ಸೋಮವಾರ, ಜುಲೈ 1, 2013

ಚಿಲ್ ಜರಿ ಗ್ರಾಮದ ಹಾಡುಗಳ

ಜಾನಪದದ ಹುಡುಕಾಟದಲ್ಲಿ ನಾವು ಸ್ಥಳೀಯ ಗ್ರಾಮಕ್ಕೆ  ಬೇಟಿ ನೀಡಿ ಅವರಲ್ಲಿ ಜಾನಪದ ಕುರಿತು ನಾವು ಮಾಡುವ ದಾಖಲೀಕರಣ ಕುರಿತು ಹೇಳಿದ  ಮಾತುಗಳು ಅಂಥಹ ಆಸಕ್ತಿಯನ್ನನೇನು  ಮೂಡಿಸುತ್ತಿರಲಿಲ್ಲ ಇದು ಕೇವಲ ತಮ್ಮ ಮನೆಯ ಶಾಸ್ತ್ರದ ಕಾರ್ಯಕ್ರಮಗಳಲ್ಲಿ ಹಾಡುವಂಥ ಹಾಡುಗಳನ್ನು ಇವರು ಚಿತ್ರೀಕರಣ ಮಾಡಿಕೊಂಡು ಏನನ್ನು ಮಾಡುತ್ತಾರೆ ಎಂಬ ಪ್ರಶ್ನೆಗಳು  ಊರಿನವರಲ್ಲಿ ಎಲ್ಲರಿಗೂ ಮೂಡುತ್ತಲೇ ಇದ್ದವು. ಆದರೆ ಆ ಹಳ್ಳಿಯ ಮುಗ್ಧ ಜನರಿಗೆ ತಿಳಿದಿಲ್ಲ ಜನಪದ ಹಿಂದಿನಿಂದಲೂ ಜನರ ಬದುಕನ್ನು ಕಟ್ಟುತ್ತಾ ಬಂದಿದ್ದು ಅವುಗಳ ಜ್ಞಾನ ಹೊಂದಿದ್ದ ತಲೆಮಾರು ಮುಂದಿನ ಹಂತಕ್ಕೆ ಸಾಗದೇ ಕೊನೆಗೊಳ್ಳುವ ಸ್ಥಿತಿಯು ನಿರ್ಮಾಣವಾಗಿರುವ ಈ ಸಂರ್ಧಭದಲ್ಲಿ ಹಿರಿಯರಿಂದ ಹಾಡುಗಳ ಜೊತೆಗೆ ಅನುಭವಗಳನ್ನು ಕೇಳಿ ತಿಳಿದುಕೊಂಡು ಅವನ್ನು ದಾಖಲೀಕರಣ ಮಾಡುವುದರೊಂದಿಗೆ ಇಂದಿನ  ಮಕ್ಕಳಿಗೆ ಶಿಕ್ಷಣದ ಜೊತೆಗೆ ಜಾನಪದದ ಹಲವು ಪ್ರಕಾರಗಳನ್ನು ವಿದ್ಯಾರ್ಥಿಗಳೊಂದಿಗೆ ಅವರ ಮನೆಗಳಿಗೆ ತೆರೆಳಿ ಕಲೆತುಕೊಳ್ಳಬೇಕಾಗಿದೆ. ವೇದಿಕೆ, ಸಮಾರಂಭ ಎಂದರೆ ಆ ಜೀವಗಳು ಮುಜುಗರ ಪಟ್ಟು ಹಾಡಲು ಹಿಂಜರಿಯುತ್ತಾರೆ. ಮಕ್ಕಳೊಂದಿಗೆ ಅವರನ್ನು