ಕ್ಷಣ ನಮಗೆ ಯಾಕೆ ಬೇಕು ಇನ್ನು ವಿಚಾರಗಳೇ ಮಕ್ಕಳಲ್ಲಿ ತುಂಬಿರುವಾಗ ಹೀಗೆ ನಾನಾ ರೀತಿಯ ವಿಚಾರಗಳು ನನ್ನೊಳಗೆ ಹರಿದಾಡಿದವು.
ಹೊಸ ವರ್ಷದ ಕುರಿತು ಮಾತನಾಡುತ್ತಾ ಒಂದು ಅದು ನಾಲ್ಕು ಮಕ್ಕಳಿಗೆ ಮಕ್ಕಳೊಂದಿಗೆ ಪ್ರಾರಂಭಿಸಿ ಸಹಕಾರಿ ಶಾಲೆ ಮಕ್ಕಳಿಗೂ ಖಾಸಗಿ ಶಾಲೆ ಮಕ್ಕಳು ಇರುವ ವ್ಯತ್ಯಾಸ ಮಕ್ಕಳ ಕಲಿಕೆ ಮಾಸಪ್ಪ ಒತ್ತಡ ಹೀಗೆ ಅನಾವ ವಿಚಾರಗಳನ್ನು ಕುರಿತು ಮಾತನಾಡುತ ಸರ್ಕಾರಿ ಶಾಲೆಯ ಮಕ್ಕಳು ತಿರುಗುವ ದಾರಿ ಮಾಡುವ ಆಟ ತಿನ್ನುವ ತಿಂಡಿ ಹಣ್ಣು ಊಟವನ್ನು ಖಾಸಗಿ ಶಾಲೆಯ ಮಕ್ಕಳು ತಿನ್ನುವ ಆಡುವ ತಿರುಗುವ ಅವಕಾಶವನ್ನು ಕಳೆದು ಕೊಂಡಿದ್ದಂತು ಖಂಡಿತವೆಂದು ಹೇಳುತ್ತಾ ನೀವು ನಿಮಗೆ ಇರುವ ಅವಕಾಶವನ್ನು ಬಳಸಿಕೊಂಡು ಬೆಳೆಯುವ ರೀತಿಯೇ ಕಂಡುಕೊಳ್ಳಬೇಕೆಂದು ಅರ್ಥೈಸುವ ಪ್ರಯತ್ನ ಪಟ್ಟಿ ಒಂದು ಕೆಜಿ ಹಾರ ಕೊಟ್ಟಳು ಎಂದು ಮೂವತ್ತು ರೂಪಾಯಿಗಳು ಇದ್ದರೆ ಐದು ಕೆಜಿ ಕಾರ ಸುತ್ತಲು ಎಷ್ಟು ರೂಪಾಯಿಗಳಾಯಿತು 150 ರೂಪಾಯಿ ಆದರೆ ಇಂದು ಇರುವ ಈ ಬೆಲೆ 30 ವರ್ಷಗಳ ಹಿಂದಿಗೆ ನನ್ನ ತಾಯಿ ಈಗಿನ ಬೆಲೆಯನ್ನು ನನ್ನ ತಂದೆಯಿಂದ ಪಡೆದುಕೊಳ್ಳುತ್ತಿದ್ದರು ನಾವು ಪುರುಷರು ಈ ಬೆಲೆಯನ್ನು ಪರಿಶೀಲಿಸುವುದಿಲ್ಲ ಅವಕಾಶವನ್ನು ಮನೆಯ ಮಹಿಳೆಯರು ಬಳಸಿಕೊಂಡು ಉಳಿತಾಯವನ್ನು ಮಾಡುತ್ತ ಸ್ಪಷ್ಟ ಕಾಲದಲ್ಲಿ ಬಳಕೆ ಮಾಡಲು ಇತರೆ ಆಕಸ್ಮಿಕ ವಿಷಯಗಳಿಗೆ ವೆಚ್ಚಗಳಿಗೆ ಪೂರೈಸಿಕೊಳ್ಳಲು