ನಮ್ಮ ಶಾಲೆಯ ೮ ನೆಯ ತರಗತಿಯ ಮಕ್ಕಳು ೧೮.೭.೨೦೧೧ ರಂದು ಸಸಿಗಳನ್ನು ನೆಡುವುದರ ಮೂಲಕ ಪರಿಸರ ದಿನಾಚರಣೆಯನ್ನು ಆಚರಿಸಿದೆವು. ಹಿರಿಯ ಶಿಕ್ಷಕರಾದ ಶ್ರೀ ದತ್ತಾತ್ರೆಯಾ ಪತ್ತಾರ, ಅಮಿನಪ್ಪ ರಾಜುರ ,ಜಗಧೀಶ ಬಾಸಿಂಗದ ಹಾಗೂ ಗುರುರಾಜ ಮಕ್ಕಳೊಂದಿಗೆ ಕೂಡಿ ತೆಗೆಸಿದ ಚಿತ್ರಗಳು .
ಗುರುವಾರ, ಆಗಸ್ಟ್ 4, 2011
ಶುಕ್ರವಾರ, ಏಪ್ರಿಲ್ 29, 2011
ಐ.ಎಪ್.ಎ ಶಾಲೆಯಲ್ಲಿ ಕಾರ್ಯಗಾರ


ಇನ್ನು ಇದು ಪ್ರಾರಂಭ. ಮುಂದಿನ ಹಂತಗಳಲ್ಲಿ ಸಾಕಷ್ಟು ಕೆಲಸಗಳು ನಡೆಯಲಿವೆ.
ಶನಿವಾರ, ಏಪ್ರಿಲ್ 16, 2011
ಚಿಟ್ಟೆಗಳ ಬಣ್ಣದ ಆಟ
ಚಿಟ್ಟೆಗಳ ಬಣ್ಣದ ಆಟ ಮಕ್ಕಳ ಬೇಸಿಗೆ ಶಿಬಿರ
ದಿನಾಂಕ : ೧೫.೦೪.೨೦೧೧ ರಿಂದ ೨೫.೦೪.೨೦೧೧ ರ ವರೆಗೆ
ಸ್ಥಳ : ಸಪ್ತಗಿರಿ ಆಂಗ್ಲ ಮಾಧ್ಯಮ ಶಾಲೆ, ಹೊಸಪೇಟೆ.
ಸಂಘಟಕರು : ಹೊಸಪೇಟೆ ಯುವ ವೇದಿಕೆ ಯಾ ಗೆಳೆಯರು.
ಸಂಪನ್ಮೂಲ ವ್ಯಕ್ತಿಗಳು : ಶ್ರೀ ಶಶಿಧರ ಪಾಟಿಲ , ರಂಗ ಅಧ್ಯಯನ ಕೆಂದ್ರದ ಪದವಿಧರರು, ರೋಣ
ಶ್ರೀ ವಾದಿರಾಜ ಕಲಾ ಶಿಕ್ಷಕರು, ಹೊಸಪೇಟೆ.
ಕುಮಾರಿ ಮಂಜುಳಾ , ಸಂಗೀತ ಶಿಕ್ಷಕಿ, ಮರಿಯಮ್ಮನಹಳ್ಳಿ
ಮಂಗಳವಾರ, ಏಪ್ರಿಲ್ 12, 2011
ಶನಿವಾರ, ಮಾರ್ಚ್ 5, 2011
ನಿಮ್ಮ ನೆನಪು
ಬರೆಯಲಾಗದ ಚಿತ್ರ
ನಿಮ್ಮ ಮನಸ್ಸು
ಬಿಡಿಸಲಾಗದ ಬಂಧನ
ನಿಮ್ಮ ಸ್ನೇಹ
===============
ಕಲೆಗಾರ ನಾನಲ್ಲ
ಕವಿಗಾರ ನಾನಲ್ಲ
ಭಾವನೆ ಗಳೊಂದಿಗೆ
ಬದುಕುವುದ ಬಿಟ್ಟು
ಬೇರೇನೂ ಗೊತ್ತಿಲ್ಲ
ಆಸ್ತಿಯು ನನಗಿಲ್ಲ
ಆಸೆಯು ನನಗಿಲ್ಲ
ನಿಮ್ಮ ಸ್ನೇಹ ಬಿಟ್ಟು
ಬೇರೇನೂ ಬೇಕಿಲ್ಲ
==================
ವಚನ ಎಸ್. ಬಂಡಿ , ೭ ನೆ ತರಗತಿ