ಮಾತಿಗೆ ಹಚ್ಚಿದರೆ ಆ ಪಾಲಕರು ತುಂಬಾ ಸಹಜವಾದ ಮಾತುಗಳನ್ನು ಹೊರ ಹಾಕಲು ಸಾಧ್ಯತೆಗಳು ಹೆಚ್ಚು. ಮನೆಯ ಕಾರ್ಯಕ್ರಮದ ಜೊತೆಗೆ ಸ್ತಳೀಯ ಊರಿನ ಆಚರಣೆಗಳಲ್ಲಿ, ಹಬ್ಬದ ಸಂಭ್ರಮದಲ್ಲಿ ಹಾಡುವ ಇವರು ಮಕ್ಕಳಿಗೆ ಕಲಿಯುವ - ಕಲಿಸುವ ವಾತಾವರಣವನ್ನು ಪಾಲಕರೊಂದಿಗೆ, ಶಿಕ್ಷಕರು ಒದಗಿಸಿ ಕೊಡಬೇಕಾಗಿದೆ. ಜೊತೆಗೆ ಮಕ್ಕಳು ಜಾನಪದದ ಕುರಿತು ಹಿರಿಯರಿಂದ ಅನುಭವಗಳನ್ನು ಪಡೆದು ಭವಿಷ್ಯತ್ ಗಾಗಿ ಕಟ್ಟಬೇಕಾಗಿದೆ. ನಮ್ಮ ಹತ್ತಿರದ   ಚಿಲ್ ಜರಿ   ಗ್ರಾಮ ದಲ್ಲಿ ಶ್ರೀಮತಿ ಪಾರ್ವತಿ , ಶ್ರೀಮತಿ ಶಾಂತಮ್ಮ , ಶ್ರೀಮತಿ  ಪಾರವ್ವ , ಶ್ರೀಮತಿ ಪದ್ಮವ್ವ ಹಾಗೂ ನಿರ್ಮಲ ಅವರು ನಮ್ಮ ವಿದ್ಯಾರ್ಥಿನಿಯ ಪ್ರಶ್ನೆಗಳಿಗೆ ಉತ್ತರಿಸುತ್ತಾ ತಮ್ಮ ಕಾಯಕದಲ್ಲಿ ಪ್ರತಿ ನಿತ್ಯ ಹಾಡುಗಳನ್ನು ಹಾಡುವುದು.  ತಮ್ಮ ಕಾಯಕ ನಿರಾತಂಕವಾಗಿ ಸಾಗಲು ಯಾವುದೇ ಒತ್ತಡ ಇರುವುದಿಲ್ಲ. ಎಂಬ ಮಾತುಗಳು ನಮ್ಮ ಮಕ್ಕಳಿಗೆ ಹಾಡುಗಳನ್ನು ಕೇಳಿಸುತ್ತಾ ಅನುಭವಗಳನ್ನು ಅಂಚಿಕೊಂಡರು. 
                          'ಎಷ್ಟು ಮಕ್ಕಳು ಇಂದು ಹಾಡುಗಳನ್ನು ಕಲಿಯಲು ನಮ್ಮ ಹತ್ತಿರ ಬರುತ್ತಿದ್ದಾರೆ.... ' ಎಂಬ ನಮ್ಮ ಹಿರಿಯರ ಪ್ರಶ್ನೆಗಳು ಮಕ್ಕಳಿಗೆ ಮೈಮೇಲೆ ಬಂದು ಎರಗಿದಂತಿತ್ತು. 