ಈ ಹಣವನ್ನು ಉಪಯೋಗಿಸುತ್ತಿದ್ದರು ಅದು ಸತ್ಯ ನಾವು ನಮ್ಮ ಗಣಿತವನ್ನು ಪಾಠ ಮನೆ ಕೆಲಸಕ್ಕೆ ಪರೀಕ್ಷೆಗೆ ಸೀಮಿತ ಗೊಳಿಸುವುದಕ್ಕಿಂತ ನಮ್ಮ ದಿನನಿತ್ಯದ ಪ್ರೇಕ್ಷಕರಿಗೆ ಅನ್ವಯಿಸಿಕೊಳ್ಳುವುದನ್ನು ಕಲಿಯಬೇಕಾಗುತ್ತದೆ ಹೀಗೆ ಪಾಠಕ್ಕೆ ಮೊದಲು ಮಕ್ಕಳಿಗೆ ಯೋಚಿಸಲು ಹಚ್ಚಿ ಅವರನ್ನು ನನ್ನೆಡೆಗೆ ಎಳೆದುಕೊಳ್ಳಲು ಪ್ರಯತ್ನಿಸಿದೆ.
ಬುಧವಾರ, ಜನವರಿ 1, 2025
ಮಂಗಳವಾರ, ಡಿಸೆಂಬರ್ 31, 2024
ಮಂಗಳವಾರ, ಡಿಸೆಂಬರ್ 24, 2024
ಬುಧವಾರ, ಡಿಸೆಂಬರ್ 18, 2024
ಮಂಗಳವಾರ, ಡಿಸೆಂಬರ್ 10, 2024
ಸೋಮವಾರ, ಡಿಸೆಂಬರ್ 9, 2024
ಆತ್ಮಗಳ ಪಾತ್ರ ಕೊಟ್ಟರು.
ನಾವು ಮೊದಲು ಶಾಲೆಯಲ್ಲಿ ಇದ್ದಾಗ ನಮ್ಮ ಸರ್ ನಾಟಕ ಮಾಡ್ತೀರಾ ಅಂತ ಕೇಳಿದೆ ಅವಾಗ ನಾವು ಮಾಡ್ತೀವಿ ಅಂತ ಹೇಳಿ ಅವಾಗ ನಾಟಕ ಮಾಡೋದು ಮೂರು ದಿನಗಳು ಆವಾಗ ಗುರುರಾಜ ಸರ್ ನಮಗೆ ಸಬ್ ಎಡಿಟರ್ ಸುಬ್ರಾಯ ನಾಟಕದಲ್ಲಿ ಆತ್ಮಗಳ ಪಾತ್ರ ಕೊಟ್ಟರು ನಾವು ಮಾಡ್ತೀವಿ ಅಂತ ಹೇಳಿ ಮನೆಗೆ ಹೋದ ನನಗೆ ಮನೆಯಲ್ಲಿ ನಾಟಕ ಸರಿ ಆಗುತ್ತೋ ಇಲ್ಲವೋ ಎನ್ನುವ ಗುಮಾನಿ ಇತ್ತು ನನಗೆ ಕಟ್ಟಡ ಡೈಲಾಗ್ ಸರಿಯಾಗಿ ಹೇಳುತ್ತೇವೋ ಇಲ್ಲವೋ ಎನ್ನುವ ಎಲ್ಲರಿಗೂ ಮರುದಿನ ಬಂದ ನಂತರ ನಮಗೆ ಡೈಲಾಗ್ ಹೇಳಿದ್ದನ್ನು ನಾವು ಯಥಾವತ್ತಾಗಿ ಹೇಳಿದಾಗ ಸಂತೋಷವಾಯಿತು ಸಾಹಿತ್ಯ ಸಾಹಿತ್ಯ ಭವನದಲ್ಲಿ ನಮ್ಮ ನಾಟಕ ಪ್ರದರ್ಶನಗೊಂಡಾಗ ತುಂಬಾ ಸಂತೋಷವಾಗಿದೆ.