***********************

ಬುಧವಾರ, ಫೆಬ್ರವರಿ 16, 2011
ದತ್ತಾತ್ರೇಯ ಎಸ್. ಪತ್ತಾರ
ಬಹುಶ ಇದು ೧೯೭೮ ರ ಚಿತ್ರ
ಇದು ಸದ್ಯ ಅಂದರೆ ವರ್ಷದ ಚಿತ್ರ ಸದ್ಯ ಅಂದರೆ ೨ ವರ್ಷಗಳಾಗಿವೆ ನಾವು ಕೆಲಸಕ್ಕೆ ಸೇರಿ ಆದರೆ ಈ ನಮ್ಮ ಸಹೋಧ್ಯೋಗಿ ನಾನು ಹುಟ್ಟುವುದಕ್ಕು ಮುಂಚೆ ಕೆಲಸ ಪ್ರಾರಂಭಿಸಿದವರು. ಅವರ ಅನುಭವಗಳನ್ನು ಕೇಳಿದರೆ, ಮೈ ರೋಮಾಂಚನವಾಗುತ್ತದೆ. ಇಂದು ಅವರೊಂದಿಗೆ ನಾವೆಲ್ಲರೂ ತಮಾಷೆ ಯೊಂದಿಗೆ ಶಾಲೆಯಲ್ಲಿ ಕಾರ್ಯ ನಿರ್ವಹಿಸುತ್ತಾ ನಮ್ಮೆಲ್ಲರಿಗೂ ತಮ್ಮ ಹಿಂದೆ ಕಳೆದ ಸ್ಥಿತಿಗಳನ್ನು ತಿಳಿಸಿರುತ್ತಾರೆ. ನಿಜವೆಂದರೆ ಆಗಿನ ಕಾಲದ ಶಿಕ್ಷಣ ಹಾಗೂ ವ್ಯವಸ್ಥೆ ಇದ್ದುದನ್ನು ನಮ್ಮೊಂದಿಗೆ ಅವರು ಹಂಚಿಕೊಳ್ಳುವಾಗ "ನಿಜಾನಾ.... ಮೊದಲೆಲ್ಲ ಹಾಗಿತ್ತಾ " ಎಂಬ ಆಲೋಚನೆಗಳು ನಮ್ಮನ್ನು ಹಿಂದಕ್ಕೆ ತೆಗೆದುಕೊಂಡು ಹೋಗುತ್ತದೆ.
ಇವರ ಕುರಿತು ನಾನು ಸದಾ ಕೆದುಕುತ್ತಾ ಅವರ ಹಿಂದಿನ ಶಿಕ್ಷಣ ಬದುಕನ್ನು ಇಲ್ಲಿ ಇಡಲು ಆಸಕ್ತನಾಗಿದ್ದೇನೆ.
ಭಾನುವಾರ, ಫೆಬ್ರವರಿ 6, 2011
ಬುಧವಾರ, ಫೆಬ್ರವರಿ 2, 2011
ಬುಧವಾರ, ಜನವರಿ 19, 2011
ಶನಿವಾರ, ಡಿಸೆಂಬರ್ 25, 2010
ಕರ್ನಾಟಕ ಬಾಲವಿಕಾಸ ಅಕಾಡೆಮಿ ಧಾರವಾಡ - ಶಿಬಿರದ ದಿನಗಳಲ್ಲಿ
ಉದ್ಘಾಟನೆ : ಝಾಕೀರ ಹುಸೇನ್ ತಾ.ಸಮಾಜ ಕಲ್ಯಾಣ ಇಲಾಖೆ ಅಧಿಕಾರಿ
ಅಧ್ಯಕ್ಷತೆ : ಕುಮಾರಿ ರಶ್ಮೀ, ಪ್ರಾಂಶುಪಾಲರು ಮೊ.ದೇ.ವ.ಶಾಲೆ,ನಿಡಶೇಸಿ
ಅತಿಥಿಗಳು : ಶ್ರೀ ಬಸವರಾಜ ಬಾಗಲಿ, ಶಿಕ್ಷಣ ಸಂಯೋಜಕರು
ಶರಣಪ್ಪ ವಡಗೇರಿ, ಜಾನಪದ ಕಲಾವಿದ
ಶ್ರೀ ಈಶಪ್ಪ ತಳವಾರ ಮು.ಗು.ಸರ್ಕಾರಿಪ್ರೌಢಶಾಲೆ,ಜಾಹಗೀರಗುಡದೂರ