ಶನಿವಾರ, ಜೂನ್ 29, 2013

ಬುಧವಾರ, ಜೂನ್ 26, 2013

ಸೋಬಾನೆ ಹಾಡುಗಳು






ಮಾಸವ್ವ ಕಳಕಪ್ಪ ಕೃಷ್ಟಪ್ಪನವರು, ಗಂಗಮ್ಮ ಪುಂಡನ ಗೌಡ ಮಾಲೀಪಾಟೀಲ್, ಭೀಮವ್ವ ಹನಮಪ್ಪ ಮಂತ್ರಿ ಮತ್ತು  ಶಾಂತವ್ವ ಸಿದ್ದಪ್ಪ ಮೇಟಿ ಇವರೆಲ್ಲರನ್ನು ನಮ್ಮ ವಿದ್ಯಾರ್ಥಿನಿಗಳಾದ ಈರಮ್ಮ ಕೃಷ್ಟಪ್ಪನವರ ಹಾಗೂ ಮೇಘ ಬಡಿಗೇರ ಅವರು ತಮ್ಮ ಮನೆಯ ಹತ್ತಿರ ವ್ಯವಸ್ಥೆ ಮಾಡಿ ಅವರೊಂದಿಗೆ ಹಾಡಿದರು. ಮಕ್ಕಳು ದಿನಾಲೂ ಬಂದು 'ಹಾಡ ಬೇ ' ಅಂತ ಕಾಡ್ತನೇ ಇದ್ದರೂ. ನಮಗೆ ಸಮಯನೇ ಹೊಂದಾಣಿಕೆ ಆಗ್ತಾ ಇರಲಿಲ್ಲ. ಈಗ ಮಕ್ಕಳು ಹಾಡು ಬರಕೊಂಡು ಹಾಡ್ತಾ ಇದ್ರೆ ಖುಷಿ ಆಗ್ತಾದೆ. ಈಗ ಕಾರ್ಯ (ಸೀಮಂತ, ಹಿರೀಮಗಳು ) ಗಳಲ್ಲಿ ಹಾಡೋದಕ್ಕಷ್ಟೇ ಸೀಮಿತ ಆಗಿದೆ. ಕೆಲಸ ಸಮಯದಲ್ಲಿ ಯಾವಾಗಲೋ ಹಾಡೋದು ಆಗಿದೆ. ಮಕ್ಕಳು ಕಲಿತರೆಂದರೇ ನಮಗೂ ಸಂತೋಷ. ಇನ್ನೂ ಹೆಚ್ಚು ಹೆಚ್ಚು ಮಕ್ಕಳಿಗೆ ಹೇಳೋದರ ಜೊತೆಗೆ ಹಾಡುಗಳನ್ನು ಕಟ್ಟಬಹುದು. 

ಶುಕ್ರವಾರ, ಮೇ 31, 2013

ಮಕ್ಕಳ ಹೆಜ್ಜೆ ಕುಣಿತ






ಶಾಲಾ ಸರಸ್ವತಿ ಪೂಜೆ ಹಾಗೂ ಎಸ್.ಎಸ್.ಎಲ್.ಸಿ ಮಕ್ಕಳ ಬೀಳ್ಕೋಡುಗೆ 
ಸಮಾರಂಭದಲ್ಲಿ ಮಕ್ಕಳೊಂದಿಗೆ ಹಿರಿಯ ಶಿಕ್ಷಕರಾದ ಶ್ರೀ ಸಂಗನಗೌಡ ಪಾಟೀಲ್ ಗುರುಗಳು
 ಹಾಗೂ ದೈಹಿಕ ಶಿಕ್ಷಕರಾದ ಜಗದೀಶ್ ರವರು ಹೆಜ್ಜೆ ಕುಣಿತದ ಹಾಡಿಗೆ ಹೆಜ್ಜೆಯನ್ನು ಮಕ್ಕಳೊಂದಿಗೆ 
ಸೇರಿ ಹಾಕಿದರು. ಇಲ್ಲಿ ಮಕ್ಕಳೊಂದಿಗೆ ಯಾವುದೇ ಮುಜುಗರ ಪಡದೇ ಶಿಕ್ಷಕರು ಕುಣಿದು
 ವಿದ್ಯಾರ್ಥಿಗಳಿಗೆ ಹೆಚ್ಚಿನ ಉತ್ಸಾಹ ತುಂಬುವಲ್ಲಿ ವಹಿಸಿದ ಪಾತ್ರವನ್ನು ಕೊಂಡಾಡಲೇ ಬೇಕಾದದ್ದು. 
ನಮ್ಮ ಶಾಲೆಯಲ್ಲಿ ಐ.ಎಫ್ ಎ ವತಿಯಿಂದ "ಮಕ್ಕಳ ಹೆಜ್ಜೆಗಳು ಜಾನಪದದತ್ತ..." 
ಕಾರ್ಯಕ್ರಮದಲ್ಲಿ ಊರಿನ ಹಿರಿಯರಿಂದ ಮಕ್ಕಳು ದಿನಾಲೂ ಇಳೆ ಹೊತ್ತಿನಲ್ಲಿ 
ಕಾಡಿ-ಬೇಡಿ ಹೆಜ್ಜೆಯ ಕುಣಿತವನ್ನು  ಕಲಿತು ಬಂದು ಇಂದು 
ಎಲ್ಲ ಶಾಲಾ ಮಕ್ಕಳು-ಶಿಕ್ಷಕರ ಮುಂದೆ ಪ್ರದರ್ಶನ ನೀಡುತ್ತಾ 
ಸಂಭ್ರಮದಿಂದ ಹಿರಿಯ ವಿಧ್ಯಾರ್ಥಿಗಳ ಬೀಳ್ಕೋಡುಗೆಗೆ ಸುಂದರತೆಯನ್ನು ನೀಡಿದರು. 