....................
ಶ್ರೀ ಹರಿ ಎಂಟನೇ ತರಗತಿ
ಭಾನುವಾರ, ಡಿಸೆಂಬರ್ 8, 2024
ಶನಿವಾರ, ಡಿಸೆಂಬರ್ 7, 2024
ಹೊಸ ಅನುಭವ ನೀಡಿದ ದ್ವಾರಪಾಲಕ....!
ಹೊಸ ಅನುಭವ ನೀಡಿದ ದ್ವಾರಪಾಲಕ....!
*ಸಬ್ ಎಡಿಟರ್ ಸುಬ್ರಾಯ ಸತ್ತ ಮೇಲೆ....* ನಾಟಕದ ದ್ವಾರಪಾಲಕನ ಪಾತ್ರ ನನಗೆ ಹೊಸ ಅನುಭವ ಮತ್ತು ಜೀವನೋತ್ಸಾವನ್ನು ತಂದು ಕೊಟ್ಟಿದೆ.
ಹೌದು,
ನನ್ನಲ್ಲಿ ಹಲವಾರು ಬೆಸ್ಟ್ಗಳಿವೆ, ಜೊತೆಗೆ ಯಾವುದೇ ಸಮಯ ಸಂದರ್ಭ ಕ್ಕೆ ಹೊಂದಿಕೊಳ್ಳುವ ಗುಣ ನನಗೆ ಕರಗತವಾಗಿದೆ. ಹಾಗಿದದ್ದಕ್ಕೆ ನಾನು ದ್ವಾರಪಾಲಕ, ನಿರೂಪಕ, ಪ್ರಧಾನ ಅರ್ಚಕ ನಾಗಲು ಸಾಧ್ಯವಾಯಿತು ಎನ್ನುವುದು ನನ್ನ ಅನಿಸಿಕೆ, ಹಾಗೂ ಇದು ನನ್ನ ಹೆಮ್ಮೆ ಕೂಡಾ.
ಶರತ್ ಹೆಗಡೆ ಅವರ ಆ ಯಮಲೋಕದ ಕಲ್ಪನೆ ನನ್ನನ್ನು ಬಹಳಷ್ಟು ವಿಸ್ಮಯಗೊಳಿಸಿದೆ. ನಿಜವಾಗಿಯೂ ಅಂತಹ ವ್ಯವಸ್ಥೆ ಇದ್ದದ್ದೆ ನಿಜವಾದರೆ...! ಅದು ನಮ್ಮ ಅನುಭವಕ್ಕೆ ತಾಕುವಂತಿದ್ದರೆ, ಮಾನವ ಜನ್ಮದ ನಮ್ಮ ಬದುಕು ಹೀಗಿರುತ್ತಿರಲಿಲ್ಲ..
"ಇದೆಯೋ ಇಲ್ಲವೊ ಸ್ವರ್ಗ ನರಕ, ಪಾಪ ಪುಣ್ಯದ ಲೆಕ್ಕವು ಪಕ್ಕಾ, ಅದ್ಯರೋ ಯಮಧರ್ಮನಂತೆ, ನಮ ಲೆಕ್ಕ ಬರೆದಾನಂತೆ, ಇದ್ದರೆ ಪುಣ್ಯದ ಕಂತೆ , ಮುಕ್ತಿ ಸಿಗುವುದು ಅಂತೆ, ಜಾತ್ರೆಲಿ ಮಾಡಿದ ವ್ಯಾಪಾರ ಕೇಳತಾನೆ ನೋಡಿಲ್ಲಿ ಸಾವ್ಕಾರ, ಎಂಬ ಸಾಲುಗಳು ನನಗೆ ಗುಂಗು ಹಿಡಿಸಿವೆ.