ಶ್ರೀ ಶಿವಪುತ್ರಪ್ಪ
ದಿನಾಂಕ 18.12.2010 ಬೆ : 11.00 ಕ್ಕೆ
ಸ್ಥಳ : ಗುರು ಭವನ, ಕುಷ್ಟಗಿ
ಅರಳು ಮೊಗ್ಗು - ರಂಗ ತರಬೇತಿ
ಜೀವಕಳೆ ನೀಡಿದ ನಾಟಕ ಪ್ರದರ್ಶನ
ಮಂಗಳವಾರ, ನವೆಂಬರ್ 23, 2010
ವಲಯ ಮಟ್ಟದ ಪ್ರತಿಭಾ ಕಾರಂಜಿ
ಸಂಪಾದಕ
ಗುರುರಾಜ
ಭಾನುವಾರ, ನವೆಂಬರ್ 21, 2010
ಉಡುಪಿ ಮಕ್ಕಳ ಹಬ್ಬದಲ್ಲಿ





"ಆನೆ ಮತ್ತು ಕೋತಿಯಸ್ನೇಹದ ಕಥೆ "




ಬೇಗ ಮರ ಹತ್ತಣ್ಣ
ಎರಡು ಹಣ್ಣು ಕೀಳಣ್ಣ
ನೀನು ಒಂದು ತಿನ್ನಣ್ಣ
ನನಗೂ ಒಂದು ಕೊಡಣ್ಣ
( ಉಡುಪಿ ಮಕ್ಕಳ ಹಬ್ಬದಲ್ಲಿ ಮಕ್ಕಳಿಂದಲೇ ರಚಿತವಾಗಿರುವ ಕಥೆ. ಇದು ಎರಡನೇ ಗುಂಪಿನ ಕಥೆ - ದಿನಾಂಕ ೨೦.೧೦.೨೦೧೦)
ವಿಧ್ಯಾರ್ಥಿ ಜೀವನ
ನಾವು ನಮ್ಮ ಜೀವನವನ್ನು ಯಶಸ್ವಿಯಾಗಿ ಸಾಧಿಸಲು ನಮ್ಮಲ್ಲಿ ಸತತ ಪ್ರಯತ್ನವಿರಬೇಕು. ಒಳ್ಳೆಯ ವಿಧ್ಯಾರ್ಥಿ ಎಂದು ಗುರುತಿಸಿಕೊಳ್ಳಲು ನಾವು ಎಲ್ಲಾ ರಂಗಗಗಳಲ್ಲಿ ಯು ಪ್ರವಿಣರಾಗಿರಬೇಕುಮತ್ತು ಎಲ್ಲರಿಗು ಆದರ್ಶನಾಗಿರಬೇಕು. ಆಗ ಮಾತ್ರ ಅವನು ಒಳ್ಳೆಯ ವಿಧ್ಯಾರ್ಥಿಯೆಂದು ಗುರುತಿಸಿಕೊಳ್ಳುವನುಯಾರೇ ಆಗಲಿ ಯಾವುದೇ ಕೆಲಸವನ್ನು ಬೇಜಾವಾಬ್ದಾರಿಯಿಂದ ನೋಡಿಕೊಳ್ಳಬಾರದು. ಆ ಕಾರ್ಯಾವನ್ನು ನಿರ್ವಹಿಸುತ್ತೇನೆ ಎಂಬ ಆಸಕ್ತಿ ,ಹಂಬಲವಿರಬೇಕು. ಕಾರ್ಯಾ ಅಸಪಲವಾದಾಗ ಅದನ್ನು ಮರಳಿ ಯತ್ನಿಸಿ ಸಫಲವಾಗಿ ಮಾಡಿಕೊಳ್ಳಬೇಕು ನಾವು ಒಳ್ಳೆಯನಿಯಮ ಮತ್ತು ಆದರ್ಶ ಗಳನ್ನು ನಮ್ಮಲ್ಲಿ ರುಡಿಸಿಕೊಳ್ಳಬೇಕು. ಮತ್ತು ಸಮಯ ಪ್ರಜ್ಞೆ ಯನ್ನು ಪಾಲಿಸಬೇಕು. ವಿಧ್ಯಾರ್ಥಿ ಜೀವನ ಬಂಗಾರದ ಜೀವನ
"Student Life is Golden Life."
ಮಂಜುನಾಥ ಎಸ್.ಮುರಡಿ