ಸೋಬಾನೆ ಪದಗಳು




ಬುಧವಾರ, ಮೇ 1, 2013

ಜರ್ಮನಿಯ ಕ್ರಿಸ್ಟೋಫ್ ಬೇಟಿ

                                 ಮಕ್ಕಳ ಹೆಜ್ಜೆಗಳು  ಯೋಜನೆಯನ್ನು  ವೀಕ್ಷಿಸಲು IFA ಬೆಂಗಳೂರಿನ ಯೋಜನಾಧಿಕಾರಿಗಳಾದ ಶ್ರೀಮತಿ ಅನುಪಮಾ ಪ್ರಕಾಶ ರವರೊಂದಿಗೆ ಜರ್ಮನಿಯ ಗೋಥೆ ಇನ್ ಸ್ಟಟ್ಯೂಟ್ ಮ್ಯಾಕ್ಸ್ ಮುಲ್ಲರ ಭವನದ ಶ್ರೀ ಕ್ರಿಸ್ಟೋಫ್ ಅವರು ನಮ್ಮ ಹಳ್ಳಿ ಜಹಗೀರ ಗುಡದೂರ ಶಾಲೆಗೆ ದಿನಾಂಕ 13.03.2013 ಬೇಟಿ ನೀಡಿ ಇಡೀ ದಿನ ನಮ್ಮೊಂದಿಗೆ ಕಳೆದರು. ಮಕ್ಕಳೊಂದಿಗೆ ಶಿಕ್ಷಕರು ಭಾಗವಹಿಸಿ ಸಂವಹನ ಮಾಡಲು ಅನುಕೂಲವಾಯಿತು. ವಿವಿಧ ದೇಶಗಳಲ್ಲಿ ಕಾರ್ಯ ನಿರ್ವಹಿಸಿದ ಕ್ರಿಸ್ಟೋಫ್ ಅವರಿಗೆ ಮಕ್ಕಳ ನೂರಾರು ಪ್ರಶ್ನೆಗಳಿಗೆ ಸರಳವಾಗಿ ಉತ್ತರವನ್ನು ನೀಡಿದರು. 








ಗುರುವಾರ, ಫೆಬ್ರವರಿ 14, 2013

ಮೊಹರಂ ಒಂದು ನೋಟ..



ಶ್ರೀ ಆನಂದಪ್ಪ ಕುರಿ 


ಮಕ್ಕಳ ಹೆಜ್ಜೆಗಳು ಯೋಜನೆಯಡಿಯಲ್ಲಿ ನಮ್ಮ ವಿದ್ಯಾರ್ಥಿಗಳಿಗೆ ಇಂದು ಶ್ರೀ ಆನಂದಪ್ಪ ನವರು "ಮೊಹರಂ" ಆಚರಣೆಯ ಹಿನ್ನಲೆ ಹುಟ್ಟು, ಬೆಳೆದು ಬಂದ ದಾರಿ ಸದ್ಯ ಪ್ರಸ್ತುತ ನಮ್ಮ ಊರು ಬೇರೆ ಬೇರೆ ಭಾಗಗಳಲ್ಲಿ ಆಚರಿಸುವ ರೀತಿಗಳನ್ನು ತಮ್ಮ ಉಪನ್ಯಾಸದಲ್ಲಿ ತಿಳಿ ಹೇಳಿದರು ಮಕ್ಕಳಿಗೆ. ನಮ್ಮೊಂದಿಗೆ ಮುಖ್ಯ ಗುರುಗಳು ಹಾಗೂ ಇತರೆ ಶಿಕ್ಷಕರು ಹಾಜರಿದ್ದರು. ಮಕ್ಕಳು ತಾವು ಆಡಿ ಬೆಳೆದ ಈ ಹಬ್ಬ ಆಚರಣೆಗಳ  ಹಿನ್ನಲೆಯನ್ನು ಕೇಳಿ ಹುಟ್ಟಿದ ಹಲವಾರು ಪ್ರಶ್ನೆಗಳಿಗೆ ಅತಿಥಿಗಳು ಉತ್ತರ ನೀಡಿದರು. ಇದು ಮಕ್ಕಳ ಜಾನಪದದ ಹುಡಕಾಟದಲ್ಲಿ ಹಿನ್ನಲೆಯ ಜ್ಞಾನ ಪಡೆದಾಗ ಹೆಚ್ಚಿನ ಹೊಳಹುಗಳು ದೊರಕುವ ಆಶಾ ಭಾವದ ಜೊತೆಗೆ ಮಕ್ಕಳಿಗೆ ಹೆಚ್ಚಿನ ಸಹಕಾರ ದೊರಕುವ ದೃಷ್ಟಿ ಇಲ್ಲಿ ಹೊಂದಲಾಗಿತ್ತು.