ನಾಟಕ ಕೃತಿಕಾರರನ್ನೆ ನಿಬ್ಬೆರಗು ಗೊಳಿಸಿದ ಗುರುರಾಜ್ ಸರ್ ನಿರ್ದೇಶನ ನನ್ನ ಹೊಸ ಅನುಭವಕ್ಕೆ ಮುಖ್ಯ ಕಾರಣವಾಗಿದೆ. ಕಾರಣ, ಶರತ್ ಸರ್ ಬರವಣಿಗೆಯಲ್ಲಿ ಇದ್ದ ದ್ವಾರಪಾಲಕ ಗುರುರಾಜ್ ಸರ್ ಕೈಯಲ್ಲಿ ಕಲ್ಪನೆಗೂ ಮೀರಿ ಹೊರಹೊಮ್ಮಿದ. ಅದೇ ಕಾರಣಕ್ಕೆ ನಾನು ಕೆಲವು ಅದ್ಭುತ ಪಾತ್ರಗಳ ಭಾಗವಾಗಿ ಹೊರಹೊಮ್ಮಿದೆ. ಈ ನಾಟಕದ ಮೊದಲ ದಿನದಿಂದಲೂ ನಾನು ಬಹಳಷ್ಟು ನಕ್ಕಿದ್ದೇನೆ ಮತ್ತು ಬದುಕಿನ ಹಲವು ಒತ್ತಡಗಳನ್ನ ಮರೆತಿದ್ದೇನೆ. ಸಾಕಷ್ಟು ಹೊಸತನ್ನು ಕಲಿತಿದ್ದೇನೆ. ನಾನಷ್ಟೇ ಅಲ್ಲ ನನ್ನ ಜೊತೆಗಿದ್ದ ಇತರರೂ ಇದೇ ಅನುಭವ ಹೊಂದಿದ್ದಾರೆ ಎಂದು ನಾನು ಭಾವಿಸುತ್ತೇನೆ.
ನಾವಾಡಿದ ನಾಟಕ ಗೆದ್ದಿದೆಯೊ, ಸೋತಿದೆಯೊ, ಕೆಲವರಿಗೆ ತಿಳಿದಿಯೋ, ತಿಳಿದಿಲ್ಲವೊ ಗೊತ್ತಿಲ್ಲ. ಅದರೆ, ನನ್ನ ಬದುಕಿನ ಕೆಲ ಸುಂದರ ಕ್ಷಣಕ್ಕೆ ವೇದಿಕೆ ಕೊಟ್ಟ ಕ್ಲಬ್ ಗೆ, ನಾಟಕ ರಚನಾಕಾರರಿಗೆ, ನಿರ್ದೇಶಕರಿಗೆ, ಜೊತೆಗಿದ್ದ ಕಲಾವಿದರಿಗೆ, ಕಲಾ ರಸಿಕರಿಗೆ, ನನ್ನ ನಟನೆ ಮೆಚ್ಚಿಕೊಂಡವರಿಗೆ ಮತ್ತು ಮನಸ್ಸಿನಲ್ಲೇ ಬೈದುಕೊಂಡವರಿಗೆ ಎಲ್ಲರಿಗೂ ನಾನು ಕೃತಜ್ಞನಾಗಿದ್ದೇನೆ. 







-----------------------
ಜಗದೀಶ್ ಚಟ್ಟಿ
ಈ ಟಿವಿ ಭಾರತ ವರದಿಗಾರರು
ಕೊಪ್ಪಳ
ಬುಧವಾರ, ಡಿಸೆಂಬರ್ 4, 2024
ಸೋಮವಾರ, ಡಿಸೆಂಬರ್ 2, 2024
ಇದಕ್ಕೆ ಸಬ್ಸ್ಕ್ರೈಬ್ ಆಗಿ:
ಪೋಸ್ಟ್ಗಳು (Atom)









.jpg)



