ಭಾನುವಾರ, ಫೆಬ್ರವರಿ 10, 2013

ದೃಶ್ಯ ಕಾರ್ಯ

ದೃಶ್ಯ ಕಾರ್ಯ (Scene work) ವನ್ನು ಎನ್.ಎಸ್. ಡಿ ಪದವೀಧರೆ  ಸಹನ.ಪಿ ಅವರು ಮೂರು ದಿನಗಳ ಕಾಲ ನಮ್ಮ ಶಾಲೆಯಲ್ಲಿ ಕಾರ್ಯಗಾರವನ್ನು ನಡೆಸಿಕೊಟ್ಟರು. 












ಶನಿವಾರ, ಜನವರಿ 26, 2013

ಹೆಜ್ಜೆ ಕುಣಿತದ ಕಾರ್ಯಗಾರ

ಮೊಹರಂ ಪದ  ಹಾಗೂ  ಹೆಜ್ಜೆ ಕುಣಿತದ ಕಾರ್ಯಗಾರವನ್ನು  ನಮ್ಮ ಶಾಲೆಯಲ್ಲಿ ದಿನಾಂಕ ೨೦.೦೧.೨೦೧೨ ರಂದು ಭಾನುವಾರ ಮಕ್ಕಳಿಗೆ ಹೆಜ್ಜೆ ಕುಣಿತದ  ಪ್ರಾಥಮಿಕ ಜ್ಞಾನವನ್ನು ನೀಡಲು ನಾವು ನಮ್ಮ "ಮಕ್ಕಳ  ಹೆಜ್ಜೆಗಳು ಜಾನಪದದತ್ತ..." ಯೋಜನೆಯಡಿಯಲ್ಲಿ ಕೈಗೊಂಡಿದ್ದೇವು. ಶಿವಮಲ್ಲಪ್ಪ ಹಾಗೂ ಮಹಾಂತೇಶ  ಅವರ ಗೆಳೆಯರು ನಮ್ಮ ವಿದ್ಯಾರ್ಥಿಗಳಿಗೆ ದಿನ ಪೂರ್ತಿ ತರಬೇತಿ ನೀಡಿದರು.  












ಮಂಗಳವಾರ, ಜನವರಿ 22, 2013

ಸೋಬಾನೆ ಪದಗಳ ಪ್ರತ್ಯಾಕ್ಷಿಕೆ.


                                                           




ಮಕ್ಕಳ ಹೆಜ್ಜೆಗಳು ಜಾನಪದದತ್ತ... ಕಾರ್ಯಕ್ರಮದಡಿಯಲ್ಲಿ  ದಿನಾಂಕ ಜನವರಿ ೫, ೨೦೧೩ ರಂದು ಶಾಲಾ ಅವಧಿಯ ನಂತರ ಜಾನಪದ ಹಾಡುಗಳಲ್ಲಿ ಬಿಸೋ ಪದ, ಕುಟ್ಟೋ ಪದ, ಸೋಬಾನೆ ಪದಗಳ  ಹಾಡುಗಳನ್ನು ಮಕ್ಕಳಿಗೆ ಹೇಳಿಸಿ ಕೊಡುವುದು ಮತ್ತು ಸ್ಥೂಲವಾದ ಪರಿಚಯವನ್ನು ನೀಡುವುದಾಗಿತ್ತು.  ಮಕ್ಕಳಿಗೆ ನಮ್ಮ ಕ್ರಿಯಾ ಯೋಜನೆಯಂತೆ ಕಾರ್ಯ ಚಟುವಟಿಕೆಗಳನ್ನು ಕೈಗೊಳ್ಳಲು ಮೊದಲೂ ಊರಿನಲ್ಲಿ ನಿರಂತರವಾಗಿ ಮನೆಯ ಪೂಜಾ,
ಮದುವೆ, ಸೀಮಂಥ ದಂಥಹ ಕಾರ್ಯಕ್ರಮಗಳಲ್ಲಿ ಹಾಡುತ್ತಿದ್ದ ನಮ್ಮ ಶಾಲೆಯ ಪಾರಿಚಾರಕಿ ಶ್ರೀಮತಿ ಯಂಕಮ್ಮ ಹಾಗೂ ಶಾಲೆಯ ಹಳೆಯ ವಿದ್ಯಾರ್ಥಿನಿ ಕುಮಾರಿ ಅನಿತಾ ಪೋಲೀಸ್ ಪಾಟೀಲ್ ಇಬ್ಬರನ್ನು ವಿದ್ಯಾರ್ಥಿಗಳ ಮುಂದೆ ತಮ್ಮ ಜಾನಪದದ ಹಾಡುಗಳನ್ನು ಹಂಚಲು ಆಹ್ವಾನಿಸಿದೇವು. ಊರಿನ ಮನೆಗಳಲ್ಲಿ ಎಲ್ಲೋ ಕತ್ತಲೆಯಲ್ಲಿ, ಮೂಲೆಯಲ್ಲಿ ಕುಳಿತು ಹಾಡುಗಳನ್ನು ಹಾಡುವ ಇವರಿಗೆ ಒಂದು ಹೊಸ ಅನುಭವ. ವೇದಿಕೆಯೇ ಬೇಕಾಗಿಲ್ಲ ಮಕ್ಕಳ ನಡುವೆ ಕೂಡುವ ವ್ಯವಸ್ಥೆ ಮಾಡುವ ಆಲೋಚನೆಯನ್ನು ಮಾಡಿದ್ದೇವು. ಆದರೆ ನಮ್ಮ ವಿಧ್ಯಾರ್ಥಿನಿಗಳೇ ಆದ ಶರಣಮ್ಮ ಪೋಲೀಸ್ ಪಾಟೀಲ್ ಹಾಗೂ 


 ಸೋಬಾನೆ ಪದ ಶುದ್ಧ ದೇಸಿಯ ಗ್ರಾಮೀಣ ಭಾಗದ ಪ್ರಮುಖ ಜಾನಪದ ಗೀತೆಗಳಲ್ಲಿ ಒಂದು. ಈ ಸೋಬಾನೆ ಪದಗಳನ್ನು ಪ್ರಮುಖವಾಗಿ ಮಹಿಳೆಯರು ಶುಭ-ಸಮಾರಂಭಗಳಲ್ಲಿ ಹಾಡುತ್ತಾರೆ. 

ಮಕ್ಕಳ ಕಥೆಗಳ ವಾಚನ


                                                         

ಮಂಗಳವಾರ, ಜನವರಿ 15, 2013

K.S.Q.A.A.C ಯ ಮೌಲ್ಯಾಮಾಪನ

                             K.S.Q.A.A.C ಯ ಮೊದಲ ಹಂತದ ಪರೀಕ್ಷೆ ಹಾಗೂ ಮೌಲ್ಯ ಮಾಪಕರೊಂದಿಗೆ ಮಕ್ಕಳು ಇರುವ ಛಾಯಾ ಚಿತ್ರಗಳು ಇಲ್ಲಿವೆ. ರಾಜ್ಯದ ಆಯ್ದ ಶಾಲೆಗಳಲ್ಲಿ ಪ್ರಾಥಮಿಕವಾಗಿ ಭೌತಿಕ ಹಾಗೂ ಶೈಕ್ಷಣಿಕ ಅಂಶಗಳನ್ನು ಪರೀಕ್ಷಿಸಲು ಆಗಮಿಸಿದ್ದರು. ೯ ನೇ ತರಗತಿ ಮಕ್ಕಳಿಗೆ ಪರೀಕ್ಷೆಗಳನ್ನು ನಡೆಸಿ ಶಾಲೆಯ ಮೌಲ್ಯಾಮಾಪನವನ್ನು  ನಡೆಸಿದರು.



\